ಒಟ್ಟು 7 ಕಡೆಗಳಲ್ಲಿ , 5 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಲ್ಲ್ಯಾಡಿ ಬಂದ್ಯೋ ನೀ ಹೇಳಯ್ಯನಿಲ್ಲು ನಿಲ್ಲು ಗೋಪಾಲಕೃಷ್ಣಯ್ಯಾ ಪ ನೊಸಲಲ್ಲಿ ಕಿರುಬೆವರಿಟ್ಟಿದೆ ಅಲ್ಲಿಹೊಸಪರಿ ಸುದ್ದಿಯು ಹುಟ್ಟಿದೆಪುಸಿಯಲ್ಲ ಈ ಮಾತು ಮುಟ್ಟಿದೆ ನಿನ್ನ ನಸುನಗೆ ಕೀರ್ತಿ ಹೆಚ್ಚಿದೆ1 ಬೆರಳ ಉಂಗುರವೆಲ್ಲಿ ಹೋಗಿದೆ ನಿನ್ನಕೊರಳ ಪದಕವೆಲ್ಲಿ ನೀಗಿದೆಸರಕೆಲ್ಲ ಅವಳಲ್ಲಿ ಸಾಗಿದೆ ಆತರುಣಿ ಮಹಿಮೆ ಹೀಂಗಾಗಿದೆ 2 ಕಳ್ಳತನವ ಹೀಗೆ ಮಾಡಿದೆ ನಿನ್ನಸುಳ್ಳು ಕಡೆಗೆ ನಾ ನೋಡಿದೆಎಲ್ಲರಿಗೂ ಠಕ್ಕು ಮಾಡಿದೆಚೆಲುವ ರಂಗವಿಠಲ ನಗೆಗೀಡಾದೆ 3
--------------
ಶ್ರೀಪಾದರಾಜರು
ಕಲಿಧರ್ಮಮಾಡುತಿದ್ದ ಜಂಗಮಲಿಂಗಾ ಶಿವಪೂಜೆ ಮಾಡುತಿದ್ದ ಪ ಅಲ್ಲಿಗಲ್ಲಿಗೆ ಜಾಣ ಬಲ್ಲೆನೈವರಕೂಟ ಎಲ್ಲೆಲ್ಲಿ ನೋಡಲಿ ಕುಳ್ಳಯೆಂಬೆರುಮಾನೇರು ನಿಲ್ಲಾರು ನಿಜದಿಂದ ಬಲ್ಲವರದು ಕೇಳಿ ಕಳ್ಳಾರು ಕದಿವರಲ್ಲ ಜಂಗಮಲಿಂಗ ಸುಳ್ಳು ಹೇಳುವದಿಲ್ಲವೂ 1 ಯೆದುಶೈಲದೊಳು ಹೋಗಿ ಯಾಚಿಸೆಲ್ಲರ ಕಂಡೂ ಹದಿನೇಳು ತತ್ವಂಗಳಂಗಮಾಯಿತು ಯೆಂದು ಸುದಿಗಿರಿಭ್ರುಕುಟಿಗೆ ಜೀವತನುವ ತಂದೂ ಮದನಜನಕನೇಳಿದಾ 2 ನಾದಬಿಂದುವಿದೆಂಬೊ ನಾಡಿಕೊನೆಯೊಳು ನಿಂದೂ ವಾದಿಭೀಕರ ಮಾದ ವಜ್ರದುಂಗುರವೆಂದು ಬೋಧಾಯನದೊಳಿಹುದಾದಿ ತತ್ವವಿದೆಂದೂ ಸಾಧನೆಯನು ಮಾಡಿದಾ ಜಂಗಮಲಿಂಗಾ ವೇದಾವದನಮಾದುದ3 ಅಂಡಪಿಂಡವಿದೆ ಬ್ರಹ್ಮಾಂಡವಾಗಿಹುದೆಂದೂ ಕಂಡ ಪುಸ್ತಕವೆಲ್ಲಾ ಕಾಣಿಕೆಯನು ಮಾಡಿ ಕುಂಡಲಪುರದೊಳಿದ್ದ ಜಂಗಮಲಿಂಗಾ ಶಿವಪೂಜೆ ಮಾಡುತಿದ್ದಾ 4 ಕನಕಾಪುರೀಶ ತನುಮನಕಗೋಚರವಾದಾ- ಗಣಿತಾವೇಶನುಯೆಂದು ಗುಣಿಸುತಿರಲು ವೇದ ಅಣಿದು ಬರಲು ಗುರುವು ತುಲಸಿರಾಮನೆಯಾದ ಘಣಿಶಾಯಿ ಪರತತ್ವವು ಜಂಗಮಲಿಂಗ5
--------------
