ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸುರಾಸುರಾರ್ಚಿತ ಸರೋಜಲೋಚನ ಸರಾಗದಿಂದೆನ್ನನೀಕ್ಷಿಸೈ ಪರಾಪರೇಶನೆ ಪರಾತ್ಪರನೆ ನೀ ಪರಾಕುಮಾಡದೆ ಪಾಲಿಸೈ ಪ ವಿರಾಜಮಾನ ಸುವಿರಾಜವಾಹನ ವಿರಾಟ್ಪುರುಷ ವಿಶ್ವಂಧರ ಕರಾರವಿಂದದಿ ಕರಾದಿಗಳ ಪಿಡಿ ಧರಾತಿಮರ್ದನ ಧುರಂಧರ 1 ಧರಾಧರಣಿಪಟು ಧರಾಧರಾಧಿಪ ಧುರಾವಹನ ದುರ್ಧರ್ಷಣ ಧರಾಮರರ ಬಹುಪರಾಭವವ ಬಲು ಸರಾಗದಲಿ ನಿರ್ವಾಪಣ 2 ಜರಾಮರಣಗಳ ನಿರಾಕರಿಸಿ ವಸುಂಧರಾಭರಣ ಗುಣಭೂಷಣ ಸುರಾರಿಮರ್ದನ ಶರಾಸನಾಂಚಿತ ಕರಾನಿಹಿತ ಮಣಿಕಂಕಣ 3 ಶಿರೀಷ ಕುಸುಮದ ಸರಿಸುಕೋಮಲಶರೀರ ನಿನ್ನದು ಈ ಪರಿ ಸಿರಿಯುದರದೊಳೇ ಸಿರಿಯಧರಿಸಿದ ಪರಿಯದೆಂತುಟೋ ಕೇಳ್ ಹರಿ 4 ಪಯೋಧಿತನಯಾ ವಯೋಸುರೂಪನೆ ದಯಾನಿಧೇ ಧರ್ಮಾತ್ಮನೆ ದಯಾರಸದಿ ಹೃತ್ಪಯೋಜಮಧ್ಯದಿ ನಿಯಾಮಿಸುವ ನಿರ್ಮಾಯನೆ 5 ವರೇಣ್ಯ ಸಜ್ಜನ ಶರಣ್ಯ ಪುಲಿಗಿರಿಯರಣ್ಯ ಮಧ್ಯವಿರಾಜಿತ ಹಿರಣ್ಮಯಾಂಬರ ಹಿರಣ್ಯಕಾಂತಕ ಹಿರಣ್ಯಗರ್ಭಸುಪೂಜಿತ 6 ವ್ಯಾಘ್ರನೆಂಬುವತ್ಯುಗ್ರ ದೈತ್ಯನಂ ನಿಗ್ರಹಗೈದ ಮಹಾತ್ಮನೆ ಶೀಘ್ರದಿ ಭಕ್ತಾನುಗ್ರಹಮಾಳ್ಪ ಸುರಾಗ್ರಗಣ್ಯ ಪುಣ್ಯಾತ್ಮನೆ 7 ಸುರರು ನರರು ನಿನ್ನರಿಮೆಯನರಿಯದೆ ನಿರುತವು ಸನ್ನುತಿಗೈವರೆ ಪರಮಪುರುಷ ಸುಖಕರ ನೀನೆನ್ನುತ ಪರಿಪರಿ ನಿನ್ನನೆ ಪೊಗಳ್ವರೆ 8 ಮೂಜಗ ಮಾಡುವ ಪೂಜೆಯಿಂದ ನೀನೀ ಜಗದಲಿ ಒಲಿದಿರ್ಪೆಯ ಮೂಜಗ ಪೂಜಿಪ ವ್ಯಾಜದಿಂದ ನಿಜಪೂಜೆಯ ನೀ ಕೈಗೊಂಬೆಯ 9 ನಿಜಪದದೊಳು ನೀನಜಭವ ಮುಖಸುರವ್ರಜಗೋಚರನಾಗಿಲ್ಲವೈ ಸುಜನರ ಪೊರೆಯವ ನಿಜಮತಿಯಿಂದಲಿ ತ್ರಿಜಗಕ್ಕೆ ಗೋಚರನಾಗಿಹೈ10 ನಿತ್ಯತೃಪ್ತ ನೀನತ್ಯುತ್ತಮ ನಿಜಭೃತ್ಯನಮತ್ರ್ಯನು ಮೋದದಿ ನಿತ್ಯದಿ ನಿನ್ನತ್ಯುತ್ತಮ ಪದದೊಳು ಭಕ್ತಿಯ ಪಾಲಿಸು ನೇಮದಿ 11 ಧರಣಿಯೊಳುರುತರ ಮೆರೆಯುವ ಫಣಿಭೂ ಧರದೊಳು ನಿರುತವು ಭಕ್ತರ ಸಿರಿವಲ್ಲಭ ವರದ ವಿಠಲ ಕರುಣಾಕರ 12
