ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರಪಿಡಿದು ಕಾಯೊ ಶ್ರೀ ಕರುಣಾಳು ಧನ್ವಂತ್ರಿ ವರ ವೆಂಕಟಾದ್ರಿವಾಸ ಪ. ತರಳೆ ಸೇವೆಯ ಕೊಂಡು ಪರಿಪರಿಯ ಬಗೆಯಿಂದ ವರ ಕೃಪೆಯ ಮಾಡೊ ಸ್ವಾಮಿ ಪ್ರೇಮಿ ಅ.ಪ. ಆವ ಪರಿಯಿಂದ ಜಗದೊಳು ನೋಡೆ ಕಾವರಿ ನ್ನಾವರುಂಟೆಲೊ ದೇವನೆ ಪಾವಮಾನಿಯ ಪ್ರೀಯ ಪರಿಪರಿಯ ಪಾಪ ಫಲ ದೀವಿಧದ ಬವಣೆಯನ್ನೇ ನೀ ವಿಚಾರಿಸಿ ಕಾಯೊ ನಿನ್ನ ಶರಣ್ಹೊಕ್ಕಮೇ- ಲಾವ ಸಂಶಯ ಕಾವನೇ ಪಾವಕನ ತೆರದಿ ಭಸ್ಮವ ಮಾಡಿ ದುಷ್ಕರ್ಮ ಜೀವಕ್ಹಿತ ಕೊಡು ಪ್ರೀತನೇ | ಇನ್ನೇ 1 ಸುರರ ವ್ಯಾಕುಲ ಬಿಡಿಸಿ ಅಮರ ಪಕ್ಷವ ವಹಿಸಿ ವರ ಸುಧೆಯನವರಿಗುಣಿಸೀ ದುರುಳ ಸಂಘವ ಕೊಲಿಸಿ ಸುರ ರಾಜ್ಯಸ್ಥಿರಪಡಿಸಿ ಪರಿಪರಿಯ ಸೌಖ್ಯ ಸುರಿಸೀ ಮೆರೆದೆಯೋ ಗುಣಸಿಂಧು ನಿನ್ನ ಸೇವಕಳೆಂದು ಪರಿಕರಿಸಿ ನೀನೀಕ್ಷಿಸೀ ಪರಿ ಕಾಣೆ ಹರಿಸು ಭಯ ಶ್ರೀ ನರಹರೇ | ಶೌರೇ 2 ಬರಿದು ಮಾಡದೆ ಎನ್ನ ಬಿನ್ನಪವ ಪೊರೆಯ ಬೇ- ಕರವಿಂದ ದಳ ನೇತ್ರನೇ ಗುರು ಹಿರಿಯರುಕ್ತಿಯಲ್ಲದೆ ಎನ್ನದೆಂಬುವೋ ಗರುವ ನುಡಿಯಲ್ಲ ನೀನೇ ಚರಣ ಸೇವಕರ ಪೊರೆವಂಥ ವಿಶ್ವಾತ್ಮಕನೆ ಪರಿಹರಿಸು ಕ್ಲೇಶಗಳನೇ ಕರುಣಿ ಶ್ರೀ ಗೋಪಾಲಕೃಷ್ಣವಿಠ್ಠಲ ಶೇಷ- ಗಿರಿನಿಲಯ ಭಕ್ತ ಪ್ರೀಯಾ | ಜೀಯಾ 3
--------------
ಅಂಬಾಬಾಯಿ
ಪುಣ್ಯ ದೊರಕುವುದು ಅನು ಗಣ್ಯವಾಗಿದ್ದ ಸತಿಯಿದ್ದ ಜನರಿಗೆ ಪ ಬಡತನವಿದ್ದರು ನೆರೆಹೊರೆ ಮನೆಯಲ್ಲಿ ನುಡಿ ಬಿಚ್ಚಿ ಪೇಳದೆ ಸೌಮ್ಯಳಾಗಿ ಬಿಡದೆ ಮಾಡುವ ಗೃಹಕೃತ್ಯಂಗಳು ಜಗ ಅನುದಿನ 1 ವಿಪರೀತ ಕಾಲಗಳಟ್ಟಿದ ಕಾಲಕ್ಕು ಸ್ವಪನಾದಿಯಪ ಕಳವಳಿಸದಲೇ ಪತಿ ಸೇವೆ ಅಫಲದಲ್ಲಿ ಮಾಡಿ ಒಲಿದೊಲಿದಾಡುವ2 ಲಾವಣ್ಯ ಪುರುಷರ ಕಂಡರು ಮನದಲ್ಲಿ ಭಾವಿಸಬೇಕು ಸಹೋದರರು ಎಂದು ವಿಭೂತಿ ರೂಪವ ನಿತ್ಯ 3 ಬಂದು ತಂದರೆ ಸಾವಿರ ಮಾಡಿ ಚಿಂತಿಸಿ ಇಂದಿರೇಶನೆ ಪತಿರೂಪವೆಂದು