ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗಾನ ಹರಿನಾಮ ಕೀರ್ತನೆಯ ಗಾನ ಪರಮಾದರವಿದ್ದರೆ ಗಾನ ಪ ಗಾನದಿಂದ ಹರಿಯುವ ಬಾಷ್ಪಾಂಜಲಿ ಭಾನುವಂಶ ಶೇಖರಿನಿಗುಪಾಯನ ಅ.ಪ ಗಾನರಸದ ಮಜ್ಜನದಿಂದಲಿ ಮನ ಕಾಣಲು ಶಮದಮ ಸುಖಗಳನು ಕೂರ್ಮ ಮೊದಲಾದ ರಮೇಶನ ನಾನಾ ಲೀಲೆಗಳನ್ನು ಪೊಗಳುವುದೇ 1 ನಾರಿಯ ಸೌಂದರ್ಯಕೆ ಮಾಂಗಲ್ಯವು ಕಾರಣವಾಗುವ ತೆರದಲ್ಲಿ ಹೇರಳ ಗಾಂಭೀರ್ಯವ ರಸಪುಂಜಕೆ ಬೀರುವ ಶೌರಿಯ ಮಧುರನಾಮಗಳೆ2 ಆದಿವ್ಯಾಧಿ ಜನನಾದಿ ವಿರೋಧದ ಬಾಧೆಯ ಕಳೆಯುವ ಔಷಧಿಯು ಮಾಧವ ಮಧುಸೂಧನ ಶ್ರೀಧರಪರ ಬೋಧ ಪ್ರಸನ್ನನ ಮಧುರ ನಾಮಗಳೇ 3
--------------
ವಿದ್ಯಾಪ್ರಸನ್ನತೀರ್ಥರು