--------------
ವೆಂಕಟವರದಾರ್ಯರು
ಕೊಡು ಕೊಡು ಕೊಡು ಹರಿಯೆ ಕೆಡದಂಥ ಪದವಿಯ ಒಡನೆ ನಿಮ್ಮಂಘ್ರಿಯ ಕಡುದೃಢ ಭಕುತಿಯ ಪ ತ್ರಿಜಗ ಪರಿಪಾಲಕ ಭಜಿಸಿಬೇಡುವೆ ನಿಮ್ಮ ಭಜನೆಸವಿಸುಖಲಾಭ 1 ಪರಕೆ ಪರತರವೆನಿಪ ಪರಮಪಾವನ ನಿಮ್ಮ ಚರಿತ ಪೊಗಳಿ ಬಾಳ್ವ ಪರಮಾನಂದದ ಜೋಕು 2 ಯತಿತತಿಗಳು ಬಿಡದೆ ಅತಿ ಭಕ್ತಿಯಿಂ ಬೇಡ್ವ ಪತಿತ ತವಸೇವೆಯಭಿರುಚಿ ಎನ್ನೊಡಲಿಗೆ ಸತತ 3 ಪರಿಭವ ಶರಧಿಯ ಕಿರಿಯಾಗಿ ತೋರಿಪ ಪರಮಪುರುಷ ನಿಮ್ಮ ಕರುಣ ಚರಣ ಮೊರೆ 4 ದುಷ್ಟ ಭ್ರಷ್ಟತೆಯಳಿದು ಶಿಷ್ಟರೊಲುಮೆಯಿತ್ತು ಅಷ್ಟಮೂರುತಿ ನಿಮ್ಮ ಶಿಷ್ಟಪಾದದ ನಿಷ್ಠೆ 5 ಕನಸು ಮನಸಿನೊಳೆನ್ನ ಕೊನೆಯ ನಾಲಗೆ ಮೇಲೆ ನೆನಹು ನಿಲ್ಲಿಸಿ ನಿಮ್ಮ ಕರುಣಘನ ಕೃಪೆ 6 ನಾಶನಸಂಸಾರದಾಸೆಯಳಿದು ನಿಜ ಸಿರಿ 7 ಮೂರ್ಹತ್ತು ಮೂರುಕೋಟಿ ವಾರಿಜಾಸನ ಸುರರು ಸೇರಿ ಭಜಿಪ ನಿಮ್ಮ ಮೂರುಕಾಲದ ನೆನಪು 8 ಅಂತರ ಶೋಧಿಸಿ ಅಂತರಾತ್ಮನ ಕಂಡು ಸಂತಸದ್ಹಿಗ್ಗುವ ಸಂತರ ಮತವರ್ಣ 9 ಸರ್ವಜ್ಞರೆನಿಸಿದವರ ಶರಣರ ಸಂಗಕರುಣಿಸಿ ಕರುಣದಿ ಪರಮ ಜ್ಞಾನೆನುವ ಪದವಿ 10 ಮಿಗಿಲಾಗಿ ನಿರ್ಧರಿಸಿ ಸಿರಿವರನಂಘ್ರಿಯೇ ಜಗಮೂರಧಿಕೆಂಬ ಸುಗುಣಗುಣಾಶ್ರಮ11 ಧರೆಮೂರು ತಲೆಬಾಗಿ ಪರಮಾದರದಿ ಪಾಡ್ವ ಹರಿನಾಮ ಕೀರ್ತನೆ ಪರಮಾದರದಿ ಪಾಡ್ವ 12 ಶಮೆಶಾಂತಿದಯೆಭಕ್ತಿ ವಿಮಲಗುಣಭೂಷಣತೆ ಸುಮನಸಸಮನಿಷ್ಠೆ ಅಮಿತಮತಿವರ ಶ್ರೀ 13 ಮಿಥ್ಯೆವರ್ಜಿತವಖಿಲ ಸತ್ಯತೆ ಸದಮಲ ನಿತ್ಯ ನಿರ್ಮಲವೆನಿಪ ತತ್ವದರ್ಥದ ವಿವರ 14 ತನುನಿತ್ಯ ಸ್ವಸ್ಥತೆ ಘನಕೆ ಘನತರವಾಗಿಮಿನುಗುವ ಘನಮುಕ್ತಿ ಮನುಮುನಿಗಳ ಪ್ರೇಮ ಶ್ರೀರಾಮ15
--------------
ರಾಮದಾಸರು
