ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಇ) ಶ್ರೀಕೃಷ್ಣಸ್ತುತಿಗಳು ಜಯಕೃಷ್ಣ ಜಗದೀಶ ಜಯ ಶಶಿಕುಲಾಧೀಶ ವಿನುತ ವಾಣೀಶ ಜಯಣೀಶ ಜಯ ಜಯ ಪ ಕಮಲಭವನುತಿಪಾತ್ರ ಕಮಲಸಖನಿಭಗಾತ್ರ ಕಮಲರಿಪುಸಮವಕ್ತ್ರ ಕಮಲದಳನೇತ್ರ ಕಮಲಕರಧೃತಗೋತ್ರ ಕಮನೀಯ ಸುಚರಿತ್ರ ಕಮಲಾರಿಧರಮಿತ್ರ ಕಮಲಾಕಲತ್ರ 1 ನಂದಗೋಪಕುಮಾರ ನವನೀತದಧಿಚೋರ ಸುಂದರೀ ಕುಲಜಾರ ಸ್ಮರಸಮರ ಶೂರ ಕಂದರ್ಪಸಹಕಾರ ಕಾಮಿನೀವಾರ ಬೃಂದಾವನವಿಹಾರ ಭಕ್ತ ಮಂದಾರ 2 ಧರಣೀಧರಾಸ್ಫಾಲ ಮನಕರ ನಿಜಲೀಲ ನರಪೌತ್ರ ಪರಿಪಾಲ ನವ್ಯವನಮಾಲಾ ವರವ್ಯಾಘ್ರಗಿರಿಲೋಲ ವರದಾರ್ಯವಿಠಲ 3
--------------
ವೆಂಕಟವರದಾರ್ಯರು
ಕರುಣದಿ ರಕ್ಷಿಸು ಎನ್ನನು ಪುಲಿ ಗಿರಿಲೋಲ ನಂಬಿದೆ ನಿನ್ನನು ಪ ಕರುಣದಿ ರಕ್ಷಿಸು ಚರಣಸೇವಕಭಯ ಚರಣಯುಗಳದಿ ಶರಣು ಹೊಕ್ಕೆನು ಅ.ಪ ಗತಿ ತಾಳ ಲಯ ಬಂಧ ತಿಳಿಯದ ಶ್ರುತಿಗಳ ಮಹಿಮೆಯ ಕೇಳದ ಶ್ರುತಿಗೋಚರ ನಿಮ್ಮ ಸ್ತುತಿಯ ಅನುಭವವಿತ್ತು ಪತಿತಪಾವನ ಪುಲಿಗಿರೀಶನೆ ಪತಿತನುದ್ಧರಿಪಂತೆ ಗತಿವಿಹೀನಗೆ ಪಥವ ತೋರಿಸಿ ಸದ್ಗತಿಯ ಪಾಲಿಸುವಂತೆ ಪತಿತನೆನ್ನನು ಭವಜಲಧಿ ಮಧ್ಯದಿ 1 ಗುರುದ್ರೋಣ ಕೃಪರ ಮುಂದಡೆಯಲ್ಲಿ ದುರುಳ ದುಶ್ಯಾಸನನ ಕೈಯಲ್ಲಿ ಪರಮಾತ್ಮ ಪರಿಪೂರ್ಣ ಕರುಣಾಳು ನಿನ್ನನೇ ಮರೆಹೊಕ್ಕೆ ಪೊರೆಯೆಂದು ಮೊರೆಯಿಡಲಾಕ್ಷಣ ಶರಣಜನ ಸಂಸಾರ ಶ್ರೀಹರಿ 2 ನರಳಿ ಸಾವಿರವರುಷ ಜಲದೊಳು ಸ್ಮರಣೆ ಮಾಡುತ ದೃಢಮನದೊಳು ಕರಿ ಮೊರೆಯಿಡಲಾ ಕರುಣದಿಂ ಮೊರೆ ಕೇಳಿ ಗರುಡನ ಪೆಗಲೇರಿ ಸಾರಿ ಕರಿಯಪೊರೆದಾ ವರದವಿಠಲ 3
--------------
ವೆಂಕಟವರದಾರ್ಯರು
ಜಯಕೃಷ್ಣ ಜಗದೀಶ ಜಯ ಶಶಿಕುಲಾಧೀಶ ಜಯವಿನುತ ವಾಣೀಶ ಜಯ ರುಕ್ಮಿಣೀಶ |ಜಯಜಯ ಪ ಕಮಲಭವನುತಿಪಾತ್ರ ಕಮಲಸಖನಿಭಗಾತ್ರ ಕಮಲರಿಪು ಸಮವಸ್ತ್ರ ಕಮಲದಳ ನೇತ್ರ ಕಮಲ ಕರಧೃತಗೋತ್ರ ಕಮನೀಯ ಸುಚರಿತ್ರ ಕಮಲಾರಿ ಧರ ಮಿತ್ರ ಕಮಲಾಕಳತ್ರ 1 ನವನೀತ ದಧಿ ಚೋರ ಸುಂದರೀ ಕುಲಜಾರ ಸ್ಮರಸಮರ ಶೂರ ಕಂದರ್ಪಸಹಕಾರ ಕಾಮಿನೀ ಪರಿವಾರ ಬೃಂದಾವನ ವಿಹಾರ ಭಕ್ತ ಮಂದಾರ 2 ಧರಣೀ ಧರಾಸ್ಫಾಲ ದಮನಕರ ನಿಜಲೀಲ ನರಪೌತ್ರ ಪರಿಪಾಲ ನವ್ಯ ವನಮಾಲಾ ಮುರನರಕ ಶಿಶುಪಾಲ ಮುಖದನುಜ ಕುಲ ಕಾಲ ವರವ್ಯಾಘ್ರಗಿರಿಲೋಲ ವರದಾರ್ಯವಿಠಲಾ 3
--------------
ಸರಗೂರು ವೆಂಕಟವರದಾರ್ಯರು
ಭಾರತಿ ಪೊರೆಯೆಮ್ಮನು ಕಾರುಣ್ಯಮೂರುತಿ ಸಾರಸಭವಸತಿ ತೋರಿಸು ಸನ್ಮತಿ ಪ. ವೀಣಾಪುಸ್ತಕಧಾರಿಣಿ ಪನ್ನಗವೇಣಿ ವಾಣಿ ಗೀರ್ವಾಣಿ ಜನನೀ ಜಾಣೆ ಬ್ರಹ್ಮನ ರಾಣಿ ಸುಶ್ರೋಣಿ ಕಲ್ಯಾಣಿ 1 ನಾರದಮುನಿ ಸನ್ನುತೆ ಸಾರಸನೇತ್ರೇ ಚಾರುಚರಿತೇ ಸುರಸುತೆ ಮಾರನಯ್ಯನ ಚರಿತೆ ಸಾರುವಂತೆಸಗು ಮಾತೆ 2 ನಾಲಿಗೆಯೊಳು ನೆಲಸುತ ನಲಿನಲಿಯುತ ಮೇಲಹಕೃತಿ ನುಡಿಸುತ ಪಾಲಿಸು ಶ್ರೀಗಿರಿಲೋಲನ ಸೊಸೆ ನಿರುತ 3
--------------
ನಂಜನಗೂಡು ತಿರುಮಲಾಂಬಾ