ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗುರು ಸಾರ್ವ _ ಭೌಮಾ ದೊರಕಿಸುತ ಹರಿಕರುಣ ಪೊರೆ ರಾಘವೇಂದ್ರಾ ಪ ಅಂದು ಹರಿ ತವಶರದಿ ಕರ ಪೊರೆದಂತೆ ನಂದಿ ಸುತ ದುರಿತೌಘ ಇಂದೆನಗೆ _ ಮೈದೊರು ಗುರುವೇ ಕುಂದು ಮಯ ಕಲಿಯೊಳಗೆ ಕಂದುತಿಹ ಕಂದರನು ತಂದೆ ಗುರು ಕಾಯದಿರೆ ಮುಂದು ಬರೆ ಆಗುವದೆ ಸ್ವಾಮೀ 1 ಕತ್ತಲೆಯು ಸುತ್ತಿಹುದು ಮುತ್ತಿಹವು ಕುತ್ತುಗಳು ಬತ್ತಿಹವು ಶಕ್ತಿಗಳು ಹತ್ತವೈ ಚಿತ್ತದೊಳು ಏನೂ ಎತ್ತುಗಳ ತೆರದಂತೆ ಸುತ್ತುತಲಿ ಭವದಲ್ಲಿ ಭಕ್ತಿಯನು ಕಾಣದಲೆ ಮೃತ್ಯುವಿಗೆ ತುತ್ತಾಹೆ ನಲ್ಲೋ 2 ಪರಿಪರಿಯ ಹರಕೆಗಳ ಪೂರೈಸಿ ಭಕುತರಿಗೆ ನಿರುತದಲಿ ಪೊರೆವವಗೆ ಭಾರವೇ ನಾ ನೊಬ್ಬ ಧೊರೆಯೇ ಗುರು ಸೇವೆ ಮಾಡರಿಯೆ ಬರಿ ಮೂಢ ಕಡು ಪಾಪಿ ಶಿರವಿಡುವೆ ಚರಣದಲಿ ಕರುಣಾಳು ಭರವಸೆಯೆ ನನಗೇ 3 ಪ್ರಹ್ಲಾದ ಬಲಿತಾತ ಬಾಹ್ಲೀಕ ಕುರುಪೋಷ ಶ್ರೀ ಹರಿಯು ಗುರುಭಕ್ತಿ ವಾಹಿನಿಯ ಹರಿಸೈಯ ಸತ್ಯಸಂಧಾ ದೇಹದಲಿ ಬಲವಿಲ್ಲ ಈಹಗಳು ಬಿಡದಲ್ಲ ಬಾಹಿರನು ನಿನಗಲ್ಲ ತ್ರಾಹಿ ಗುರು ನೀ ಬಲ್ಲೆ ಎಲ್ಲಾ4 ಶ್ರೀ ಮಧ್ವ ಗುರು ಚೇಲ ತಾಮಸರ ನಿರ್ಮೂಲ ಶ್ರೀಮಂತ ಗುಣಮಾಲ ಶ್ರೀ ಮನೋಹರ ಕೃಷ್ಣವಿಠಲ ಯಜಕಾ ಕಾಮಿತಾ ಫಲದಾತ ನೇಮದಲಿ ಹರಿನಾಮ ನುಡಿಸೆಂಬೆ ಸತತಾ 5
--------------
ಕೃಷ್ಣವಿಠಲದಾಸರು
ಜೋಜೋ ಶಂಕರ ಸುತ ಗುಣಮಾಲಾ | ಜೋಜೋ ಪ ಕುಂದರದನ ಅರವಿಂದಾಕ್ಷ ಜೋಜೋ ಮಂದರಧರ ಸಖ ಸ್ಕಂದನೆ ಜೋಜೋ ವೃಂದಾರಕ ಮುನಿ ವಂದಿತ ಜೋಜೋ 1 ಮೂರ್ತಿ ಕೇಸರಿ ಧರಣಿಸುರಕಲ್ಪ ತರು ಗುಹ ಜೋಜೋ ಜೋಜೋ 2 ವಾಸವನುತ ಸರ್ವ ಪೋಷಕ ಜೋಜೋಸಾಸಿರ ಪೆಸರ ವಲ್ಲೀಶನೆ ಜೋಜೋ | ವಾಸ ಪಾವಂಜೆ ಸರ್ವೇಶನೆ ಜೋಜೋ ದಾಸ ಜನರ ಮನ ತೋಷಕಾ ಜೋಜೋ ಜೋಜೋ 3
--------------
ಬೆಳ್ಳೆ ದಾಸಪ್ಪಯ್ಯ
