ಒಟ್ಟು 9 ಕಡೆಗಳಲ್ಲಿ , 6 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಆ) ಲಕ್ಷ್ಮೀಸ್ತುತಿಗಳು ನಾರಿಮಣಿಯೆ ನಿನ್ನಾಣೆ ನಾಕಾಣೆ ಕರತಂದು ತೊರೆ ಚೆಲ್ವ ರಂಗನಾ ಪ ಕರತಂದು ತೋರೆ ಮಧ್ಯರಂಗನಾ ಅ.ಪ ಪಾರವಾರನೆಂಬ ಧೀರ ಭವದೂರನೊ ಬಾರದ ಮನಸೆನ್ನ ಸೂರೆಗೊಳ್ಳುತಿದೇ 1 ಮೀರಿದ ಹದ್ದಿಗೆ ಹಾರಿಬಂದಾ ಗಿಣಿಯು ದಾರಿಯ ತಪ್ಪಿ ಹಿಂತಿರುಗಿದಂತೆ ಮಾರನಯ್ಯನ ಪಾದತೋರಿ ಪೋಗಿಯು ತಾ ತೇರಮೇಲೇರಿದ ಸಾರುವ ಬಾರೆ 2 ಉರಗೇಂದ್ರಶಯನನೆ ಸರಿಗಾಣೆ ರಮಣಿ ಶ್ರೀ ನರಗೆ ಸಾರಥಿಯಾಗಿ ಮೆರೆವ ಶ್ರೀ ಪರಮಾತ್ಮ ನಿರುತಿಹ ನೀನೋಗಿ ಕರತಾರೆ ಕಾಮಿನೀ3
--------------
ಚನ್ನಪಟ್ಟಣದ ಅಹೋಬಲದಾಸರು
ಕೊಡು ತೊಡಿಯ ಮೇಲೆ ನೋಡು ಗಿಣಿಯು ತನ್ನಗೂಡಿನೊಳಗೆ ಹ್ಯಾಂಗೆ ಆಡುತಲಿಹುದು ಪ ಅತ್ತರೆ ನೀನು ಎನ್ಹತ್ತಿರನಿರುವನು ಗುಮ್ಮಾಪಟ್ಟಣದೊಳಗೆ ಪುತ್ರರನೊಯ್ಯುವನು 1 ಓಡಿ ಬರುತಲುಣ್ಣು ಜೋಡು ಮಾವಿನ ಹಣ್ಣುನೀಡುವೆ ರಂಗಣ್ಣಿ ನೋಡು ಬಾ ಸಖಿಯೆ 2 ಬುತ್ತಿ ಉಣ್ಣಿಸುವೆನು ವಕ್ರ ತೇಜಿಯನೇ ಎನ್ನಹಿತ್ತಲ ಗುಬ್ಬಿಯೇ ಎನ್ನ ಹತ್ತಿರ ಕೂಡೋ 3 ಪುಟ್ಟ ಮಗುವೆ ನೀರು ಗುಟುಕು ಕುಡಿದು ಉಣ್ಣುಕೊಟ್ಟು ಹೋಗೆಲೋ ಉಮ್ಮ ಅಷ್ಟು ಹುಡುಗರೊಳು 4 ಕೂಸು ಪಡೆದವಳಿಂಥಾ ಏಸು ತಪಸು ಮಾಡಿಬೇಸರಾಗದೆ ಇಂದಿರೇಶನ ಸಲಹುವಳು 5
--------------
ಇಂದಿರೇಶರು
