ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇದೇ ನಿತ್ಯನಮಸ್ಕಾರ ನೋಡಿ ಗುರುಚರಣಕೆ ಮನಗೂಡಿ ಧ್ರುವ ಬಿಡದಿಹುದೇ ಸತ್ಸಂಗಾ ನೋಡಿ ಇದೇವೆ ಶಿರಸಾಷ್ಟಾಂಗಾ ಕಡದ್ಹೋಯಿತು ಭವದುಸ್ಸಂಗಾ ದೃಢಮಾಡಿ ಅಂತರಂಗಾ1 ನಮೃತಲಿಹುದೆ ನಮನಾ ನೇಮದಿಂದ ನಡೆದವರು ದಿನಾ ಬ್ರಹ್ಮಾನಂದದೋರುವ ಸಾಧನ 2 ಗುರ್ವಿನಂಘ್ರಿಗೆ ಎಡೆಮಾಡಿ ಅರ್ವಿನೊಳಾದ ಮಹಿಪತಿ ನೋಡಿ ಗರ್ವ ಪುಣ್ಯೆಂಬುದು ಈಡ್ಯಾಡಿ ಸರ್ವಪಾಪ ಹೋಯಿತು ನೋಡಿ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಬಿಡುಮನವೆ ಬಿಡದಿಹ್ಯ ಸಂಸಾರ ಪಡಕೊಂಬುದು ಮಾಡು ನೀ ಸುವಿಚಾರ 1 ವಿಚಾರದೊಳಗದ ಬಲು ವಿವೇಕ ಸೂಚಿಸಿಬಾಹುದು ಸ್ವಾತ್ಮದ ಸುಖ2 ಸ್ವಾತ್ಮದ ಸುಖ ತಿಳಿದವ ಸ್ವತ:ಸಿದ್ಧ ಮತ್ತೆಲ್ಲಿಹದವಗೆ ಭವಬಂಧ 3 ಭವಬಂಧವ ತಿಳಿಯಲುಪಾಯ ಭುವನದಲ್ಯದ ಶುಕನಳಿಕನ್ಯಾಯಾ 4 ನ್ಯಾಯವ ತಿಳಿದರೆ ನೋಯವನೆಂದು ಶ್ರಯ ತಿಳಿಯಲು ತಾ ಬಂಧು 5 ಬಂಧು ಹಗೆಯು ತನಗೆ ತಾಯೆಂದು ಸಂಧಿಸಿ ಪಾರ್ಥಗ್ಹೇಳಿದ ಹರಿ ಬಂದು 6 ಹರಿವಾಕ್ಯವೆ ಗುರುಗುಹ್ಯದ ಗುಟ್ಟು ಪರಮಾನಂದದ ಹೆಜ್ಜೆಯ ಮೆಟ್ಟು 7 ಹೆಜ್ಜೆಲೆ ನಡೆವನು ಕೋಟಿಗೊಬ್ಬವನು ಸಜ್ಜನ ಶಿರೋಮಣೆನಿಸಿಕೊಂಬುನು 8 ಶಿರೋಮಣೆನಿಕೊಂಬುದು ಗುರುಕರುಣ ಗುರುಚರಣಕೆ ಬ್ಯಾಗನೆಯಾಗು ಶರಣು 9 ಶರಣ ಹೊಕ್ಕವಗೆಲ್ಲಿಹುದು ಮರಣ ಮರಣಕ ಮರಣವ ತಂದವ ಜಾಣ 10 ಜಾಣನೆ ಜನ್ಮರಹಿತ ವಾದವನು ಜನವನ ಸಕಲ ಸಮವಗಂಡವನು 11 ಸಮಗಂಡವಗಳದಿಹ್ಯ ಶ್ರಮವೆಲ್ಲಾ ರಾಮ ವಸಿಷ್ಠರೊಳಾಡಿದ ಸೊಲ್ಲ 12 ಸೊಲ್ಲಿಗೆ ಮುಟ್ಟಿದವ ಪ್ರತಿಯಿಲ್ಲ ಎಲ್ಲರೊಳಗ ವಂದಾದವ ಬಲ್ಲ 13 ಬಲ್ಲವನೆ ಬಲ್ಲನು ಬಯಲಾಟ ಎಲ್ಲರಿಗಿದೆ ಅಗಮ್ಯದ ನೋಟ 14 ನೋಟಕ ನೀಟ ಮಾಡಿದವನು ಧನ್ಯ ನೀಟಿಲೆ ನಡೆದವ ಕೋಟಿಗೆ ಮಾನ್ಯ 15 ಕೋಟಿಗೆ ಒಬ್ಬನು ತತ್ವಜ್ಞಾನಿ ನೋಟವಗಂಡಿಹ್ಯ ಮಹಾ ಸುಜ್ಞಾನಿ 16 ಸುಜ್ಞಾನಿಗೆ ಘನಮಯ ಸುಕಾಲ ಸುಗಮ ಸುಪಥವಾಗಿಹುದನುಕೂಲ 17 ಅನುಕೂಲದ ನಿಜ ಮಾತನೆ ಕೇಳು ಅನುದಿನ ಘನಗುರು ಸೇವಿಲೆ ಬಾಳು 18 ಪರಿ ಲೇಸು ಕಳೆವುದು ಮಿಕ್ಕಿನ ಭ್ರಾಂತಿಯ ಸೋಸು 19 ಸೋಸ್ಹಿಡಿದರ ಇದೊಂದೇ ಸಾಕು ವೇಷವದೋರುವದ್ಯಾತಕೆ ಬೇಕು 20 ಬೇಕೆಂಬ ಬಯಕೆಯ ಈಡ್ಯಾಡು ಸೋಕಿ ಶ್ರೀ ಸದ್ಗುರು ಪಾದದಿ ಕೂಡು 21 ಪಡೆವುದಿದೇ ಸ್ವಸುಖ ಸಾಧನ 22
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಭಕ್ತಿಲೇಸು ಮುಕ್ತಿಗಿಂತಲಿ ಪ ಭಕ್ತಿಲೇಸು ಮುಕ್ತಿಗಿಂತಲಿ | ಭಕ್ತಜನರಾ ಪಾಲಿಸುವನಾ | ಭಕ್ತಿಗೊಲಿದು ಫಣಿಗಣ ಲೋಕದಿ | ಯುಕ್ತಬಲಿಯ ಬಾಗಿಲಲೊಳಿಹ ರಂಗಯ್ಯನಾ | ಸುರಪ್ರೀಯನಾ ಮುನಿಧ್ಯೇಯನಾ 1 ಸರಸಿಭವನ ಕಠಾರದಿಂದ ಲೋಗದನಾ | ಅರಸೆನಿಪನಾ ತನುಭವನಾ | ಧರಿಸಿದನಾ | ಅರಸಿಯ ಜನಕನ ಕುಲರಿಯನಿಪನಾ | ಕುವರನ ಸ್ಯಂದನ ವಾಜಿಯನು ಪೊರೆದನಾ | ಗೆಲಿಸಿದನಾ | ಮೆರಿಸಿದನಾ 2 ವನರುಹಸಖನ ಪೊಂದೇರ ನಡೆಸುತಿಹನಾ | ಅನುಜನಾ ಅರಿಗಳಾ ಹರಿಯ ನಂದನನಾ | ಘನವಾಲದಿಂದ ನೊಂದಿಹ ಪುರದರಸನಾ | ಅನುಜನಾ ಸ್ಥಿರಪದವಿತ್ತು ನುಳುಹಿದನಾ | ನಿಲಿಸಿದನಾ | ಕಾಯ್ವನಾ 3 ಸಿರಿಯ ಮದನಳಿದು ಗುರುಚರಣಕೆ ಹೊಂದಿ | ದೊರಕಿ ನಿತ್ಯದಲಿ ಸಂತುಷ್ಟವಿರುತಾ | ಗುರುವರ ಮಹಿಪತಿ ಸ್ವಾಮಿಯ ಷೋಡಶ | ಪರಿಯಲಿ ತುಳಸಿಯ ತಂದು ಪೂಜೆ ಮಾಡುವ | ಪಾದ ನೋಡುವಾ | ಪಾಡುವಾ 4
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಹುಡುಕಿ ನೋಡೆಲೋ ನಿನ್ಯಾರೆಂದು ಧೃಢಚಿತ್ತಕÉ ತಂದು ಪ ಮಲಮೂತ್ರದ ಬೀಡು ಹೊಲೆಯ ಸಂಸಾರದೊಳೀಡು ಗುರುಚರಣಕೆ ಕೂಡು 1 ಏಸು ದುರ್ಗಂಧದೊಳು ನೀ ಬೆಳಿದೆ ಸೂತಕದಿಂದಿಳಿದೆ ಆಶಾಪಾಶದಲಿ ದಿನವನು ಕಳೆದೆ ಮಾಯೆಯೊಳು ಸಳಿದೆ 2 ಅಂತರಾತ್ಮನ ನೆಲೆಯ ಹುಡುಕು ಇದಕ್ಯಾತಕೆ ತುಡುಕು ಶಾಂತ ಶ್ರೀ ವಿಮಲಾನಂದನ ಹುಡುಕು ಅಜ್ಞಾನವ ಬಿಡುಕು 3
--------------
ಭಟಕಳ ಅಪ್ಪಯ್ಯ