ಪ್ರಣಮಾಮಿ ಗುರುರಾಜ ಪಾದಾಬ್ಜಮನಿಶಂ ಪೂರ್ಣಂ ಅಭಿಮಾನಂ ಶಿರಸಾ ಮನಸಾ ದಿಪ ಪ ರೇಣು ತೃಣ ಕಾಷ್ಠ ಪರಿಪೂರ್ಣ ಕಾವ್ಯಂ ಗುಣಭೂಷಣ ಪಾತಕಸಂಹರಣ ಪರಮಾರ್ಥ ಚರಿತ ಅ.ಪ ನಯನೀತಿ ವಿನಯಾದಿ ಸುಗುಣಾಕರ ಮೂರ್ತೇ ಭಯನಾಶಕ ಭವಬಂಧನಸಂಹಾರಕ ಕೀರ್ತೇ ಜಯದಾತ ಜಗದೀಶ ಪವನಾತ್ಮ ಅವತರಣ ಪ್ರಿಯ ಭಾಷಣ ಮಾಂಗಿರಿರಂಗೇಶ್ವರ ಸೇವಾ ಚಾರುಕೀರ್ತಿಯುತೇ 1
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಸರಾಗದಿಂದೆನ್ನ ನೀಕ್ಷಿಸೈ ಪರಾಪರೇಶನೆ ಪರಾತ್ವರನೆ ನೀ-ಪರಾಕು ಮಾಡದೆ ಪಾಲಿಸೈ ಪ ವಿರಾಜಮಾನ ಸುವೀರಾಜವಾಹನ ವಿರಾಟ್ಪುರುಷ ವಿಶ್ವಂಭರ ಕರಾರವಿಂದದಿ ಕರಾದಿಗಳ ಪಿಡಿದರಾತಿ ಮರ್ದನ ಧುರಂಧರ 1 ಧರಾಧರಣಿಪಟು ಧರಾಧರಾಧಿಪ ಧುರಾವಹನ ದುರ್ಧರ್ಷಣ ಧರಾಮರರ ಬಹು ಪರಾಭವವ ಬಲು ಸರಾಗದಲಿ ನಿರ್ವಾಪಣ 2 ಜರಾಮರಣಗಳ ನಿರಾಕರಿಸಿ ವಸುಂಧರಾ ಭರಣ ಗುಣಭೂಷಣ ಸುರಾರಿ ಮರ್ದನ ಶರಾಸನಾಂಚಿತ ಕರಾನಿಹಿತ ಮಣಿಕಂಕಣ 3 ಶಿರೀಷ ಕುಸುಮದ ಸರೀಸುಕೋಮಲ ಶರೀರ ನಿನ್ನದು ಈಪರಿ ಪರಿಯದೆಂತುಟೋ ಕೇಳ್ಹರಿ 4 ಧಯಾನಿಧಿಯೇಧರ್ಮಾತ್ಮನೆ ನಿಯಾಮಿಸುವ ನಿರ್ಮಾಯನೆ 5 ವರೇಣ್ಯಸಜ್ಜನ ಶರಣ್ಯಪುಲಿಗಿರಿಯರಣ್ಯಮಧ್ಯ ವಿರಾಜಿತ ಹಿರಣ್ಯಯಾಂಬರ ಹಿರಣ್ಯಕಾಂತಕ ಹಿರಣ್ಯಗರ್ಭಸುಪೂಜಿತ6 ವ್ಯಾಘ್ರನೆಂಬುವತ್ಯುಗ್ರದೈತ್ಯನಂ ನಿಗ್ರಹಗೈದ ಮಹಾತ್ಮನೆ ಶೀಘ್ರದಿ ಭಕ್ತಾನುಗ್ರಹಮಾಳ್ಪಸುರಾಗ್ರಗಣ್ಯ ಪುಣ್ಯಾತ್ಮನೆ 7 ನಿರುತವು ಸನ್ನುತಿಗೈವರೆ ಪರಿಪರಿ ನಿನ್ನನೆ ಪೊಗಳ್ವರೆ 8 ನೀಜಗದಲ್ಲಿ ಒಲಿದಿರ್ಪೆಯ ನೀ ಕೈಗೊಂಬೆಯ 9 ನಿಜಪರದೊಲುನೀ ನಜಭವಮುಖಸುರವ್ರಜ- ಗೋಚರನಾಗಿಲ್ಲವೈ ತ್ರಿಜಗಕ್ಕೆ ಗೋಚರನಾಗಿಹೈ 10 ನಿತ್ಯತೃಪ್ತನೀನತ್ಯುತ್ತಮ ನಿಜ ಭೃತ್ಯನಮತ್ರ್ಯನು ಮೋದದಿ ನಿತ್ಯದಿ ನಿನ್ನತ್ಯುತ್ತಮ ಪದದೊಳು ಭಕ್ತಿಯ ಪಾಲಿಸು ನೇಮದಿ 11 ಫಣಿಭೂಧರದೊಳು ನಿರುತವು ಭಕ್ತರ ಕರುಣದಿ ಪೊರೆಯುವ ಧೊರೆ ಸಿರಿವಲ್ಲಭವರದ ವಿಠಲ ಕರುಣಾಕರ 12
--------------
ಸರಗೂರು ವೆಂಕಟವರದಾರ್ಯರು