ಭಕುತಜನರ ಮುಕುಟಮಾನಸ
ನಿಖಿಲಜಗತ್ರಾಣ ಮಧುಸೂದನ ಪ
ಜಗಜೀವನ ಜಗಪಾಲನ
ಜಗವಂದನ ಜಗಪಾವನ
ಜಗಭರಿತ ಜಗನ್ನಾಥ
ಜಗ ಜಯಕಾರ ಜಗದಾಧಾರ 1
ಜಲಜಪಾಣಿ ಜಲಜನಾಭ
ಜಲಜನೇತ್ರನೆ ಜಲಜಗಾತ್ರನೆ
ಜಲಜಾಭರಣ ಜಲಧಿಶಯನ
ಜಲಜಸುತೆನಾಥ ಜಲಜಾಸನಪಿತ 2
ಉರಗಶಯನ ಗಿರಿಧಾರಣ
ಗಿರಿಜಾವಂದಿತ ದುರಿತರಹಿತ
ಜರಾಮರಣಹರಣ ಪರಮ
ಕರುಣಿ ಶ್ರೀರಾಮ ಶರಣಪ್ರೇಮ 3