ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇವರರುವರ ಹಿಡಿದು ಬಂಧಿಸಿ ನೀವು ಬೇಗ ಪ ಬಿಮ್ಮನೆ ಬಿಗಿದು ಕಾಮನ ಕಟ್ಟೆ ಅವನ ತಮ್ಮನ ಹಿಡಿದು ತಲೆಯ ಕುಟ್ಟಿ ಸುಮ್ಮನೆ ಲೋಭನ ಕೈ ಕೆಟ್ಟಿ ಗುಮ್ಮಿ ಜಮ್ಮನೆ ಮೋಹನ ದವಡೆಗೆ ತಟ್ಟಿ 1 ದಂಡಿಸಿರೈ ಮದವೆಂಬುವನ ತಲೆಯ ಚಂಡ ಹಾರಿಸಿ ಮತ್ತೆ ತುಡಿಗೆ ಮತ್ಸರನ ಬಿಡದೆ ಹೆಂಡಿರು ಮಕ್ಕಳಸೆರೆಯೊಳಗಿಕ್ಕಿ 2 ಅರಿಗಳನರುವರ ಜಯಿಸಿ ಸದ್ಗುರುವಿನ ಕರುಣ ಕಟಾಕ್ಷವ ಧರಿಸಿ ಪರಮಾತ್ಮ ಪರಿಪೂರ್ಣನೆನಿಸಿ ಹರಿಸೂನು ಕೋಣೆ ಲಕ್ಷ್ಮೀಶನ ಸ್ಮರಿಸಿ 3
--------------
ಕವಿ ಪರಮದೇವದಾಸರು
ದಂಡು ಬರುತಿದೆ ಆರೇರ ದಂಡು ಬರುತಿದೆ ಬಂದೆವು ನಾಲ್ಕು ಮಂದಿ ಪ ಅಮ್ಮ ಲಿಮ್ಮಿ ಬೊಮ್ಮಿ ನಾನು ಸುಮ್ಮನೊಂದು ಮರೆಯಲಿರಲು ಜಮ್ಮನವರು ಬಂದು ಹಿಡಿದು ಗುಮ್ಮಿಹೋದರು ನಮ್ಮನ್ನೆಲ್ಲ 1 ಅತ್ತೆಮಾವ ಮೈದುನರು ಎತ್ತಹೋದರೋ ಕಣ್ಣಲಿಕಾಣೆ ಕತ್ತೆ ಹೆಣ್ಣೆ ಹೋಗು ಎಂದು ಬತ್ತಲೆಬಿಟ್ಟರು ಎನ್ನ 2 ದಿಂಡ್ಯ ದಿಂಡ್ಯ ಜವ್ವನೆಯರು ಕಂಡ ಕಂಡೆಗೆ ಹೋಗಿ ಬೇಗ ದಂಡಿನವಗೆ ಸಿಕ್ಕಿ ಕೆಟ್ಟು ಕೊಂಡು ಬಾಳ್ವುದೊಳ್ಳಿತಲ್ಲ 3 ರಂಡೆ ಮುಂಡೆರೆಂದವರು ಬಿಡರು ಕಂಡಮಾತ ಹೇಳುತೇನೆ ಪೆಂಡಾರರಿಗೆ ಸಿಕ್ಕು ಕೆಟ್ಟು ಗಂಡು ಕೂಸು ಪಡೆಯದಿರಿ 4 ಮಾನವುಳ್ಳ ಹೆಣ್ಮಕ್ಕಳು ನಾನು ಪೇಳ್ವಮಾತಕೇಳಿ ತಾನೆ ಸೇರಿ ಲಕ್ಷ್ಮೀರಮಣ ಧ್ಯಾನವನ್ನು ಮಾಡುಕಂಡ್ಯಾ 5
--------------
ಕವಿ ಪರಮದೇವದಾಸರು