ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೀನೆಂನ ಕಾಯಬೇಕೊ ಕೇಶವನೇ ನೀನೆಂನ ಸಲಹಬೇಕು ಪ ನೀನೆಂನ ಕಾಯದಿದ್ದರೆ ಕಾವರಾರಯ್ಯಾ ನಾನಂಬಿ ಮರೆಹೊಕ್ಕೆ ಶರಣರಕ್ಷಕನೇ ಅ.ಪ. ಮುಂದೆ ನೋಡಿದರೆ ಹೆಬ್ಬಾವು ನುಂಗುತಲಿದೆ ಬಂದು ಬಾಂಧವರೆಲ್ಲ ತಲೆಯ ಮೇಲೆರಿವರು ಬಂದೆನ್ನ ಕಾಯ್ವರನೊಬ್ಬ ಕಾಣೆ 1 ನಂಬುತ್ತ ಗಿಡವೇರೆ ಗಿಡವು ಬಾಗುತಲಿದೆ ನಂಬಿದ ಹರಿಗೋಲು ಮುಳುಗುತ್ತಲಿದೆಯೋ ತುಂಬಿದ ಪಟ್ಟಣ ಸೂರೆಯಾಗುತಲಿದೆ ಕಂಬನಿ ನೀಗುವ ಪ್ರಾಣೆಯಕಾಣೆ2 ಪಶುಗಳ ಕಾಯ್ದೆ ನೀ ಬಾಲ ಕ್ರೀಡೆಯೊಳಾಗ ವಿಷದ ಕಾಳಿಂಗನ ಸೊಕ್ಕನು ಮುರಿದೇ ದಶರೂಪಗಳ ತಾಳ್ದು ಸುಜನರ ಪೊರೆದಂತೆ ಶಿಶುವನು ರಕ್ಷಿಸೈ ಚನ್ನಕೇಶವನೇ 3
--------------
ಕರ್ಕಿ ಕೇಶವದಾಸ