ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇದನೆ ಬೇಡುವೆನಯ್ಯ ಒದಗಿ ಪಾಲಿಸೊ ಜೀಯ ಬದಲು ನಾನೊಲ್ಲೆನೊ ವಿದಿತ ವೇದ್ಯ ಪ ಕ್ಷಣ ನಿನ್ನ ಬಿಡಲಾರೆ ನಿನ್ನವರನು ಬಿಡೆ ಕುಣಿ ಕುಣಿವೆನು ನಿನ್ನ ಜನರೆಂದರೆ ಗುಣತ್ರಯ ವಾರಣ ನಿನ್ನ ವಾರುತಿಯಿರೆ ಒಣ ಹರಟೆಗಳ ನಾ ಕೇಳಲೊಲ್ಲೆ 1 ನೀಚ ಜನರಂಗಳ ಸಂಗವ ಕೊಡದಿರು ವಾಚದಿಗನ್ಯರಿಗಾಲ್ಪರಿಸಬೇಡ ಸೂಚಿಸು ನಿನ್ನಯ ಗುಣಗಣಂಗಳೆನೆ ನಾ ಯಾಚಿಪೆ ಇದನೆ ಇದನೆ ಮುರಾರೆ 2 ಶ್ರೀಶ ನಿನ್ನಯ ಕಥೆ ಕೇಳದೆ ಬಹಳಾಯು ಕಾಸು ಬಾಳದು ಕೇಳು ಕರುಣಾಬ್ಧಿಯೆ ತಾಸು ಒಂದಾದರು ಅವನೆ ಸುಜೀವಿಯೊ ವಾಸುದೇವವಿಠಲ ನಿನ್ನವರವನೊ 3
--------------
ವ್ಯಾಸತತ್ವಜ್ಞದಾಸರು
ಜಯತು ವೈಕುಂಠರಮಣಾ ಉಪ್ಪವಡಿಸಾ ಪ ವಾಕಾರವಳಿಯೆ ಬಾಲಕತನವನಳ ವಡಿಸಿ ಶ್ರೀಕರಾಂಬುಜದಿಂದ ಪಾದಾಂಗುಟವ ಪಿಡಿದ ತನುಜನಂದದೀ ವಾಕ್ಕಿಂಗೆ ದೃಷ್ಟಾಂತವಾಗಿ ಪವಡಿಸಿಹ ಲ ಬೇಕು ನಲಿದುಪ್ಪವಡಿಸಾ 1 ಮಣಿಯ ಬೆಳಗಿನಲಿ ಸುರನಿಕರವೆಡಬಲದಿ ಸಂ ದಣಿಸಿ ಬರಲು ನಾರದ ತುಂಬುರರು ಭವದೀಯ ಗುಣಗಣಂಗಳ ಪಾಡಲೂ ಗುಣನಿಧಿಗಳೆನಿಪ ಶ್ರೀದೇವಿ ಭೂದೇವಿಯರು ಕ್ಷಣವಗಲಲರಿಯದೇ ಪಾದಾಂಬುಜವ ಮನ ದಿವಿಜ ಮಣಿಯೆ ಟಿಲಿದುಪ್ಪವಡಿಸಾ 2 ನಿಗಮನಾಲಕು ಕುಂದಣದ ಸರಪಣಿಗಳಾಗೆ ಬಗಸಿಗಂಗಳ ಭಾವಕಿಯರಾಗಿ ಉಪನಿಷ ತ್ತುಗಳು ನೆರೆದಾನಂದದೀ ಮುಗುದರರಸಾ ಮುಕುಂದಾಯೆನಲು ನಲಿಯೆ ಪಾಲ್ಗಡಲಲೊಡೆಯ ವೇಲಾಪುರದ ಚೆ ನ್ನಿಗರಾಯ ವೈಕುಂಠರಮಣ ತವಶರಣ ಜನ ರುಗಳ ಸಲಹುಪ್ಪವಡಿಸಾ 3
--------------
ಬೇಲೂರು ವೈಕುಂಠದಾಸರು