ಚನ್ನಪಟ್ಟಣದ ಅಹೋಬಲದಾಸರು
ಗುರವೆ ಪೊರೆಯೊ ಯನ್ನ | ಆವಗುಣಮರೆದು ರಾಘವೇಂದ್ರಾ ಪ ನೆರೆನಂಬಿದರ ಸುರತರುವೇ ಹೇಪುರಟ ಕಶಿಪುಜ ಗರುಡವಹನ ಪ್ರೀಯ ಅ.ಪ. ಸುಜನ ವತ್ಸಲ | ಗೆಲುವ ಕಾಣೆನೊ ಕರ್ಮನಿರ್ವಹದಿಜಲಜನಾಭನ ಚರಣ ಪುಷ್ಕರ | ಸುಲಭ ಷಟ್ಟದ ಸೆನಿಸೊ ಗುರುವರ 1 ಯತಿಕುಲ ಸಾರ್ವಭೌಮ | ನಿಮ್ಮಯ ನಾಮಾಮೃತವನುಣಿಸಲು ನಿಸ್ಸೀಮಾ ||ಪತಿತ ಪಾವನ ಹರಿಯ | ಸತತದಿ ನುತಿಸುವಮತಿಯಿತ್ತು ಪಾಲಿಸೊ | ಶತಕ್ರತು ಪಿತ ಪಿತನೆ ||ರತಿಪತಿಯ ಪತನೆನಿಸಿದಾತನ | ನತಿಸಿ ನುತಿಸುತ ಕರೆಯುತಲಿ ಗತಿ ಪ್ರದಾಯಕ ಹರಿಯ ವ್ಯಾಪ್ತಿಯ | ಪಿತಗೆ ತೋರಿದ ಅತುಳ ಮಹಿಮಾ 2 ಮಂತ್ರ ನಿಕೇತನನೆ ಯತಿಕುಲರನ್ನ ಮಂತ್ರಾರ್ಥ ರಚಿಸಿದನೇ ||ಗ್ರಂಥೀಯ ಹರಿಸೂವ | ತಂತ್ರವ ತೋರೋ ಅತಂತ್ರವಾಗಿದೆಯನ್ನ | ಮಂತ್ರ ಸಾಧನವೂ || ಪ್ರಾಂತಗಾಣದೆ ಚಿಂತಿಸುವೆ ಸರ್ವಸ್ವ | ತಂತ್ರ ಗುರುಗೋವಿಂದ ವಿಠಲನ ಅಂತರಂಗದಿ ತೋರಿ ಸಲಹೋ | ಕ್ರಾಂತನಾಗುವೆ ನಿಮ್ಮ ಪದಕೇ3
--------------
ಗುರುಗೋವಿಂದವಿಠಲರು
ಧನ್ಯನೋ ಶೇಷಗಿರಿದಾಸ ನೀನೂ ನಿತ್ಯ ಪ ಮುಂಗೈಯ ಮ್ಯಾಲಿನ ಗಿಳಿ ಹಾರಿಹೋದಂತೆ ರಂಗ ಮಧ್ವನ ಸ್ಮರಣೆ ಮಾಡಿಕೊಳುತ ಮಂಗಳಾಂಗನಾಗಿ ಸ್ವರ್ಗಸ್ಥನಾದಿ ಕ್ಷಣ ಭಂಗುರವೆಂಬ ಪ್ರಮಾಣ ಸಿದ್ಧಿಸಿತು ಗಡ 1 ಸತ್‍ಶಿಷ್ಯನೆಂದೆನಿಸಿಕೊಂಡದಕೆ ಎನ್ನ ಮ ನೋತ್ಸಾಹ ಮಾತ್ರ ಬಂದಾಗಲಿಲ್ಲಾ ವತ್ಸ ಕೇಳು ಉಪಸರ್ಗ ಕೂಡಿದ ನಾಭಿ ತತ್ಸಮಾನಾಯಿತೊ ಇಂದಿನಾರಭ್ಯವೂ2 ಒಂದೆ ಪ್ರವಾಹದೊಳು ಈಸು ಬೀಳಲು ಸುಳಿ ಯಿಂದ ಹಿಂದಕೆ ಒಬ್ಬನಿಂದಂತೇವೆ ಇಂದು ಎನಗಾಯಿತೊ ಭೂಮಿಯೊಳಗೆ ಋಣಾನು- ಬಂಧ ಇಂತಿರಲಿಕ್ಕೆ ಯತ್ನ ಒಬ್ಬರದಿಲ್ಲ3 ಪರಿಣಾಮಕೆ ನಿನಗೆ ಸಾನುಕೂಲಾವಾಗಿ ಅನಿಲದೇವನು ಒಲಿದು ಹರಿಯ ಕೂಡಾ ಪ್ರಣಮಪೂರ್ವಕದಿಂದ ಪಂಚತ್ವ ಐದಿದೆ ಸಾ- ಧನ ಪೂರ್ತಿಕಾಲ ಎಳ್ಳನಿತು ಉಳದಿಪ್ಪದೊ 4 ವಿಧಿ ಸಂವತ್ಸರ ಭಾದ್ರಪದ ಶುಕ್ಲದ ಭಾನು ಬಿದಿಗೆಯಲಿ ಪ್ರವರ ಗೌತಮ ಸಂಗಮಾ ನಿಧಿಯಲಿ ವಿಜಯವಿಠ್ಠಲನಂಘ್ರಿಯುಗಳವನು ಹೃದಯದಲಿ ಇಟ್ಟು ದೇಹವ ತ್ಯಾಗಮಾಡ್ದೆ 5
