ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಂಥ ಟವಳಿಗಾರನಮ್ಮ ಪ ನಂದ ಗೋಪ್ಯಮ್ಮ ಕೇಳೆ - ನಿನ್ನ ಮಗ ಎಂಥ ಟವಳಿಗಾರನಮ್ಮ ಅ ಹಣವ ಕೊಟ್ಟೇನೆಂದುಗುಣದಿಂದ ಎನ್ನ ತಂದಹಣವ ಕೇಳಿದರಲ್ಲಿ - ಹಣವೆ ?ತಡೆಯಲಾರದ ತಲ್ಲಣವೆ ?ಕುದುರೆ ಮೇಲಿನ ಪಲ್ಲಣವೆ ?ಇಲ್ಲ, ಬಾಯಿಗಿಟ್ಟ ಬೊಕ್ಕಣವೆ ? - ಹೋಗೆನುತಾನೆ 1 ಕೊಪ್ಪಾನೆ ಕೊಟ್ಟೇನೆಂದುಒಪ್ಪಿಸಿ ಎನ್ನ ತಂದಕೊಪ್ಪಾನ ಕೇಳಿದರಲ್ಲಿ - ಕೊಪ್ಪ ?ಊರಮುಂದಿನ ತಿಪ್ಪ ?ಕೇರಿಯೊಳಗಿನ ಕೆಪ್ಪ ?ಕೆರೆಯೊಳಗಿನ ಹುಳಿಸೊಪ್ಪ ? - ಹೋಗೆನುತಾನೆ2 ಬಳೆಯ ಕೊಟ್ಟೇನೆಂದುಬಲು ಮಾತಿನಲಿ ತಂದಬಳೆಯ ಕೇಳಿದರಲ್ಲಿ - ಬಳೆಯೆ ?ಊರ ಮುಂದಿನ ಗಳೆಯೆ ?ಗದ್ದೆಯೊಳಗಿನ ಕಳೆಯೆ ?ಕೈಕಾಲ ಹಿಡಿದು ಸೆಳೆಯೆ ? - ಹೋಗೆನುತಾನೆ 3 ವಾಲೆ ?ಕನ್ನಡಿಯ ಕಪೋಲೆ ?ಹೇಳು ಸುವ್ವಿ ಸುವ್ವಾಲೆ ?ನಿನ್ನ ಕಾಲಿಗೆ ಸಂಕೋಲೆ ? - ಹೋಗೆನುತಾನೆ 4 ಕಡಗವ ಕೊಟ್ಟೇನೆಂದುಸಡಗರದಿಂದ ತಂದಕಡಗ ಕೇಳಿದರಲ್ಲಿ - ಕಡಗ ?ಅಂಬರದ ಗುಡುಗ ?ಮುಂಗೈ ಮೇಲಿನ ಗಿಡುಗ ?ಎತ್ತಿನ ಮ್ಯಾಲಿನ ಧಡಗ ? - ಹೋಗೆನುತಾನೆ 5 ಬುಗುಡಿಯ ಕೊಟ್ಟೇನೆಂದುರಗಡು ಕಿವಿಹಿಂಡಿ ತಂದಬುಗುಡಿ ಕೇಳಿದರಲ್ಲಿ - ಬುಗುಡಿ ?ಪಾಂಡವರಾಡಿದ ಪಗಡಿ ?ಮೂಗಿಂದ ಸುರಿವ ನೆಗಡಿ ?ಛಿ ! ನೀನೆಂಥ ಧಗಡಿ ? - ಹೋಗೆನುತಾನೆ 6 ಆದಿಕೇಶವನ ಮೇಲೆಆಣೆಯಿಟ್ಟು ಕರೆತಂದಆಣಿ ಎಲ್ಲಹುದೆಂದು ತೋರ್ದಆನಂದದಿಂದಲಿ ಬೆರೆದಬೀದಿಗೆ ಬಂದು ಕರೆದಹೀಂಗೆ ಧರೆಯೊಳು ಮೆರೆದ - ಶ್ರೀ ಕೃಷ್ಣರಾಯ 7
--------------
ಕನಕದಾಸ
