ಒಟ್ಟು 6 ಕಡೆಗಳಲ್ಲಿ , 5 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೃಪೆಯ ತೋರಬಾರದೇನೋ | ಗೋಪಾಲರಾಯ ಪ ತಾಪತ್ರಯ ಬಲು ದೀಪನವಾಗಿದೆನೀ ಪರಿಹರಿಸದೆ ಮತ್ತೋರ್ವರನರಿಯೆ ಅ.ಪ. ಸೂನು ಶ್ರೀನಿವಾಸಾ |ಸಾರುತ ತವಪದ ಸೇವಿಸಿ ಭಕುತಿಲಿ |ದೂರೋಡಿಸಿದನು ಜವನವರಾ 1 ಗಿರಿಜಾತೆಯ ಪ್ರಿಯ ಕುವರಾ | ನೃಪವರದಶರಥ ಸುತ ಭರತಗೆ ಅವರಾ |ಮಾರುತಿ ಮತವನು ಅರುಹುತ ನೀ ಸಂಸಾರಕೆ | ತಾರಕ ನೆನಿಸಿದ ಧೀರಾ 2 ಭೋಗಿ ಶೀಲಾ | ನೀನಘದೂರ ಕಳೆಯೊ ಮೋಹಜಾಲಾ |ಭೋಗಿಶಯನ ಗುರು ಗೋವಿಂದ ವಿಠಲನಬಾಗಿ ಭಜಿಸುವಂಥ ಭಾಗ್ಯವ ನೀಯೋ 3
--------------
ಗುರುಗೋವಿಂದವಿಠಲರು
ಗಿರಿಜಾತೆಯ ಸುತ ಸುರನರ ಪೂಜಿತ ಪರಮಪುರುಷ ಗುಹ ದಯದೋರೋ ಪ ದುರಿತ ವಿನಾಶ ಗುಹ ದಯದೋರೋ ಅ.ಪ ಸರ್ವೋತ್ತಮೋತ್ತಮ ಗುಹ ದಯದೋರೋ 1 ಇಂದಿರೆಯರಸನ ಕಂದನ ಗತರೂಪಾ- ಕುಂದಿಸಿದಾ ಗುಹ ದಯದೋರೋ 2 ಬಾಲೆ ವಲ್ಲಿಯವರ ಶೀಲ ಸುಗುಣ- ಲೋಲ ಪಾವಂಜೆ ಗುಹ ದಯದೋರೋ 3
--------------
ಬೆಳ್ಳೆ ದಾಸಪ್ಪಯ್ಯ
ದೇವಿ ನೀ ಗಿರಿಜಾತೆಯು ನಿನ್ನಯ ಕಾಂತ ರಜತಾಖ್ಯಗಿರಿನಾಥನು ನೀನು ಭವಾನಿಯು ನಿನ್ನ ಕಾಂತನು ಭವದೇವನಾಗಿರುವ ಪ ನಿನ್ನ ಯೌವನಭಂಗದ ಭೀತಿಯ ಕಂಡು ವಿಘ್ನೇಶನನು ಪುಟ್ಟಿಸಿ ಪ್ರಣಾತ್ಮಗಳನೊಬ್ಬ ತನುಜಗೆ ಕಲ್ಪಿಸಿ ಕೃತಕೃತ್ಯನಾದ ನಿನ್ನರಸ ಕಾಣಮ್ಮ 1 ನಿನ್ನ ಕಾಂತನು ಪಾರ್ಥನಿಗೆ ಬಾಣವನೀಯಲು ನೀನು ಅಂಜಲಿಕಾಸ್ತ್ರವನು ಪ್ರೇಮದಿ ನಿನ್ನ ಕಾಂಚನ ಚಿತ್ತವರಿತು ಕೊಡಲು ನಿನ್ನೊಳ್ ಪಾರ್ಥಸೂತನ ದಯವೆಷ್ಟೆಂಬೆ 2 ರಾಜೇಶ ಹಯಮುಖನÀ ದಯದಿಂದ ನಿನ್ನ ಪತಿ ವಿಷವ ಜೀರ್ಣಿಸಿಕೊಂಡನು ರಜತಾದ್ರಿಯೊಳಗಿರುವ ಶಿತಿಕಂಠ ಶಂಕರನ ಮಹಿಮೆಯದ್ಭುತವಲ್ಲವೇ ಪೇಳು ಗಿರಿಜೆ 3
--------------
ವಿಶ್ವೇಂದ್ರತೀರ್ಥ
ಮಧುಪುರದ ವಿಘ್ನೇಶ ದೇವ ಜಗದೀಶ ಫ ಪುರುಷಪಿತನಮಿತ ಕಮಲ ಗಿರಿಜಾತೆಯಣುಗಾದಿತ್ಯ ಕೋಟಿ ಪ್ರಕಾಶ ಕರಿವದನ ಕರುಣನಿಧಿ ಸಮುದ್ರ ಬಹುಕ್ಷಿಪ್ರ 1 ಭರದಿಂದ ರಕ್ಕಸ ಪುರವನು ದಹನಮಾಡೆ ಹರ ಮೊದಲು ನಿಮ್ಮನು ಅರ್ಚಿಸಿ ಮೆಚ್ಚಿಸಿ ಹರಿ ವಿರಂಚಾದಿಗಳೆಲ್ಲ ಜಯ ಜಯವೆನಲು ವರವಿತ್ತು ಮೆರೆದೆ ಗಣನಾಥ ವಿಖ್ಯಾತ 2 ಅರರೆ ನಿಮ್ಮ ಮಹಿಮೆಯನು ಪೊಗಳಲೆನಗಳವಲ್ಲ ಧರಣಿಯ ಪೊತ್ತಿಹ ಶೇಷಗರಿದು ಹರನಸುಕುಮಾರ ಸಕಲಾಗಮಕೆ ಸಾಕಾರ ಧರೆಯೋಳ್ ಮಧುಪರ ವಿಘ್ನೇಶ 3
--------------
ಕವಿ ಪರಮದೇವದಾಸರು
ರಕ್ಷಕ ದುರ್ಜನ ಶಿಕ್ಷಕ ಸಂತತ 1 ಚಾರು ಮಾಳ್ವತಿ ಧೀರನೆ ಭಕ್ತೋದ್ಧಾರನೆ ಸಂತತ 2 ಕಂಬು ಕಂಧರ ಹೇರಂಬನಾನುಜ ಗುಹ ಅಂಬುಜೇಕ್ಷಣ ಅರಿ ಭಂಜನ ಸಂತತ 3 ಸ್ತುತ್ಯವ ಮಾಡುವ ಭೃತ್ಯನ ಸಂತತ 4 ಗಿರಿಜಾತೆಯ ಕುವರಾ | ಅಭಯಾ | ಕರುಣದಿಂದೀಕ್ಷಿಸಿ ವರವಿತ್ತು ಸಂತತ 5
--------------
ಬೆಳ್ಳೆ ದಾಸಪ್ಪಯ್ಯ
ಶ್ರೀಗಣಪತಿಗೆರಗಿ ಶಾರದೆಯನುರಾಗದಿಂದಲಿ ಸ್ಮರಿಸಿ ಶ್ರೀಗಿರಿಜಾತೆಯಲೋಕೈಕ ಮಾತೆಯ ಬೇಗದಿ ಹಸೆಗೆ ಕರೆದ ಸುಪದಂಗಳಾ ರಾಗದಿ ಪಾಡಿ ಪೊಗಳುವೆ 1 ಮಿಸುನಿಯ ಮಂಟಪದಿ ರಾರಾಜಿಪಪೊಸಪಸೆವಣೆಯನಿಟ್ಟು