ರಂಗ ಕೊಳಲನೂದುತ ಬಂದಯಶೋದೆಯ ಕಂದ ಪ ಕೊಳಲ ಧ್ವನಿಗೆ ವಿರಹವು ನಾರಿಯರಿಗೆಕಳಕಳÀವಾಗಲು ಕಳಕಳಿಸುತ ಅ.ಪ. ಶೃಂಗಾರ ಕೊಳಲ ಗಾಯನ ಮಾಡೆಸ್ತ್ರೀಯರು ನೋಡೆ ರಂಗನ ಪಾದದಲಿ ಮನ ಹೂಡೆಭೃಂಗಾಮೃತ ತೈಲದಿಅಂಗನೆಯರು ಝಳಕವ ಮಾಡೆದೇವರ್ಕಳು ನೋಡೆತುಂಗವಿಹಂಗ ಭುಜಂಗ ನವಿಲು ಸಾ -ರಂಗ ಗಿಣಿಯು ಮಾತಂಗ ಮರಿಯು ಕು-ರಂಗ ಮಧ್ಯೆ ಚರಣಂಗಳೆಡೆಗೆ ವೇ-ದಂಗಳೆರಗೆ ಕಾಮಂಗಳಲುಗೆ ನೇ-ತ್ರಂಗಳಿಗತಿ ಚಿತ್ರಂಗಳಾಗೆ ಆರಂಗನೂದ್ವ ಸಾರಂಗ ಕೇಳಿ ಋಷಿಪುಂಗಸಹಿತ ತಾವುಗಳು ಬರೆ ನರ-ಸಿಂಗನೂದಿದ ಜಗಂಗಳ ಮೋಹಿಸಿ1 ಬಂಗಾರ ಬಟ್ಟಲೊಳಗೆ ಅಂದುಕ್ಷೀರವ ತಂದು ರಂಗಗರ್ಪಿಸುವೆವು ನಾವೆಂದುಹರುಷದೊಳಂದು ಅಂಗನೆಯರು ಮೈಮರೆತು ನಿಂದುಒಲಿಯಬೇಕೆಂದು ಮಂಗಳ ಮಹಿಮನು ನೀನೆಂದುಅತಿಭಕುತಿಯೊಳಂದುತುಂಗ ವಿಕ್ರಮನ ಪದಂಗಳಿಗೆರಗಲುರಂಗ ನೆಗಹಿ ಕರಂಗಳ್ಹಿಡಿಯ ಮೋ-ಹಂಗಳಿಂದ ವಿರಹಗಳ್ಹೆಚ್ಚಿ ರವಿಕೆಂಗಳುಡೆಯ ಕುಚಂಗಳು ಬಿಟ್ಟಾ-ಲಿಂಗಿಸುತಿರೆ ಶ್ರೀ ಮಂಗಳಾಂಗಗೆ ಪು-ಷ್ಪಂಗಳಿಂದ ವರುಷಂಗಳು ಮೇಲ್ ಸುರ-ರಂಗಳು ಸುರಿಯೆ ಉತ್ತುಂಗ ಮಹಿಮ ಹರುಷಂಗಳ ಬೀರುತ ಅಂಗನೆಯರಿಗೆ 2 ಮಂದಿರ ಮಾನಿನಿಯರು ಬಿಟ್ಟುಮನದಲಿ ಕಂಗೆಟ್ಟುಮಂದರೋದ್ಧರನಲ್ಲೆ ಮನವಿಟ್ಟುಕರೆಕರೆಯ ಬಿಟ್ಟುಚಂದದಿ ಕರ್ಪೂರ ವೀಳ್ಯವನಿಟ್ಟುಸಡಗರವ ತೊಟ್ಟುಒಂದಾಗಿ ಚೆದರುತ ತೋಷವ ತೊಟ್ಟುತ್ವರೆ ಬರುವರು ಅಷ್ಟುಅಂದದಿಂದಲಾನಂದವೇರಿ ಮು -ಕುಂದನಂಘ್ರಿ ಮುದದಿಂದ ಸ್ಮರಿಸಿ ಬರು-ವಂದ ನೋಡಿ ಗೋವಿಂದ ಕೊಳಲ ಬಹುಅಂದದೊಳಿಡೆ ಈ ಇಂದುವದನೆಯರುಚಂದ್ರನುದಯವಾದಂತೆ ಆಯ್ತು ಮನಗಂಧ ಕಸ್ತೂರಿ ತಂದು ಆಗ ಹರಿಕಂದರದೊಳಗಿಡೆ ರಂಗವಿಠಲ ದಯದಿಂದ ನೋಡ್ದ ಪುರಂಧ್ರಿಯರನ್ನು3
