ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೋಡುವುದೆ ಕಣ್ಣು, ಕೇಳುವುದೆ ಕಿವಿ |ಪಾಡುವುದೇವದನಪಗಾಡಿಕಾರಶ್ರೀ ವೇಣುಗೋಪಾಲನ |ಕೂಡಿಕೊಂಡಾಡುವ ಸುಖದ ಸೊಬಗನು ಅ.ಪಎಳೆದುಳಸಿಯ ವನಮಾಲೆಯಿಂದೊಪ್ಪುವ |ಎಳೆಯ ಗೋವಳರೊಡನಾಡುವ |ತಳಿತ ತರುವಿನ ನೆಳಲಲ್ಲಿ ನಲಿವನ |ನಳಿನನಾಭನ ಮುದ್ದು ನಗೆಯ ಸೊಬಗನು 1ಅರಸಂಚೆಯೋಲು ಕುಣಿವ ನವಿಲಂತೆ ನಲಿಯುವ |ಮರಿಗೋಗಿಲೆಯಂತೆ ಕೂಗುವನ ||ಎರಳೆಯಂತೆ ಜಿಗಿಜಿಗಿದಾಡುವತುಂಬಿ|ಶಿರವ ತಗ್ಗಿಸುವಂತೆ ಝೇಂಕರಿಸುವನ 2ಮೊಲ್ಲೆಮಲ್ಲಿಗೆ ಜಾಜಿ ಪೂಮಾಲೆಗಳ ಧರಿಸಿ |ಚೆಲ್ವೆಯರಿಗೆ ಮುಡಿಸುವನ ||ಜಲಕೇಳಿ ವನಕೇಳಿ ಮೊದಲಾದಾಟಗಳಿಂದ |ಚೆಲ್ಲೆಗಂಗಳ ಮುದ್ದು ಘುಲ್ಲನಯನನ 3ಪೊಂಗೊಳಲೂದುತ ಮೃಗಖಗ ಜಾತಿಯ |ಸಂಗಡಿಸುತಲಿಪ್ಪನ ||ಅಂಗವ ಮರೆತು ನೂರಂಗನೆಯರಲಿ ಬೆಳು-|ದಿಂಗಳೊಳಗೆ ಕುಣಿದಾಡುವ ದೇವನ 4ಮುದುಕಿ ಕುಬ್ಜೆಯ ಡೊಂಕ ತಿದ್ದಿ ರೂಪಿಯ ಮಾಡಿ |ಸೆರಗಪಿಡಿಸಿ ಕೊಂಬನ ||ಕರುಣಾಕರ ಶ್ರೀ ಪುರಂದರವಿಠಲ |ಶರಣಾಗತ ರಕ್ಷಕ ರಮೆಯರಸನ 5
--------------
ಪುರಂದರದಾಸರು
ಸದ್ದು ಮಾಡಲು ಬೇಡವೊ _ ನಿನ್ನ ಕಾಲಿಗೆ |ಬಿದ್ದು ನಾ ಬೇಡಿಕೊಂಬೆ ಪನಿದ್ದೆಗೆಯ್ಯವರೆಲ್ಲ ಎದ್ದರೆ ನೀನು ಬಂ-|ದಿದ್ದದ್ದು ಕಂಡರೇನೆಂಬುವರೊ ರಂಗ ಅ.ಪಬಳೆ ಘಲ್ಲುಕೆನ್ನದೇನೊ-ಕೈಯ ಪಿಡಿದು |ಎಳೆಯದಿರೊ ಸುಮ್ಮನೆ ||ಮೊಲೆಗಳ ಮೇಲಿನ ಸೆರಗನೆಳೆಯಲು ಕೊ-|ರಳ ಪದಕಂಗಳು ಧ್ವನಿಗೆಯ್ಯವುವೊ ರಂಗ 1ನಿರುಗೆಯ ಪಿಡಿಯದಿರೊ - ಕಾಂಚಿಯದಾಮ|ಕಿರುಗಂಟೆ ಧ್ವನಿಗೆಯ್ಯದೆ? ||ಕಿರುದುಟಿಗಳ ನೀನು ಸವಿದು ಚಪ್ಪರಿಸಲು |ತರವಲ್ಲಗಂಡಮತ್ಸರವ ತಾಳುವನಲ್ಲ2ನಾಡ ಮಾತುಗಳೇತಕೊ - ಸಂಗೀತವ |ಪಾಡುವ ಸಮಯವೇನೊ ||ಗಾಡಿಕಾರಶ್ರೀ ಪುರಂದರವಿಠಲನೆ |ಪಾಡು ಪಂಥಗಳೆ ಒಡಗೂಡುವ ಸಮಯದಿ 3
--------------
ಪುರಂದರದಾಸರು