ಒಟ್ಟು 5 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇದೇ ನೋಡಿ ನಿಜ ಉಪಾಯ ಸದಮಲ ಸುಖದಾಶದಾಶ್ರಯ ಧ್ರುವ ಸಾಧನವಿಲ್ಲಿದೆ ಶ್ರೇಯಸುಖ ಬ್ಯಾರದೆ ಕೇಳತಿಸೂಕ್ಷ್ಮ ಮಾತು ಭೇದಿಸಿ ನೋಡೇನೆಂದರೆ ತಿಳಿದೀತು ಸಾಧಿಸಿ ಕೈಗೊಟ್ಟಿತು 1 ಗೋವಗೋಂತಲ್ಲದೆ ಬ್ಯಾರೆದೆ ಘನ ಭಾವಿಸದೆ ನಿಜಖೂನಾ ಸಾವಧವಾದವಗಿದೇನಿಧಾನ ಭವಹರ ಗುರುಕರುಣಾ 2 ತಾನೆಂಬುದರೊಳು ತಾನೆತಾನಾಗೇದ ಭಾನುಕೋಟಿ ಉದಿತ ದೀನ ಮಹಿಪತಿಸ್ವಾಮಿಯು ಸಾಕ್ಷಾತಾನಂದ ಘನಭರಿತಾ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಉದಯವಾಯಿತು ಹೃದಯ ಕಮಲದೊಳಗೆ ಧ್ರುವ ಗುರುಕರುಣಾನಂದಬೋಧ ಅರುಣೋದಯವಾಯಿತು ಸ್ಮರಣಿಗರವು ದೊರೆಯಿತು ಹರಿಯ ಚರಣದ 1 ಸಮ್ಯಜ್ಞಾನದ ಪ್ರಭೆ ಸಮ್ಯವಾಗಿದೋರಿತು ತಾಮಸನಿದ್ರೆ ಹರಿಯಿತು ತಿಮಿರಾಂಧದ 2 ಥಳಥಳಿಸುವ ರವಿಕೋಟಿ ಬೆಳಗಾಯಿತು ಹೊಳೆಯುತ ತೇಜೋನ್ಮಯವು ಒಳಗೊರಗೆಲ್ಲ 3 ಒದಗಿ ಬಂತೆದುರಿಟ್ಟು ಮೊದಲೆ ಪುಣ್ಯದ ಘಲ ಉದಯವಾಯಿತದೃಷ್ಟವು ಸದೃಷ್ಟವಾಗಿ 4 ಸದ್ಗತಿ ಸುಖವಿದು ಸದೋದಿತವಾಯಿತು ಸಾಧಿಸಿ ಮಹಿಪತಿಗೆ ಸದ್ಗರು ಕೃಪೆಯು 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಗುರುವೆನ್ನ ತಾಯಿ ಸದ್ಗುರುವೆನ್ನ ತಂದೆ ಗುರುಕೃಪೆ ಪಡೆದು ನಾ ಹೆಸರಿಗೆ ಬಂದೆ ಪ ಗುರುವೆನ್ನ ಪ್ರಾಣಲಿಂಗಾ ಗುರುವೆನ್ನ ಇಷ್ಟಲಿಂಗಾ ಗುರುಪ್ರಕಾಶವು ಬೆಳಗುತಿರೆ ಸರ್ವಾಂಗಾ ಗುರುಸ್ಮರಣೆ ಸುಖರಂಗಾ ಗುರುಕರುಣಾ ಕೃಪಾಂಗಾ ಗುರುವಿಂದಧಿಕ ಕಾಣೆ ಶಿವನಾಣೆ ಗುರುವೆನ್ನ 1 ಗುರುವೆ ಈ ಪೃಥವಿಯು ಗುರುವೆ ಆಕಾಶವು ಗುರುವೆ ಸ್ಥಾವರ ಜಂಗಮವೆಲ್ಲವು ಗುರುರೂಪವೆಂದು ಶ್ರೀ ಗುರು ಕರುಣದಂದರಿತು ಗುರು ಸರ್ವರಿಗೆ ಸರಿಯಲ್ಲಾ ಶಿವಬಲ್ಲ 2 ಗುರುವೆ ದೇವಾಂಗಾ ಶ್ರೀ ಗುರುವೆ ಬಸವಲಿಂಗಾ ಗುರು ಬ್ರಹ್ಮವಿಷ್ಣುರುದ್ರ ಸ್ವರೂಪ ಗುರು ಧರಣಿಪಾಲಾ ಗುರು ವಿಮಲಾನಂದ ಲೋಲಾ ಗುರು ಸಿದ್ಧೇಶ್ವರಸ್ವಾಮಿ ಭಕ್ತ ಪ್ರೇಮಿ 3
