ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆರೋಗಣೆಯ ಮಾಡು ಸಾರಸುಖದೊಡೆಯ ಪ. ಸತ್ಯವಾದ ಜಗಕೆ ಕರ್ತುಕಾರಣ ನೀನೆ ಮುಕ್ತಿದಾಯಕ ನಿತ್ಯತೃಪ್ತನಹುದೈ ಸತ್ಯವಾದವತಾರ ಸಕಲಗುಣ ಪರಿಪೂರ್ಣ ಸಿರಿ ಪರಮ ದಯಾಳು1 ಅಣುರೋಮಕೂಪದಲಿ ಅಂಡಜಾಂಡಗಳಿರಲು ಘನಕೃಪಾಂಬುಧಿ ನಿಮ್ಮ ಪೊಗಳಲಳವೆ ಫಣಿಶಾಯಿಯಾಗಿದ್ದ ಭುವನವ್ಯಾಪಕ ಹರಿಯ ಘನಭಕುತಿಲ್ಯಜಭವರು ಪೂಜೆಮಾಡುವರು 2 ಗಂಗೆಗೋದಾವರಿ ತುಂಗಭದ್ರೆ ಯಮುನೆ ರÀಂಗಸನ್ನಿಧಿಯಾದ ಕಾವೇರಿಯು ಮಂಗಳ ಭೀಮರಥಿ ನಿಮಗೆ ಮಜ್ಜನಕೆ ಅಣಿಮಾಡಿ ಅಂಗಜನಯ್ಯ ಭಾಪೆಂದು ಪೊಗಳೆ 3 ರನ್ನಮಯವಾಗಿರ್ದ ಹೊನ್ನಮಂಟಪದೊಳಗೆ ಸ್ವರ್ಣಪಾತ್ರೆಗಳಲ್ಲಿ ಸ್ವಯಂಪಾಕವು ನಿನ್ನ ಸೊಸೆ ವಾಣಿ ಭಾರತಿದೇವಿ ಕಡುಜಾಣೆ ಚೆನ್ನಾಗಿ ನೈವೇದ್ಯವನ್ನೆ ಮಾಡುವರು 4 ಗಂಧ ಕಸ್ತೂರಿ ಪುನುಗು[ಚಂದನ] ಜವ್ವಾಜಿ ಮುಂದೆ ಕುಂಕುಮದ ಕೇಸರಿಯ ಲೇಪ ಚೆಂದದ ಕೇದಿಗೆ ಮುಡಿವಾಳ ಸಂಪಿಗೆ ಕಂದರ್ಪನಯ್ಯಗೊಪ್ಪಿತು ಮಲ್ಲಿಗೆ 5 ದೆಸೆದೆಸೆಗೆ ಪರಿಮಳಿಪ ಕುಶಲದ ಚಿತ್ರಾನ್ನ ಬಿಸಿದೋಸೆಗೆ ಬೆಣ್ಣೆ ಲೇಹ್ಯಪೇಯ ಬಸಿರೊಳಗೆ ಈರೇಳು ಜಗವನಿಂಬಿಟ್ಟವಗೆ ನಸುನಗುತ ಇಂದಿರಾದೇವಿ ಬಡಿಸೆ 6 ನೂರು ಯೋಜನದಗಲ ಸರಸಿಜ ಬ್ರಹ್ಮಾಂಡ ಹದಿ ನಾರು ಬಣ್ಣದ ಚಿನ್ನದ್ಹರಿವಾಣವು ಸಾರೆಯಲಿ ಪೊಂಬಟ್ಟಲೆಂಬ ಸಾಗರದೊಳಗೆ ಮೇರುಗಿರಿಯೆಂಬೊ ದೀಪಗಳು ಬೆಳಗೆ 7 ಘೃತ ಸೂಪ ಲೋಕಪತಿಗನುವಾದ ದಿವ್ಯಾನ್ನವು ಬೇಕಾದ ಪಂಚಭಕ್ಷ್ಯ ರಸಾಯನವ ಏಕಾಂತದಲ್ಲಿ ನಿಮ್ಮ ದೇವಿ ಬಡಿಸೆ 8 ಖಳರಕುಲವೈರಿಗೆ ತಿಳಿನೀರುಮಜ್ಜಿಗೆ ಎಳನೀರು ಪಾನಕ ಸೀತಳುದಕ ಬಳಲಿದಿರಿ ಬಳಲಿದಿರಿ ಎನುತ ಹಯವದನಗೆ ನಳಿನಾಕ್ಷಿ ಕರ್ಪೂರವೀಳ್ಯವನೆ ಕೊಡಲು 9
