ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸರೋಜಲೋಚನಸುರಾರಿ ಮಥನ ಮುರಾರಿ ಮಾರಮಣ ಪುರಾರಿಮಿತ್ರಾ ನಿರೀಕ್ಷಿಸೆನ್ನ ನಿರಾಕರಿಸದಿರಿನ್ನು ಪ. ಬಲೀಂದ್ರಗೊಲಿದೆ ಬಾಗಿಲೋಳ್ನಿಂದೆ ಗೊಲ್ಲನು ನೀನಾದೆ ಬಲೀಂದ್ರ ಪೂಜಾಬಲದಿ ಜಗಮಂ ಕಳೆಯೇರಿಸಿ ಮೆರೆದೆ 1 ತಳಿರ್ದೋರಣಂಗಳ್ ಎಲೆಬಾಳೆಲೆಗಳ್ ನಳನಳಿಸುವ ಬಗೆಯೊಳ್ ಬೆಳಗುವ ದೀಪಾವಳಿಯಿಂ ಜಗಮಂ ತೊಳಗುವದೆಲ್ಲೆಡೆಯೊಳ್ 2 ಚಿತ್ತಜಪಿತ ಬಾ ಉತ್ಸವಪ್ರಿಯ ಬಾ ಸತ್ಯವಿಕ್ರಮ ನೀ ಬಾ ಬಾ ನಿತ್ಯ ತೃಪ್ತನೆ ಬಾರೈ 3 ಮದಮತ್ಸರಗಳ ಸದೆವಡೆದೇಗಳು ಸದಯನೆ ನೀ ಎಮ್ಮೊಳು ಸದನವ ಮಾಡೈ ಹೃದಯ ಪೀಠದ ಅಧಿಪತಿ ನೀನಹುದೈ 4 ಮಾಯಾಪಾಶದಿ ಗಾಯಗೊಂಡೆವು ಜೀಯ ಪಾಲಿಪುದೈ ಧೈೀಯಮಾರ್ಗದೆ ನಡೆಯಿಸು ನೀ ನಿರಪಾಯದೆ ಸತತಂ5 ಕೈಪಿಡಿದೆಮ್ಮಂ ಕಾಪಿಡು ನಲವಿಂ ತಾಪತ್ರಯ ಹರ ನೀಂ ಭೂಪಶೇಷಾದ್ರೀಶನೆ ನೋಡೈ ಶ್ರೀಪಾದದಾಸರನು 6
--------------
ನಂಜನಗೂಡು ತಿರುಮಲಾಂಬಾ
ಹನುಮ ನಮ್ಮ ತಾಯಿ ತಂದೆಭೀಮ ನಮ್ಮ ಬಂಧು ಬಳಗಆನಂದತೀರ್ಥರೆ ನಮ್ಮ ಗತಿಗೋತ್ರರು ಪ.ತಾಯಿ ತಂದೆ ಹಸುಳೆಗಳಿಗೆ ರಸಾಯನುಣಿಸಿ ಸಾಕುವಂತೆಆಯಾಸವಿಲ್ಲದೆ ಸಂಜೀವನವ ತಂದುಗಾಯಗೊಂಡ ಕಪಿಗಣವಪ್ರಿಯದಿಂದ ಪೊರೆದ ರಘುರಾಯನಂಘ್ರಿಗಳೆ ಸಾಕ್ಷಿ ತ್ರೇತಾಯುಗದಿ 1ಬಂಧು ಬಳಗದಂತೆ ಆಪದ್ಬಾಂಧವನಾಗಿ ಪಾರ್ಥರಿಗೆಬಂದ ಬಂದ ದುರಿತಗಳ ಪರಿಹರಿಸಿಅಂಧಕಜಾತರ ಕೊಂದುಅಂದೆ ಕೃಷ್ಣಾರ್ಪಣವೆಂದಾ ಯದುಕುಲೇಂದ್ರನಂಘ್ರಿಗಳೆ ಸಾಕ್ಷಿ ದ್ವಾಪರಾಂತ್ಯದಿ 2ಗತಿಗೋತ್ರರಂತೆ ಸಾಧುತತಿಗಳಿಗೆ ಸುಜ್ಞಾನವಿತ್ತುಮತಿಗೆಟ್ಟ ಇಪ್ಪತ್ತೊಂದು ಕುಭಾಷ್ಯಂಗಳಗತಿಗೆಡಿಸಿ ವೈಷ್ಣವರಿಗೆ ಸದ್ಗತಿಯ ತೋರಿದ ಪ್ರಸನ್ವೆಂಕಟಪತಿವ್ಯಾಸಾಂಘ್ರಿಗಳೆ ಸಾಕ್ಷಿ ಕಲಿಯುಗದಿ3
--------------
ಪ್ರಸನ್ನವೆಂಕಟದಾಸರು
ಹನುಮ ನಮ್ಮ ತಾಯಿತಂದೆ-ಭೀಮನಮ್ಮ ಬಂಧು ಬಳಗ |ಆನಂದ ತೀರ್ಥರೆಮಗೆ ಗತಿಗೋತ್ರವಯ್ಯ ಪತಾಯಿ ತಂದೆ ಹಸುಳೆಗಾಗಿ ಸಾಯ ಮಾಡಿ ಸಾಕುವಂತೆಆಯಾಸವಿಲ್ಲದೆ ಸಂಜೀವನ ತಂದೆ ||ಗಾಯಗೊಂಡ ಕಪಿಗಳನ್ನು ಸಾಯದಂತೆ ಪೊರೆದೆ ರಘುರಾಯನಂಘ್ರಿಗಳೆ ಸಾಕ್ಷಿ ತ್ರೇತಾಯುಗದಲ್ಲಿ 1ಬಂಧು ಬಳಗದಂತೆ ಆಪ್ಪದ್ಬಂಧುವಾಗಿ ಪಾರ್ಥನಿಗೆಬಂದ ದುರಿತಂಗಳ ಪರಿಹರಿಸಿ ||ಅಂಧಕಜಾತಕ ಕೊಂದು ನಂದನಂದನಿಗರ್ಪಿಸಿದ ಗೋ-ವಿಂದನಂಘ್ರಗಳೆ ಸಾಕ್ಷಿ ದ್ವಾಪರಯುಗದೆ 2ಗತಿಗೋತ್ರರಂತೆ ಸಾಧುಮತಿಗಳಿಂಗೆ ಗತಿಯನಿತ್ತುಮತಿಗೆಟ್ಟ ಇಪ್ಪತ್ತೊಂದು ಮತವ ಖಂಡಿಸಿ |ಮತಗೆಟ್ಟ ವೈಷ್ಣವರಿಗೆ ಗತಿಯ ತೋರಿದೆ ಪರಮಾತ್ಮಗತಿಪುರಂದರವಿಠಲ ಸಾಕ್ಷಿ ಕಲಿಯುಗದಲ್ಲಿ3
--------------
ಪುರಂದರದಾಸರು