ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಉಪದೇಶಾತ್ಮಕ ಪದಗಳು ನೀಚವೃತ್ತಿಯ ಬಿಟ್ಟು ಸೋಚಿತ ಕರ್ಮವನೇ ಯೋಚನೆ ಮಾಡುತಾ ಪ ನೀಚ ಜನರುನು ಯಾಚಿಸದೆ ಸವ್ಯ ಸಾಚಿಯ ಸಖನ ಭಜಿಸೋ ಪ್ರಾಣೀ ಸರಸ ಸಲ್ಲಾಪ ಶ್ರೀ ಹರಿಕಥಾ ಶ್ರವಣ ನೀ ಪರಮಭಕ್ತರ ಸಂಗವಾ ನಿರುತದಲಿ ನೀ ಮಾಡಿ ಹರುಷ ಮನವನು ತಾಳಿ ಚರಿಸೊ ಈ ಧರಣಿ ಮಂಡಲಾ ಅರಸಿಗಾದರು ಒಮ್ಮೆ ಶಿರಸುಬಾಗದಲೆ ಶ್ರೀ ಹರಿದಾಸರಾ ಚರಣಕೆ ಎರಗ್ಯವರ ಮನಿದ್ವಾರಪರಿಚರನು ಎಂದೆನಿಸಿ ಭರದಿಂದ ಬಾಳಿ ಬದಕೋ ಇದಕೋ 1 ಅಲ್ಪ ಆಶೆಯ ಮಾಡಿ ಅಲ್ಪ ಮಾನವನಾಗಿ ಕಲ್ಪನೀಯನು ಮಾಡದೆ ಸ್ವಲ್ಪ ಫಲದಲಿ ಮನಸು ಕಲ್ಪಿಸಿ ಪ್ರಿತಿದಿನವ ನಲ್ಪ ಜನರನು ನಿಂದಿಸೀ ಅಲ್ಪನಾರೇರು ಮಾಳ್ಪ ಒಲ್ಪಿಗೆ ಮರುಳಾಗಿ ಪಲ್ಕಿಸಿದು ಬಾಯ್ದೆರೆಯದೆ ಸ್ವಲ್ಪಗಾಲದಲಹಿತಲ್ಪ ಪದಪದುಮಗಳ ಕಿಂ - ಜಲ್ಕ ನೀನಾಸ್ವಾದಿಸೋ ಲೇಸೋ2 ಪೊಡವಿ ಮೊದಲಾದ ಈ ಮಡದಿ ಮಕ್ಕಳು ಗೇಹ ವಡವಿ ವಸನವ ಬಯಸದೆ ಪೊಡವಿಮಂಡಲದಿ ಬಹು ಬಡವ ನಾನೆನುತಲೀ ಪೊಡವಿ ಪಾಲರ ಸೇವೆಯಾ ಧೃಢಮನದಿ ನೀ ಮಾಡೆ ಕೊಡರೊಂದು ದುಗ್ಗಾಣಿ ಕಡುಮೂರ್S ಎಲೊ ಪಾಪಿಯೇ ಬಿಡದೆ ದೈನ್ಯದಿ ನೀನು ಜಡಜನಾಭನ ಪಾದ ಬಿಡದೆ ಸೇವಿಸಲು ಫಲವ ಕೂಡುವಾ 3 ನಾ ಮಾಡೋ ವ್ಯಾಪಾರ ನೀ ಮಾಡಿಸುವಿ ಎಂಬ ಈ ಮಹಾಙÁ್ಞನ ಮಾರ್ಗ ನೇಮವಾಗಿ ತಿಳಿದು ಗ್ರಾಮ ಗ್ರಾಮದಲ್ಲಿದ್ದ ಪಾಮರೋತ್ತಮ ಜನರಿಗೆ ಧಾಮನಾಗಿಹ ನಮ್ಮ ರಾಮದೇವನ ಪಾದ ತಾಮರಸ ಕೊಂಡಾಡುತಾ ಪ್ರೇಮ ಹರುಷಾಮರ್ಷ ಯಾಮಯಾಮಕೆ ಬರಲು ಕಾಮಿಪುದು ನಿನಗೆ ಸಲ್ಲಾ ಖುಲ್ಲಾ 4 ನಗುವ ಜನರಾ ಕಂಡು ನಗುವುದೇ ಲೇಸೆಂದು ಸಿಗದೆ ಜನರೊಳು ತಿರುಗುತಾ ಬಗೆ ಬಗೆಯ ಮಾತುಗಳ ಬೊಗಳುವಾ ಜನರಿಗೆ ಹಗಲಿರಳು ಹರಿ ಕಾಯಲೀ ನಿಗಮ ವಂದಿತನ ಪ್ರತಿ ಮೆಗಳು ಇವು ಎಂದು ತಿಳಿಯೇ ನಗುತ ಹರುಷವ ಕೊಡುವ ಸುಗುಣಪೂರಣ ಗುರು ಜಗನ್ನಾಥವಿಠಲರಾಯಾ ಮರೆಯಾ 5
