ಒಟ್ಟು 32 ಕಡೆಗಳಲ್ಲಿ , 5 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎನ್ನಾಣೆ ಬ್ಯಾಡ ಬ್ಯಾಡವೋ ರಂಗ ನಿನಗಿದುಚೆನ್ನಗಿತ್ತೇರ ಮನೆ ಗೋವಿಂದ ಪ. ಗೋಪೇರ ಮನೆಗಳ ಪೊಕ್ಕು ಬಹುಪರಿ-ತಾಪವ ಮಾಡುವರೇ ಕಂದ ಗೋವಿಂದಕಾಪಟ್ಯಸತಿಯರ ಮಾತ ನೀನಾಲಿಸಿಕೋಪಿಸಬೇಡವಮ್ಮಾ ಗೋಪೆಮ್ಮ 1 ಎನ್ನಪ್ಪ ಕಂದನೆ ಚಿಣ್ಣ ಗೋಪೇರು ಬಂದುನಿನ್ನ ದೂರುತಲೈದಾರೋ ಗೋವಿಂದಕನ್ನೇರು ಕೊಬ್ಬಿಂದ ಅನ್ಯಾಯ ನುಡಿತಾರೆÀಇನ್ನೇನು ಮಾಡಲಮ್ಮ ಗೋಪೆಮ್ಮ 2 ದಧಿ ದುಗ್ಧ ಭಾಂಡ ಒಡೆದು ಗೋಪಿಯರನ್ನುಸದರ ಮಾಡುವರೇ ಕಂದ ಗೋವಿಂದಉದಯದಿ ಗುದ್ದ್ಯಾಡಿ ಮಾರ್ಜಾಲಂಗಳು ಬೀಳೆದÀಧಿಭಾಂಡ ಜಾರಿತಮ್ಮ ಗೋಪೆಮ್ಮ 3 ಬಸವನ ಆಟದಿ ಶಿಶುಗಳೆಲ್ಲರ ಕೂಡಿಮಸಿಮಣ್ಣು ಮೈಯ್ಯಾದವೊ ಗೊವಿಂದಬಿಸಜಾಕ್ಷಿಯರು ತಮ್ಮ ಮನೆಕೆಲಸದ ಕೈಯ್ಯಮಸಿಮಣ್ಣು ಒರೆಸಿದರೆ ಗೋಪೆಮ್ಮ 4 ಒರಗಿದ್ದ ಹಸುಗಳೆಬ್ಬಿಸಿ ಕರುಗಳ ಬಿಟ್ಟುದುರುಳತನವ ಮಾಡೋರೆ ಗೋವಿಂದನೆರೆದಿದ್ದ ಶಿಶುಗಳಾಡುವ ಗುಲ್ಲ ತಾವ್ ಕೇಳಿತುರುಶಿಶು ಬೆದರಿತಮ್ಮಾ ಗೋಪೆಮ್ಮ 5 ಅಣ್ಣ ಬಲರಾಮ ನಿನ್ನ ಬನ್ನಣೆ ಸುದ್ದಿಯಚೆನ್ನಾಗಿ ಪೇಳಿದನೊ ಗೋವಿಂದಉನ್ನಂತ ದಾಯಾದಿಯ ಮಾತುಗಳ ನೀನುಮನ್ನಿಸ ಬೇಡವಮ್ಮ ಗೋಪೆಮ್ಮ 6 ಬಾಯೆನ್ನ ರನ್ನವೆ ಬಾಯೆನ್ನ ಚಿನ್ನವೆಬಾಯೆನ್ನ ಮೋಹದ ಗಿಣಿಯೆ ಗೋವಿಂದಬಾಯೆಂದು ಯಶೋದೆ ಕರೆದಳು ಬಿಗಿದಪ್ಪಿಬಾಯೆನ್ನ ಹಯವದನ ಗೋವಿಂದ7
--------------
ವಾದಿರಾಜ
