ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನೆಂದು ಕೊಂಡಾಡಿ ಸುತ್ತಿಸೆಲೊ ನಿನ್ನಾ ಪ ದಾನವಾಂತಕ ಕೃಷ್ಣ ಆನಂದ ಗುಣ ಪೂರ್ಣ ಅ.ಪ. ಮತ್ಸರೂಪಿಯೆ ನಿನ್ನ ಉತ್ಸಹದಿ ಕರೆಯಲಾಕುತ್ಸಿತನ ಸೊಲ್ಲ ನೀನೆತ್ತ ಕೇಳುವಿಯೋ |ಮತ್ಸ್ಯಕೇತನ ಜನಕ | ಮತ್ಸರವ ಕಳೆಯಯ್ಯಸಚ್ಚಿದಾನಂದಾತ್ಮ | ಚಿತ್ಸುಖಪದನೇ 1 ಕೂರ್ಮರೂಪಿಯೆಂದು | ಪೇರ್ಮೆಯಲಿ ಕರೆಯಲಾಭರ್ಮ ಗರ್ಭನ ಪಿತನೆ | ಗಿರಿಯ ಧರಿಸಿರುವೇ |ನಿರ್ಮಲಾತ್ಮಕನೆ ಯೆನಗೆ | ನಿರ್ಮಮತೆ ನೀಡಯ್ಯಾ ಊರ್ಮಿಳಾಪತಿ ಭ್ರಾತೃ | ಪರಮ ಮಂಗಳನೇ 2 ವರಹ ರೂಪಿಯೆ ನಿನ್ನ | ಕರೆಯುವುದು ಹೇಗಯ್ಯಾ ಕೋರೆ ದಾಡಿಯ ಮೇಲೆ | ಧರೆಯೆ ಧರಿಸಿರುವೇ | ವಾರೆ ನೋಟದಿ ಯೆನ್ನ | ಪರಿಕಿಸೀ ಪೊರೆಯಯ್ಯಾಧೀರ ಭೂವರಹ ವರ | ಧರಣಿ ಪರಿಪಾಲಾ 3 ನಾರಸಿಂಹನೆ ನಾನು | ಕರೆಯಲಾಪನೆ ನಿನ್ನಘೋರರೂಪವ ನೋಡಿ | ದೂರ ಸಾರುವರೋವಾರಿಜಾಕ್ಷಿಯು ಬಂದು | ಘೋರ ಪ್ರಹ್ಲಾದನ್ನಚಾರು ತವ ಚರಣದಲಿ | ಇರಿಸಬೇಕಾಯ್ತು 4 ದಧಿ | ವಾಮನನೆ ಬಾರೆಂದುಸಾಮಸನ್ಮುತ ನಿನ್ನ | ನಾಮಗಳ ನೆನೆಯೆಲಾ |ಭೂಮಿ ಬೇಡುವ ನೆವದಿ | ಬಲಿಯ ಭೂಮಿಗೆ ತುಳಿದೆಸೀಮೆ ಮೀರಿದ ಮಹಿಮ | ಮರ್ಮವಿನ್ನೆಷ್ಟೋ | 5 ಪರಶುರಾಮನೆ ನಿನ್ನ | ಕರೆಯಲಾರೆನು ನಾನುದುರುಳ ಕ್ಷತ್ರಿಯರ | ಶಿರಗಳನೆ ತರಿದೂ |ಭಾರಿ ಪರಶುವಿನಿಂದ | ವರಮಾತೆ ಶಿರ ತರಿದಿಸರಿ ಕಾಣೋ ಇದು ನಿನಗೆ | ಪರಮ ಪಾವನ್ನಾ 6 ರಾಮ ರೂಪಿಯೆ ನಿನ್ನ | ಆ ಮಹಾ ಮಹಿಮೆಗಳಸೀಮೆಗಾಣಳು ಲಕುಮಿ | ಪಾಮರನಿಗಳವೇ |ಆ ಮರಾ ಈ ಮರಾನೆಂದ ಆ | ಪಾಮರನ ಪೊರೆದುಆ ಮಹಾತ್ಮನ ಗೈದ | ಪರಿಯೆನ್ನ ಮಾಡೋ 7 ಕೃಷ್ಣ ಕೃಷ್ಣಾ ಎಂದು ಕರೆಯುವೆನೆ ನಾ ನಿನ್ನಕಷ್ಟದೊಳು ಸಿಲುಕಿರುವೆ | ಗಿರಿಯನ್ನೆ ಪೊತ್ತು |ವೃಷ್ಟಿಕುಲ ಸಂಪನ್ನ | ಕೃಷ್ಣ ಮೂರುತಿ ನೀನುಇಷ್ಟ ಭಕುತರ ಮನೋ | ಭೀಷ್ಟ ಸಲಿಸುವಿಯಾ 8 ಬುದ್ಧ ದೇವನೆ ಎನಗೆ ಸ | ದ್ಭುದ್ಧಿ ಕೊಡು ಎಂದುಬುದ್ಧಿ ಪೂರ್ವಕವಾಗಿ ನಿನ್ನ ಕರೆಯಲಾ |ಬುದ್ಧಿಯಿಂದಲಿ ನೀ | ಭೋಧಿಸಿದೆ ದುಶ್ಯಾಸ್ತ್ರಬೌದ್ಧ ನಿನ್ನನು ಪೊದ್ದು | ಬುಧರ ಪಾಡೇನೊ 9 ಕಲ್ಕಿ ಕಲ್ಕೀ ಎಂದೇ ಕರೆಯಲಾಪೆನೆ ದೇವಾಶುಲ್ಕ ಮೇಲಾಗಿಹುದು ಕಲಿಯುಗದೊಳು |ಉಲ್ಕ ಮುಖ ಮೊದಲಾದ | ಕಲ್ಕಿರಾಜರು ನಿನ್ನಕಲ್ಕ್ಯಾತ್ಮ ಸತ್ಯ ತವ | ವ್ರತವ ಮಾಳ್ಪರು ಬಿಡದೆ 10 ಸರ್ವರೂಪಾತ್ಮಕನೆ | ಸರ್ವ ವ್ಯಾಪಕ ಸ್ವಾಮಿಸರ್ವಜಿತು ಸರ್ವಾತ್ಮ ಸರ್ವೇಶನೇ |ಶರ್ವಾರಿ ವಂದ್ಯ ಗುರು | ಗೋವಿಂದ ವಿಠಲನೇಗುರು ಹೃದಂಬರದಲ್ಲಿ | ತೋರಿ ಪೊರೆಯನ್ನ 11
--------------
ಗುರುಗೋವಿಂದವಿಠಲರು
ಕುದುರೆ ಕಂಡೀರ್ಯಾ ಬಿಳಿ ಕುದುರೆ ಕಂಡೀರ್ಯಾ ಚೆಲುವ ಕುದುರೆ ಕಂಡೀರ್ಯಾ ಮಧ್ವರಾಯರಿಗೊಲಿದ ಕುದುರೆ ವಾದಿರಾಜರ ಪೊರೆದ ಕುದುರೆ ಇಂದಿರಾ ದೇವಿಯನಪ್ಪಿದ ಕುದುರೆ ಬಂದರೆ ನರರು ಬೆದರದಂಥ ಕುದುರೆ 1 ಮಂದರಗಿರಿಯನ್ನೆತ್ತಿದ ಕುದುರೆ ಚಂದಿರನಂತೆ ಪೊಳೆಯುವ ಕುದುರೆ ಸೋದೆಯ ಪುರದೊಳಿರುವ ಕುದುರೆ ಮೋದದಿಂದ ಮೆರೆಯುವ ಕುದುರೆ 2 ನರನ ರಥವನು ಏರಿದ ಕುದುರೆ ಸ್ಮರನ ತಾತನೆನಿಪ ಕುದುರೆ ಸುರತರುವನೆ ಭೂಮಿಗೆ ತಂದ ಕುದುರೆ 3 ಕಡಲೆ ಹೂರಣ ಮೆಲುವ ಕುದುರೆ ಪಂಡರಪುರದಿ ಮೇದ ಕುದುರೆ ಪುಂಡರೀಕನಿಗೆ ಒಲಿದಿಹ ಕುದುರೆ ಪಾಂಡವರನೆ ಪೊರೆದ ಕುದುರೆ 4 ರಾಜನಾಥನೆನಿಪ ಕುದುರೆ ವಾಜಿವದನ ತಾನೆನಿಪ ಕುದುರೆ ಕಂಜಸುತಗೆ ಶ್ರುತಿಯನ್ನಿತ್ತ ಕುದುರೆ ಕಂಜನಾಭನೆನಿಪ ಕುದುರೆ 5
--------------
ವಿಶ್ವೇಂದ್ರತೀರ್ಥ
ನಿನ್ನ ನಂಬಿದವರ ಕಾಯೊ ನಿಜವುಳ್ಳ ದೇವ ಎನ್ನನು ಉದ್ಧರಿಸಿ ಕಾಯೊ ಕರುಣಿವೆಂಕಟ ಪ. ಸುರಪತಿಯು ಮುನಿದು ಮಳೆಗರೆಯಲೇಳು ದಿನವೂ ಬಿಡದೆ ತುರುಗಳೆಲ್ಲ ಸೊರಗಿ ಬಾಯ ಬಿಡುತಿರಲು ಬೆರಳಿನಿಂದ ಗೋವರ್ಧನ ಗಿರಿಯನ್ನೆತ್ತಿ ಗೋವ್ಗಳನು ದ್ಧರಿಸಿ ಕಾಯ್ದೆ ಕರುಣಾಸಿಂಧು ಕಮಲಲೋಚನ 1 ಮಡುವಿನೊಳಗೆ ಮಲೆತನೀರ ಕುಡಿಯ ಬಂದಾಗಜವ ನೆಗಳು ಪಿಡಿದು ಕಾಲಕಚ್ಚಿ ಭಂಗಬಡಿಸುತ್ತಿರಲು ತಡೆಯಲಾರದೆ ಪ್ರಾಣ ಬಿಡುವ ಸಮಯದಲ್ಲಿ ಬಂದು ಕೆಡಹಿ ಚಕ್ರದಿಂದ ನೆಗಳ ಕರಿಯ ಸಲಹಿದೆ2 ಮಂದ ತುತ್ತು ಮಾಡಿ ಪಿಡಿದು ಕುದುರೆ ಕ್ರೂರ ದಂತದಿ ಕತ್ತರಿಸುವ ಸಮಯದಲ್ಲಿ ಕಡೆಮಾಡಿ ಕಾಯೆನ್ನ ಕರ್ತು ಹೆಳವನಕಟ್ಟೆ ಕರುಣಿ ವೆಂಕಟ 3
--------------
ಹೆಳವನಕಟ್ಟೆ ಗಿರಿಯಮ್ಮ
ಪಾದಂಗಳ ತೋರಿಸೋ ನಾರಾಯಣ ಪಾದಂಗಳ ತೋರಿಸೊ ಪ ಸಾದರ ಭಕುತಿಯ ನಿನ್ನಲಿ ಇರಿಸೋಮೋದದಿ ಭಜಿಪಂತೆ ನನ್ನದು ಪ್ರೇರಿಸೊ ಅ.