ಅಂದದದಲಿದ್ದ ವಿಭವಾನುಸಾರ ಆ ನಂದವಾಗಿ ಸಂಸಾರದೊಳಗಿರೆ 4 ಪತಿಯ ಜನಕ ಮಾತೃ ಮಿಗಿಲಾದ ಜನರಿಗೆ ಹಿತವಂತಳಾಗಿ ನುಡಿಸಿಕೊಳುತಾ ಗಾತ್ರ ಸರ್ವದಾ ಪ್ರತಿದಿನ ಸುವಿನುವಳಾ ನಾರಿ ಅಧಿಕಾರಿ 5 ಚಕೋರ ಚಂದ್ರಮನಲ್ಲಿ ಮನಸು ಇಟ್ಟು ಸುಖಬಡುವಂತೆ ನಾನಾ ಪ್ರಕಾರ ಕಕುಲಾತಿಯಿಂದ ಕಾಮುಕಳಾಗದೆ ಮಹಾ ಭಕುತಿಯಿಂದಲಿ ಗುರು ಹಿರಿಯರ ಸಮ್ಮತ 6 ಸಂತಜನರೆಂಬ ಕ್ಷೀರಾಂಬುಧಿ ಮಧ್ಯ ಸಂತತ ಮೀನಿನಂದದಿ ಬೀಳುತಾ ಪತಿ ಧರ್ಮವಹಿಸಿ ಶ್ರೀ ಕಾಂತನ ಗುಣಕಥೆ ಕೇಳಿ ಪೊಗಳಲಾಗಿ 7 ನಾಮ ಮೊದಲು ಮಾಡಿ ಪ್ರಕೃತಿಯ ಪರಿಯಂತ ಪ್ರೇಮದಿಂದಲಿ ಗುಣಗಳ ಗುಣಿಸೀ ಕಾಮಾದಿ ಚತುರ್ವಿಧÀ ಪುರುಷಾರ್ಥ ತನ್ನಯ ಸ್ವಾಮಿಯಲಿಂದಲಿ ಸಂಪಾದಿಸುತಿಪ್ಪಾ 8 ಆವಾವ ಪ್ರಯೋಜನ ಮಾಡಲು ಸರ್ವದ ದೇವದೇವೇಶನಾಧೀನವೆಂದೂ ಭಾವದಲಿ ತಿಳಿದನ್ಯ ಕರ್ಮವ ಬಿಟ್ಟು ಪಾವನ ವಿಜಯವಿಠ್ಠಲನ ಭಕುತಿಯಿಂದಾ 9
--------------
ವಿಜಯದಾಸ
ವಿಷ್ಣು ತೀರ್ಥರಪಾದ | ನಿಷ್ಠೆಯಿಂದಲಿ ಭಜಿಸೆಇಷ್ಟಾರ್ಥ ಸಲಿಸೂವರ್ | ಕೃಷ್ಣಪೂಜಕರೂ ಪ ಜಿಷ್ಣುಸಖ ಶ್ರೀ | ಕೃಷ್ಣ ಭಕುತರುಶ್ರೇಷ್ಠ ದಂಪತಿ | ಗರ್ಭಜಾತರುಸುಷ್ಠಜಯಮುನಿ | ಸೇವೆಯಿಂದಲಿಇಷ್ಟವರದಿಂ | ದುದಯರಾದರು 1 ಬಾಲ್ಯದಲ್ಲು ಪನೀತ | ಆರ್ಯರಿಂದು ಪದಿಷ್ಟಆರ್ಯ ಐಜೀವರ್ಯ | ಗುರುಕುಲವಸಿತ |ಕ್ರೌರ್ಯ ಹರಿಜಪ | ದೈರ್ಯದಿಂದಲಿವೀರ್ಯವತ್ತರ | ಜಪಿಸಿ ಗುರುಸುತವರ್ಯನಪಮೃತಿ | ಕಳೆದು ಗುರುವಿಂಮಾನ್ಯವಂತನು | ಎನಿಸಿ ಮೆರೆದ 2 ಮಲದ ಅಪಹಾರಿಯ | ಜಲಪ್ರವಾಹದಿ ನಿಂದುಘಳಿಗೆ ಇರಲು ಉದಯ | ವಲಿಸಿ ಮಧ್ವವಿಜಯಒಲಿಮೆಯಿಂದಲಿ | ಸೂರ್ಯನಘ್ರ್ಯವಕಾಲಮೀರದೆ | ತಾನು ಕೊಡುತಲಿಮೂಲಗ್ರಂಥವ | ತಿಳಿಯ ಬೋಧವಇಳೆಯ ಸುರರಿಗೆ | ಪೇಳ್ದ ಮಹಿಮಾ 3 ಅವಧೂತ ಚರ್ಯದಿ | ಅವನಿಯೊಳ್ಚರಿಸುತ್ತಭುವನ ಪಾವನ ಸುಧೆ | ದಿವಿಜರಿ ಗುಣಿಸೀ |ಶ್ರವಣ ಗೈಸುತ | ಸುಧೆಯ ಗ್ರಂಥವಅವನಿಯೊಳು | ತತ್ವಾರ್ಥಬೋಧಿಸಿಪ್ರವರ ಭೂಸುರ | ಮುಕ್ತಿಮಾರ್ಗದಹವಣೆ ಗೈದಿಹ | ಭುವಿಯದಿವಿಜ 4 ವನವನಚರಿಸುತ್ತ | ಮುನಿವಳ್ಳಿಯಲಿಮುನಿಯೋಗ್ಯವೆನಿಸುವ | ವಾನಪ್ರಸ್ಥಾಶ್ರಮದಿ |ಘನಸುವ್ರತವನೆ | ಅಸಿಯಪತ್ರದಿಮನವನಿರಿಸುತ | ಗಣ್ಯನಾದೆಯೊಅನಘ ಹರಿಕಾ | ರುಣ್ಯ ನಿನ್ನಲಿಗಣನೆಗೈಯ್ಯಲು | ಮನುಜಗಸದಳ 5 ಯತಿ ಸತ್ಯವರರಿಂದ | ಯತಿ ಆಶ್ರಮವ ಪೊಂದಿಕ್ಷಿತಿಯ ಸಂಚರಿಸುತ್ತ | ಅನ್ನಾಳಿಗಾಗಮೀಸೀ |ಹಿತನು ದೇಶಾದಿ | ಪತಿಯ ರೋಗವಹತಗೈದು ಅನ್ನವ | ಜೊತೆಲುಂಬುವಯತನ ಸಾಧಿತ | ಪ್ರಾಪ್ತಕ್ಷಾಮವಹತವ ಗೈಸಿದೆ | ರಮೆಯನೊಲಿಸೀ 6 ಬೋಧ | ಗ್ರಂಥಗಳ್ರಚಿಸೀ |ಮೋದದಿಂ ವೃಂದಾವನಸ್ಥರುಸಾದು ಸೇವೆಗೆ ಅಭಯನೀಡುತನಾದಗುರು ಗೋವಿಂದ ವಿಠಲನಮೋದ ಧ್ಯಾನಾಸಕ್ತರಾಗಿಹ7
--------------
ಗುರುಗೋವಿಂದವಿಠಲರು
ಶ್ರೀಪುರುಷೋತ್ತಮತೀರ್ಥರು ಯೋಗಿಗಳರಸ ಟೀಕಾಚಾರ್ಯರೆ ನಿಮ್ಮ ಪಾದಬಾಗಿ ಭಜಿಸುವನರಗೆ ಪಾಪ ನಿರ್ಲೇಪ ಪ ಖಗವರ ವಹನನಕಾಗಿನಿ ತೀರಗ ವರ ಜಯಗುರುವೇ ಅ.ಪ. ಅಕ್ಷಯ ಫಲವೀವಾ |ಲಕ್ಷುಮಿ ನಾರಾಯಣನ | ಕುಕ್ಷಿಯೋಳೀಕ್ಷಿಸುವ |ಧೃತ - ಲಕ್ಷ್ಯವಿಲ್ಲದೆ ಗಿರಿ ಪಕ್ಷ ತರಿವ ಪರಪಕ್ಷಕೆ ಕರ್ಕಶ ಕುಲಿಶಾ 1 ದಶಮತಿ ಗ್ರಂಥಗಳಾ | ವೃಷಭ ಜನ್ಮದಿ ಪೊತ್ತುಅಸುವ ನೀಗುತ ಭೂಸುರ ಕುಲದಿ ಉದ್ಭವಿಸಿವಿಷಯ ಮೋಹವ ತ್ಯಜಿಸೀ | ಅಸಮ ಮಹಿಮ ಹರಿಯಾಒಸೆದು ಸೇವಿಸೆ ತುರಿಯಾ | ಆಶ್ರಮ ವಹಿಸೀ |ಧೃತ - ಬಸುರಲಿ ಬೊಮ್ಮನ ಪ್ರಸವಿಸಿದವನನುಸರ್ವೇಶ ನೆನುತಲಿ ಸಾರಿದ ಮಹಿಮಾ 2 ಜವನನ ಭಯನಾಶಾ | ಭುವನ ಪಾವನ ಸುಧೆಯಾಅವನಿ ಸುರರಿಗುಣಿಸೀ | ಕ್ಲೇಶವ ಹರಿಸೀ |ಅವನಿಜಾವಲ್ಲಭನಾ | ಮಾವನ ಕೊಂದವನಾಶಿವನ ಮೋಹಿಸಿ ಕೆಡಿಸಿ ಉಳಿಸೀದನಾ |ಧೃತ - ಪವನನ ಪ್ರಿಯ ಗುರು ಗೋವಿಂದ ವಿಠಲನನವ ನವ ಗ್ರಂಥದಿ ನುತಿಸಿದ ಮಹಿಮಾ3
--------------
ಗುರುಗೋವಿಂದವಿಠಲರು