ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಂಡೆನಮ್ಮಾ ಕೌತುಕದಾ ಗಾರುಡಿಗನಾ | ಕೊಂಡಾಡಲಳವಲ್ಲ ಹೇಳಲೇ ನಾ ಪ ಬೋಧದನಾಗರ ನೂದುವನಾ 1 ಭಕ್ತರುದ್ದೇಶಕ ಬಂದ ಜವದಿ 2 ಸಕಲ ತೇಜದ ಬಬ್ಬುಳಿಯೋ ರೂಪ ನೆಲಿಯಾ | ಪ್ರಕಟ ತಿಳಿಯದು ನಿಜ ಕಳಿಯನಾ 3 ಅರಿಶಿಕ್ಷಾ ಭಕುತರ ಪಕ್ಷಾವೆಂಬ ನಾನಾ | ಬಿರುದು ಕಟ್ಟಿಹ ಮಹಿಮನಾ 4 ಕಾಳ ಸರ್ಪದ ನಿಜ ಮುಖ ಬಂಧವನ ಮಾಡಿ | ಜಾಳಿಸಿದನು ಭಯ ಈಡ್ಯಾಡಿ 5 ಹಮ್ಮಿನ ಗಾವ ಗುಂಡ ಗಜದಂತ ಶರಣರಿಗೆ | ವಮ್ಮಿಲೆ ಕಲೆಗಳ ದೋರುದೀಗನಾ 6 ತಂದೆ ಮಹಿಪತಿ ಸುತ ಸ್ವಾಂಮಿ ದುರ್ಲಭದಾ | ನಂದವ ತೋರಿದಾ ದಯದಿಂದಾ 7
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಗುರು ಎಂಥಾ ಗಾರುಡಿಗಗುರುವಿನ ನಂಬಿ ಗುಣವೆಲ್ಲ ಕಳಕೊಂಡೆ ಪ ಶರಣು ಮಾಡೆಂದರೆ ಶರಣು ಮಾಡುತ್ತಲಿರ್ದೆಕರದಲ್ಲಿ ಏನಿತ್ತೋ ಜವೆಯ ಬೂದಿಶಿರದ ಮೇಲೆನ್ನ ಮೈಮೇಲೆ ಎಳೆಯಲು ಶರೀರವಮರೆತೆನೆ ಇದಕೆ ಸಾಕ್ಷಿಯಾದನೆ ಗುರು 1 ಆರು ಇಲ್ಲದುದ ನೋಡಿ ಬೇರೆನ್ನ ಕರೆದೊಯ್ದುಮೋರೆಯನು ಕಿವಿಯೊಳಗಿಟ್ಟು ಮಂತ್ರಿಸಿದನಾರಿ ಬದುಕು ಮನಮಕ್ಕಳನೆಲ್ಲವಸೇರಿ ಸೇರದಂತೆ ಮಾಡಿದನೆ ಗುರು2 ಭವಗೇಡಿ ಕುಲಗೇಡಿ ಸಂಗಗೇಡಿಯಾದೆಇವನ ವಿಶ್ವಾಸದ ಫಲದಲಿಂದಇವನ ಮೇಲೆ ಎನ್ನ ವ್ಯಾಕುಲ ಹತ್ತಿದೆವ್ಯವಹಾರವೆಂಬುದು ಎಡವಟ್ಟಾಯಿತು3 ಮಂತ್ರಿಸಿದ ಕ್ರಿಯೆ ಮರಳಲೀಯದೆ ಎನ್ನಮಂತ್ರ ತಂತ್ರಕ್ಕದು ಬಗ್ಗಲಿಲ್ಲಮಂತ್ರದ ಮಹಿಮೆಯು ಮಹಾಮಹಿಮೆಯುಮಾಂತ್ರಿಕರೊಳಗೆ ದೊಡ್ಡವನಹುದೋ ಗುರು 4 ಇವನ ನಂಬಿದ ಮೇಲೆ ಇವನಂತಲ್ಲದೆಭುವನಕ್ಕೆ ತಿರುಗಿ ತಾ ತಾರೆನೆವಿವರಿಸೆ ಹುರುಳಿಲ್ಲ ಹೇಳಿ ಕೇಳೋದೇನುಭುವನ ರಕ್ಷಕ ಚಿದಾನಂದನೆ ಗುರು 5
--------------
ಚಿದಾನಂದ ಅವಧೂತರು
