ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗುರು ಸತ್ಯಜ್ಞಾನರ ಚರಣ ದರುಶನದಿ ನೂರಾರು ಜನ್ಮ ಪಾವನವಾಯಿತು ಮುದದಿ ಪ ಗುರುಗಳುಪದೇಶದಿಂ ಪರಮ ಪಾವನನಾದೆ ನರಹರಿಯ ಭಜಿಸುವ ಅಧಿಕಾರಿಯಾದೆ ಗುರುಮಧ್ವರಾಯರಾ ಗ್ರಂಥಶ್ರವಣಾದಿಗಳ ನಿರುತದಲಿ ಮಾಡುವುದಕರ್ಹನಾದೆ 1 ಗುರುಗಳುಪದೇಶವಿಲ್ಲದೆ ಮಾಡುವ ಮಂತ್ರ ಗುರುಗಳುಪದೇಶವಿಲ್ಲದ ಜ್ಞಾನವು ಗುರುಗಳುಪದೇಶವಿಲ್ಲದ ಕರ್ಮಕವನಗಳು ಉರಗವಾಸದಂತೆ ಕಾಣಯ್ಯ 2 ಅಂಕಿತವಿಲ್ಲದಾ ಪದ್ಯಗಳು ಶೋಭಿಸವು ಅಂಕಿತವು ಇಲ್ಲದಿರಬಾರದೆನುತಾ ಪಂಕಜನಾಭ ಹನುಮೇಶ ವಿಠಲನೆಂಬೊ ಅಂಕಿತವನಿತ್ತಾ ಗುರುವು ಮಾಡಿ ಮಮತಾ 3
--------------
ಹನುಮೇಶವಿಠಲ
ಶ್ರೀಹರಿಸ್ತುತಿ ಮಂಗಳಾಚರಣೆ ಉಡುಪ ವಂಶಜ ಹರಿಯು ಉಡುಪತಿಯ ತಪದೆಡೆಯೊ ಳುಡುಪ ಶೇಖರನನ್ನು ತನ್ನ ಬಳಿಯಿರಿಸಿ ಕಡೆಗೋಲು ನೇಣುಗಳ ಪಿಡಿದು ನಿಂತಿರುವ 1 ಬೆನಕ ದೇವನೆ ನಿಜದಿಯಾಗಸಕೆ ಒಡೆಯನವ ನಾದವಾಹಿನಿಯನ್ನು ತನ್ನಲ್ಲಿಯಿರಿಸಿ ಗುರುಗಳುಪದೇಶದಿಂ ಜ್ಞಾನವೊದಗಿಪ ಜನಕೆ ಪೊಡಮಡುವೆನವನಡಿಗೆ ಯೆಡರು ಬರದಂತೆ 2 ಸರಸತಿಯೆ ನೀ ನನ್ನ ರಸನೆಯಲಿ ನೆಲೆನಿಂತು ನಿನ್ನ ಮಾವನ ಪೊಗಳಲೆನಗೆ ಮತಿತೆತ್ತು ಅವನೊಲುಮೆಯಿಂದೆನಗೆ ಮುಕುತಿಯನು ಪಡೆವಂತೆ ಹರಸು ನೀನ್ ಭಗವತಿಯೆ ನಿನ್ನ ವಂದಿಸುವೆ 3
--------------
ನಿಡಂಬೂರು ರಾಮದಾಸ