--------------
ಶ್ರೀಪಾದರಾಜರು
ಸತ್ಯಭೋಧ ಯತಿಕುಲವರನೆ ನಿತ್ಯ ತುತಿಸಿ ವಂದಿಸುವ ತಾವಕರೊಳು ಎಣಿಸೋ ಪ ಅರ್ಥಿಜನ ಚಿಂತಾಮಣಿ ಸತ್ಕರುಣಿ ಶ್ರೀನಿವಾಸನ ಗುಣ ಸಾನುರಾಗದಲಿ ವ್ಯಾ ಖ್ಯಾನ ಪೇಳುವ ಕಾಲದಿ ಶ್ವಾನರೂಪದಿ ಪವಮಾನ ಜನರು ನೋಡೆ ಕಾಣಿಸಿಕೊಂಡನಂದೊ ತಾ ಬಂದು 1 ಬವರಗೋಸುಗ ಬಂದ ಯವನಾಧಿಪತಿ ನಿಮ್ಮ ಸುವಿಚಿತ್ರ ಮಹಿಮೆ ಕಂಡು ಪ್ರವಿನೀತನಾಗಿ ಕಪ್ಪವೆ ಕೊಟ್ಟು ನಮಿಸಿದ ಕವಿ ಆವಾ ವಿಭವಾ ವರ್ಣಿಸುವಾ 2 ಇವರು ದೇವಾಂಶರೆಂದರುಪುವಗೋಸುಗ ಬಂದು ದಿವಿಜತರಂಗಿಣಿಯು ಶಿವನಂಗಭೂರುಹ ಮೂಲ ಭಾಗದಲಿ ಉ ದ್ಭವಿಸಿ ಕಂಗೊಳಿಸಿದಳು ಕೃಪಾಳು 3 ಸ್ವಾಂತಸ್ಥ ಮುಖ್ಯ ಪ್ರಾಣಾಂತರಾತ್ಮಕ ಭಗ ವಂತನಂಘ್ರಿ ಕಮಲ ಸಂತತ ಸರ್ವತ್ರ ಚಿಂತಿಸುತಿಪ್ಪ ಮ ಹಾಂತರಿಗೇನಚ್ಚರೀ ವಿಚಾರ 4 ಚಾರು ಚರಿತ ಭೂ ಸುರವರ ಸನ್ನುತನೇ ಪರಮ ಪುರುಷ ಜಗನ್ನಾಥ ವಿಠ್ಠಲ ನಿಮ್ಮ ಪರಿಪರಿ ಮಹಿಮೆ ಎಲ್ಲಾ ತಾ ಬಲ್ಲಾ 5
--------------
ಜಗನ್ನಾಥದಾಸರು
ಆಗಬಲ್ಲದೆ ಹೀಗಾಗಬಲ್ಲದೆಯೋಗಿಜನವಂದ್ಯನವರಿಗ್ಹೀಗೆ ಯಮನ ಮನೆಯ ಬಾಧೆ ಪ.ಕಾಮನಯ್ಯನರಮನೆಯಪ್ರೇಮದ ದಾಸಿಗೆ ಮಹಾಪಾಮರರಾಕ್ಷಸ ಕ್ರೂರಕಾಮುಕರ ಸಂಯೋಗವಾಗಬಲ್ಲದೆ 1ಸಜ್ಜನರರಸನÀ ಮನೆಯವಜ್ರಪಂಜರದ ಗಿಣಿಯುಮಜ್ಜಿಗೆ ಕಾಣದ ಮುದಿಮಾರ್ಜಾಲನ ಬಾಯಿತುತ್ತಿಗಾಗಬಲ್ಲದೆ 2ರಾಜಾಧಿರಾಜನ ಮನೆಯರಾಜಹಂಸವು ಕುಣಪಭೋಜಕನಾದ ವೃಕನಭೋಜಕನ ಅನುಕೂಲವಾಗಬಲ್ಲದೆ 3ಹರಿಯ ಬೇಂಟೆಯ ಮನೆಯಹರಿಣಗಣಗಳಿಗೆಗಿರಿಯ ಹಳುವದ ಹುಲಿಯಗರಜರದ ಘಸಣೆಯಾಗಬಲ್ಲದೆ 4ಪ್ರಸನ್ನವೆಂಕಟನ ಮನೆಯಕಸಕಡ್ಡಿಯೆಲ್ಲವುವಜ್ರವಿಷಮ ಯಮಬಂಟರೆಂಬಮುಸಲಕೆ ಹುಡಿ ಹಿಟ್ಟು ಆಗಬಲ್ಲದೆ 5