--------------
ವಿಜಯದಾಸ
ಪವಮಾನಾ ಮದ್ಗುರವೆ ಪವಮಾನಾ ಪ ಪರಾಕು | ನಾನು | ವಾಕು || ಆಹಾ | ತವಕದಿಂದಲಿ ಸಂಭವಿಸುವ ಮತಿಯಿತ್ತು | ಭವದಿಂದ ಕಡೆಗಿತ್ತು ಅ.ಪ. ಆಶ್ರಿತಜನ ಕಲ್ಪವೃಕ್ಷಾ | ನಿನ್ನ | ಆಶೆಮಾಡಿದೆ ಬಲು ದೀಕ್ಷಾ | ಗುಣರಾಶಿವಿರಾಗ ಪ್ರತ್ಯಕ್ಷ | ವಾಗಿ | ದಾಸತ್ವ ಕೊಡು ಬಲುದೀಕ್ಷಾ || ಆಹಾ || ಏಸು ಜನ್ಮಗಳಿಂದ | ದೋಷವ ಕಳೆದು ಸಂ | ಕರ್ಣ | ಭೂಷಣ ಕೃಪೆ ಮಾಡೊ 1 ಜ್ಞಾನ ಪ್ರಾಣೋತ್ತಮ ರೂಪ | ನಿನ್ನ | ನಾನು ನಂಬಿದೆನೊ ಪ್ರತಾಪ | ಸುರ | ಧೇನು ಭಕ್ತರಿಗೆ ಸಮೀಪ | ಜಗ | ತ್ರಾಣ ಕಪಿಕುಲ ದೀಪ || ಆಹಾ || ಆನಾದಿಯಲಿ ಬಂದು | ಙÁ್ಞನವ ನೋಡಿಸಿ | ಮಾನಸದಲಿ ಭೇದ | ವನ್ನು ಕರುಣಿಸು ನಿತ್ಯಾ 2 ಹರಿದಾಸರೊಳು ಅಗ್ರಣಿಯೆ | ನೋಡು | ಸುರರೊಳು ನಿನಗಾರು ಯೆಣೆಯಾ | ಚಿಂತಿ | ಪರಿಗೆ ಆವಾವಾ ಹೊಣೆಯೇ | ಆಹಾ | ಕರವ ಮುಗಿವೆ ಸಂ | ತೈಸು ಸ್ವಧÀರ್ಮವ | ಮೊರೆ ಹೊಕ್ಕವರ ವಿ | ಸ್ತರವಾಗಿ ಪ್ರತಿದಿನ 3 ತತ್ವೇಶ ಜನರೆಲ್ಲ ನೆರೆದು | ಅಹಂ | ಮತಿಯಲ್ಲಿ ಸತ್ಕರ್ಮ ಮರೆದು | ನಿನ್ನ | ನುತಿಸದೆ ಅತಿಶಯ ಜರೆದು | ತಮ್ಮ | ಗತಿಯೆಲ್ಲ ಅಲ್ಲಲ್ಲೆ ಮರೆದು || ಆಹಾ || ಚತುರಾನನ ಶ್ರೀ | ಪತಿನೋಡುತಲಿರೆ | ಪ್ರತಿಕಕ್ಷಿಯಲ್ಲಿ ಸಂ | ತತಿಯೆನಿಸಿಕೊಂಡೇ 4 ಇಂದ್ರಿಯಂಗಳ ನಿಯಾಮಕನೇ | ಗುಣ | ನಿರ್ಜರ ನಾಯಕನೆ | ಪಾಪ | ಸಿಂಧು ಬತ್ತಿಪ ಪಾವಕನೆ | ನಿಜ | ಬಂಧು ಸಂಶ್ರಿತ ತಾರಕನೇ ||ಆಹಾ || ಇಂದು ಮಹಾದಯ | ಕರ | ತಂದು ಉದ್ದರಿಸಿದ | ಇಂದ್ರಪ್ರಸ್ತನೇ 5 ವಾಕು | ದೇವ | ಯೆನ್ನ ಕುತ್ಸಿತ ಮನ ನೂಕು | ಮುನ್ನೆ | ಘನ್ನ ಭಕುತಿಯ ನೀಡಬೇಕು | ಇಂತು | ಪುಣ್ಯಮಾಡಿಸಿ ಬಿಡದೆ ಸಾಕು ||ಆಹಾ || ಕಣ್ಣುಕಾಣದೆ ಘೋರಾ | ರಣ್ಯದಿ ಬಿದ್ದಿಹೆ | ಬನ್ನ ಬಡಿಸುವದು | ನಿನ್ನ ಧರ್ಮವಲ್ಲಾ 6 ಎಣೆಗಾಣೆನೊ ನಿನ್ನ ಪ್ರೇಮ | ಅನು | ಗುಣ್ಯವಾಗಲಿ ನಿಸ್ಸೀಮ | ಸುಪ್ರ | ಧಾಮ | ಗುಣ | ಪೂರ್ಣ ಮಧ್ವ ಹನುಮ ಭೀಮ ||ಆಹಾ|| ಪನ್ನಂಗಾರಿ ವಾ | ಹನ್ನ ವಿಜಯವಿಠ್ಠ | ಲನ್ನ ಮೂರುತಿಯನ್ನು |ನಿನ್ನೊಳು ತೋರಿಸೋ7
--------------
ವಿಜಯದಾಸ
ಶ್ರೀಗುರುವೆ ಶ್ರೀದೇವದತ್ತ ಸದ್ಗುರವೆ ಶ್ರೀದೇವದತ್ತ ಮಗ್ದುರುವೆ ಶ್ರೀದೇವದತ್ತ ಸದ್ಗತಿಸುಖ ಶ್ರೀದೇವದತ್ತ ಅನಾಥಬಂದು ದೇವದತ್ತ ದೀನಬಂಧು ದೇವದತ್ತ ಮುನಿಜನಪಾಲಕ ದೇವದತ್ತ ಘನಮಹಿಮೆಯು ಶ್ರೀದೇವದತ್ತ ಬಾಹ್ಯಾಂತ್ರವೆ ಶ್ರೀದೇವದತ್ತ ಇಹಪರವೆ ಶ್ರೀದೇವದತ್ತ ಮಹಿಪತಿಗುರುವೆ ದೇವದತ್ತ ಸಾಕಾರವೆ ಶ್ರೀದೇವದತ್ತ 1
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಹರಿಯೇ ಶ್ರೀಗುರು ನಮ್ಮ ಹರಿಯೇ ಸದ್ಗುರು ನಮ್ಮ ಹರಿಯೇ ಮದ್ಗುರು ಪರಾತ್ಪರ ಪೂರ್ಣನು ಧ್ರುವ ಹರಿಯೇ ಗುರುವೆಂದೆನಿಸಿ ಗುರವೆ ಹರಿ ಎಂದೆನಿಸಿ ಕರಸಿಕೊಂಡವನೊಬ್ಬನೆ ಪರಬ್ರಹ್ಮನು ನರಮನುಜಾಗಾಗುವದು ದುರ್ಗತಿಯ 1 ಒಂದು ವಸ್ತುವೆ ತಾನನೇಕ ನಾಮವ ಧರಿಸಿ ಸಂದಿಸಿ ಹ್ಯಾ ನಂದ ರೂಪದೊಳಗೆ ಮಂದಮತಿಗಳ ವಿವರ ಮರ್ಮವನು ಅರಿಯದೆ ದ್ವಂದ್ವ ಭೇದದಿ ಗಾಢಸುತ್ತಿಹರು 2 ಹರಿಯೇ ಶ್ರೀಗುರುವಾಗಿ ಗುರುವೆ ಶ್ರೀಹರಿಯಾಗಿ ತೋರಿದನೇಕೋಮಯವಾಗಿ ಎನಗೆ ತರಳ ಮಹಿಪತಿ ಸಬಾಹ್ಯಾಂತ್ರ ಪರಿಪೂರ್ಣದಲಿ ಗುರುತವಾದನು ಹರಿಯೇ ಸಾಕ್ಷತನು 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು