ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರುಣಿಸು ಕಮಲಾಸನ ಮಾತಯೆ ನೀಂ ಕರಧೃತ ವರ ಕಮಲೆ ಪ ಶರಣವ ಪÉÇಂದಿಹೆ ಕರುಣದೊಳೀಕ್ಷಿಸು ವರದೆ ವರಲಕ್ಷ್ಮಿ ಅ.ಪ. ಕುಸುಮ ಧೂಪಾವಳಿಯಿಂದಲಿ ಸುಂದರಿ ಪೂಜಿಪೆನು ಬಂಧುರಗಾತ್ರಿಯೆ ಅಂದದೊಳೆನ್ನಯ ಮಂದಿರದೊಳಗಿಹುದು 1 ಶ್ರಾವಣ ಮಾಸದಿ ಭಾವಕಿ ನಿನ್ನನು ಭಾವದಿ ಭಾವಿಸುತ ತಾವಕ ಪಾದವ ಪ್ರೇಮದಿ ಪೂಜಿಪೆ ದೇವಿಯೆ ಒಲಿಯುವುದು 2 ಚಂದನಭೂಷಿತೆ ಸುಂದರ ಗಾತ್ರೆಯ ಮಂದಹಾಸಮೊಲಿಯೆ ಚಂದದ ಕಿಂಕಿಣಿಯಂದದರವದೊಳ್ ಬಂದು ದಯಂಗೆಯ್ಯೆ3 ಹರಿಮಾನಸ ಮೋಹದ ಪ್ರಾಣೇಶ್ವರಿ ಹರಸುತ ವರಗಳಿಂದ ವರಧೇನುನಗರ ವರಜನ ಪೋಷಿಣಿ ಕರುಣಾಕರೆ ವರದೆ4
--------------
ಬೇಟೆರಾಯ ದೀಕ್ಷಿತರು
ನಮಿಪೆ ನದಿ ದೇವತೆಗಳೇ | ನಿಮಗೆ ಪ. ನಮಿಪೆ ನದಿ ದೇವತೆಗಳೇ ನಿಮ್ಮ ಚರಣಕ್ಕೆ ಕಮನೀಯ ಗಾತ್ರೆಯರೆ ಕಂಜದಳ ನೇತ್ರೆಯರೆ ಸುಮನರ ವಂದಿತರೆ ಸುಗುಣ ಸಂಪನ್ನೆಯರೆ ಅಘ ಹರೆಯರೇ ಕಮಲನಾಭನ ಅಂಗೋಪಾಂಗ ಸಂಜಾತೆಯರೇ ಅಮರ ಭೂ ಪಾತಾಳ ಲೋಕ ಸಂಚರೆಯರೆ ನಮಿಸಿ ಸ್ನಾನವಗೈವ ನರರ ಪಾವನಗೊಳಿಪ ಅಮಿತ ಪಾವಿತ್ರತರರೇ 1 ಗಂಗೆ ಗೋದಾವರಿ ಯಮುನೆ ಸರಸ್ವತಿ ಸಿಂಧು ಮಂಗಳಾಂಗೆ ಕೃಷ್ಣ ಭೀಮರಥಿ ಪಲ್ಗುಣಿ ಸಂಗಮ ತ್ರೀವೇಣಿ ಸರಯು ಗಂಡಿಕಿ ಸೀತ ತುಂಗಭದ್ರಾ ನಾಮರೇ ಅಂಗ ಮಾಲಾಪಾರಿ ಕಾವೇರಿ ಕಪಿಲೆ ನರ ರಂಗ ಪಾವನ ಗೈವ ಪುಷ್ಕರಗಳಭಿಮಾನಿ ಅಂಗನೆಯರೆÀಲ್ಲರಿಗೆ ಅಭಿವಂದಿಸುವೆ ಅಘವ ಹಿಂಗಿಸುವುದೆಂದು ಮುದದೀ 2 ಬಂದು ಸ್ವಪ್ನದಿ ಮಾಘ ಶುದ್ಧ ನವಮೀ ಭರಣಿ ಸಂಯೋಗದ ಪರ್ವವೆಂದು ಭದ್ರೆಲಿ ಸ್ವಾನ ವಿಂದು ಗೈದೆವು ಎಂದು ಮುಂದೆ ಕುಳ್ಳಿರೆ ನಾನಾ ನಂದದಿಂ ಕಂಡು ನಿಮ್ಮಾ ಸುಂದರಿಯರೇ ನಿಮ್ಮ ಸಂದರ್ಶನದಿ ಫಲವು ಬಂದುದೆನಗೆಂದು ನಾನಂದ ವಚನಕೆ ನಲಿದು ಒಂದು ಅರಿಯದ ಎನಗೆ ತಂದು ಕೊಟ್ಟಿರಿ ಸ್ನಾನ ದಿಂದ ಬಹು ಪುಣ್ಯ ಫಲವಾ 3 ಹರದಿಯರೆ ಕಂಡೆ ನಿಮ್ಮರವಿಂದ ಮುಖ ಶುಭ್ರ ಸರಿತು ದೇವತೇಗಳೇ ಗುರು ಕೃಪೆಯ ಬಲದಿಂದ ಸಿರಿ ನದಿಗಳೇ ಜಗದಿ ಭರದಿಂದ ಪರಿದು ಸಾಗರವ ಕೂಡುವ ತ್ವರದಿ ಪರಿಪರಿಯ ಜಲ ಜಂತು ಸಂಸಾರಿ ಸಂಗೆಯರೆ ನರರು ಬಣ್ಣಿಸಲಳವೆ ಕರುಣಿ ನಿಮ್ಮಯ ಮಹಿಮೆ ಸಿರಿಕಾಂತ ಪ್ರಿಯಸುತೆಯರೇ 4 ಶ್ರೇಷ್ಟನದಿ ಅಭಿಮಾನಿ ಸತಿಯರೇ ಎನ್ನ ಅಘ ಸುಟ್ಟು ನಿರ್ಮಲ ಭಾವ ಕೊಟ್ಟು ಹೃತ್ಪದದಲಿ ವಿಷ್ಣು ಮೂರ್ತಿಯ ಕಾಂಬ ಶ್ರೇಷ್ಟ ಜ್ಞಾನದ ಮಾರ್ಗ ಕೊಟ್ಟು ಸದ್ಭಕ್ತಿ ಭರದೀ ಚಿಟ್ಟನೇ ಚೀರಿ ದಾಸ್ಯದ ಭಾವದಲಿ ಕುಣಿದು ಶ್ರೇಷ್ಟ ಶ್ರೀ ಗೋಪಾಲಕೃಷ್ಣವಿಠ್ಠಲನ ಪದ ಮುಟ್ಟುವೊ ವಿಜ್ಞಾನ ಪ್ರವಹ ರೂಪದಿ ವಲಿದುದಿಟ್ಟಿಯರ ಸಂತೈಸಿರಿ 5
--------------
ಅಂಬಾಬಾಯಿ