ಒಟ್ಟು 8 ಕಡೆಗಳಲ್ಲಿ , 5 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏಳು ಪೀಠಕೇ ನಳಿನದಳಾಂಬಕೇ ಜಗನ್ನುತೆ ಪ. ಬಾಲೇಂದುನಿಭ ಫಾ¯ ಶ್ರಿತಪರಿಪಾಲೇ ಕೋಮಲೇ ಅ.ಪ ಕುಂದರದನೆ ಮಂದಗಾಮಿನೀ ವಂದಿತಾಮರ ವೃಂದಾರ ವೃಂದಾನಂದಪ್ರದೇ 1 ತೋರಮುತ್ತಿನ ಚಾರುಪೀಠಕೆ ಸಾರಿಬಾ ವರ ಸಾರಸಾನನೇ ನಾರೀಮಣಿಯರೆ ಸಾರಿಕರುವರು ಮೀರಿದಾನಂದದಿಂದ 2 ಶೇಷಶೈಲ ನಿವಾಸಿನೀ ನತ ಪೋಷಿಣೀ ಜಯಶ್ರೀ ರಮಾಮಣಿ ಯಾಸಾ ಸಾರಸನೇತ್ರೇ ಕಮಲಾವಾಸೇ ದಯೆತೋರಿಸೇ 3
--------------
ನಂಜನಗೂಡು ತಿರುಮಲಾಂಬಾ
ಕಂಬುಕಂಧರ ಕಮಲನಯನ ಪ ವಾತಾಶನಗಿರಿ ನಿವಾಸ | ಯಾತುಧಾನಕುಲವಿನಾಶ || ಶ್ವೇತವಾಹನ ಸೂತ ತ್ರಿದಶವ್ರಾತವಂದ್ಯ ಭಕುತ ಪೋಷ 1 ತೋಂಡಮಾನವರಪ್ರದಾತ | ಪಾಂಡುರಂಗದ್ವಿಜ ವರೂಢ ಅಂಡಜಾಧಿ ಜಾಂಡನಾಥ | ಪುಂಡರೀಕವರದ ಸತತ 2 ಯಾಮಿನೀಶವರ್ನ ತ್ರಿಪಥಗಾಮಿನೀಪಿತ ಶಾಮಸುಂದರ ವಾಮದೇವನಮಿತ ಚರಣ | ಸಾಮವೇದ್ಯ ಸಲಹೊ ಸತತ 3
--------------
ಶಾಮಸುಂದರ ವಿಠಲ
ನದೀಸ್ತೋತ್ರವು ಕೃಷ್ಣ ಗೋದಾವರೀ ನಂದಿನೀ ನಳಿನೀ ಹೇಮಾವತಿ ಸಿಂಧು ಸರಯು ನೇತ್ರಾವತಿ ಕುಮದ್ವತೀ ಭಾಗೀರಥೀ ಭೋಗವತಿ ಜಾಹ್ನವೀ ಜಯಮಂಗಲಿ ತ್ರಿಜಗತ್ವಾವನೀ ವಿಷ್ಣು ಪಾದೋದ್ಭವೆ ದೇವಿ ಕೃಷ್ಣವೇಣಿ ಅಘನಾಶಿನೀ ಗಂಗಾ ಯಮುನಾ ತ್ರಿವೇಣೀ ದಕ್ಷಿಣ ಪಿನಾಕಿನೀ ನರ್ಮದಾ ಸಾವಿತ್ರೀ ಗಾಯತ್ರೀ ಸರಸ್ವತೀ ಸೀತಾ ಮಾಲತೀ ಚಮಲಾಪಹ ವಾರಾಹೀ ವೈಷ್ಣವೀ ಸುಜ್ಯೋತಿ ಶಿವಗಂಗಾ ಪಂಚಗಂಗೀ ತ್ರಿಪದಗಾಮಿನೀ ಬ್ರಹ್ಮಪುತ್ರಾ ತುಂಗಭದ್ರಾ ಭೀಮರಥೀ ಗೋಮತೀ ಶರಾವತೀ ಸ್ವಾಮಿ ಪುಷ್ಕರಿಣೀ ವರಹ ಪುಷ್ಕರಿಣಿ ಪಾಂಡುತೀರ್ಥ ಪಾಪನಾಶಿನೀ ಆಕಾಶಗಂಗಾಧವಳ ಗಂಗಾ ಶಾಲ್ಮಲೀ ಲೋಕಪಾವನೀ ಕುಮಾರ ತೀರ್ಥ ವಿಷ್ಣುತೀರ್ಥ ನಾರಾಯಣತೀರ್ಥ ಕೌಮೋದಕೀ ಕಪಿಲತೀರ್ಥ ಅಲಕನಂದ ವರದಾ ಪಶ್ಚಿಮವಾಹಿನೀ ಸಿಂಧು ನದಿ ಶೋಣನದಿ ಚಂದ್ರಭಾಗ ಅರ್ಕಾವತೀ ಸುವರ್ಣ- ಮುಖರೀ ಗೋಗರ್ಭ ಶಿಂಶಾಕಾಗಿನೀ ಮಂದಾಕಿನೀ ಪ್ರಾತ:ಕಾಲೇ ಪಠÉೀನ್ನಿತ್ಯಂ ದು:ಖದಾರಿದ್ರನಾಶನಂ ಸ್ಮರಾಮಿ ನಿತ್ಯಂ ಭವದುಃಖ ದೂರಾ ಶ್ರಿ ಕಮಲನಾಭ ವಿಠ್ಠಲೋ ವಿಜಯತೇ ಶುಭಂ
--------------
ನಿಡಗುರುಕಿ ಜೀವೂಬಾಯಿ
ಪರಮದಯಾಕರೆ ಪೊರೆಯೆನ್ನನು ಜನನಿ ಪ. ಪಂಕಜಾಕ್ಷಿ ಪಂಕಜಾಸ್ಯೆ ಪಂಕಜಾಶ್ರಯೆ ಪಂಕಜೋದ್ಭವಾದಿಜನನಿ ಪಂಕಜಾಲಯೇ 1 ಪಾಕಶಾಸನಾದಿವಿನುತೆ ಲೋಕವಿಶ್ರುತೇ ಶೋಕಹರಣೆ ಸಾಕುಯೆಮ್ಮ ಕೋಕಿಲರವೇ 2 ಇಂದು ಸೋದರಿ ಮಂದಹಾಸಿನಿ ಕುಂದರದನೆ ವಂದಿಸುವೆನು ಮಂದಗಾಮಿನೀ 3 ಪೊಡವಿಯಣುಗಿ ಪೊಡಮಡುವೆ ನಿನ್ನಡಿಯೊಳೀಪರಿ ಕಡುನೇಹದೆ ಪಿಡಿದುಕರವ ಬಿಡದಿರೌ ಸಿರಿ4 ದೋಷರಹಿತ ಶೇಷಗಿರಿಯ ವಾಸನರಸಿಯೆ ಶೇಷಭೂಷಣ ನಮಿತಚರಣೆ ಪೋಷಿಸೌ ಜಯೆ5
--------------
ನಂಜನಗೂಡು ತಿರುಮಲಾಂಬಾ
ಬರಹೇಳಮ್ಮಾ ಭಾವೇ ಮನೆಗೆ ಬಿರದಂಕ ಹರಿಯಾ| ಚರಣವನ್ನು ಗಾಣದೆನ್ನ ಚಿತ್ರನೆಲೆ ಗೊಳ್ಳದಮ್ಮಾ ಪ ಬಾಲೆಕೇಳೆ ಕುಂತಳೆ ಬೇಸರ ವಿದೇನೇ| ಪಾಲಗಡಲ ಮನೆಯಾ ಬಿಟ್ಟು ಪವನಾಹಾರನ ಪರ್ಯಂಕವನು| ಜಾಳಿಸಿ ತಾನ್ಯಾಕ ಪೋದನೇ ಜಲರುಹ ನಾಭ| ಕಾಲಿಲಲ್ಲದವನಾಗಿ ಕೊಂದು ತಮನನೀಗಿ| ಮ್ಯಾಲಗಿರಿಯ ಪೊತ್ತ ಮರರಿಗ ಮೃತವಿತ್ತಾ| ಭೂಲಲನೆ ಬಡಿಸಿ ಭೂವರಾಹೆನಿಸಿ| ಬಾಲಕರಿಯಲು ರೂಪ ಬೆಡಗಾ ವಿಡಿಸು 1 ಉಡುರಾಜದವನೆ ಕೆಳದೀ ಉನ್ನತಿಯ ನೋಡೇ| ಷಡ್ಗುಣೈಶ್ವರ್ಯವುಳ್ಳಾ ಸುರಮುನಿಸೇವಿತ ಪಾದಾ| ಬೇಡಿ ಭಾಗ್ಯವ ನೀಡುವ ಬಲುದೊರೆ ತಾನಾಗಿ| ಬಡಹಾರುವನಂತೆ ಭೂಮಿ ಬೇಡಿದನಂತೆ| ಕೊಡಲಿಪಿಡಿದರೆ ಸಕುಲ ಮಾಡಿದ ನಾಶಾ ವಡನೆ ವಾನರ ಸಂಗ ವಿರಹರಿಸಿ ಸುರತುಂಗಾ| ತುಡುಗತನದಿ ಬೆಣ್ಣೆತಿನ್ನುವರೆ ರನ್ನೆ 2 ಕರಿರಾಜ ಗಾಮಿನೀ ಕಿರೀಟ ಕುಂಡಲದಾ ಶಿವತ್ವಕುಂಡಲದಿಂದಾ| ಪರಮಪುರಷದೇವನು ಪೀತಾಂಬರಧಾರೀ| ಬರಿಯ ಬತ್ತೆಲೆಯಾಡಿ ಬೌದ್ಯರೋಳಗ ಕೂಡೀ| ತುರಗೀರಿಯ ವನರ ತುಳಿಸುತ ಸುರವರ ಮೊರೆಗೇಳಿ ಬಂದನು ಮನದೊಳು ನಿಂದನು| ಗುರು ಮಹಿಪತಿ ಪ್ರೀಯಾ ಗುಣಗಣನಿಲಯಾ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಶ್ರೀಮತ್ಕಾಂಚನ ಕೋಟಿರನ್ನತನಯಾ | ಕ್ಷೀರಾಂಬುನಿಧಿ ಮಧ್ಯದಿ | ನೇಮದಿಂ ನಿಜಧಾಮದಲ್ಲಿ ರಮೆಯಾ | ಒಡಗೂಡಿ ಸುರಸಿದ್ಧದೀ | ಸಾಮಗಾಯನ ಪ್ರಿಯನಾಗಿನಿರುತಾ | ಪಾಲಿಪ ಲೋಕಂಗಳಂ | ಮಾಧವ ದಯಾನಿಧೇ ವಧುವರಾ | ಕುರ್ಯಾತ್ಸದಾ ಮಂಗಳಂ | 1 ಭಾನುಕೋಟಿಯ ತೇಜದಿಂ ಬೆಳಗುವಾ | ಮುಕಟವು ಮಸ್ತಕದಿ | ಶ್ರೀ ನೀಲಾಳಕ ಭಾಲಮಧ್ಯಮೆರೆವಾ | ಕೇಶರ ಪೌಂಡ್ರಕದಿ | ಸೂನಾಸಿಕದಿ ವಾರಜಾಕ್ಷಅಧರಿಂ | ದೊಪ್ಪುವ ಕರ್ಣಂಗಳಂ | ತಾನೀಕುಂಡಲ ಭೂಷಣಾ ವಧುವರಾ | ಕುರ್ಯಾತ್ಸದಾ ಮಂಗಳಂ 2 ಶ್ರೀ ಲಕ್ಷ್ಮೀ ನಿಜಶಾರದಾಗಿರಿಸುತೇ | ಭಾರತೀ - ಶಚಿ- ಭಾಮಿನೀ | ಕಾಲಿಂದೀವರ ನರ್ಮದಾ ಸರಸ್ವತೀ | ಗಂಗಾ ತ್ರಿಪಥಗಾಮಿನೀ | ಪಾಲಿಸುವ ಗೋದಾವರೀ ಭೀಮರಥೀ | ಶ್ರೀ ಕೃಷ್ಣ ವೇಣಿಂಗಳಂ | ಮೇಲೆ ಕಾವೇರಿತುಂಗೆ ತಾವಧುವರಾ | ಕುರ್ಯಾತ್ಸದಾ ಮಂಗಳಂ 3 ವಾರಿಜಾಸನ ವಾಯು ಶಂಕರಗುರು | ತ್ವಂಹೇಂದ್ರ ವಸಿಷ್ಠನು | ಭಾರದ್ವಾಜ ಪರಾಶರಾತ್ರಿ ಭೃಗು ಕ- ಶ್ಯಪ ಕೌಶಿಕ ಶ್ರೇಷ್ಠನು | ಕಾರುಣೀ ಜಮದಗ್ನಿ ರಾಮ ಮರಿಚೀ | ವ್ಯಾಸಾದಿ ಋಷಿ ಪುಂಗಳಂ | ನಾರದಾದಿ ಮುನೀಂದ್ರರೀ ವಧುವರಾ | ಕುರ್ಯಾತ್ಸದಾ ಮಂಗಳಂ 4 ಇಂದ್ರೋವಹ್ನಿ ಪಿತೃಪತಿ - ನಿಋಋತಿ | ಮಕರೇಶ ಪ್ರಭಂಜನಾ | ಸಾಂದ್ರೈಶ್ವರ್ಯ ಕುಬೇರ ಈಶದಿಕ್ಪಾ ಲಾದಿತ್ಯಶಶಿರಂಜನಾ | ಚಂದ್ರಾತ್ಮಜನುಭೌಮದೇವಗುರುತಾ | ಕವಿಮಂದ ಗ್ರಹಂಗಳಂ | ಸಾಂದ್ರಾಗೀಹ ಸಮಸ್ತಗಿರೀ ವಧುವರಾ | ಕುರ್ಯಾತ್ಸದಾ ಮಂಗಳಂ 5 ಶ್ರೀ ಮತ್ಸ್ಯಾಕೃತಿ ಕೂರ್ಮನಾಗಿ ವರಹಾ | ನರಸಿಂಹನೆಂದೆ ನಿಸಿದಾ | ವಾಮನಾಭೃಗುವರ್ಯರಾಮರಘುಪಾ | ಯದುವಂಶದಲಿ ಜನಿಸಿದಾ | ತಾ ಮತ್ತೇ ನಿಜ ಬೌದ್ಧಕಲ್ಕಿ ಎನಿಸೀ | ತಾಳ್ದಾವತಾರಂಗಳಂ | ಶ್ರೀ ಮನೋಹರ ದೇವಕೀ ವಧುವರಾ | ಕುರ್ಯಾತ್ಸದಾ ಮಂಗಳಂ 6 ಕಾಶೀ ಕಂಚಿ ಅವಂತಿಕಾ ವರಪುರೀ | ದ್ವಾರಾವತೀ ಮಥುರಾ | ದೋಷನಾಶಿಕ ಪುಣ್ಯಕ್ಷೇತ್ರ ಬದರೀ | ಶೇಷಾದ್ರಿವರ ಸೇತುಬಧ ತುಹಿನಾ | ರಜತಾದ್ರಿ ಸೈಲಂಗಳಂ | ಈ ಸಪ್ತಾಂಬುಧೀ ಸರ್ವದೀ ವಧುವರಾ | ಕುರ್ಯಾತ್ಸದಾ ಮಂಗಳಂ 7 ದಶರಥಾತ್ಮಜನಾದ ರಾಮಜಗದೀ | ಜನಕಾತ್ಮಜಾ ಸೀತೆಯಾ | ಕುಶಲದೀ ನರಲೀಲೆಯಿಂದ ಮೆರೆವಾ ವೈಭವ ಸಂಗsತಿಯಾ ಉಸರೀದಾ ಗುರುಮಹಿಪತಿಸುತ ಕ- ನ್ನಡ ಭಾಡೆ ಶ್ಲೋಕಂಗಳಂ | ವಸುಧೆಯಲಿ ಸ್ಮರಿಸುವವರಿಂಗೆ ಕೊಡುವಾ | ರಘುನಾಥ ಜಯಮಂಗಳಂ 8
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಸರಸ್ವತಿ ಸ್ತುತಿ ವಾಣಿ ಪಲ್ಲವ ಪಾಣಿ ನಾಗ- ವೇಣಿ ಹಂಸಗಾಮಿನೀ ಪ ವೇಣಿ ಹಂಸಗಾಮಿನೀ ಸು- ವೀಣಾ ಪುಸ್ತಕ ಧಾರಿಣಿ ಅ.ಪ ಶಾರದೆ ಶ್ರುತಿ ಸಾರನಿಧೇ ವಾರಿಜಾಕ್ಷಿ ಭಾರತೀ ಮಮ- ಕಾರ ಮೋಹಗಳಜಿತೀ 1 ನಾಕಾಧೀಶ ಪೂಜಿತೇ ವಿ- ವೇಕ ಜ್ಞಾನ ಸಂಧೃತೇ 2 ದಾಸರಿಷ್ಟವೀವ ಪಾವಂ ತೋಷವೀಯೇ ಸನ್ಮತಿ ವಾಣಿ3
--------------
ಬೆಳ್ಳೆ ದಾಸಪ್ಪಯ್ಯ