--------------
ಪ್ರಸನ್ನವೆಂಕಟದಾಸರು
ಹರಿನಾಮದರಗಿಣಿಯು ಹಾರುತಿದೆ ಜಗದಿ|ಪರಮಭಾಗವತರು ಬಲೆಯ ಬೀಸುವರು ಪಕೋಪವೆಂಬ ಮಾರ್ಜಾಲವು ಕಂಡರೆ ನುಂಗುವುದು |ತಾಪವೆಂಬ ಹುಲಿಯು ಕೊಂಡೊಯ್ವುದದನು ||ಕಾಪಾಡಿರದನು ಹೃದಯದೊಳಗಿಂಬಿಟ್ಟು |ಅಪತ್ತಿಗೊದಗುವುದು ಈ ಮುದ್ದು ಗಿಣಿಯು 1ದಾರಿಯ ನಡೆವಾಗ ಚೋರರ ಭಯವಿಲ್ಲ |ಮಾರಿಬಂದರದನು ಹೊಡೆದು ನೂಕುವುದು ||ಕ್ರೂರ ಯಮಭಟರನು ಮೂಗು ರೆಕ್ಕೆಯಲಿ ಬಡಿದು |ದಾರಿ ತೋರುವುದು ಮುರಾರಿಯ ಪಟ್ಟಣಕೆ 2ಎಷ್ಟೆಂದು ವರ್ಣಿಸಲಿ ಈ ಮುದ್ದು ಅರಗಿಣಿಯು |ಹೊಟ್ಟೆಯೊಳೀರೇಳು ಜಗವನಿಂಬಿಟ್ಟ ||ಸೃಷ್ಟೀಶ ಪುರಂದರವಿಠಲನ ನೆನೆ ನೆನೆದು |ಮುಟ್ಟಿ ಭಜಿಸುವುದು ಈ ಮುದ್ದು ಗಿಣಿಯು 3ಹರಿಯೆ................................................ ಪಹರಿನಿನ್ನ ಕೃಪೆಯೆನಗೆ ಚಂದ್ರ - ತಾರಾಬಲವು |ಹರಿನಿನ್ನ ಕರುಣವೇ ರವಿಯ ಬಲವು ||ಹರಿನಿನ್ನೊಲುಮೆಯೆನಗೆ ಗುರುಬಲವು ಭೃಗುಬಲವು |ಹರಿನಿನ್ನ ಮೋಹವೇ ಶನಿಯ ಬಲವು 1ಮಂಗಳಾತ್ಮಕ ನಿನ್ನ ಅಂಗದರುಶನವೆನಗೆ |ಮಂಗಳನ ಬಲವು ಎನ್ನಂಗಕೀಗ ||ರಂಗಯ್ಯ ನಿನ್ನ ಚರಣಾರವಿಂದವ ನೋಡೆ |ಹಿಂಗಿ ಪೋಪುದು ಅಘವು ಸೌಮ್ಯಬಲವು 2ಆದಿಪುರುಷನೆ ನಿನ್ನ ಅರಿಪುದೇ ಕೇತುಬಲ |ಅದಿಮೂಲನೆ ನಿನ್ನಗುಣಕಥನವ ||ಆದರಿಸಿ ಕೊಂಡಾಡುವುದೆ ಎನಗೆ ರಾಹುಬಲ |ಆದಿಮೂರುತಿ ಬ್ರಹ್ಮಪುರಂದರವಿಠಲ 3
--------------
ಪುರಂದರದಾಸರು