ಪ. ನಾಗಾದಿ ಕಪ್ಪತ್ತ ಗಿರಿಯನ್ನೆ ಚಿನ್ನವನ್ನಾಗಿಸಿ ಬಿಡಲೆಂದು ಯತ್ನಿಸುತ್ತಿದ್ದನಾಗಾರ್ಜುನನ ನೀಗಲು ಭುವಿಯೊಳುಬೇಗದಿ ಬಂದಿ ವೀರನಾರಾಯಣ 1 ಮೈಯೊಳು ಕವಚವ ಶಿರದಿ ಕಿರೀಟವಕೈಯೊಳು ಚಕ್ರ ಗದಾ ಶಂಖ ಧರಿಸಿರಯ್ಯನೆ ಗದುಗಿನೊಳಿಳಿದು ಆ ದೈತ್ಯನಹೊಯ್ಯಲು ಬಂದ ಶ್ರೀ ವೀರನಾರಾಯಣ 2 ತೋರ ಕನ್ನಡದಲ್ಲಿ ವರ ಕವಿಯಾದ ಕುಮಾರ ವ್ಯಾಸನಿಂದ ಭಾರತ ರಚಿಸಿದಿಧೀರ ಶ್ರೀ ಪುರಂದರದಾಸರು ಕರೆದಿಹಭಾರತಮಲ್ಲ ಶ್ರೀ ವೀರನಾರಾಯಣ 3
--------------
ವೀರನಾರಾಯಣ
ಶ್ರೀ ಹರಿಸ್ತುತಿ ಎಂದೆಂದಿಗೂ ಎನಗೆ ತಂದೆ ನೀ ದೇವಾಬಂದೆನ್ನ ಕರಪಿಡಿಯೊ ಬಿಂದು ಮಾಧವಾ ಪ ಸಾರ ಮಾರ ಜನಕನೆ 1 ಮಂದರಗಿರಿಯನ್ನೆ ಚಂದಾದಿಂದೆತ್ತಿದೋಕಂದನೆಂತೆಂದೆನ್ನ ಮುಂದಕೆ ಕರೆಯೋ 2 ವರಾಹ ರೂಪವ ತಾಳಿ ಧರೆಯ ಸಲಹಿದೆಯೋದುರುಳ ಮನವನಳಿದು ತ್ವರದಿ ನೀ ಕಾಯೋ 3 ಕಂಬದಿಂದಲಿ ಬಂದ್ಯೊ ಅಂಬುಜನಯನಬಿಂಬನ ಪಾಲಿಸೊ ಅಂಬುಧಿಶಯನ 4 ಇಳೆಯ ದಾನವ ಬೇಡಿ ಬಲಿಯ ಮೆಟ್ಟಿದೆಯಾಭಳಿರೆ ಪಾದವ ತೋರಿ ಉಳಹೊ ಮಹರಾಯ 5 ಛಲದಿಂದ ಕ್ಷತ್ರಿಯ ಕುಲವನಳಿದನೆಬಲವಾದ ದುರಿತವ ಕಳೆಯೊ ಸುರವರನೆ 6 ಶಿಲೆಯ ಸತಿಯ ಮಾಡಿ ಸಲಹಿದ ರಾಮಾನಲಿನಲಿವುತ ಬಾರೊ ಜಲಜ ಸಂಭವ ಪ್ರೇಮಾ 7 ಆಕಳ ಕಾಯ್ದೆಯೊ ಗೋಕುಲನಾಥಏಕಭಕ್ತಿಯನೀಯೋ ಲೋಕವಿಖ್ಯಾತ 8 ಉತ್ತಮ ಸ್ತ್ರೀಯರ ಚಿತ್ತವ ಹರಿಸಿದ್ಯೋಉತ್ತಮ ಜ್ಞಾನವನಿತ್ತು ಪೊರೆಯೊ 9ತುರಗ ರಾವುತನಾಗಿ ಮೆರೆದಂಥಾ ವೀರಭರದಿ ಕಾಡುವ ಖಳರ ತರಿಯೊ ಗಂಭೀರ 10 ಶರಧಿಶಯನ ತಂದೆವರದವಿಠಲನುಶರಣು ಬಂದವರನ್ನು ನಿರುತ ಕಾಯುವನು 11
--------------
ಸಿರಿಗುರುತಂದೆವರದವಿಠಲರು