ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಯಾತರವ ನಾನೈಯ ಇಂದಿರೇಶ ಪ ಹೋತನ ಕೊರಳೊಳಗೆ ಮೊಲೆಯಿರ್ಪ ತೆರದಲಿ ಅ.ಪ ಗ್ರಾಸಕ್ಕಲ್ಲದೆ ನಾನು ದೇಶ ದೇಶಕೆ ಪೋಗಿ ವಾಸಪಗೆ ಸಮರೆಂದು ದೋಶಿಗಳ ಪೊಗಳೀ ಕಾಸುಗಳಿಸಲು ದಾಸ ವೇಷ ಹಾಕಿದ ಶೂರ ಏಸು ಜನ್ಮವು ಕಳಿಯೆ ನಾಶವಾಗದೊ ಆಶೆ 1 ನೇಮ ನಿಷ್ಠೆಗಳಾಟ ಪರರಿಗೋಸುಗ ಹೂಡಿ ಕೋಮಲಾಂಗಿಯರ ಮನ ಮೆಚ್ಚಿಸುತ ಜಗದೊಳಗೆ ಹೇಮದಾಶೆಗೆ ಸೂಳೆ ಪ್ರೇಮವನ್ನು ತೋರ್ಪಂತೆ ನಾಮಸವಿಯುಣ್ಣದೆಲೆ ಗಾಯನವ ಮಾಡುವೆನು 2 ವ್ಯಾಸಕೂಟದಿ ಬೇರೆ ದಾಸಕೂಟವು ಎಂಬ ದೋಷವಾದವ ಮಾಡಿ ವ್ಯಾಸದಾಸರ ದ್ರೋಹ ಗ್ರಾಸವಾದೆನು ನಾನು ಶಾಸ್ತ್ರವಾಹುದೆ ಬೇರೆ ಭಾಷೆ ಬೇರೆಯು ಆಗೆ ಶ್ರೀಶ ಹರಿಸೋ ಇದನು 3 ಮಾನವರ ಬಹುಮಾನ ಸಾನುರಾಗದಿ ಬಯಸಿ ನಾನು ಮೋದಿಸುವೆ ಹೀನ ಮತಗಳ ಹುಳುಕು ಪ್ರಾಣಪತಿಮತ ಮೇಲ್ಮೆಗಾನಮಾಡೆನು ದೃಢದಿ ಸ್ವಾನುಸಂಧಾನ ವಹೀನ ಜ್ಞಾನಿಯೊ ನಾನು4 ಖ್ಯಾತಿ ಜೀವನಕಾಗಿ ಶಾಸ್ತ್ರವೋದಿದ ಮೂಢ ನೀತಿ ಪೇಳುವೆ ಜನಕೆ ನೀತಿತೆರನಾನಡಿಯೆ ನಿತ್ಯ ನೇಮವುಯನಗೆ ಈತರದ ಹರಿದಾಸ ಮಾತರಿಶ್ವಗೆ ದೂರ 5 ದಾನ ಧರ್ಮಗಳಿಲ್ಲ ಮೌನ ಜಪ ತಪವಿಲ್ಲ ಹೀನಗುಣ ಬಿಡಲಿಲ್ಲ ನಾನುಯೆಂಬುವೆನಲ್ಲ ಸೊಲ್ಲು ಏನು ಬಿಡೆದಿಹೆನಲ್ಲ ನಿನ್ನ ನಂಬಿಹೆನಲ್ಲ ನೀನು ಬಿಡೆ ಮದ್ದಿಲ್ಲ6 ಇಂತುಟಾದರು ಮೆರೆವೆ ಹಂತ ನಿನ್ನಯ ಕೃಪೆಯೊ ಯೆಂತು ಪೇಳಲಿ ಜೀಯ ಸಂತ ಜಯಮುನಿ ವಾಯುವಂತರದಿ ನಲಿವಂಥ “ಶ್ರೀ ಕೃಷ್ಣವಿಠಲ”ನೆ ನಿನ್ನಂಥ ದೊರೆಯಿಲ್ಲ ಸರ್ವೋತ್ತಮನೆ ಶರಣೈಯ7
--------------
ಕೃಷ್ಣವಿಠಲದಾಸರು
ಧ್ವಜದತಿಮ್ಮಪ್ಪ ಪಲ್ಲಕಿಯೇರಿ ತನ್ನಯ |<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ನಿಜಗಿರಿಯಾತ್ರೆಗೈದಿದ ಹರುಷವಕೇಳಿಪ.ಬಲದಲಬುಜಭವ ಭವಾದಿಗಳೆಡದಲಿ |ಉಲಿವ ವೇದ - ಉಪನಿಷದುಗಳು ||ಸಲುಗೆಯಲಿ ಸನಕಾದಿಗಳು ಸೇವಿಸೆ ಮುನ್ನ |ಹಲವು ಋಷಿ - ಮುನಿನಿಕರ ಹಿಂದೆ ಬರುತಿರಲು 1ಛತ್ರವ ಶಚಿ ಚಾಮರವ ಢಾಳಿಸೆ ಇಂದ್ರ |ಚಿತ್ತಜಾತನು ವ್ಯಜನವ ಬೀಸಲು ||ಹೊತ್ತು ಮಾರುತಿ ಹಡಪ ಹೊಳೆವೆಲೆಗಳ ಕೊಡಲು |ಹಸ್ತದ ಕಾಳಂಜಿ ಹರಿಣಾಂಕನು ಬರೆ 2ವರುಣನು ಸ್ವಾದುಜಲವ ಪಿಡಿದು ಬರೆ |ತರುಣಿ ತನಗೆ ಆಧಾರದಂತಿರಲು ||ಸುರರು ಸುಮನಗಳಿಂದ ಸರ್ವರು ತಮತಮ್ಮ |ಪರಿಪರಿ ಆಯುಧಗೊಂಡು ಬಳಸಿಬರೆ 3ಮಂದರ ಮಧ್ಯಮತಾರಕ ಮೋಹನ |ದಿಂದ ಗಂಧರ್ವರು ಗಾನಮಾಡೆ ||ತೋಂಧಿಮಿಧಿಮಿಕೆಂದು ತಾಳಮೇಳದೆ ನಾ - |ರಂದ ಪಾಡಲು ಆಡುತಾಡುತ ಬರುತಿರೆ 4ಲೋಕನಾಯಕ ಲೋಕೈಕ ರಕ್ಷಾಮಣಿ |ಸಾಕಾರರೂಪ ಸದ್ಗುಣಭರಿತ ||ವೆಂಕಟೇಶ ವ್ಯಾಸಮುನಿವರದನಾದ ಕರು - |ಣಾಕರ ಪುರಂದರವಿಠಲನು ಗರುಡ 5
--------------
ಪುರಂದರದಾಸರು