ಪಥವ ಬಿಡು ಬಿಡು ದೇವ ಪಥದಿ ಮಲಗುವರೆಗತಿ ಚಿದಾನಂದನಿರೆ ಗತಿಗೆಡುವೆನೆ ಭಯಕೆ ಪ ಭವ ಹರಿದುನಿಲ್ಲದಲೆ ನಾನೀಗಲೈ ತರಲಿಕೆಇಲ್ಲಿ ಸರ್ವವೆ ಆಗಿ ನೀ ಬಂದು ಮಲಗಿರುವೆಸುಳ್ಳನಿತು ಸೇರದಿದು ನಿನ್ನವಗೆ ಬಿಡು ಪಥವ1 ಮನುಜ ಸಂಗವನಳಿದು ಮಹದರಣ್ಯವ ಹೊಕ್ಕುಅನಂತರದ ಪುಣ್ಯದಾಶ್ರಮವ ನೋಡಿಸನುಮತದಿ ಪೂಜೆಯನು ಮಾಳ್ಪೆನಾನೆಂದು ಬರೆಘನಸರ್ಪವಾಗಿ ನೀನಡ್ಡ ಬಿದ್ದಿಹೆ ದೇವ 2 ಸಕಲ ಸಂಗವನುಳಿದು ಸ್ವಾನುಭಾವಗಳಿಂದಅಖಿಲ ಮೃಗಗಳ ಕೂಡಿ ನಿಶ್ಚಲತೆಯಿಂದಭಕುತಿಯಲಿ ನಿನ್ನನು ಭಜಿಪೆನೆಂದೈದುತಿರೆಭಕುತನಿಗೆ ಸರ್ಪನಂತಿಹುದಿದೇನೈ ಸ್ವಾಮಿ3 ಏಕಾಂತ ಗೃಹಗಳಲಿ ಏಕಾಂತ ಸ್ಥಳಗಳಲಿಏಕಾಂತವಾಗಿ ನಿನ್ನನೆ ಪೂಜಿಸಿಏಕಾಂತ ಸರ್ವಸಾಧನವೆನುತಲೈದುತಿರೆಏಕಾಂತ ಮಾತೇಕೆ ಪಥವ ಬಿಡು ಎಲೆ ದೇವ 4 ಶುಕಗೆ ಪಂಜರದಂತೆ ಸಾಕ್ಷಿಯೆನಗಿರುತಿರಲುಅಖಿಲ ಚಿಂತೆಯ ಗಿಡುಗ ಬರಲಹುದೆಮುಕುತಿದಾಯಕ ಚಿದಾನಂದ ಗುರು ಕೇಳೆನಗೆಯುಕುತಿಯುಂಟೇ ಬೇರೆ ಬಿಡುಬಿಡಿರೆ ಬಿಡು ಪಥವ5
--------------
ಚಿದಾನಂದ ಅವಧೂತರು
ಸುಲಭದ ಮಾತಿದು ತಿಳಿದು ಪೇಳಿ ಹೊಲಬುದಪ್ಪಲು ಬೇಡ ಸುಲಿಗೆಯಾಹುದು ಮುಂದೆ ಪ ಅಂತರಿಕ್ಷದಲೊಂದು ನಿಂತಿಹ ವೃಕ್ಷವಾ- ನಂತಾನಂತವಾದೆಲೆಗಳುಂಟು ನಿಂತಿಹ ಎಲೆಗಳು ಬೀಳುವುದನು ನೋಡಿ ಮಂತ್ರಿಯೊಬ್ಬನು ಕುಳಿತು ಎಣಿಸುವನಯ್ಯ 1 ಭೂಮಿಯ ಮೇಲೊಂದು ಭೂಮಿಯು ಜನಿಸಲು ತಾ ಮನಸೋತನು ದೊರೆಯೊಬ್ಬನು ಪ್ರೇಮದಿ ರಾಜ್ಯವನಾಳುವ ಸಮಯಕ್ಕೆ ಸೀಮೆಯ ಮೇಲೆಲ್ಲ ಗುಡಿಗಟ್ಟಿತಯ್ಯ 2 ಕಡಗೋಲು ಮಿಡುಕಿತು ಒಡೆಯಿತು ಪಾತ್ರವು ಪಿಡಿದ ಬೆಣ್ಣೆಯೊಳೊಂದು ಗಿಡ ಹುಟ್ಟಿತು ಅಡವಿಯ ಮಧ್ಯದಿ ಹುಟ್ಟಿದ ಗಿಡವಿನ ಎಡೆಯೊಳು ಗಿಣಿ ಬಂದು ಮರಿಯಿಕ್ಕಿತಯ್ಯ 3 ಬಿಲ್ಲುಗಾರನು ಬಂದು ಬಲ್ಲಿದ ಪಕ್ಷಿಯ ಮೆಲ್ಲನೆ ಕೆಡೆಯಲು ಬೇಕೆನುತ ನೆಲ್ಲಿಯ ಎಲೆಯನ್ನು ಎಣಿಸಿ ಬೀಸಾಡುವ ನಲ್ಲನೊಬ್ಬನು ಕಂಡು ಹೊರಗಿಟ್ಟನಯ್ಯ 4 ಗುಡಿಯ ಬಾಗಿಲ ಮುಂದೆ ವೃಕ್ಷದ ಗಿಣಿಯನ್ನು ಮಡದಿಯೋರ್ವಳು ಕಂಡು ಒಳಗಿಟ್ಟಳು ಗಿಡುಗನ ಹಾವಸೆ ಒಡೆಯನು ಕಾಣುತ್ತ ಒಡಲಾಳು ಸುರಭಿಯ ಕಟ್ಟಿದನಯ್ಯ 5 ಮೂಗನು ಕಾಣುತ್ತ ಕೂಗ್ಯಾಡಿ ಕರೆಯಲು ಆಗಲೇ ಕಿವುಡನು ಧ್ವನಿಯ ಕೇಳಿ ಬೇಗದಿ ಕುರುಡನು ಬಂದು ಹಾಲೆರೆಯಲು ಆಗಲೆ ಪಕ್ಷಿಯು ಉಂಡು ಹಾರಿತಯ್ಯ6 ಬುದ್ದಿಹೀನನು ಕಂಡು ಶುದ್ಧ ಸ್ವಾಮಿಯೊಳು ತಿದ್ದಿದ ಗುಡಿಗಳು ಬಿದ್ದಮೇಲೆ ಎದ್ದು ಪಕ್ಷಿಯು ಹೋಗಿ ವರಾಹತಿಮ್ಮಪ್ಪನು ಇದ್ದಲ್ಲಿಗಾಗಿಯೆ ಹಾರಿಹೋಯಿತಯ್ಯ 7
--------------
ವರಹತಿಮ್ಮಪ್ಪ
ಮದ್ದಿನ ಹವಾಯಿ ನೀನೋಡುಬಗಳಮದ್ದಿನ ಹವಾಯಿ ನೀನೋಡುಮದ್ದಿನ ಹವಾಯಿ ಹೃದಯ ಬಯಲಲ್ಲದೆಎದ್ದಿರು ಚತುಷ್ಟ ತನುವಿಗೆ ಬೇರೆಯುಪತೂರ್ವುತಲಿದೆ ಬಿರಿಸಾಕಾಶದ ತುದಿಗೇರ್ವುತಲಿದೆಅಂಬರಬಾಣಬೀರ್ವುತಲಿದೆ ಚಕ್ರದ ಕಿಡಿಯಗಲಕೆಜಾರ್ವುತಲಿದೆ ಅಜ್ಞಾನದಖೂನ1ಗಡಿಗ ಬಾಣದ ಗತಿಯನೆನೋಡುಗಜುಗಿಂಗಳ ಕಾಯಬ್ಬರವಗಿಡುಗಳು ಹಾರ್ವವು ಜಿನಿಸು ಜಿನಿಸುಗಳುಭಡಲ್ ಭಡಲ್ಲಿಹ ಸಪ್ಪಳವು2ಅಂತರ ದೌಸು ಸರಬತ್ತಿಗಳುಅಗಸೆಯ ಹೂವಿನ ಅಚ್ಚರಿಯಕಂತುಕ ಪೆಟಲವು ಮುತ್ತಿ ಸೇ-ವಂತಿಗೆ ಕವಳೆಯ ಹೂವಿನ ಸುರಿಮಳೆಯು3ಕೋಳಿಯು ಮುಳುಗುತಲೇಳುತಲಿರುತಿರೆಕೋಣ ಆನೆಗಳ ಕಾದಾಟಬಾಳೆಯ ಗೊನೆಗಳು ಬೆಳ್ಳಿಯ ಚುಕ್ಕೆಯುಬೆಳ್ಳನೆ ಜ್ಯೋತಿಯ ಕಡಕದಾಟ4ನಿನ್ನ ಕಾಂತಿ ಇವು ನೀನೇ ನೋಡುತಲಿರುತನ್ಮಯ ದೃಷ್ಟಿಯನಿಟ್ಟುಚೆನ್ನ ಚಿದಾನಂದ ಬಗಳೆ ನೀ ಸಾಕ್ಷಿಯಿರೆ ಚೈ-ತನ್ಯಾತ್ಮಕ ಶುದ್ಧನವ5ಸೂಚನೆ :ದೀಪಾವಳಿ ಮುಂತಾದ ಸಂದರ್ಭಗಳಲ್ಲಿ ಹಾರಿಸುವ ಮದ್ದಿನ ವಸ್ತುಗಳ ಬೆಳಕಿಗೆ ದೇವಿಯನ್ನು ಹೋಲಿಸಿದ್ದಾಗಿದೆ. ಇದರಲ್ಲಿ ಬಂದಿರುವಕೆಲವು ಮದ್ದಿನ ಪದಾರ್ಥಗಳ ಹೆಸರುಗಳು ಆಗಿನ ಕಾಲದವು.
--------------
ಚಿದಾನಂದ ಅವಧೂತರು