ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಾನೀಯದಿದ್ದರೆ ನೀನೇನನೀವೆ ಪ ನಾನು ಎಂಬುದು ಮಾತ್ರ ನಾ ನಿನಗಿತ್ತರೆ ಏನನೀಯುವೆ ರಂಗ ದೀನದಯಾಳು ಅ.ಪ ಅವಲಕ್ಕಿಯನು ತಂದವಗೆ ಭಾಗ್ಯವನಿತ್ತೆ ನವಫಲವನಿತ್ತವಳಿಗೆ ಒಲಿದೆ ನವನೀತವಿತ್ತರ್ಗೆ ಸುವಿಲಾಸಗಳನಿತ್ತೆ ಭುವಿಯೆಲ್ಲವಿತ್ತಂಥವನ ಬಾಗಿಲಕಾಯ್ದೆ 1 ಗಜರಾಜನಂದು ಪಂಕಜವೊಂದನಿತ್ತಂದು ಅಜಗರನನು ಕೊಂದು ಸೌಜನ್ಯವನಿತ್ತೆ ಭುಜದ ಮೇಲೆ ನಿನ್ನನಂಗಜ ಪೊತ್ತು ತಿರುಗಲು ರಜತಪದವಿಯನಿತ್ತು ವಿಜಯ ನೀ ಗೈದೆ 2 ಮಡದಿಮಣಿಯು ತಾನುಟ್ಟ ಪೀತಾಂಬರ ದೆಡ್ಡೆಯ ಹರಿದು ನಿನ್ನ ಅಡಿಗೆ ಕಟ್ಟಲ್ಕೆ ಮಡದಿಗೆ ಅಕ್ಷಯದುಡುಗೆಯ ನೀನಿತ್ತೆ ಮೃಡನು ತಾನೇನು ಕೊಡಲೋ ಗೋವಿಂದಾ 3 ಜಗಜಟ್ಟಿ ಹನುಮನು ಬಗೆದು ನಿನ್ನಯ ದುಗುಡವ ಬಿಡಿಸಿದ ಬಗೆಯ ನೀನÀರಿತೂ ಜಗದೊಳು ಸರಿಯಾದುಡುಗರೆಯಿಲ್ಲದೆ ನಗುತ ನಿನ್ನನು ನೀನೆ ಸೊUಸಿನಿಂದಿತ್ತೆ 4 ನಾನೆಂಬುದಲ್ಲದೆ ಏನುಂಟು ಎನ್ನೊಳು ನೀನೀವೆನಿದ ಮಾತ್ರ ಶ್ರೀನಾಯಕೇಶ ಏನನಾದರೂ ಸರಿ ನೀನೀಯೋ ಮುರವೈರಿ ನಾನು ನನ್ನದು ನಿನ್ನಧೀನ ಮಾಂಗಿರಿರಂಗ5
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಮಾನವ ಶ್ರೀಗುರುಚರಣವ ಮಾಡುತ ಪೂಜೆಯ ತೋಷದಲಿ ಪ ಬೇಡುತ ನಿಜಸುಖ ಆಜ್ಞಾಚಕ್ರದೊ ಳಾಡುತ ಪರಮನೆ ನೀನಾಗಿ ಅ.ಪ ಸತ್ತು ಹುಟ್ಟಿ ಈ ಪೋಗುವದೇಹವ ನಿತ್ಯವು ಎನ್ನುತ ಪೋಷಿಸದೆ ಸತ್ಯಪ್ರಬಂಧವ ಶ್ರೀಹರಿಪಾದವ ನೆತ್ತಿಲಿ ಪೊತ್ತರ ಮಗನಾಗಿ 1 ಚಿತ್ತವ ಚಲಿಸದೆಸಿದ್ದಾಪುರದೊಳ ಗಿತ್ತರೆ ಬಂಧುರಸಿದ್ಧಿಗಳೂ ಅರ್ಥಿಯಿಂದ ಬಂದೊದಗುವ ಫಲಗಳ ವ್ಯರ್ಥವ ಮಾಡದೆ ಶೀಘ್ರದಲಿ 2 ಹರಿಯಜ ರುದ್ರರು ಈಶ ಸದಾಶಿವ ಪರತರಮೂರ್ತಿಯ ಧ್ಯಾನಿಸುತ ಗುರುವನೆ ಯಜಿಸುತ ಭಜಿಸುತ ಸರ್ವರು ಗುರುವೇಯಾಗಿಹ ತೆರದಲ್ಲಿ 3 ತತ್ವಮಸಿಯ ಬೋಧಾಮೃತ ಸೇವಿಸಿ ಮೃತ್ಯುವ ಜೇಸುತ ಧೈರ್ಯದಲಿ ಪೃಥ್ವಿಯೊಳೀಮಹದೇವನಪುರದೊಳು ಭಕ್ತರ ಪೊರೆಯುವ ದೊರೆಯನ್ನೆ 4
--------------
ರಂಗದಾಸರು