ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆತ್ಮನಿವೇದನೆ ಮತ್ತು ಲೋಕನೀತಿ ಎನಗ್ಯಾಕೆ ಕವಿಯೆಂಬ ಶ್ರೇಷ್ಠನಾಮಾ ಜನರೊಳಗೆ ನಾನೋರ್ವ ಮನಜಾಧಮ ಪ ಸ್ನಾನ ಜಪ ತಪ ಮೌನ ಧ್ಯಾನ ವರಮಂತ್ರಗಳ ಖೂನವಿಲ್ಲದೆ ಜ್ಞಾನ ಹೀನನಾಗಿ ಏನು ಹೇಳಲಿ ದುಷ್ಟ ಮಾನಿನಿಗೆ ಮನಸೋತು ಶ್ವಾನನಂದದಿ ದಿನವ ನಾ ನೂಕಿದವನಯ್ಯ 1 ಹತ್ತೆರಡು ಮತೈದು ಗಾತ್ರದೊಳು ಧರಿಸದಲೆ ಚಿತ್ತ ಚಂಚಲನಾಗಿ ಲೆತ್ತ ಪಗಡಿಗಳಾಡಿ ಕತ್ತೆಯಿಂದದಿ ವ್ಯರ್ಥ ಹೊತ್ತು ಕಳೆದವ ನಾನು 2 ನೇಮಪೂರ್ವಕ ಒಂದು ಯಾಮವಾದರು ಮನದಿ ಶಾಮಸುಂದರ ಧ್ಯಾನ ಮಾಡದೆ ಕಾಮಾರಿ ಷಡ್ವೈರಿ ಸ್ತೋಮಕ್ಕೆ ಭೂಮಿಯೊಳು ಜಡವಾದ ನಾಮದಲಿ ಚರಿಸುವೆನು3
--------------
ಶಾಮಸುಂದರ ವಿಠಲ
ಧನ್ಯನಾಗೆಲೊ ಮುನ್ನ ಹರಿಯ ಕಾ ರುಣ್ಯವನೆ ಪಡೆದು ಮಾನವನೆ ಪ ಬನ್ನ ಬಿಡಿಸುವ ಪನ್ನಗಾರಿ ಧ್ವಜನನ್ನು ಧ್ಯಾನಿಸುತ ಅ.ಪ ಕಣ್ಣಿನಿಂದಲಿ ನೋಡು ಹರಿಯಲಾವಣ್ಯ ಮೂರ್ತಿಯನು ಕರ್ಣದಿಂದಲಿ ಕೇಳು ಹರಿಯ ಪಾವನ್ನ ಕೀರ್ತಿಯನು ಅನ್ಯವಾರ್ತೆಗಳಾಡದೆ ವದನದಿ ಘನ್ನ ಹರಿಯಗಣಗಳನ್ನೇ ಬಣ್ಣಿಸುತ 1 ಹಸ್ತವೆರಡು ಹರಿಮಂದಿರ ಮಾರ್ಜನಕೃತ್ಯ ಮಾಡುತಿರಲಿ ಮತ್ತೆ ಪಾದಗಳು ಚಿತ್ತಜನಯ್ಯನ ಕ್ಷೇತ್ರ ತಿರುಗುತಿರಲಿ ಭೃತ್ಯನಾಗಿ ಬಲು 2 ಇಂತು ಪಡಿಯೊ ಶಿರಿಕಾಂತನಲ್ಲಿ ಏಕಾಂತ ಭಕ್ತಿಯನು ಭ್ರಾಂತಿಯ ಬಿಡು ನೀನು ಪೇಳುವ ಮಹಂತರ ಸೇವಿಸಿ 3 ಸಾರ್ಥವಿದೆ ತಿಳಿ ಪಾರ್ಥಸಖನು ಸರ್ವತ್ರ ಇಹನೆಂದು ಗಾತ್ರದೊಳು ಪ್ರತ್ಯಗಾತ್ಮನಲ್ಲಿ ಸದ್ಭಕ್ತಿಮಾಡು ತಿಳಿದು ಮತ್ರ್ಯ ಜನ್ಮಕಿದು ಸಾರ್ಥಕವೊ ಸುಖತೀರ್ಥರ ಕರುಣಾ ಪಾತ್ರನಾಗಿ ಬಲು 4 ಈ ತೆರದಿ ಸಂಪ್ರಾರ್ಥಿಪರಿಗಿಷ್ಟಾರ್ಥಗಳ ಕೊಡುವಾ ಭೂತಲದಿ ಪ್ರಖ್ಯಾತ ಕಾರ್ಪರ ಕ್ಷೇತ್ರದಲಿ ಮೆರೆವ ಪಾತಕ ಹರ ಶಿರಿನಾರಶಿಂಹನ ಕೃಪಾತಿಶಯದಿ ನಿ ರ್ಭೀತನಾಗಿ ಬಲು 5
--------------
ಕಾರ್ಪರ ನರಹರಿದಾಸರು
ಹನುಮ ಭೀಮಾನಂದ ಮುನಿವರೇಣ್ಯ ತಾಪ ಕಳೆದನುದಿನದಿ ಪಾಲಿಪುದು ಪ ಪ್ರಾಣಪಂಚಕ ಸುಪರ್ವಾಣ ಗುರುವರ ಜಗ ತ್ರಾಣ ತ್ರಯೀಮಯಿ ಪುರಾಣವೇದ್ಯಾ ಮಾಣದೆನ್ನಯ ಹೃದಯ ತಾಣದೊಳಗರಿ ಶಂಖ ಪಾಣಿರೂಪನ ಬಿಡದೆ ಕಾಣಿಸು ಕೃಪಾಸಿಂಧು 1 ಸೂತ್ರನಾಮಕನೆ ತಾಪತ್ರಯಗಳಿಂದ್ಹಗಲು ರಾತ್ರಿಯಲಿ ಬಳುಲುತಿಹ ನಿತ್ರಾಣನ ಗಾತ್ರದೊಳು ನೆಲೆಸಿ ಸರ್ವತ್ರದಲಿ ಸುಖವಿತ್ತು ಶತ್ರುತಾಪಕನಾಗು ಸ್ತೋತ್ರವನೆ ಕೈಕೊಂಡು 2 ಅಸುನಾಥ ಶರಣಂಗೆ ವಶವಾಗು ಅನುದಿನದಿ ಅಸುರಭಂಜನ ಜ್ಞಾನ ಸುಸುಖ್ಮಾತನೇ ಬಿಸರುಹಾಂಬಕ ಜಗನ್ನಾಥವಿಠಲನ ಕೈ ವಶಮಾಡಿ ಕೊಡುತಿಪ್ಪ ಶ್ವಸನಾವತಾರಿ3
--------------
ಜಗನ್ನಾಥದಾಸರು