ಕಾಣದೆ ನಿಲ್ಲಲಾರೆ, ಕಮನೀಯ ಮೂರುತಿಯಪ್ರಾಣೇಶನ ತೋರೆ ಗಿಣಿಯೆ ಪ ಮಾಣಿಕ್ಯ ಪದಕವ ಮನ್ನಿಸಿ ನಿನಗೀವೆಜಾಣೆ ಕೃಷ್ಣನ ತೋರೆ ಗಿಣಿಯೆ ಅ.ಪ. ಮಕರಕುಂಡಲಧರನ ಮಕರಧ್ವಜನ ಪಿತನಮಕುಟ ಭೂಷಣನ ತೋರೆ ಗಿಣಿಯೆಮಕರಾಕ್ಷ ಸಂಹರನ ಮಕರಾರಿ ರಕ್ಷಕನಮಕರ ಶಿಕ್ಷಕನ ತೋರೆ ಗಿಣಿಯೆ 1 ಇಂದು ರವಿಲೋಚನನಇಂದು ನೀ ಕರೆತಾರೆ ಗಿಣಿಯೆಇಂದುಶೇಖರನುತನ ಇಂದಿರೆಯರಸನತಂದು ತೋರೆ ಮುದ್ದುಗಿಣಿಯೆ2 ಒಂದು ನಿಮಿಷವೊಂದು ಯುಗವಾಗಿ ತೋರಿತೆಸೌಂದರ್ಯನ ತೋರೆ ಗಿಣಿಯೆಮಂದಮಾರುತ ಸೋಕೆ ಮರುಳುಗೊಂಡೆನೆ ಎನ್ನಮಂದಿರಕೆ ಕರೆತಾರೆ ಗಿಣಿಯೆ 3 ಕಾಯಜನ ಬಾಣದಲಿ ಕಾಯವೆಲ್ಲವು ಬಹಳಘಾಯವಾಯಿತು ನೋಡೆ ಗಿಣಿಯೆಮಾಯೆಗಳ ಮಾಡದೆ ಮಮತೆಯಿಂದಲಿ ಎನ್ನನಾಯಕನ ಕರೆತಾರೆ ಗಿಣಿಯೆ 4 ಪಂಕಜೋದ್ಭವ ಪಿತನ ಪಂಕಜನಯನನಪಂಕಜನಾಭನ ತೋರೆ ಗಿಣಿಯೆಪಂಕಜಾಕ್ಷ ಸಿರಿಕೃಷ್ಣನ ಪದಪದ್ಮಶಂಕೆಯಿಲ್ಲದೆ ತೋರೆ ಗಿಣಿಯೆ 5
--------------
ವ್ಯಾಸರಾಯರು
ಗಿಣಿಯೆ ನಿನಗೇನು ಬೇಕದನೀವೆ ಹಯವದನ-ನೆನಿಪ ಹರಿಯನು ಕರೆತಾರೆ ಗಿಣಿಯೆಮುನಿ ವಾದಿರಾಜನಿಗೆ ವರವೀವ ದೇವನವನೆನೆವವರ ಬಿಡನೆಲೆ ಗಿಣಿಯೆ ಪ. ವೃಂದಾವನದಿ ಚಂದ್ರನಂತೆಸೆವ ಗೋವಿಂದಚಂದದಿ ನಿನ್ನ ಮಾತ ಮನ್ನಿಸುವನಂದಗೋಪಿಯ ಮುದ್ದುಕಂದನೆನಿಪ ಮುಕುಂದನ-ನಿಂದಿರುಳು ತಂದು ತೋರು ಗಿಣಿಯೆ 1 ಮೂರು ಬಣ್ಣದ ಕೊರಳ ತಿರಿಯುಳ್ಳ ಗಿಣಿ ನೀನುಮೂರು ಬಣ್ಣದ ಚಾರುನಯನಮಾರನನುಚರ ನೀನು ಮಾರನ ಜನಕನವನುಮೀರ ನಿನ್ನ ಬಿನ್ನಪವ ಗಿಣಿಯೆ 2 ಸತತ ಸಿರಿದೇವಿಯರ ಸುತನೆನಿಪ ಕಾಮನಿಗೆರಥವಾಗಿ ಮೆರೆವೆ ನೀ ಗಿಣಿಯೆಕೃತಕೃತ್ಯನಾದರೂ ಅದರಿಂದ ನಿನ್ನ ಮಾತಪ್ರತಿಪಾಲಿಸುವನೆÉಲೆ ಗಿಣಿಯೆ 3 ಎಲ್ಲರು ಭುಂಜಿಸುವ ಮೊದಲೆ ಭುಂಜಿಸುವ ನಮ್ಮಿನಿಯಬಲ್ಲಿದಾತನ ಬಿರುದ ನಿನಗಿತ್ತಚೆಲುವ ಸಸಿಗಳ ತೆನೆಯ ತಂದು ತಂದು ಮೆಲುವೆ ಗಡಸಲುವುದು ಮೋಹನದ ಗಿಣಿಯೆ 4 ಪಚ್ಚೆಯ ಬಣ್ಣದ ಗರಿಯ ಸಿರಿಯುಳ್ಳ ಗಿಣಿ ನೀನುಪಚ್ಚೆಯ ಬಣ್ಣದ ವ್ಯಾಸನವನುಎಚ್ಚರಿಸಿ ಕೊಡುತಿದೆ ನಿನ್ನ ಕಂಡರಾ ಮುನಿಯಮೆಚ್ಚಿದೆ ನಾನವನ ತಂದು ತೋರು ಗಿಣಿಯೆ 5 ಕೆಂದಾವರೆಯ ಪೋಲ್ವ ನಿನ್ನ ಚರಣ ಹರಿಯ ಪದದÀಂದವನು[ತಂದುತೋರು]ಗಿಣಿಯೆಚೆಂದದ ಅವನ ಚೆಂದುಟಿಯಂತೆ ನಿನ್ನ ಚೆಲುವ ಮುಖ ಕೆಂಪುತÀಂದು ಮುಂದಿರಿಸು ನೀ ಗಿಣಿಯೆ6 ಅವನ ವಾಹನನೆನಿಪ ಗರುಡನ ಕುಲದಲುದ್ಭವಿಸಿ-ದವ ನೀನೆಲೆ ಗಿಣಿಯೆಅವನ ಮುದ್ದು ನುಡಿಯ ಬಲ್ಲರೆ ನೀನು ಜಗದೊಳಗೆಸವಿಮಾತುಗಳ ನುಡಿವೆ ಗಿಣಿಯೆ 7 ಗಮನ ನಿನಗೆಸೊಗಸುನುಡಿಯಿಂದವನ ಪದಕೆ ಬಿನ್ನಹ ಮಾಡಿಸುಗುಣನ ಕರೆತಾರೆ ಗಿಣಿಯೆ8 ತಮ್ಮ ತಮ್ಮ ಮನೆಗಳಲ್ಲಿ ರಮೆಯರಸ ಕೃಷ್ಣನ-ನು ಮನದಲ್ಲಿ ಅರ್ಚಿಸಿ [ಪೂಜಿಸುವರು]ಸುಮುಖನೆಂದು ನಿನ್ನ ಮನೆಯ ಚಾವಡಿಯಲಿ ಇಹ-ನ ಮನ್ನಿಪರೆಲೆ ಗಿಣಿಯೆ 9 ಉರದಲ್ಲಿ ಸಿರಿವತ್ಸಯೆಂಬ ಕುರುಹುಂಟವಗೆಕರಗಳಲಿ ಶಂಖಚಕ್ರಗಳು ಕೊರಳಲ್ಲಿ ಕೌಸ್ತುಭಮಣಿಯಿಹ ಹಯವದನ ನ-ಮ್ಮರಸನೆಂದರಿತುಕೊ ಗಿಣಿಯೆ 10
--------------
