ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭೀಮಾ ಹೋ ಭಲಾರೆ ನಿಸ್ಸೀಮ ಹೋ ಭಾಪುರೆ ಹನುಮ ಹೋ ಪ. ನಿಜಜಿತಕಾಮ ಹೋ ಕಾರುಣ್ಯಧಾಮ ಹೋ ರಾಮಚಂದ್ರನ ಚರಣಕಮಲಸರಾಮ ಕಾರ್ಯಧುರಂಧರನೆ ಅ.ಪ. ಆಂಜನೇಯ ಸುಕುಮಾರ ಅದ್ಭುತಮಹಿಮ ರಾಮ[ನ] ದೂತನೆ ಅಂಜದುದಧಿಯ ದಾಟಿ ಅಸುರನ[ವ] ನವ ಕಿತ್ತನೆ ಕಂಜಮುಖಿ ಜಾನಕಿಗೆ ಮುದ್ರೆಯನಿತ್ತ ಬಲುಪ್ರಖ್ಯಾತನೆ ಮಾಡಿಸಿದೆ ಕಲಿ 1 ಅವನಿತನುಜೆಯ ಚೂಡಾರತ್ನವ ಅಂಬುಜಾಕ್ಷನಿಗಿತ್ತನೆ ಸಮರಕನುಕೂಲವೆಂದು ರಾಮಗೆ ಸುಗ್ರೀವನ ಕಾಣಿಸಿದನೆ ಕಮಲನಾಭನ ಆಜ್ಞೆಯಿಂದಲಿ ಕಪಿಬಲವ ಕೂಡಿಸಿದನೆ ಬಹುಪರಾಕ್ರಮಿಯಹುದಹುದೊ ಕಲಿ 2 ಅಗಳುಸಾಗರ ಮಧ್ಯದಲ್ಲಿಹ ನಗರವನು ಬಂದು ಮುತ್ತಿದೆ ಬಗೆದು ಕಲ್ಮರಗುಂಡಿನಿಂದಲಿ ವಿಗಡದೈತ್ಯರ ಮಡುಹಿದೆ ಬಗೆಬಗೆ ಮಯಾಜಾಲವನು ಗೆದ್ದು ಭರದೊಳದ್ರಿಯ ತುಡುಕಿದೆ ಜಗತ್ಪತಿಯ ಮೂರ್ಬಲವನೆಲ್ಲವ ಸಂಜೀವನವ ತಂದುಳುಹಿದೆ 3 ಪೃಥ್ವಿಯೊಳಗುದ್ದಂಡ ದೈತ್ಯರ ಸುತ ಸಹೋದರರ ಮಡುಹಿದೆ ಹತವ ಮಾಡಿ ಶ್ರೀರಾಮ ಬಾಣದಿ ಹತ್ತು ತಲೆಗಳ ಕೆಡಹಿದೆ ಪ್ರತಿಶತೇಶ್ವರ ಶ್ರೀರಮಣಿಯನ್ನು ತಂದು ರಾಘವಗೆ ಒಡಗೂಡಿಸಿದೆ ಮಾಡಿಸಿದೆ ಕಲಿ 4 ಕುಂಡಲ ಚಾರು ಯಜÉ್ಞೂೀಪವೀತನೆ ಸೂರ್ಯಚಂದ್ರಮರುಳ್ಳನಖ ವಜ್ರಕಾಯದಲಿ ನಿರ್ಭೀತನೆ ವೀರಕದನಕಠೋರ ರಾಣಿಬೆನ್ನೂರ ಬಯಲಾಂಜನೇಯನೆನೀರಜಾಕ್ಷನ ಹೆಳವನಕಟ್ಟೆರಂಗನ ಪ್ರಿಯದಾಸನೆ ಕಲಿ 5
--------------
ಹೆಳವನಕಟ್ಟೆ ಗಿರಿಯಮ್ಮ
ಮಾತ್ರೆಯಿದು ಸಜ್ಜನರಿಗಾರೋಗ್ಯ ಮಾತ್ರೆ ಸೂತ್ರ ನಾರದನಿದಕೆ ನೆನಪಿನಾ ಮಾತ್ರೆ ಪ ಸಾರ ಪಾಕಗಳಿಲ್ಲ ಊರೂರಿಗೊಯ್ವುದಕೆ ಭಾರವಲ್ಲ ಅ.ಪ ಚಾರು ಚೂರ್ಣವಿದಲ್ಲ | ನೀರೊಳಲೆದುದು ಅಲ್ಲ ಕ್ಷಾರ ಹುಳಿ ಕಹಿಯಿಲ್ಲದೈಶ್ವರ್ಯದಾ ಮಾತ್ರೆ 1 ಇಂದಿರಾಪತಿಯೆಂಬ ಚಂದ್ರೋದಯದ ಮಾತ್ರೆ ಮಂದರೋದ್ಧಾರನೆಂಬ ಸಿಂಧೂರಮಾತ್ರೆ 2 ನಾರಾಯಣಾಯೆಂಬ ನೀರ ಬೆರಸಿರೋದಿದಕೆ ಸಾರತರ ರಸಪಾಕ ತೋರುವಾ ಮಾತ್ರೆ3 ಶ್ರೀರಮಣನೆಂಬ ಮಧುಸೇರಲಾ ಮಾತ್ರೆಗಳ [ಮೂರೊತ್ತು ಸೇವಿಸೆ ಮನಕಹುದು ಹಿತ] 4 ಕರುಣಾಕರಾಯೆಂಬ ವರಸಕ್ಕರೆಯ ಬೆರಸಿ ಶರಣಜನವರದನೆಂದೊರೆವರು ಸದಾ 5 ಪರಮಾತ್ಮನೆಂಬ ಒರಳೊಳ್ ಹರಿಯೆಂಬ ಗುಂಡಿನಿಂದ ಅರೆದೊಡದು ಕೇಳಾ ಮಾಂಗಿರಿರಂಗನೆನಿಪಾ 6
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್