ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಲ್ಪದೇಹವು ಹುಟ್ಟಿ ಮಾಯ ಕಲ್ಪನೆಗೊಳಗಾಗಿ ಸ್ವಲ್ಪವನ (ಸ್ವಲ್ಪವು) ಶ್ರೀಹರಿ ನಾಮಸ್ಮರಿಸಿ ಸದ್ಗತಿ ಕಾಣುವ ಸಾಧನೆ ಇಲ್ಲದ್ಹೋಯಿತು ಪ ಜನುಮ ಜನುಮದಲಿ ಸಂಸಾರ ಜಲಧಿಯೊಳಗೆ ಮುಳುಗಿ ಘನ ಪುರುಷನ ಮಹಿಮೆ ಕಾಣದೆ ಗಾಢಾಂಧ ಕಾರದಲಿ ದಿನಗಳ ಕಳೆದು ದೇವರ ಭಜಿಸದೆ ಜನುಮಗಳಳಿದೂ ಚರಿಸುವದಾಯಿತು 1 ಭ್ರಾಂತಿಯ ಘನವಾಗಿ ಪ್ರಪಂಚ ಬದ್ಧನಾಗಿ ಕಾಂತೇರ ಮೋಹಕ್ಕೆ ಸಿಲುಕಿ ಕಾಲವುಕಳೆದಿನ್ನು ಚಿಂತನೆ ಮಾಡದೆ ಮುಕ್ತಿ ಸೇರದಂತಾಯಿತು 2 ಪನ್ನಗಶಯನನ್ನಾ ಪರಿಪರಿ ಭಕುತಿಲಿ ಮನದಿಂದ ವರ್ಣಿಸಿ ಜಿವ್ಹದಲಿ ಹರಿಪದವನ್ನೇ ಕಾಣದಲೆ ಇನ್ನು ಶ್ರೀ ವ್ಯರ್ಥವು ಹೋಯಿತು 3
--------------
ಹೆನ್ನೆರಂಗದಾಸರು
ಯಾಕೆ ಸುಮ್ಮನೆ ಇದ್ದೆಪ್ಪ ಬಂದು ಜೋಕೆ ಮಾಡು ಎನ್ನ್ಹಡೆದಪ್ಪ ಪ ಸಾಕಾರವಿಲ್ಲದ ಭವಕಪ್ಪ ಎನ್ನ ನೂಕಬಾರದಿತ್ತೆನ್ನಪ್ಪ ಅ.ಪ ಕೇಡಿನುಗಮ ಪ್ರಪಂಚಪ್ಪ ಇದು ಮಾಡಿಟ್ಟ ಮಹ ಕಾಡಡವ್ಯಪ್ಪ ಮೋಡಿ ಇಂದ್ರಜಾಲ ಛಾಯಪ್ಪ ತುಂಬಿ ಮಾಡಿದ್ಯೋ ಬಲು ಮಂಗಮಲಕಪ್ಪ ಗಾಢಾಂಧಾಕಾರಮಯ ಕಾಳಪ್ಪ ಎನ್ನೀ ಕೇಡಿನಿಂದುಳಿಸು ಸದಾನಂದಪ್ಪ 1 ತುಂಬಿ ಪ್ರಪಂಚವೆಂಬ ಬೈಲಪ್ಪ ಜಡ ಬೊಂಬೆ ಕುಣಿಸುವಿ ಬಲು ಚಂದಪ್ಪ ನಂಬಿದವರ ಅಂತರಂಗಪ್ಪ ನಿನ್ನ ಕಾಂಬುವರರಾರು ಮಹಿಮೆ ಮೇಲಪ್ಪ ನಂಬಿದೆ ನಿನ್ನ ಪಾದಪದುಮಪ್ಪ ಎನ ಗಿಂಬುಪಾಲಿಸು ನಿಜ ಧರ್ಮಪ್ಪ 2 ಧಾತ್ರಿ ಈರೇಳಕ್ಕೆ ರಾಜಪ್ಪ ಜಗ ಸೂತ್ರಧಾರ ನೀನೆ ಸತ್ಯಪ್ಪ ಭ್ರಾತೃ ಬಂಧು ನೀನೆ ಶರಣಪ್ಪ ಪಿತ ಮಾತೃ ನೀನೆ ಎನ್ನ ಪಾಲಪ್ಪ ಪಾತ್ರನೆನಿಸು ದಾಸಸಂಗಪ್ಪ ನಿನ್ನ ಖಾತ್ರಿ ಕೊಡೆನಗೆ ಶ್ರೀರಾಮಪ್ಪ 3
--------------
ರಾಮದಾಸರು