ವಾದಿರಾಜ
ನಿಲುನಿಲು ಘನಲೀಲಾ ನಲಿನಲಿ ಗೋಪಾಲ ಪ ಕಿಲಕಿಲನಗು ಬಾಲಾ ಒಲಿಒಲಿ ಶ್ರೀಲೋಲಾ ಅ.ಪ ಅಡಿಯಿಡು ಸಡಗರದಿ ನುಡಿನುಡಿ ಕಡುಮುದದಿ ಪಿಡಿಕೊಳಲನು ಕರದಿ ನುಡಿಸಿ ಮುದ್ದಾಡುವೆ ನಾನು 1 ತೊದಲುನುಡಿಗೆ ನಲಿವೆನು ಬಾ ಬಾ ಚದುರತನವ ನೀ ತೋರುತೆ ಬಾ ಬಾ ಮುದದಿ ಕುಣಿಯುತೆ ಮಣಿಯುತೆ ಬಾ ಬಾ ಇದೆಗೋ ಎತ್ತಿಕೊಂಡೊಯ್ವೆನು 2 ಜೋಗುಳಗಳ ಹಾಡಿ ರಾಗದಿ ಕೊಂಡಾಡಿ ಬಾಗಿ ಬಿಗಿದು ಕುಣಿದಾಡಿ ನಾಗಸಂಪಿಗೆ ಸೂಡಿ3 ಸಂತಸದಿಂದೋಡು ಅಂತರಿಕ್ಷವ ನೋಡು ಕಂತುಕವೆಸೆದಾಡು ಶಾಂತಿಯ ಮನಕೆ ಕೊಡು 4 ಚಂದಿರನಂದದ ಕಂದಾ ನೊಂದಿಹ ಮನಕಾನಂದಾ ಸುಂದರ ಮುಖಾರವಿಂದಾ ಅಂದದ ನಗು ಮಿಗಿಲಾನಂದಾ5 ಗೋಲಿಯನಾಡುವೆ ಬಾ ಗಾಲಿಯನೋಡಿಸು ಬಾ ಬಾಲಭಾಷೆಯ ಪೇಳುವ ಬಾ ಲೀಲೆಯನೀಕ್ಷಿಸಿ ದಣಿವೆ 6 ಕುಣಿ ಕುಣಿ ಅರಗಿಣಿಯೆ | ಅಣಕಿಸು ಮನದಣಿಯೆ ಮಣಿ ಕಣ್ಮಣಿಯೆ | ತಣಿಯುವ ಮನಕೆಣೆಯೆ7 ಬಣ್ಣದ ಹೂಮುಡಿವೆ ಹಣ್ಣನು ಮೆಲಗುಡುವೆ 8 ನೊರೆಹಾಲ್ಕುಡಿ ನೀಲಾಂಗ ಮರೆಹೊಕ್ಕರ ಪೊರೆ ರಂಗಾ ಕರುಣಿಸೊ ಶಿರಬಾಗುವೆನಾಂ ಮಾಂಗಿರಿಯ ರಂಗಾ 9
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಪಾಲಿಪುದು ನಯನಗಳ ನಾಲಿಗೆಯ ನೀನು ಶ್ರೀಲೋಲ ಸಾರ್ವಭೌಮನೇ ಪ ನೀಲಮೇಘಶ್ಯಾಮ ಬೇಲಾಪುರಾಧೀಶ ಶೀಲ ಅಚ್ಚುತದಾಸಗೆ ಸ್ವಾಮಿ ಅ.