--------------
ಭಟಕಳ ಅಪ್ಪಯ್ಯ
ಚರ್ಯಗಳಿಂದನಾ ಗ್ರಹಬಾಧನೆಯು ಎಲ್ಲಿನೋಡು ಪ ಗುರುಕರುಣಾಪೂರ್ಣರಾಗಿರುತ ನೀನಿರುತದಲಿ ಪರಮ ಪ್ರೀತಿ ನಿಷ್ಟ ಗರಿಷ್ಟರಾಗಿ ಪರಮ ಹರುಷದಿ ಇರುವ ಭಾವಜ್ಞರನ ಪೊರೆವ ಭಾವಗವೇ ಗ್ರಹಗಳಾಗಿ 1 ಗ್ರಹವೇ ನಿಮ್ಮನುಗ್ರಹವು ಇಹಪರಕ್ಕೆರಡಕ್ಕೂ ಸಹಾಜವಾಗಿ ತೋರುವವು ಶಬ್ಧಮಾತ್ರ ಮಹಾದೇವ ನಿಮ್ಮ ಕರುಣಮಹಿಮೆಯನ್ನು ಈ ಪರಿ ಮಹಿಯೊಳಗೆ ಚರಿಸುವಂಥಾ 2 ಆವನಾರನ ಗತಿಯು ಆವನಾರನ ರೀತಿಯು ಆವನಾರನ ಸ್ಥಿತಿಯು ಅರಿತು ಇರುವಾ ಭಾವ ಭಾವಗಳಿಂದ ಫಣಿಯ ಲಿಖಿತಗಳಂತೆ ಯಾವ ಕಾಲ-----ಇರುವಾ 3 ಸೂತ್ರಧಾರನು ನೀನು ಸಕಲವನು ಇನ್ನು ಈ ಗಾತ್ರಗಳಿಗೆಲ್ಲ ಕಾರಣ ಕರ್ತನಾಗಿ ಮಾತ್ರದಲಿ ಪ್ರಾಣಿಗಳನ್ಯತಾಥ್ಯ------- ಪಾತ್ರ ನೀನಲ್ಲವೇನೈ 4 ದೂರು-----ತ್ರವೆ ಅವರಿಗಾಧಾರ ನೀನಾಗಿ --------------------------- `ಹೊನ್ನವಿಠ್ಠಲ' ದನುಜಮರ್ದನದೇವ --------------------- 5
--------------
ಹೆನ್ನೆರಂಗದಾಸರು
ಸ್ಮರಿಸು ಸ್ಮರಿಸು ಮನವೇ ಗುರುರಾಯರ ಪ ಸ್ಮರಿಸು ಸ್ಮರಿಸು ಬಿಡದೆ ಸ್ಮರಿಸು ನೀ ಗುರು ಸತ್ಯ ಜ್ಞಾನತೀರ್ಥರ ಪದವ ಸಾರುವೆ ಬೇಡಿದ್ದು ಕೊಡುವೆನೆಂಬುವರನು ಅ.ಪ ಸಂಶಯ ಪಡಬ್ಯಾಡವೋ ಇದಕೆ ನಾ ನಿ ಸ್ಸಂಶಯದಿಂದ ಪೇಳುವೆ ಸಂಶಯಾತಕೆ ಋಷಿ ವಂಶೀಕ ರಾವಣನ ಧ್ವಂಸ ಮಾಡಿದ ರಾಮನ ಸಂಸೇವಿಪರÀ ನೀ 1 ಶಾಪಾನುಗ್ರಹ ಶಕ್ತರೂ ಇವರು ಕಾಮಕ್ರೋಧವ ಬಿಟ್ಟವರೂ ತಾಪತ್ರಯಗಳಳಿದು ಪಾಪಗಳೋಡಿಸಿ ಕಾಪಾಡುವೆನೆಂದು ಜಗದಿ ಮೆರೆದವರ 2 ಗುರುಕರುಣಾಬಲದಿ ಶ್ರೀಹರಿನಪರೋಕ್ಷಿಗೈಸಿದ ಧೀರರ ದುರ್ವಾದಿಗಳ ಮುರಿದು ಗುರು ಮಧ್ವರಾಯರ ಪರಮ ಪ್ರೀತಿಯ ಪಡೆದ ನರಹರಿ ಪ್ರಿಯರ 3
--------------
ಪ್ರದ್ಯುಮ್ನತೀರ್ಥರು