ದುರಿತ ತ್ಯಜಿಸಿರೋ ಪರಮ ಸಾಧ ಐಕೂರು ನರಸಿಂಹಾರ್ಯರ ಪ ಕೃಷ್ಣತೀರದಿ ಮಿಂದು | ಕೃಷ್ಣÀವರನೊಳು ಜಿಷ್ಣು ಸೂತನ ನೋಳ್ಪ | ವಿಷ್ಣು ದಾಸರ 1 ತರುಳತನದಲಿ | ಸದ್ಗುರುವರೇಣ್ಯರ ಚರಣ ಸೇವಿಸಿ ಶಾಸ್ತ್ರವರಿತ ಧೀರರ 2 ಸತತ ನಂಬಿದ ಶಿಷ್ಯತತಿಗೆ ಹರಿಗುಣ ಹಿತದಿ ಸುರಿದ | ಅಪ್ರತಿಮ ಮಹಿಮರ 3 ಪವನ ಶಾಸ್ತ್ರವೇದ | ಕವನವೆನ್ನುತ ವಿವರಿಸುತ್ತಲಿ ತನ್ನವರ ಪೊರೆದರ 4 ಏನು ಬಂದರು ಮನದಿ ಶ್ರೀನಿವಾಸನ ಧ್ಯಾನ ಬಿಡದಿಹ | ಮಹಾನುಭಾವರ 5 ಭಕುತಿ ಜ್ಞಾನವ ತಮ್ಮ ಭಕುತ ವರ್ಗಕೆ ಪ್ರಕಟಗೊಳಿಸಿದ ಇಂಥ | ಮುಕುತಿ ಯೋಗ್ಯರ 6 ಭುವನ ಮೇಲಿಹ ಇವರು ದಿವಿ ಭವಾಂಶರು ರವಿ ನಿಭಾಂಗರು | ಜವನ ಭವಣೆ | ತರಿದರು 7 ಇವರು ಪೇಳುವ ವಚನ ಶ್ರವವಣಗೈಯಲು ಶೌರಿ ಭುವನ ಪಡೆವರು 8 ಕಂತುಪಿತ ಕಥಾ ಸುಧಾ | ಗ್ರಂಥ ಮರ್ಮವ ಆ ದ್ಯಂತ ಬಲ್ಲರು ಪರಮ ಶಾಂತಿ ಶೀಲರು 9 ಮೌನಧ್ಯಾನದ ಜ್ಞಾನ ಖೂನ ತೋರದೆ ಹೀನರಂದದಿ ಹೊರಗೆ ಕಾಣಿಸುವರು 10 ಬಾಲಕೃಷ್ಣನ ದಿವ್ಯಲೀಲೆ ಚರಿತೆಯ ಕಾಲ ಕಳೆಯರು 11 ನಿಂದ್ಯ ವಂದನೆ ಬಂದ ಕುಂದು ಶ್ಲಾಘನೆ ಇಂದಿರೇಶನೆ ತಾನೆ ತಂದ ನೆಂಬರು 12 ಪಾದ ಪೊಂದಿದ ಜನಕೆ | ಮೋದಗರೆವರು ವ್ಯಾಧಿ ಕಳೆದರು ವೇದ ಬೋಧಿಸಿದರು 13 ವಿವಿಧ ವೈಭವ ಮೇಣ್ | ಕುವರ ಭಾಗ್ಯವ ವಿವಿಧ ಭೋಗವ ಶಿಷ್ಯ ನಿವಹಕಿತ್ತರು 14 ನಿತ್ಯ ಪೇಳುತ ಭೃತ್ಯನಿಕರಕೆ ಸಧೃಡ ಚಿತ್ತವಿತ್ತರು 15 ಕಾಮವಾಸನೆ ಸುಟ್ಟು | ನೇಮ ಪೂರ್ವಕ ರಾಮನೊಲಿಮೆಯ | ವಿಶ್ವಪ್ರೇಮವೆಂಬರು 16 ಈ ಸುಮಹಿಮರ | ಸದುಪದೇಶ ಕೊಳ್ಳಲು ಕ್ಲೇಶಬಾರದು | ಯಮನು ಘಾಸೆÉಗೊಳಿಸನು 17 ನಿರಯ ಪಾತ್ರರು 18 ಇನಿತುಪಾಸನೆಗೈವ ಘುನ ಮಹಾತ್ಮರ ಗುಣಗಣಂಗಳ | ತುತಿಸಲೆನಗೆ ಸಾಧ್ಯವೆ 19 ಅರುಣನುದಿಯದಿ | ಇವರ ಚರಣ ಕಮಲವ ಸ್ಮರಣ ಮಾಡಲು | ಹರಿಯ ಕರುಣವಾಹದು 20 ಸಾಮಜವರ ವರದ ಶಾಮಸುಂದರನ ಪ್ರೇಮಪಾತ್ರ ನಿಷ್ಕಾಮ ಪೂರ್ಣರು 21
--------------
ಶಾಮಸುಂದರ ವಿಠಲ
ವರ್ಣಿಸಲಳವೆ ಕರುಣಾಳು ಗುರುವರ ನಿಮ್ಮ ವರ್ಣವರ್ಣದ ಚರಿತೆ ಗುಣಗಣಗಳ ಪ. ವರ್ಣಪ್ರತಿಪಾದ್ಯ ದೇವತೆಗಳಿಗೆ ಅಳವಲ್ಲ ಇನ್ನಿದನು ಪಾಮರರು ಅರಿಯುವರೆ ಜಗದಿ ಅ.ಪ. ಪ್ರತಿಪ್ರತಿ ಕಲ್ಪದಲಿ ಅತಿಶಯದ ತಪಚರಿಸಿ ಪತಿತಪಾವನ ಹರಿಯ ಮನ ಮೆಚ್ಚಿಸಿ ಕ್ಷಿತಿಯೊಳಗೆ ಅವತರಿಸಿ ದೇವಾಂಶರೆಂದೆನಿಸಿ ಪತಿತರನು ಪಾವನವಗೊಳಿಪ ಘನಮಹಿಮ 1 ಭಕ್ತರು ಕರೆದಲ್ಲಿ ಆಸಕ್ತಿಯಿಂ ಬಂದು ಯುಕ್ತಯುಕ್ತಗಳಿಂದ ತತ್ವಗಳನರುಹಿ ಮುಕ್ತಿಗೊಡೆಯನ ಮಾರ್ಗ ಮುಕ್ತಾರ್ಥ ಜನಕರುಹಿ ಮುಕ್ತಿಪಥ ಸವಿತೋರ್ವ ಶಕ್ತಿ ಮಹಿಮೆಗಳ 2 ಪಾದ ಪದ್ಮಸುತ ತಂದೆ ಮುದ್ದು ಮೋಹನದಾಸರಾಯರೆಂದೆನಿಸಿ ಮಧ್ವಮತಸಾರಗಳ ಹೀರಿ ಮಕರಂದವನು ಸಿದ್ಧಿಗೊಳಿಸಿ ಸುಜನಕೀವ ಶ್ರೀ ಗುರುವೆ3 ಕರಿಗಿರಿ ನರಹರಿಯ ಚರಣಕಮಲ ಧ್ಯಾನ ಅರಘಳಿಗೆ ಬಿಡದೆ ಮನಮಂದಿರದಿ ಸ್ಮರಿಪ ಕರುಣಜಲನಿಧಿಯೆ ನಿಮ್ಮ ಮೊರೆಹೊಕ್ಕವರ ಕಾಯ್ವ ಪರಮಪ್ರಿಯರೆಂತೆಂಬ ಬಿರುದುಳ್ಳ ಗುರುವೇ 4 ಕಮಲಾಂತ ಪ್ರೀತ ಶ್ರೀ ಕಮಲನಾಭನ ಪಾದ ಕಮಲ ಮನದಲಿ ಸ್ಮರಿಪ ಕಮನೀಯ ಗಾತ್ರ ಕಮಲಾಕ್ಷ ಗೋಪಾಲಕೃಷ್ಣವಿಠ್ಠಲನ ಪದ ಕಮಲ ಮನದಲಿ ತೋರಿ ಕೃಪೆಯಗೈಯ್ಯುವುದು 5
--------------
ಅಂಬಾಬಾಯಿ