ಪೊಸದೇವಾಂಗವ ಮೇಲೆಪಸರಿಸಿ ಹಾಕುತ ಶಶಿಮುಖಿಯರು ನೆರೆದೊಂದಾಗಿ ಪಾಡುತ ಕುಶಲದಿ ಹಸೆಗೆ ಕರೆದರು 2 ಕಡೆಯಾಣಿಯ ಚಿನ್ನದ ಜಗಜ್ಯೋತಿಯಎಡಬಲದೊಳಗಿಟ್ಟು ಉಡುರಾಜಮುಖಿಯರುಮೃಗರಾಜಕಟಿಯರು ಕಡುಬೆಡಗಿಂದಪಾಡುತ ನಲಿದಾಡುತ ಮೃಡನರಸಿಯ ಹಸೆಗೆ ಕರೆದರು 3 ಚಿನ್ನದಪಿಲ್ಲಿಮಿಂಚು ಉಂಗುರಗಳುರನ್ನದಲ್ಲಣಿವೆಟ್ಟು ಉನ್ನತವಾದ ಕಾಲ್ಗಡಗಸರ್ಪಣಿಗೆಜ್ಜೆಯನ್ನು ತಳೆದ ಪಾದಪದುಮದಿಂದೊಮೈವ ಪೂರ್ಣೇಂದು ಮುಖಿಯರು || ಹ 4 ವರರತ್ನಖಚಿತವಾದ ಗೆಜ್ಜೆಮೊಗ್ಗೆಯಸರವೊಡ್ಯಾಣವು ಡಾಬು ಮಿರುಪಮಂಡೆಳೆಯುಡುದಾರ ಕಿಂಕಿಣಿಗಳ ಸರಫಲಿರೆನೆ ಚೆಂಗಾವಿಸೀರೆಯನುಟ್ಟು ಗಿರಿರಾಜತನುಜೆ || ಹ 5 ಚಳಿಕೆ ಹಿಂಬಳೆದೊರೆಯ ಚೂಡಾಕಟ್ಟುಬಳೆಕಂಕಣ ಕಡಗ ಪೊಳೆವ ಮುಂಗೈಯಮುರಾರಿ ಮುತ್ತಿನದಂಡೆ ಥಳಥಳಿಸುವಬೆರಳುಂಗುರಗಳನಿಟ್ಟು ಲಲಿತಾಂಗಿ ಬೇಗ | ಹಸೆಗೇಳು 6 ವರನಕ್ಷತ್ರದ ಸರವು ಏಕಾವಳಿ ಸರಗುಂಡಿನಸರವು ಮಿರುಪಬಿಲ್ಸರ ಚಳ್ಯಸರ ಚಕ್ರಸರಗೋಧಿಸರ ಮೋಹನಮುತ್ತಿನ ಸರಗಳನಿಟ್ಟವರಕಂಬುಕಂಠಿ ಬೇಗ | ಹಸೆಗೇಳು 7 ಅಣಿ ಮುತ್ತಿನ ಮೂಗುತಿ ಐದೆಳೆಯ ಕ-ಟ್ಟಾಣಿ ಕಾಶಿಯ ತಾಳಿ ಮಾಣಿಕಮಯಬತಿಮಲಕು ಅಡ್ಡಿಕೆ ಮಲಕಾಣಿ ಮುತ್ತಿನಬಟ್ಟುಮಲಕು ಸರಿಗೆಯಿಟ್ಟ ಏಣಾಕ್ಷಿ ಬೇಗ | ಹ 8 ತೊಳಪ ಮುತ್ತಿನಮಾಲೆ ಸರ್ಪಣಿಯಂಥಳಥಳಿಪ ವಜ್ರದವಾಲೆ ಚಳತುಂಬು ಮೀನ ಬಾ-ವಲಿ ಹಂಸೆಗಿಳಿಯ ಬಾವಲಿಯು ಹೊನ್ನೂಲುಕುಪ್ಪಿನವೆಂಟ್ಟೆಯವಿಟ್ಟ ಕಲಹಂಸಗಮನೆ | ಹ9
--------------
ಕೆಳದಿ ವೆಂಕಣ್ಣ ಕವಿ