ಇನ್ನೂ ದಯ ಬಾರದೇ-ದಾಸನ ಮೇಲೆ-ಇನ್ನೂ ದಯ ಬಾರದೇ ಪಮುನ್ನ ಮಾಡಿದ ದುಷ್ಕರ್ಮಗಳೆಲ್ಲವಮನ್ನಿಸಿ ಕಳೆವುದು ಇಂದಿರೆಯ ರಮಣಾ ಅ.ಪನಾನಾ ಜನ್ಮಗಳಲಿ ನಾನಾ ಜಾತಿಗಳಲಿನಾನಾ ಯೋನಿಗಳಲಿ ಜನಸಿ ಜನಿಸಿ ದೇವಾ ||ನಾನು ನನ್ನದು ಎಂದು ನರಕದೊಳಗೆ ಬಿದ್ದುನೀನೆ ಗತಿಯೆಂದು ಸ್ಮರಣೆ ಮಾಡಿದ ಮೇಲೆ 1ಕಾಮಾದಿ ಷಡುವರ್ಗ ಗಾಢಾಂಧಕಾರದಿಪಾಮರನಾಗಿ ಇದ್ದಂಥ ಪಾತಕನ ||ರಮಾಮನೋಹರಹರಿನೀನೇ ಗತಿಯೆಂದುನಾಮಾಮೃತವನು ಪಾನ ಮಾಡಿದ ಮೇಲೆ 2ಏನ ಓದಿದರೇನು ಏನ ಕೇಳಿದರೇನುಈ ನಾಮ ಸ್ಮರಣೆಗೆ ಸರಿಬಾರದು ||ಙ್ಞÕನಹೀನನ ಮೇಲೆ ದಯವಿಟ್ಟು ಪಾಲಿಸುದೀನ ದಯಾಕರಪುರಂದರವಿಠಲನೆ3
--------------
ಪುರಂದರದಾಸರು
ನರರ ವಂಚಿಸಿದನೆಂದೆಂಬ | ಪೌರುಷವೇಕೋ |ಹರಿಯ ವಂಚಿಸಲಸಾಧ್ಯವು | ನಿನಗೆ ಮರುಳೆ |ದುರುಳರೊಡನಾಟದಲಿ ದುಷ್ಟ ಕಾರ್ಯವಮಾಡು|ನರಕದಲಿ ಮುಳುಗಿಸುವ ಯಮನುನೋಡುಪಮೂಢ ಮತಿ ಕೇಳ್ ನರಗೆ ನೋಡಲೆರಡೇ ಕಣ್ಣು |ಗಾಢ ನಿದ್ರೆಯೊಳದನು ಮುಚ್ಚಿ ಮಲಗುವನೂ |ಗಾಢಾಂಧಕಾರದಲಿ | ಸೊಡರ ಹೊರತು ಕಾಣದದು |ರೂಢಿಯೊಳು ಸಹಸ್ರಾಕ್ಷ | ನನು ಮೋಸಗೊಳಿಸುವಾ |ಪಾಡೇನ ಬಲ್ಲೆ ಮರುಳೇ1ಎರಡೇಳು ಜಗವನ್ನು ಧರಿಸಿರುವ ಹೃದಯದಲಿ |ಗರುಡ ವಾಹನನಾಗಿ ಧರೆಯೊಳ್ ಚರಿಸುವನು |ತರಣಿಶಶಿನೇತ್ರನೆಂದೆನಿಸಿ ಸರ್ವವನೋಳ್ಪ |ಪರಮಾತ್ಮನಾಗಿ ಪ್ರಾಣಿಗಳ | ಹೃದಯದಲಿ |ಹರಿಯು ನೆಲೆಸಿರ್ಪ ಕೇಳು2ಇಂದೋರ್ವನನು ಮೋಸಗೊಳಿಸಿದಾ ದೋಷವಿದು |ಎಂದೆಂದಿಗೂ ನಿನ್ನ ಬೆನ್ನ ಬಿಡದೂ |ನಿಂದಿಗನು ನರಜನಕೆ ಗೋವಿಂದನಿಗೆ ದ್ರೋಹೀ |ಎಂದೆನಿಸಿ ಯಮನ ಹಂಗಿಗನಾಗಬೇಡ ನಾಳೆ3<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>
--------------
ಗೋವಿಂದದಾಸ