ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದಾಸರ ಭಾಗ್ಯವಿದು ಪ ತಂದೆ ಮುದ್ದು ಮೋಹನ ದಾಸರ ಭಾಗ್ಯವಿದು ಅ.ಪ. ಕರಿಗಿರಿ ನರಹರಿ ಸಂದರ್ಶನವು | ನರಹರಿ ಭಕುತರ ವಿಹಿತದಸೇವೆ |ಪರಿಪರಿ ಗೈಯ್ಯುತ ಹಿಗ್ಗುತ ನಾನು | ಧರಿಸಿರುವಂಕಿತ ಭಾಗ್ಯವು ಎಲ್ಲಾ 1 ಉರುಗಾದ್ರಿವಾಸನ ಶರಣರ ಕೂಡೆ | ಸರಸದಿ ಕೇಳುತ ಹರಿ ಮಹಿಮೆಯನುಉರುತರ ಸುಖಸಂತೋಷದಿ ಕೀರ್ತನೆ | ಹಿರಿದಾಗಿ ಪಾಡುತ ನರ್ತಿಪುದೆಲ್ಲ2 ಭವನಿಧಿ ದಾಟಿಪ ಹವಣೆಯು ಎನಿಸುವ | ಭುವನ ಮೋಹನನ | ಗುಣರೂಪಗಳನವನವ ಕೀರ್ತನೆ ಸ್ತವನದಲಿ ಗುರು | ಗೋವಿಂದ ವಿಠಲ ನುಡಿಸುವುದೆಲ್ಲಾ 3
--------------
ಗುರುಗೋವಿಂದವಿಠಲರು
ಶ್ರೀ ಮುದ್ದು ಮೋಹನ್ನ | ವಿಠಲ ಪೊರೆ ಇವನಾ ಪ ನಾಮ ಸಂಸೃತಿ ಇವಗೆ | ಸತತ ನೀನಿತ್ತು ಅ.ಪ. ವೇಣುಲೋಲನ ಮಹಿಮೆ | ಗಾನಮಾಡಲು ಇವಗೆಜ್ಞಾನವಂಕುರಿಸಲ್ಕೆ | ಜ್ಞಾನಿಸಂಗವಕೊಡೊ |ಮಾನನಿಧಿ ಮಧ್ವಾಖ್ಯ | ಸನ್ಮತದಲುದಿಸಿಹನೊ ಮೌನಿಜನ ವೃಂದ ಸ | ನ್ಮಾನ ಮಾಳ್ವವನಾ 1 ಭವವನದಿ ನವಪೋತ | ಶ್ರವಣ ಸಾಧನವಿತ್ತುನವನವ ಸುವಿಶೇಷ | ಮಹಿಮಯುತ ಹರಿಯಾಪ್ರವರ ಗುಣರೂಪಗಳ | ಸ್ತವನ ಮಾಳ್ವಂತೆಸಗಿಪವನಾಂತರಾತ್ಮಕನೆ | ಪಾಲಿಸೊ ಇವನಾ 2 ಕಾಕು ಸಂಗವಕೊಡದೆಮಾಕಳತ್ರನದಾಸ | ಸಂಕುಲದಲಿರಿಸೋವ್ಯಾಕುಲಾರ್ಥಿಕ ಕಳೆಯೆ | ಬೇಕಾದ ವರಗಳನೆನೀ ಕೊಟ್ಟುಕಾಯೊ ಕೃ | ಪಾಕರನೆ ಹರಿಯೇ 3 ತೈಜಸನೆ ನೀನಾಗಿ | ಯೋಜಿಸಿದ ಅಂಕಿತವ ಮಾಜದಲೆ ಇತ್ತಿಹೆನೊ | ನೈಜ ಮಾರ್ಗದಲೀಮಾಜಗಜನ್ಮಾದಿ ನಿ | ವ್ಯಾಕಜ್ಯ ಕಾರುಣಿಕವಾಜಿವದನನೆ ಪೊರೆಯೊ | ವೃಜನಾರ್ಥನೆನಸೀ 4 ಸಂತ ಸಂಗವನಿತ್ತು | ಅಂತರಾತ್ಮಕ ನಿನ್ನಚಿಂತೆಯಲ್ಲಿರುಸುತಲಿ | ಭ್ರಾಂತಿಯಿರದೊಂದುಅಂತ ಗೈಯುವಮಾರ್ಗ | ಕಂತುಪಿತ ನೀನಿತ್ತುಕಾಂತ ಗುರು ಗೋವಿಂದ | ವಿಠಲಾ ಪೊರೆ ಇವನಾ 5
--------------
ಗುರುಗೋವಿಂದವಿಠಲರು