ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಲ್ಲಿ ಜನರೆಲ್ಲನೋಡುವರು ನೋಡುವರು ಗುರುಗಳನಾ | ಪ್ರಹ್ಲಾದನೆಂದು ಹೊಗಳುವರು 1 ದಾಸಜನರೆಲ್ಲ ನೋಡುವರು ಮುನಿಯೆಂದು ಹೊಗಳುವರು 2 ಮಂತ್ರಾಲಯದ ದೊರೆಗಳು ಬಿಡಿಸಿ ಕಳುಹುವರು 3 ಎಂಥ ಕÀರುಣಾಳು ಸಂತಾನಕೊಟ್ಟುಸಲಹುವರು 4 ಬಂದ ಜನರನ್ನು ಪೊರೆಯುವರು ನೆಂತೆಂದು ಕರಿಯುವರು 5 ತೋರಮುತ್ತಿನ ಹಾರವನು ಕೈಯ ಮುಗಿವೇನು 6 ಅಂಗಾರ ಧರಿಸುವರು ಮಂತ್ರಾಕ್ಷತೆಯಿಂದ | ಕುಷ್ಟ ರೋಗಗಳನೆಲ್ಲ ಕಳೆಯುವರು 7 ವಂಧ್ಯುರಿಗೆ ಕಂದರಾಗುವರು ಆಗುವರು ಗುರುಗಳು | ಜನರು ಆನಂಧದಿಂದ ಭಜಿಸುವರು 8 ಆನಂದಕ್ಕೆ ಅಳವಲ್ಲ ಅಳವಲ್ಲ ಗುರುಗಳನ | ನಿಂತು ನೋಡುವರ ನೆಲೆಯಿಲ್ಲ 9 ಎಲ್ಲದುರಿತಗಳ ಪರಿಹಾರ ಪರಿಹರಿಸುವ ಲಕ್ಷ್ಮೀ ವಲ್ಲಭ | ನರಸಿಂಹ ವಿಠಲನ ನೆನೆವೇನೆ 10
--------------
ಓರಬಾಯಿ ಲಕ್ಷ್ಮೀದೇವಮ್ಮ
ಎಂದು ಕಾಂಬೆನೊ ರಾಘವೇಂದ್ರ ಗುರುಗಳನಾ | ಕಾಯ ಆನಂದ ನಿಧಿಯ ಪ ತಾಯಿಯಂದದಿ ನಮ್ಮ ಕಾಯುವ ಧಣಿಯಾ ನ್ಯಾಯ ಸದ್ಗುಣ ಪೂರ್ಣ ಮಾಯಿ ಜಗ ಹರಿಯಾ 1 ಮಾಯಾ ರಮಣನ ನಾಮ ಗಾಯನ ಪರನ ದಾಯಾದಿ ಕುಲವೈರಿ ಶ್ರೇಯ ಬಲಯುತನಾ2 ನರರೂಪ ಧರಿಸಿ ವಾನರÀ ಭಕ್ತವರನಾ ನರಶೌರಿ ಪ್ರೀಯ ದೀನರ ಕಾಯುತಿಹರಾ 3 ಜನರನ ಪೊರೆವನೆಂದೆನುತ ಭೂಮಿಯಲಿ ಜನಿಸಿದ ತನ್ನವನ್ನ ವನುತಿ ಸಹಿತದಲಿ 4 ದುರಿತ ವರೆಕೆ ತಾಮುರುತನಾಗಿಪ್ಪ ಗುರುವೆಂಬ ಸಿರಿಗೆ ಇವ ನಿರಂತರದಿ ಸುರಪಾ 5 ಭಕ್ತರ ಬಯಕೆ ಪೂರೈಪಾ ಸುರತರುವೇ ಶಕ್ತ ವಿರಕ್ತ ಹರಿಭಕ್ತ ಮದ್ಗುರುವೆ 6 ಭುವನದಿಂ ದಾಟಿಸೆ ನೌಕವಾಗಿಹಿನಾ ನವ ಭಕುತಿಯನೀವ ಕುವಿಕುಲ ವರನಾ 7 ಇವನೇ ಗತಿಯೆನೆ ಜ್ಞಾನ ತವಕದಿ ಕೊಡುವಾ 8 ನಿಂದಿಪ ಜನರಲ್ಲಿ ಪೊಂದಿಪ ಪ್ರೇಮ ವಂದಿಪ ಜನರಿಗೆ ಸತತ ಶ್ರೀ ರಾಮ 9 ಶ್ರೀನಿವಾಸ ಪುತ್ರ ಪರಮ ಪವಿತ್ರಾ ಜ್ಞಾನಿ ಜನರ ಮಿತ್ರ ವಿಹಿತ ಚರಿತ್ರಾ 10 ನಷ್ಟ ತುಷ್ಟಿಗೆ ಅಂಜಾ ದುಷ್ಟ ಶೇರಾ ಕಷ್ಟ ಕಳೆಯುವ ನಮ್ಮ ಕೃಷ್ಣ ಪಾರಿಜಾತ 11 ಪೊಳಲುರಿ ಸಖನಾ ಘನಪೊಳಿಯುವ ಪಾದಯುಗವಾ ಘಳಿಗಿ ಬಿಡದಲೆ ನೋಡುತ ನಲಿಯುತಿರುವಾ 12 ಅರಿದು ಈತನೇಯನ್ನ ಗುರುವೆಂಬಗೆ ರುದ್ರಾ ಧುರದೊಳು ಭೀಮ ಗುರುವಿಗತಾ ದಾರಿದ್ರ್ಯಾ 13 ಅನಿಮಿತ್ತ ಬಂಧು ಬ್ರಾಹ್ಮಣ ವಂಶಜಾ ಭವ ತ್ರಾತಾ 14 ತಪ್ಪು ನೋಡದಲೆ ಕಾಯುತಿಪ್ಪ ನಮ್ಮಪ್ಪ ಸರ್ಪ ತಲ್ಪನ ಧ್ಯಾನದಿಪ್ಪ ನಿಪ್ಪ 15 ಅರುಣಾಭಿ ಚರಣ ತಲೆಬೆರಳು ಪಂಕ್ತಿಗಳಾ ಸರಸಿಜ ಪೋಲ್ವ ಮೃದುತರ ಪಾದಯುಗಳಾ 16 ವಲಿದ ಭಕ್ತರಿಗಿಷ್ಟ ಸಲಿಸುವ ಪಾದ17 ಸಕಲ ರೋಗವ ಕಳೆವ ಅಕಳಂಕ ಪಾದ ಪಾದ 18 ಹರಿಯಂತೆ ಹರನೊಲ್ ಸಾಸಿರ ನಯನನಂತೆ ಶಿರಿಯಂತೆ ತೋರ್ಪ ಭಾಸ್ಕರ ನರನಂತೆ 19 ಸುಳಿರೋಮಗಳುಳ್ಳ ಚಲುವ ಜಾನುಗಳಾ ಎಳೆಬಾಳೆ ತೆರ ಊರು ಹೊಳೆವ ಸುಚೈಲ 20 ತಟಿತ ಸನ್ನಿಭವಾದ ಕಟಿಗಿಪ್ಪ ಸೂತ್ರ ನಟ ಶೇವಸಿವಲಿ ತಾನು ಪುಟಿಯು ಉದರಾ 21 ಎದೆಯಲಿಪ್ಪುದÀು ನಮ್ಮ ಪರಮೇಶನ ಮನೆಯೊ ವದಗಿ ಭಕ್ತರಿಗೆ ಕರುಣದಿ ಕಾಯ್ವ ಖಣಿಯೂ 22 ಹುತವಾಹನನಂತೆ ಭಾರತೀಕಾಂತನಂತೆ ಚತುರಾಶ್ಯ ಈ ಕ್ಷಿತಿಯಂತೆ ಇಹನಂತೆ23 ಹಸುವಿನಂದದಲಿ ಪಾಗಸನೊಳಿಹನ ವಸುಧಿಯೊಳಿಂತಿದೊಮ್ಮೆ ಪಸುಯನಿಸಿದನಾ 24 ಭೂಧರತನಂತೆ ವಸುಧರನಂತೆ ಭೂಧರನಂತೆ ಸೋದರನಂತೆ 25 ಚರ್ಚಿತ ಸುಂದರ ರೂಪ ಕಂಬು ಲೋಕ ಕಂಧರಾಯುತನ 26 ಕರೆದು ಭಕ್ತರಿಗಿಷ್ಟಗರಿಯುವ ಚೆಲ್ವಾ ವರ ರೇಖೆಯುತ ಶಿರಕರದಾ ವೈಭವನಾ 27 ಮಂಗಳದಾಯಕ ಅಂಗೈಯಿಯುಗಳಾ ಭಂಗಾರ ದುಂಗಾರ ಇಟ್ಟಿಪ ಬೆರಳು 28 ಕೆಂದುಟಿ ಮೊದನಾಗಿ ಇಂದಿಪ್ಪ ವದನಾ ಪೊಂದಿದ ದಂತಗಳಿಂದ ಸ್ವಾರಚನಾ29 ಹಸನಾದ ದೊಕರದಂತೆಸೆವ ಗಲ್ಲಗಳಾ ಬಿಸಜದಂತೆ ರಾಜಿಸುವ ನೇತ್ರಗಳಾ 30 ನಾಸಿಕದಲಿಪ್ಪ ಮೀಸಿ ದ್ವಂದ್ವಗಳಾ ದೇಶಾದಿ ಪಾಲ್ಮೂರು ವಾಸಿ ಕರ್ಣಗಳಾ 31 ಗಿಳಿಗೆ ವಾಚ್ಯಾಪದೊಳ ಹೊಳೆವಾ ಪುಚ್ಛಗಳಾ ತಿಲಕಾ ಮುದ್ರೆ ಪುಂಡ್ರಗಳುವುಳ್ಳ ಫಾಲಾ 32 ಹರಿಪಾದ ಜಲವನ್ನು ಧರಿಸಿದ ಶಿರವಾ ಶಿರಿಗೋವಿಂದ ವಿಠಲನ್ನಡಿಗೆಯರಗುವಾ ಶಿರವಾ33
--------------
ಅಸ್ಕಿಹಾಳ ಗೋವಿಂದ
ವಿಶೇಷ ಸಂದರ್ಭ ವಾದಿರಾಜ ಗುರುಗಳನಾ ಪ ಪ್ರೀತಿ ತೋರುವವನಾ ದೂತ ವಾದಿರಾಜನಾ 1 ಸಾಲು ಬೃಂದಾವನಾ ಅನಂತೇಶ್ವರನ ಸನ್ನಿಧಾನಾ 2 ಲೋಕಜನರಿಗೆ ಪ್ರೀತ ಗುರುವರನಾ3 ಸಂಚಿತಾಗಮ ಈ ಡ್ಯಾಡಿ ಅಧಿಕ ವಾದಿರಾಜರ ನೋಡಿ4 ಜನಕೆ ಉಲ್ಲಾಸ ಮಾಡುವ ವಾದಿರಾಜರ 5 ಚಕ್ರ ಶಂಖª Àಧರಿಸಿದಾ | ನಮ್ಮರುಕ್ಮಿಣಿ ಸಹಿತ ಬಂದು ನಿಂತಿಹ ಅಮಿತ ತ್ರಿವಿಕ್ರಮದೇವನಾ6 ಬೇಡುವವರನು | ಬೆನ್ಹತ್ತಿ ಬೀಜಗಳನು ಬಿತ್ತುವರು 7 ಚವಕಿ ಮಠದಿ ದಿವ್ಯಪ್ರಸ್ತ | ಓಡಾಡಿ ಬಡಿಸುವ ಜನಗಳ ಸಿಸ್ತಾ ಯತಿಗಳ ಸಿಸ್ತಾ 8 ಜನರ ಅಲಂಕಾರ ಯತಿಗಳ ಗಂಭೀರಾ 9 ಭೂತಬಲಿಗಳ ನೋಡಿ | ನಮ್ಮ ಭೀತಿ-ಭಯಗಳನ್ನು ಬೀಸಾಡಿ ಭೂತರಾಜನ ನೋಡಿ 10 ಪೀಳಿಗೆ ಪೂಜೆ ಚಂದ ನೋಡಲು ನಂದ 11 ಮುತ ಕೆತ್ತಿಹ ಕಿರೀಟ | ಬಹು ಚಿತ್ರವಾಗಿಹಗದ್ದುಗೆ ಮಾಟ ವಾದಿರಾಜರ ದೊಡ್ಡ ಆಟಾ 12 ಈಕ್ಷಿಸಲಳವೆ ಮಠವಾ ಎನ್ನಕ್ಷಿಗಳಿಂದ ನೋಡಲು ನರಸಿಂಹ ವಿಠಲನ್ನಾ 13
--------------
ಓರಬಾಯಿ ಲಕ್ಷ್ಮೀದೇವಮ್ಮ
ಸ್ಮರಿಸು ಗುರು ಸಂತತಿಯನು ಮನವೇ ಪ ಪೊರೆವ ಹರಿ ಚತುರವಿಧ ಪುರುಷಾರ್ಥಗಳನಿತ್ತು ಅ.ಪ. ಪರಮಹಂಸಾಖ್ಯ ಹರಿ ಗುರುತಮನೆನಿಸುತಿಪ್ಪ ಪರಮೇಷ್ಠಿ ತತ್ಸುತರು ಸನಕಾದ್ಯರಾ ಕರಕಮಲ ಸಂಜಾತ ಕೂರ್ಮಾಸ ಜ್ಞಾನನಿಧಿ ಕೈವಲ್ಯ ಯತಿವರರ 1 ಜ್ಞಾನೇಶ ಪರತೀರ್ಥ ಸತ್ಯ ಪ್ರಜ್ಞ ಪ್ರಾಜ್ಞ ಸೂನು ಸುತಪೋರಾಜ ವರಕುಮಾರಾ ಅಚ್ಯುತ ಪ್ರೇಕ್ಷರಂಘ್ರಿಗಳ ಆ ನಮಿಪೆನನವರತ ಭಕ್ತಿ ಪೂರ್ವಕದೀ 2 ಅಚ್ಛಿನ್ನ ಭಕ್ತ ಮರುತವತಾರ ಮಧ್ವಮುನಿ ಪ್ರೋಚ್ಚಾಬ್ಜನಾಭ ನರಹರಿ ಮಾಧವಾ ಸಚ್ಚರಿತ ಅಕ್ಷೋಭ್ಯ ಮುನಿಪ ಪ್ರತಿವಾದಿ ಭೂ ತೋಚ್ಛಾಟನವಗೈದ ಜಯತೀರ್ಥ ಗುರುವರರ 3 ವಿದ್ಯಾಧಿರಾಜ ರಾಜೇಂದ್ರ ಸುತಪೋನಿಧಿ ಜ ಯಧ್ವಜರ ಪುರುಷೋತ್ತಮ ಬ್ರಹ್ಮಣ್ಯರಾ ಮಧ್ವ ಸಿದ್ಧಾಂತ ಸ್ಥಾಪಕ ವ್ಯಾಸರಾಯ ಪ್ರ ಸಿದ್ಧ ಶ್ರೀನಿವಾಸಯತಿಗಳ ಪವಿತ್ರ ಪದ 4 ಲಕ್ಷ್ಮೀ ಕಾಂತರನ ಶ್ರೀಪತಿ ರಾಮಚಂದ್ರರನ ಲಕ್ಷ್ಮೀ ವಲ್ಲಭ ಲಕ್ಷ್ಮೀ ನಾಥಪತಿಯಾ ಲಕ್ಷ್ಮೀ ನಾರಾಯಣರ ಶ್ರೀ ರಘುನಾಥ ಸು ಭಿಕ್ಷುಗಳ ಜಗನ್ನಾಥ ಗುರುಗಳನಾ 5 ಮೂರ್ತಿ ವಿ ಶ್ರೀನಾಥ ಗುರುವರರ ಕರಕಮಲಜಾತ ವಿ ದ್ಯಾನಾಥ ಯತಿಗಳನು ಅನುದಿನದಿ ಮರೆಯದಲೆ 6 ವಿಧ್ಯಾಧಿರಾಜರ ಕವೀಂದ್ರ ವಾಗೀಶರ ಸ್ವ ಸಿದ್ಧಾಂತ ಸ್ಥಾಪಿಸಿದ ರಾಮ ಚಂದ್ರಾ ಅದ್ವೈತ ಕುಮುದ ದಿನಪ ವಿಬುಧೇಂದ್ರಾರ್ಯ ಸದ್ವೈಷ್ಣವಾಗ್ರಣಿ ಜಿತಾಮಿತ್ರ ಮುನಿವರರ 7 ರಘುನಂದನ ಸುರೇಂದ್ರ ವಿಜಯೀಂದ್ರ ಸುಧೀಂದ್ರ ವಾರಿಧಿ ರಾಘವೇಂದ್ರಾರ್ಯರಾ ನಿಗಮಾರ್ಥ ಕೋವಿದ ಸುಯೋಗೀಂದ್ರ ಸೂರೀಂದ್ರ ಜಗತೀತಳದಿ ಪ್ರಸಿದ್ಧ ಸುಮತೀಂದ್ರರ 8 ಸಾಧುಜನಸನ್ನುತ ಉಪೇಂದ್ರರಾಯರ ವೇದ ವೇದಾಂಗ ಚತುರ ವಾದೀಂದ್ರ ಯತಿಯಾ ದ್ಯಾದಾನಾಸಕ್ತ ವರದೇಂದ್ರ ಯತಿವರರ 9 ರಾಮವೇದವ್ಯಾಸರಂಘ್ರಿ ಕಮಲಗಳ ಹೃ ತ್ತಾಮರಸದೊಳು ಪೂಜಿಸಿದ ಬಗೆಯನ್ನು ಧೀಮಂತರಿಗೆ ತಿಳಿಸಲೋಸುಗದಿ ನವರತ್ನ ಹೇಮ ಮಂಟಪ ವಿರಚಿಸಿದ ಭುವನೇಂದ್ರರಾ 10 ಪವಮಾನ ಮತ ಪ್ರವರ್ತಕರೊಳುತ್ತಮರೆನಿಪ ಭವ ಗೆದ್ದಾ ಸುಬೋಧ ಸುಜನೇಂದ್ರರಾ ಅವನಿತ ದೊಳಗೆ ಅಭ್ಯಧಿಕರನ ಮಾಡಿ ಸ ತ್ಕವಿಗಳನೆ ಸಂತೈಸಲೆಂದು ಸ್ಥಾಪಿಸಿದವರಾ 11 ಹರಿಯ ಸಂಸ್ಮರಣೆ ಅಹರ್ನಿಶಿಗಳಲಿ ಮಹ ವಿಪ ತ್ಪರಿಹಾರಗೈಸುವುದು ಗುರುಗಳ ಸ್ಮರಣೇ ಪರಮ ಸೌಖ್ಯವನೀವದಾದಾವ ಕಾಲದಲಿ ಪೊರೆವ ಜಗನ್ನಾಥ ವಿಠ್ಠಲವೊಲಿದು ನಿರುತಾ12 ನವ ವೃಂದಾವನ
--------------
ಜಗನ್ನಾಥದಾಸರು