ಧುರ ಧೀರಾ ಉದಾರಾ ಗಂಭೀರ ಕುಮಾರ ಪ ಕಂದರ್ಪ ರೂಪಾರ್ಧ ಚಂದ್ರಫಾಲಾ ಗುಣಮಾಲಾ ಜನಲೋಲಾ ಉಮೆ ಬಾಲಾ ಸುಶೀಲ 1 ನಿಗಮಾಳಿ ಪೊಗಳುವ ಖಗಧ್ವಜ ಮಿತ್ರಾ | ಜಗಪಾವನ ಶಶಿಮೊಗ ಕಂಜನೇತ್ರಾ ತ್ರಿನೇತ್ರಾ ಪ್ರಿಯಮಿತ್ರಾ ಸುಚರಿತ್ರಾ ಪವಿತ್ರಾ 2 ಪಾವನ ಮೂರುತಿ ಪಾವಂಜೆ ವಾಸಾ | ಕೋವಿದರೊಡೆಯ ರಕ್ಷಕ ದಾಸಾ ಗುಹೇಶಾ ಸರ್ವೇಶಾ ಸೇನೇಶಾ ಜಗದೀಶಾ 3
--------------
ಬೆಳ್ಳೆ ದಾಸಪ್ಪಯ್ಯ
ವಿದ್ಯಾ ಪ್ರಸನ್ನ ಶ್ರೀ ಯತಿಕುಲ ಗುರುರನ್ನ ಸದ್ವ್ಯೆಷ್ಣವ ಘನ್ನ ಪ. ಸಿದ್ಧಸಾಧನ ಮಧ್ವಮುನಿಯ ಚಿನ್ಹ ಧರಿಸಿದ ಬಹುಮಾನ್ಯ ಅ.ಪ. ವಿದ್ಯಾರತ್ನಾಕರ ಯತಿ ಕರಕಮಲದಿ ಜಾತ ಮುದ್ದು ಕುವರನೀತ ವಿದ್ಯಾವಾರಿಧಿ ಮುನಿಕರ ಸಂಜಾತ ಯತಿವರನಾದಾತ ಮಧ್ವಗ್ರಂಥಗಳ ಮನನ ಮಾಡಿದಾತ ಬಹುಮತಿಯುತನೀತ ಬುದ್ಧಿಕುಶಲದಿ ಬುಧರನು ಪೊರೆವಾತ ಸುಜನರ ಮನದಾತ 1 ವ್ಯಾಸತೀರ್ಥನ ಆಸ್ಥಾನಕೊಡೆಯರಾಗಿ ದುರ್ಗುಣಗಳ ನೀಗಿ ಆಸೆಯಿಂದ ಶ್ರೀ ಕೃಷ್ಣನ ಚನ್ನಾಗಿ ಪೂಜಿಸುತಲಿ ಬಾಗಿ ದಾಸತ್ವದ ಲಕ್ಷಣ ತಿಳಿದವರಾಗಿ ವಿಷಯ ಸಂಗ ತ್ಯಾಗಿ ಪಸನ್ನ ಕೃಷ್ಣನೆಂಬಂಕಿತವನೆ ಇಟ್ಟು ಪದರಚಿಸಿದ ಗುಟ್ಟು 2 `ವಿ' ಎನ್ನಲು ನರವಿಷಯ ಸಂಗದೂರ `ಧ್ಯಾ' ಎನೆ ಧ್ಯಾನವರ `ಪ್ರ' ಎನಲು ಸದ್ಗುಣನು `ನ್ನ' ಎನ್ನಲು ಶ್ರೀ ನರಹರಿ ತಾನೊಲಿವ `ತೀ' ಎನೆ ತೀರ್ವ ಭವ `ರ್ಥಾ' ಎನ್ನಲು ಪುರುಷಾರ್ಥ ಪಡೆದ ಭೋಗಿ `ರು' ಎನೆ ರುಜುಮಾರ್ಗಿ 3 ವಿದ್ಯಾಪ್ರಸನ್ನತೀರ್ಥರು ಎಂದೆನ್ನುತಲಿ ಸ್ಮರಿಪರ ಸಲಹುತಲಿ ಮುದ್ದುಕೃಷ್ಣ ಪಟ್ಟಾಭಿರಾಮನಂಘ್ರಿ ಸಚ್ಚರಿತ ಪ್ರಸಂಗಿ ಸದ್ವಿದ್ಯಗಳಿಗೆ ಗರ್ವರಹಿತ ಭಾವ ಬಹು ಸರಳ ಸ್ವಭಾವ ಹೃದ್ವನಜಸÀ್ಥನ ಕಾಂಬ ಮುನಿವರೇಣ್ಯ ಸದ್ಭಕ್ತ ಶರಣ್ಯ 4 ಮಂದ ಮತಿಯು ನಾನು ಕ್ಷಮಿಸು ತಂದೆ ನೀನು ಕುಂದನೆಣಿಸದೆ ಗುಣಗ್ರಹಿಸುತಲಿನ್ನು ಶ್ರೀ ಹರಿ ನುಡಿಸಿದನು ತಂದೆ ಮುದ್ದುಮೋಹನರ ಕೃಪೆಯಿಂದ ರಚಿತ ಪದದಂದ ಮಂದರಧರ ಗೋಪಾಲಕೃಷ್ಣವಿಠ್ಠಲ ಗರ್ಪಿತ ಗುಣಮಾಲ 5
--------------
ಅಂಬಾಬಾಯಿ