ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇವನಾರೆ ಮನಸೂರೆಗೈದೋಡುವಾ ನವನೀತ ಮೆಲುವಾತ ಪರಿದೋಡುವಾ ಪ ಸವಿನೋಟ ರಸದೂಟವನೆ ಬೀರುವ ಸುವಿಲಾಸ ಪರಿಹಾಸಗಳ ತೋರುವ ಅ.ಪ ಓರೆನೋಟವ ತೋರುತ ನಲಿವ ಕ್ಷೀರವ ಕುಡಿವ ಬೆರಳಲಿ ಕರೆವ ಕೊರಳಿನ ಹಾರವ ಎಡಬಲಕೆಳೆವ ಕೊರಳನು ಕೊಂಕಿಸಿ ಪರಿಪರಿ ಕುಣಿವ 1 ನೀರಜನೇತ್ರನು ನೀರದ ಗಾತ್ರನು ನಾರಿಯತನುವನು ಬರಸೆಳೆಯುವನು ಚೋರನು ಭವಭಯಹಾರನು ಧೀರನು ಶ್ರೀರಮೆಯರಸನು ಮಾಂಗಿರಿವರನು 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಎಂಥ ದಯವಂತನೋ | ಮಂತ್ರ ಮುನಿನಾಥನೊ ಸಂತಸದಿ ತನ್ನನು | ಚಿಂತಿಪರಿಗೆ ಸುರಧೇನು ಪ ವರ ಪ್ರಹ್ಲಾದನು | ಮರಳಿ ಬಾಹ್ಲೀಕನು | ಶ್ರೀ ಗುರುವ್ಯಾಸರಾಯನೊ | ಪರಿಮಳಾಚಾರ್ಯನೊ 1 ಇರುವ ತುಂಗಾತಟದಲ್ಲಿ | ಬರುವ ತಾನು ಕರೆದಲ್ಲಿ ಕರಪಿಡಿದು ಪೊರೆವಲ್ಲಿ ಸರಿಗಾಣೆ ಧರೆಯಲ್ಲಿ 2 ದುರಿತ ಕಳೆವ ಶಕ್ತನು ತರಣಿ ನಿಭಗಾತ್ರನು | ಪರಮಸುಚರಿತ್ರನು 3 ಶಿಶುವಿಗವುಗರೆದನು | ವಸುಧಿ ಸುರರ ಪೊರೆವನು ಅಸಮ ಮಹಿಮನೊ | ಸುಶೀಲೇಂದ್ರ ವರದನೊ 4 ಭೂಮಿಯೊಳು ಖ್ಯಾತನು | ಶಾಮಸುಂದರ ಪ್ರೀತನು ಕಾಮಿತಾರ್ಥದಾತನು | ಸ್ವಾಮಿ ನಮಗೆ ಈತನು 5
--------------
ಶಾಮಸುಂದರ ವಿಠಲ
ಬಂದನೇನೆ ಸುಂದರ ಶ್ರೀರಾಮ ಚಂದಿರ ಪ ಸಿರಿವತ್ಸಧಾರನು ಶ್ರೀತಜನೋದ್ಧಾರನು ಮಾರ ಸುಂದರನು ಮಾ ಮನೋಹರನು 1 ಕೋಮಲ ಗಾತ್ರನು ಕಮಲಕಳತ್ರನು ಕಮಲಾಪ್ತ ತೇಜನು ವಿಮಲ ಸತ್ಪಾತ್ರನು 2 ಸಾಸಿರನಾಮನು ಭಾಸುರವದನನು ಈಶ ವಂದಿತನು ಶೇಷವಿಠ್ಠಲನು 3
--------------
ಬಾಗೇಪಲ್ಲಿ ಶೇಷದಾಸರು
ಮತ್ತೆದೊರಕುವುದೇ ಮುಕುತಿ ಪ ಅರಿಯದವನೇ ಕುಮತಿ ಅ.ಪ ಸಾಸಿರನಾಮನು ಸಾಸಿರ ನೇತ್ರನು ಸಾಸಿರ ಗಾತ್ರನು ಸುಂದರನು ದಾಸರ ಪೊರೆಯಲು ನಿಂದವನು 1 ಆದರೂ ಕಾಣದ ಮಹಿಮನವ ಆದರಿಸಿ ಅಪಾರವ ತೋರುವ ಮಹದೇವ2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್