ಪ ಪರಮಪದನಾಥ ಇಂದಿರೆಯರಸ ಸಕಲ ನಿ ರ್ಜರರು ಪೂಜಿಸುವಂಘ್ರಿಯಾ [ವರ]ನೇಮದಿಂ ಪಾಡೀ ಆಡೀ ದುರಿತಭವ ಶರಧಿಯಾ ಪಿರಿದು ದಾಟುವೆನೆಂದು ಭರದೊಳೈದಿದವಗಾ ಶ್ಚರ್ಯದಾಪತ್ತಡಸಿತ್ತೇ ಸ್ವಾಮಿ 1 ಹಿಂದೆ ಮಾಡಿದ ಕರ್ಮವೆಂಬದಕೆ ಜನನವಾದು ದಿಂದು ಊನನಲ್ಲಾ ಪೊಂದಲೀ ನಗರವನು ಪೋಗಲಾಕ್ಷಣದಿ ವಾಗ್ಬಂಧವತ್ವವೆರೆಡು ಮುಂದಕಡಿಯಿಡಲು ಇಂದಿನದೊಲಚ್ಚುತನ ದಾಸ ನಂದವಳಿದುಬ್ಬಸದೊಳು ಇಂದು ನೀ ಸಲಹಿದಡೆ ಪೂರ್ವಾರ್ಜಿತ ಕರ್ಮ ವೃಂದಗಳು ನಿಂದಿರುವವೆ ಸ್ವಾಮಿ 2 ಮನುಜ ಮಾಡಿದ ಪಾತಕಗಳನು ಎಣಿಸುವಡೆ ಘಣಿರಾಜಗಳವಡುವುದೇ ಗುಣ ತರಂಗಿಣಿಯೆ ದುರ್ಗುಣಗಳೆಣಿಸಲು ಶ ರಣಜನರೊಳೇಂಪುರುಳಿರುವುದೇ ಚಿನುಮಯನೆ ಭಕ್ತವತ್ಸಲನೆ ಅಚ್ಚುತz ಸನವಗುಣಗಳನೀ ಮರೆದು ಗುಣನಿಧಿಯೆ ಚೈತನ್ಯವಿತ್ತುಳುಹೆ ಬೇಗ ನಾ ಧನ್ಯನೆಲೊ ವೈಕುಂಠರಮಣಾ 3
--------------
ಬೇಲೂರು ವೈಕುಂಠದಾಸರು
ಏನೆಂದಳಯ್ಯ ಸೀತೆ |ನಿನಗೇನ ಮಾಡಿದಳೊ ಪ್ರೀತೆ ಪದಾನವನ ಪುರದೊಳಗೆ ದಾರಿಯನು ನೋಡುತಲೆ |ಧ್ಯಾನವನು ಮಾಡುತಿಹಳೊ ಹನುಮಾ ಅ.ಪಎಲ್ಲಿಂದ ಬಂದೆ ಹನುಮಾ - ನೀಯೆನ್ನ -ಕೇಳುಸೊಲ್ಲೆನ್ನ ಪ್ರೇಮ ||ವಲ್ಲಭನ ನೆನೆದರೆ ನಿಮಿಷ ಯುಗವಾಗುತಿದೆನಿಲ್ಲಲಾರೆನು ಎಂದಳೊ ಹನುಮಾ 1ದೇವರಾಯನ ಪಾದವ - ಎಲೆ ಕಪಿಯೆ -ದಾವಪರಿಯಲಿ ಕಾಂಬೆನೊ ||ರಾವಣನ ಶಿರವರಿದು ಲಂಕಪಟ್ಟಣವನೆಲ್ಲ |ಹವನವಮಾಡಿಸು ಎಂದಳೊ ಹನುಮಾ || 2ಅಂಜನಾತನಯ ಕೇಳೊ - ನೀ ಹೋಗಿ -ಕಂಜನಾಭನಿಗೆ ಪೇಳೊ ||ಕುಂಜರವಕಾಯ್ದು ಶ್ರೀಪುರಂದರವಿಠಲನ |ಪಂಜರದ ಗಿಣಿಯೆಂದಳೊ ಹನುಮಾ 3
--------------
ಪುರಂದರದಾಸರು