ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಂದಮತಿ ನಾನಯ್ಯ ಮಂಗಳಾಂಗಾ ಒಂದಾದರೂ ಗತಿ ಧರ್ಮ ಚಿಂತಿಸಲಿಲ್ಲಾ ಪ ಜಪತಪಗಳರಿಯೆ ಉಪವಾಸಗಳರಿಯೆ ಕೃಪೆ ಮಾಡಲರಿಯೇ ಪರಿಜನಗಳಲ್ಲಿ ಕುಪಿತವನು ಬಿಡಲರಿಯೆ ಅಪರಿಮಿತವಾಗಿದ್ದ ಅಪರಾಧಗಳ ಮಾಡಿ ತಪಿಸುವೆನು ಭವದೊಳಗೆ 1 ಯಾತ್ರೆ ಮಾಡಲರಿಯೆ ತೀರ್ಥ ಮೀಯಲರಿಯೆ ಗಾತ್ರದಂಡಣಿಯ ಮಾಡಲರಿಯೆ ಗಾತ್ರ ಲಘು ನೋಡಿ ಸ ತ್ಪಾತ್ರರನು ಭಜಿಸದೆ ವ್ಯರ್ಥ ಕಾಲವ ಕಳೆವ2 ಅನ್ನದಾನವರಿಯೆ ಮನ್ನಣೆ ಮಾಡಲರಿಯೆ ಚನ್ನಾಗಿ ಬಂಧುಗಳು ಪೊರಿಯಲರಿಯೆ ಎನ್ನ ಮನದೊಡಿಯ ಶ್ರೀ ವಿಜಯವಿಠ್ಠಲರೇಯಾ ನಿನ್ನ ಭಕುತಿ ಒಮ್ಮೆ ಪಡಿಯಲರಿಯೆ 3
--------------
ವಿಜಯದಾಸ