ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದುರಿತ ವಿದೂರ ಪ ತಾಪಸ ಪ್ರಿಯ ನಿಜದಾಸ ಮಂದಾರಾ ಅ.ಪ ನಾ ಸತ್ಯರೊಳಭಿಮಾನಿಯಾಗಿದ್ದು ಸಕಲ ವಾಸನೆಗಳ ಕೊಂಡು ಎಲ್ಲ ಜೀವರ ಅಭಿ- ಲಾಷೆಗಳರಿತು ಸುಖಗಳೀವುತ ಸರ್ವಾ- ವಾಸನಾಗಿಹ ಇಂದಿರೇಶ ಕೃಪಾಳೊ 1 ಘೃತ ಯುತ ಗುಗ್ಗುಳ ಸಂಮಿಳಿತ ಕೃಷ್ಣಾಗರು ಮಿ- ಶ್ರೀತ ಧೂಪವ ಶ್ರೀಸಹಿತನಾಗಿ ನೀ ಕೈಕೊ- ಳ್ಳುತ ಭಕ್ತರಿಗೀಪ್ಸಿತ ವರವೀವನೆ 2 ವಾಸನೆಯರಿತು ಸರ್ವಭೂತದಲಿ ನಿ- ವಾಸುದೇವನಿಗೆ ಸುವಾಸನೆಯಾವದು ವಾಸುಕಿ ಶಯನ ಶ್ರೀಗುರುರಾಮ ವಿಠಲಾ 3
--------------
ಗುರುರಾಮವಿಠಲ
ಧೂಪಾರತಿಯ ಮಾಡುವ ಬನ್ನಿ ಸರ್ವರೂಪ ರಹಿತ ತನ್ಮಾತ್ರನಿಗೆಕೆಟ್ಟ ವಾಸನೆಗಳು ಎಷ್ಟಿಹವೆಲ್ಲ ಪ ಅಷ್ಟನು ಕುಟ್ಟಿ ಪುಡಿಯನು ಮಾಡಿದಶಿಷ್ಟ ದಶಾಂಗಮ ಘಮ ಘಮ ಬೀರಲುಸುಟ್ಟು ಎತ್ತುವ ಧೂಪಾರತಿಯ 1 ವಾಸನತ್ರಯವೆಂಬ ಗುಗ್ಗುಳ ಸಾಂಬ್ರಾಣಿದ್ವೇಷ ಭ್ರಾಂತಿಗಳ ಪರಿಪರಿಯಾದವಾಸನೆ ಎತ್ತೆತ್ತ ಮಕಮಕ ಎಸೆಯಲುಸೂಸಿ ಎತ್ತುವ ಸುಧೂಪಾರತಿಯ 2 ತುಂಬಿ ತುಂಬಿಗುರು ಚಿದಾನಂದ ತಾನಾದಾತ್ಮಗೆತ್ತುವೆಪರಮಮಂಗಳ ಸುಧೂಪಾರತಿಯ 3
--------------
ಚಿದಾನಂದ ಅವಧೂತರು
ಧೂಪಾರತಿಯ ನೋಡುವ ಬನ್ನಿ ನಮ್ಮಗೋಪಾಲಕೃಷ್ಣನ ಪೂಜೆಯ ಸಮಯದಿ ಪ.ಅಗುರುಚಂದನ ಧೂಪ ಗುಗ್ಗುಳ ಸಾಮ್ರಾಣಿಮಘಮಘಿಸುವ ಧೂಪದಾರತಿಯು ||ಮಿಗಿಲಾದ ಏಕಾಂತ ಭಕ್ತಿಯಲಿ ನಮ್ಮಜಗನ್ನಾಥ ಕೃಷ್ಣನ ದೇವರ ಪೂಜೆಯ 1ಮದ್ದಳೆ ಜಾಂಗಟಿ ತಾಳ ತಮ್ಮಟೆಭೇರಿತದ್ಧಿಮಿ ಧಿಮಿಕೆಂಬ ನಾದಗಳು ||ಹೊದ್ದಿದಧವಳ ಶಂಖದ ಘೋಷಣಂಗಳಪದ್ಮನಾಭನ ದಿವ್ಯ ದೇವರ ಪೂಜೆಯ 2ಢಣ ಢಣ ಢಣರೆಂಬ ತಾಳ ದಂಡಿಗೆವೇಣುಢಣಕು ಧಿಮಿಕು ಎಂಬ ಮದ್ದಳೆಯು ||ಝಣಿಝಣಿಸುವ ವೀಣೆ ಕಿನ್ನರಿ ಸ್ವರಗಳಘನರಾಗದಿಂದಲಿ ಹಾಡುತ ಪಾಡುತ 3ಮುತ್ತು ಛತ್ರ ಚಾಮರ ಪತಾಕ ಧ್ವಜರತ್ನ ಕೆಚ್ಚಿದ ಪದಕ ಹಾರಗಳು ||ಮತ್ತೆ ಕೋಟಿಸೂರ್ಯ ಪ್ರಭೆಯ ಧಿಕ್ಕರಿಸುವಸತ್ಯಭಾಮೆ ರುಕ್ಮಿಣಿಯರರಸನ 4ಹರ ಬ್ರಹ್ಮಸುರಪತಿ ದೇವತೆ ಮೊದಲಾದಪರಮ ಪಾವನಮೂರ್ತಿ ಪುರುಷೋತ್ತಮನ ||ಪರದೈವತವೆಂದು ಬಿರುದು ಪೊಗಳಿಸಿಕೊಂಬಪುರಂದರವಿಠಲನ ಪೂಜೆಯ ಕಾಲದ 5
--------------
ಪುರಂದರದಾಸರು