--------------
ವಾದಿರಾಜ
ತೆರಳಿದರು ವಿಜಯರಾಯರು ವಿಜಯ ವಿಠಲನ ಪುರದೊಳಗೆ ಪರಮ ಭಕ್ತರ ಕಾಣಬೇಕೆನುತ ಪ ಯುವ ಸಂವತ್ಸರದ ಕಾರ್ತಿಕ ಶುದ್ಧ ದಶಮಿ ವಿಭಕ ರವು ಗುರುವಾರ ಪ್ರಥಮ ಯಾಮದೀ ಪವನಾಂತರಾತ್ಮಕ ಶ್ರೀ ಹರಿಯ ದರ್ಶನೋ ತ್ಸವ ಸಂಪಾದಿಸುವ ಬಹು ಲವಲವಿಕೆಯಿಂದ 1 ಧರಣಿಯೊಳು ಬಾಸ್ಕರ ಕ್ಷೇತ್ರವೆನಿಸುವ ಚಿಪ್ಪ ಗಿರಿಯೆಂಬ ಗ್ರಾಮದಿ ವಿಬುಧರ ಮುಖದಿ ಭಾಗವತ ಬ್ರಹ್ಮಸೂತ್ರ ಭಾರತ ಗೀತ ಮರುತ ಶಾಸ್ತ್ರಾರ್ಥ ಗ್ರಂಥಗಳನಾಲಿಸುತಲಿ 2 ಸುಖತೀರ್ಥ ಮುನಿಯ ಮನಕನುಕೂಲ ಸಚ್ಛಾಸ್ತ್ರ ನಿಕರಗಳ ಕವನ ರೂಪದಲ್ಲಿ ರಚಿಸಿ ಭಕತರಿಗೆ ಸನ್ಮಾರ್ಗ ತೋರಿ ಸಂತೋಷದಲಿ ವಿಖನಸಾರ್ಚಿತ ಜಗನ್ನಾಥ ವಿಠಲನ ಪದಕೆ 3
--------------
ಜಗನ್ನಾಥದಾಸರು
ಪಚ್ಚೆಯ ಬಂದೀಗ ಶ್ರೀ ಪುಲಿಗಿರಿ ಪಚ್ಚೆಯ ನೋಡಿ ಬೇಗ ಪ ಸಚ್ಚಿದಾನಂದರೂಪಚ್ಚರಿಯಾದಂಥ ಮುಚ್ಚುಮರೆಯಿಲ್ಲದಚ್ಚುತನೆಂಬುವ ಅ.ಪ ಕೈಗೆ ಸಿಕ್ಕುವುದಲ್ಲವೈ ತಕ್ಕಡಿಯಲ್ಲಿ ತೂಗಿ ನೋಡುವುದುಲ್ಲ ವೈ ಯೋಗಿ ಹೃದಯದಲ್ಲಿ ಭಾಗವತರೊಳನುರಾಗದಿ ಮೆರೆಯುವ 1 ಬೆಲೆಯ ಕಟ್ಟುವದಲ್ಲವೈ ಈ ಪಚ್ಚೆಯ ನೆಲೆಯ ಕಂಡವರಿಲ್ಲವೈ ನಲಿದು ಧ್ಯಾನಿಪರಿಗೆ ಒಲಿದು ತೋರುವ ದಿವ್ಯ ಜಲಧರವರ್ಣದ ಜಲಜಾಕ್ಷನೆಂಬುವ 2 ಧರೆಯೊಳುತ್ತಮವಾಗಿಹ ಶ್ರೀ ಪುಲಿಗಿರಿಯೆಂಬ ಗಿರಿಯೊಳು ನೆಲೆಯಾಗಿಹ ಚರಣವ ನಂಬಿದ ಶರಣರ ಪೊರೆಯುವ ವರದವಿಠಲ ದೊರೆ ವರದೆನಂದೆಸರಾದ3
--------------
ವೆಂಕಟವರದಾರ್ಯರು
