ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬೇಗ ನೀಗಿಸು ದುರ್ಭೋಗದ ಸೆರೆಯ ನಾಗಶಯನ ಬಾಗಿ ಬೇಡುವೆ ಪ ನೀತಿಗೆಡಿಸಿ ಮಂಗನೆನಿಸಿ ಮಾತುಮಾತಿಗೆ ಭಂಗಬಡಿಸಿ ಪಾತಕನೆನಿಸಿ ದಂಗು ಹಿಡಿಸಿ ಘಾತಮಾಳ್ಪ ಹೊನ್ನಿನಾಸೆ 1 ಕುನ್ನಿಯಂದದಿ ಕುಣಿಸಿ ಕುಣಿಸಿ ಬನ್ನ ಬಡಿಸಿ ಬನ್ನಂಗನೆನಿಸಿ ಉನ್ನತ ಸುಖಗೆಲಿಪ ಹೇಸಿ ಗನ್ನಗತಕ ಹೆಣ್ಣಿನಾಸಿ 2 ಮೋಸಪಾಶದೊಳಗೆ ಮುಳುಗಿಸಿ ದೋಷದೆಳಸಿ ಮುತಿಯಕೆಡಸಿ ನಾಶ ಯಮನ ಕೊಲೆಗೀಡೆನಿಸಿ ಘಾಸಿ ಮಾಳ್ಪ ಹೆಣ್ಣಿನಾಸಿ 3 ಇಷ್ಟೆ ಜಗದ ಸುಖವಿದನು ಎಷ್ಟುನಂಬಿ ಫಲವೇನು ಅಷ್ಟು ಮಾಯವೆನಿಸಿ ಎನ್ನನು ನಷ್ಟಗೊಳಿಪ ಕೆಟ್ಟಾಸಿಯನು 4 ಮೀರಿ ಮಹ ಘೋರಬಡಿಸಿ ಸಾರಸುಖದ ಮಾರ್ಗ ಕೆಡಸಿ ಧೀರ ಶ್ರೀರಾಮ ನಿನ್ನ ಮರೆಸಿ ಗಾರುಮಾಳ್ಪ ಪಾಪರಾಸಿ 5
--------------
ರಾಮದಾಸರು
ರಂಗಾ ಮನೆಗೆ ಬಂದ ಪರಮ ಮಂಗಳದಾಯಿ ಹಿಂಗಿತು ದಾರಿದ್ರ್ಯವಿನ್ನು ಶೃಂಗಾರ ಭುಜಂಗ ಶಾಯಿ ಪ. ಪದ್ಮನಾಭ ಸಿರಿನಲ್ಲಕೃಷ್ಣ ತನ್ನ ಪಾದ ಪಲ್ಲವೆ ಶರಣೆಂದು ನಿಲ್ಲೆ ಧೈರ್ಯದಿ ಮೆಲ್ಲ ಮೆಲ್ಲಕಾಗಿ ತನ್ನ ವಲ್ಲಭೆಯ ಕೂಡಿ ಎನ್ನ ಸೊಲ್ಲ ಲಾಲಿಸುತ ಕಂಸದಲ್ಲಣ ತಡವಿಲ್ಲದಂತೆ 1 ಆರುವೆನನೆಂಬ ಹುಣ ಘೋರಭಾವದಿಂದಲುಂಡು ಗಾರುಮಾಳ್ಪ ಸಮಯದಲ್ಲಿ ಚೀರುತಿರುವುದ ಮಾರಜನಕ ಲಾಲಿಸಿ ಕೃಪಾರಸದಿ ಸಲಹಿ ನಿಜ ಪಾ ದಾರವಿಂದ ಯುಗ್ಮವನ್ನು ತೋರಿ ತಿರುಗಿ ಕಳುಹಿದಂಥ 2 ಭಕ್ತಾಭರಣನೆಂಬ ಬಿರುದ ವ್ಯಕ್ತವಾಗಿ ತೋರಿ ಸರ್ವೋ ದ್ವøಕ್ತ ಮಹಿಮ ತನ್ನೊಳ್ಪರಮಾ ಮತಿಯನಿತ್ತು ಮಾಯಾ ಶಕ್ತಿಯರಸ ವೆಂಕಟೇಶ ನಿತ್ಯ ಮುಕ್ತ ರಮೆಯ ಕೂಡಿ ನಗುತ 3
--------------
ತುಪಾಕಿ ವೆಂಕಟರಮಣಾಚಾರ್ಯ