ಒಟ್ಟು 4 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗಾಳಿಗಿಟ್ಟ ದೀಪಕಾಣಿರೋ ಈ ಸಂಸಾರ ಗಾಳಿಗಿಟ್ಟ ದೀಪಕಾಣಿರೋ ಪ ಗಾಳಿಗಿಟ್ಟ ದೀಪಕಾಣಿರೋ ಬೀಳು ಜಗದ ಬಾಳು ಎಲ್ಲ ನೀಲಶಾಮನ ಪಾದನಂಬಿ ಕಾಲನಾಳಿನ ದಾಳಿ ಗೆಲಿಯಿರೋ ಅ.ಪ ಸೂತ್ರಬೊಂಬೆಯಂತೆ ಕುಣಿಯುವ ಈ ದೇಹವೆಂಬ ತುಂಬಿ ತುಳುಕುವ ಆ ಗಾಳಿ ನಿಮಗೆ ಸೂತ್ರಧಾರಿಯ ಭಜಿಸಿ ಭವದ ಯಾತ್ರೆ ಜಯವ ಪೊಂದಿರಯ್ಯ 1 ಮಾಯೆಯಿಂದ ಕಲ್ಪಿಸಿರುವ ಈ ಮಾಯಕಲ್ಪ ಮಾಯೆಯೊಳಗೆ ಲಯಿಸುತಿರುವ ಆ ಮಾಯಗಾರ ಮಾಯದಾಟ ಆಡುತಿರುವ ತಿಳಿರೋ ನಿಜವ ಮಾಯತುಂಬಿ ಮಾಯಬೆಳಗಿ ಮಾಯಜಗವೆನಿಸಿ ತೋರ್ಪ ಮಾಯಮಹಿಮನ ಮರೆಯಬಿದ್ದು ಮಾಯಮೃತ್ಯು ಗೆಲ್ಲಿರಯ್ಯ 2 ವಿಷಮಕನಸಿನಂತೆ ತೋರುವ ಈ ಇಂದ್ರಜಾಲ ಹಸನಗೆಡಿಸಿ ನಿಮಿಷದಡಗುವ ಈ ಹೇಯ ಮಲ ಅಸಮಸುಖಕೆ ಬೆಂಕಿಹಚ್ಚುವ ಪಾಪಕೊಂಡವ ಅಸಮಜ್ಞಾನದಿಂದ ದಾಂಟಿ ವಸುಧೆಗಧಿಕ ಶ್ರೀರಾಮಪಾದ ಕುಸುಮಕ್ಹೊಂದಿ ನಿರ್ಮಲೆನಿಸಿ ಎಸೆವಮೋಕ್ಷ ಪಡೆಯಿರಯ್ಯ 3
--------------
ರಾಮದಾಸರು
ಯೇನು ನೆಲೆ ಯೆನುತಿಹೆ ಮನುಜಾ ನಿ ಧಾನಿಸು ಗತಿಯಚ್ಯುತನಲ್ಲದುಂಟೇ ಪ ಹುಲ್ಲುಹನಿಯು ಗಾಳಿಗಿಟ್ಟ ಸೊಡರು ನೀರ ಗುಳ್ಳೆಗಳದು ತಾ ಸ್ಥಿರವೆನಿಪಾ ಜಳ್ಳು ಜವ್ವನವ ನಿಶ್ಚಯವೆಂದು ಕಾಲನ ಭಲ್ಲೆಯಕೆದೆಯನೊಡ್ಡುವೆಯಾತಕೆ ನೀ 1 ಮಿಂಚಿನ ಬಲೆಯ ರಕ್ಷೆಯ ಮನ ಸುದತಿಯಾ ಚಂಚಲತೆಯ ಜೀವರ ಗೆಲಿದೂ ಪ್ರ ಪಂಚಿನ ಸಿರಿಯ ನಿಶ್ಚಯವೆಂದು ಬಗೆದು ನೀ ಮುಂಚುವೆಯೇಕೆ ನರಕಪತಿ ಕರೆಗೇ 2 ಸುರಚಾಪವೋಲೀ ದೇಹದ ಸಂ ಗರದಿ ಸೋಲುವ ಶರೀರವ ನಂಬೀ ನರಕಕೂಪಕ್ಕಿಳಿಯದೇ ವೇಲಾಪುರ ದರಸ ವೈಕುಂಠ [ಕೇಶವ] ಶರಣೆನ್ನೇ 3
--------------
ಬೇಲೂರು ವೈಕುಂಠದಾಸರು