ಮೂರು ಜಗವ ಕುಣಿಸುವಂಥ ಗಾರುಡಿಗ ಇವ ದಾರಕ್ಕ ನಾರಾಯಣನಲ್ಲವೇನೆ ನಾರಿ ಕೇಳೆ ತಂಗಿ ಪ. ಧೀರ ಬಲುಗಂಭೀರ ಮತ್ಸ್ಯವತಾರ ಕಾಣೆ ತಂಗಿ 1 ಹತ್ತೂ ನಾಲ್ಕು ರತ್ನವ ತೆಗೆದು ಮತ್ತೆ ಇವ ದಾರಕ್ಕ ಕೂರ್ಮ ಕಾಣೆ ತಂಗಿ 2 ಧರಣಿಯ ಸುರುಳಿ ಸುತ್ತಿದಂಥ ಅರಸ ಇವ ದಾರಕ್ಕ ವರಾಹ ಕಾಣೆ ತಂಗಿ 3 ನಂಬಿದವರ ಕಂಬದೊಳು ಎಂಬೆ ಇವ ದಾರಕ್ಕ ರಂಭೆ ಹೇಮದ ಬೊಂಬೆ ನರಸಿಂಹ ಕಾಣೆ ತಂಗಿ 4 ಕದ್ದು ಅಡ್ಡ ಬಿದ್ದನ ಕಣ್ಣ ಇರಿದ ಇವ ದಾರಕ್ಕ ಮುದ್ದು ಮುಖದ ಪ್ರಸನ್ನನಾದ ವಾಮನ ಕಾಣೆ ತಂಗಿ 5 ಆ ಮಾತೃ ದ್ರೋಹವ ಮಾಡಿದವ ಇವ ದಾರಕ್ಕ ಶಾಮ ಸಾರ್ವಭೌಮ ಪರಶುರಾಮ ಕಾಣೆ ತಂಗಿ 6 ಕಾಮಿನಿಯ ಪೋಗಿ ತಂದ ಭೀಮ ಇವ ದಾರಕ್ಕ ಕಾಮಿತಾರ್ಥವನೀವ ಶ್ರೀ ರಾಮ ಕಾಣೆ ತಂಗಿ 7 ಗೊಲ್ಲತೇರ ಗಲ್ಲವ ಪಿಡಿದ ಚೆಲುವ ಇವ ದಾರಕ್ಕ ಬಲ್ಲಿದ ಮಲ್ಲರ ಮರ್ದಿಸಿದಂಥ ಕಳ್ಳ ಕೃಷ್ಣ ಕಾಣೆ ತಂಗಿ 8 ತ್ರಿಪುರದೊಳು ಚಪಲಾಕ್ಷಿಯರ ವಿಪರೀತವ ಮಾಡಿದನಕ್ಕ ಅಪರಿಮಿತ ಮಹಿಮನಿವ ಚಪಲ ಬೌದ್ಧ ಕಾಣೆ ತಂಗಿ 9 ಕುದುರೆಯೇರಿ ಎದುರಿಗೆ ಬರುವ ಚದುರ ಇವ ದಾರಕ್ಕ ಮಧುವನಿಕ್ಕಿದ ಮಧುರಾಪುರದ ಚದುರ ಕಲ್ಕಿ ತಂಗಿ 10 ಮೂರ್ತಿ ಗೋವಿಂದ ಇವ ದಾರಕ್ಕ ನಂದನ ಕಂದ ಹೆಳವನಕಟ್ಟೆ ರಂಗ ಕಾಣೆ ತಂಗಿ11
--------------
ಹೆಳವನಕಟ್ಟೆ ಗಿರಿಯಮ್ಮ
ಈ ವಸುಧೆಯೊಳೆಲ್ಲರಿಗಿಂತ ಕೃಷ್ಣನು ಆವುದರಿಂದಧಿಕಾ ಪವಾರಿಧಿಮನೆಯಲ್ಲೆ ಈಗಿನರಸರಿಗೆ |ನೀರೊಳಗೇಸೊಂದು ಊರಿಲ್ಲವೇ ||ಶಾಙ್ರ್ಗ ಧನುವಾದರೇನು ದುರ್ಲಭವಲ್ಲ |ಧಾರಿಣಿಯೊಳು ಮನೆ ಮನೆಯಲ್ಲಿ ಕಾರ್ಮುಖವು 1ಲೇಸೇನು ಕೌಸ್ತುಭವೊಂದೆಯೇ ಮಣಿಗಳು |ಏಸೊಂದಿಲ್ಲದೆ ಭಾಗ್ಯವಂತರಲ್ಲಿ ||ಶೇಷನ ಹಾಸಿಗೆ ಹಾವಾಡಿಸಿ ಹೊಟ್ಟೆ |ಪೋಷಿಸಿಕೊಳ್ಳರೆ ಗಾರುಡಿಗರೆಲ್ಲ 2ಪೀತಾಂಬರಂತು ಎಲ್ಲರಿಗಿಹದು ದೊಡ್ಡ |ಮಾತಲ್ಲ ವನಮಾಲೆವೈಜಯಂತಿ||ಖ್ಯಾತಿಗೆ ಶಂಖಚಕ್ರವು ಹೇಳಿಕೊಳ್ಳಲು |ಜಾತಿಕಾರಗಿಲ್ಲೇ ಬಡಿವಾರವೇತಕೆ3ಶ್ರೀವತ್ಸ ಶ್ರೀವತ್ಸವೆಂಬರು ಮಂದೆಲ್ಲ |ಆವ ಹುಣ್ಣಿನ ಕಲೆಯಾಗಿಹದೋ ||ಆವಾನಿ ಹಯರಥ ಮುದಿಹದ್ದುಯೇರುವ |ಕೋವಿದರೆಲ್ಲೇನು ನೋಡಿ ವಂದಿಸುವರೋ 4ವೈಕುಂಠ ಮೊದಲಾದ ಮೂರೇ ಊರವನಿಗೆ |ಲೋಕದೊಳರಸರಿಗೇಸೋ ವೂರು ||ಶ್ರೀಕಾಂತ ಪ್ರಾಣೇಶ ವಿಠಲನ ಸಂಗ |ಬೇಕೆಂದು ಬಯಸುವರೆಲ್ಲರೂ ತಿಳಿಯದೆ 5
--------------
ಪ್ರಾಣೇಶದಾಸರು