--------------
ಗುರುಜಗನ್ನಾಥದಾಸರು
ಶ್ರೀ ವೆಂಕಟೇಶ ಪಾಹಿ-ತಾವಕ ಭಕ್ತಿಂದೇಹಿ ಪ ವಾರಿಜನೇತ್ರಾ-ವಾರಿದಗಾತ್ರಾ ನಾರದಸನ್ನುತ ಪಾತ್ರ ನರಮಿತ್ರ ಸುಚರಿತ್ರ 1 ಅಂಡಜಯಾನ-ಕುಂಡಲಿ ಶಯನ | ಖಂಡಪರಶು ಪರಿಪಾಲನ ಮುನಿಲಾಲನ ಸುರಖೇಲನ 2 ವೆಂಕಟರಮಣ ಪಂಕಜಚರಣ ಸಂಕಟಮೊಚನಕಾರಣ ಭವತಾರಣ ಗುಣಪೂರಣ 3 ದಶರಥ ಬಾಲಾ ದಶಮುಖ ಕಾಲ ದಶಶತ ಲೋಚನ ಪಾಲಾ-ಭೂಪಾಲಾ-ಸುರಮುನಿಲೋಲ4 ನಂದ ಕುಮಾರ-ನವನೀತ ಚೋರ ಬೃಂದಾವನ ವಿಹಾರ-ಬಹುದಾರಾ-ಧುರಧೀರ5 ಅಜನುತ ಪಾದ-ಅಪಹೃತ ಖೇದ ಸುಜನಕಲುಷ ನಿರ್ಭೇದ ನುತದೇವ ಸುರಮೋದ 6 ವರವ್ಯಾಘ್ರಾಚಲವಿಹರಣ ಶೀಲ ವರದ ವಿಠಲ ಗೋಪಾಲ-ಶ್ರೀ ಲೋಲ-ಬಹು ಲೀಲಾ 7
--------------
ಸರಗೂರು ವೆಂಕಟವರದಾರ್ಯರು
ಶ್ರೀವೆಂಕಟೇಶ ಪಾಹಿ ತಾವಕ ಭಕ್ತಿಂ ದೇಹಿ ಪ ವಾರಿಜನೇತ್ರಾ ವಾರಿದಗಾತ್ರಾ ನಾರದಸನ್ನುತಪಾತ್ರ ನರಮಿತ್ರ ಸುಚರಿತ್ರ 1 ಅಂಡಜಯಾನ ಕುಂಡಲಿಶಯನ ಖಂಡಪರಶು ಪರಿಪಾಲನ ಮುನಿಲಾಲನ ಸುರಖೇಲನ 2 ಪಂಕಜ ಚರಣ ಸಂಕಟಮೋಚನ ಕಾರಣ ಭವತಾರಣ ಗುಣಪೂರಣ 3 ದಶರಥಬಾಲಾ ದಶಮುಖಕಾಲ ದಶಶತಲೋಚನಪಾಲಾ ಭೂಪಾಲಾ ಸುರಮುನಿಲೋಲ4 ನವನೀತ ಚೋರ ಬೃಂದಾವನವಿಹಾರ ಬಹುದಾರಾ ಧುರಧೀರ 5 ಅಜನುತಪಾದ ಅಪಹೃತ ಖೇದ ಕಲುಷ ನಿರ್ಭೇದ ನುತವೇದ ಸುರಮೋದ 6 ವರವ್ಯಾಘ್ರಾಚಲ ವಿಹರಣ ಶೀಲ ವರದವಿಠಲ ಗೋಪಾಲ ಶ್ರೀಲೋಲ ಬಹುಲೀಲಾ 7
--------------
ವೆಂಕಟವರದಾರ್ಯರು