ವರಗುರು ತಂದೆ ಮುದ್ದು ಮೋಹನದಾಸರೆಗಿತ್ತರು ಲೇಸ ಪರಮ ಸಂಭ್ರಮದೊಳಿವರ ಸಹವಾಸ ಕರುಣಿಸಿದನು ಶ್ರೀಶ ಪ ರಾಗ ದ್ವೇಷಾದಿಗಳಿವರೊಳಗಿಲ್ಲ ಪಾಮರರಿವರಲ್ಲ ಶ್ರೀ ಗುರುಗಳೆನಗಿವರೆಂದು ಸ್ತುತಿಪನಲ್ಲ ಲಾಲಿಪುದೆನಸೊಲ್ಲ 1 ಶುಭ ಚರಿತೆಯನು ಜ್ಞಾನಿಗಳೆಂಬುದನು ಖುಲ್ಲ ಜನ ನಿಂದಿಸಿದರಾಗುವದೇನೊ ಅರಿಯೆನಯ್ಯ ನಾನು 2 ಪಾದ ಸರಸಿರುಹಕೆ ಭ್ರಮರರೆನಿಸುವ ಗುಣಯುತರ ಕುಜನಗಳೇನು ಬಲ್ಲರಯ್ಯ ಇವರ ಮಹಿಮಂಗಳ ವಿವರ 3 ಕರಿಗಿರಿಯೆಂಬ ವರಕ್ಷೇತ್ರದಲ್ಲಿ ವರುಷಂಪ್ರತಿಯಲ್ಲಿ ಹರಿದಾಸೋತ್ತಮ ಧರಣಿಸುರರನಲ್ಲಿ ಬಲು ಸೇವಿಪರಲ್ಲಿ 4 ಇಷ್ಟದೈವ ಅಪವರ್ಗಪ್ರದನೆಂಬ ಶ್ರೀ ನರಹರಿಯೆಂಬ ದಿಟ್ಟ ಶ್ರೀ ರಂಗೇಶವಿಠಲನ ಬಿಂಬಾಕೃತಿಯ ಸದಾ ಕಾಂಬ 5
--------------
ರಂಗೇಶವಿಠಲದಾಸರು
ಶೇಷಾದ್ರಿಯನು ನೋಡಿರೊ-ಸೇವಕ ಪರಿ- ತೋಷಾದ್ರಿಯಿದು ಕಾಣಿರೋ ಪ ಶೇಷಾದ್ರೀಶನ ಪರಿತೋಷದಿಂ ಪಾಡಿ ಅ.ಪ. ಸಣ್ಣದಾದರು ಗಿರಿ ರನ್ನವ ಪೊಲುವ- ದರ್ಣವಶಯನನ ಕಣ್ಣಿಲಿ ಕಾಣಿಪ 1 ಬಗೆಬಗೆ ವೃಕ್ಷಗಳು-ಬನಂಗಳು-ಬಗೆಬಗೆ ¥ಕ್ಷಿಗಳು ಬಗೆಬಗೆಮೃಗಗಳು ಸೊಗಸಿನೊಳಿರೆಬಹು ಬಗೆಬಗೆ ಧಾತುಗಳಿಗೆ ನೆಲೆಯಾಗಿಹ 2 ಯುಗಗಳ ಸಂಖ್ಯೆಯೊಳು-ನಾಮಂಗಳು- ಯುಗಮೊದಲೊಳಗೆ ಪನ್ನಗಗಿರಿಯೆನೆ ತ್ರೇತಾ ಯುಗದಲ್ಲಿ ಹೇಮದ ನಗವೆಂಬ ಪೆಸರಿನ 3 ದ್ವಾಪರಯುಗದೊಳಗೆ-ವೆಂಕಟನಾಮ- ವೀಪರ್ವತಕ್ಕೊದಗೆ ಶ್ರೀ ಪುಲಿಗಿರಿಯೆಂಬ ರೂಪವೀಯುಗದೊಳು ಶ್ರೀಪತಿಯಿತ್ತನಿರೂಪದೊಳೊಪ್ಪುವ 4 ದೂರದಿ ಶೋಭಿಸುವ ದುರ್ಜನರಿಗೆ-ದೂರನಮಂದಿರವ ವರದ ವಿಠಲ ನಿಹ 5
--------------
ಸರಗೂರು ವೆಂಕಟವರದಾರ್ಯರು