ಒಟ್ಟು 5 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗುರುಸ್ತುತಿ ದಾಸರ ಭಜಿಸುತ ಕ್ಲೇಶವ ಕಳೆಯಿರೊ ವಾಸುದೇವನ ಭಕ್ತರಾದ ಶ್ರೀಪುರಂದರ ಪ ಮೀಸಲ ಮನದಲಿ ಕೇಶವನಡಿಗಳ ಆಸೆಲಿ ಪೂಜಿಪ ದಾಸರೊಳಗೆ ಶ್ರೇಷ್ಠ ಅ.ಪ ಪುರಂದರ ಗಡದೊಳು ಹಿರಿಯನೆಂದೆನಿಸಿದ ವರದಪ್ಪನಿಗೆ ವರಕÀುವರ ನೆಂದೆನಿಸಿದೀ ಧರೆಯೊಳು ತನಗ್ಯಾರು ಸರಿಯಿಲ್ಲದಂತೆ ಮೆರೆಯೆ ಸಿರಿಯರಸನು ಶೀಘ್ರದಲಿ ತಾನರಿಯುತ 1 ಬಂದನು ಮಗನಿಗೆ ಮುಂಜಿಯೆಂದೆನುತಲಿ ಚಂದದಿಂದಲಿ ಬೇಡಲು ಧಣಿಯ ಬಂದೆಯಾತಕೆ ನಮ್ಮ ಚಂದದ ಬೀದಿಲಿ ಹಿಂದಕೆ ತೆರಳೆನೆ ಬಂದನು ಬಾರಿ ಬಾರಿ 2 ಹರಿಯೆಂದು ತಿಳಿಯದೆ ಜರಿಯುತ ನುಡಿಯಲು ಮರಳಿ ಮರಳಿ ಯಾಚಿಸೆ ಬಿಡದೆ ತೆರಳನು ಈ ವೃದ್ಧ ತೆರಳಿಪೆನೆನುತಲಿ ಸರಸರ ತೆಗೆಯುತ ಸುರಿದನು ನಾಣ್ಯವ 3 ನೋಡುತ ಶ್ರೀಹರಿ ಗಾಡದಿ ಕೈನೀಡೆ ನೀಡಿದ ಸವೆದ ರೊಕ್ಕವ ನೋಡೀ ಗಾಡನೆ ಬಂದು ನಾಯಕನ ಸತಿಯಳನು ಬೇಡಿದ ಪುಣ್ಯವು ಬಾಹೋದೆನುತಲಿ 4 ಏನು ನೀಡಲಿ ಎನಗೇನಿಹುದೆನ್ನಲು ಮಾನಿನಿ ಮೂಗುತಿ ನೀಡೆಂದೆನಲು ಮಾನಿನಿ ಮಾಡಲು ಜ್ಞಾನಿಗಳರಸನು ಗಾಡ ಹಿಂತಿರುಗುತ 5 ಗಾಡನೆ ಮೂಗುತಿ ನೀಡುತ ದ್ರವ್ಯವ ಬೇಡಲು ಬೇಗದಿ ನೀಡುತ ನುಡಿದನು ನೋಡುತ ವಡವೆಯ ನೀಡಿದ ಭರಣಿಲಿ ಸತಿ ಮುಖವಾ 6 ಮೂಗುತಿ ಎಲ್ಲೆನೆ ಬೇಗದಿ ನಡುಗುತ ನಾಗವೇಣಿಯು ಪ್ರಾರ್ಥಿಸಿ ಹರಿಯ ಆಗ ಕುಡಿವೆ ವಿಷವೆನ್ನುತ ಕರದಲಿ ನಾಗವಿಷದ ಬಟ್ಲಲಿ ಇರಲು 7 ತೋರಿದಳಾಗಲೆ ತನ್ನಯ ರಮಣಗೆ ತೋರದಿರಲು ಮುಂದಿನ ಕಾರ್ಯ ಭಾರಿ ಆಲೋಚನೆಯ ಮಾಡುತ ಮನದಲಿ ಸಾರಿದ ತನ್ನ ವ್ಯಾಪಾರದ ಸ್ಥಳಕೆ 8 ತೆರೆದು ನೋಡಲು ಆ ವಡವೆಯ ಕಾಣದೆ ಮಿಗೆ ಚಿಂತೆಯು ತಾಳುತ ಮನದಿ ನಗಧರನ ಬಹು ಬಗೆಯಲಿ ಪೊಗಳುತೆ ತೆಗೆದ ಅಸ್ಥಿರ ರಾಜ್ಯದಿ ಮನವ 9 ಕಳವಳ ಪಡುತಲಿ ಆ ಲಲನೆಯ ಸಹಿತದಿ ತನುಮನ ಧನ ಹರಿಗರ್ಪಿಸುತಾ ಕ್ಷಣ ಬಿಡದಲೆ ಹರಿ ಚರಣವ ಸ್ಮರಿಸುತ ಕಮಲನಾಭ ವಿಠ್ಠಲನೆನ್ನುವ ಹರಿ 10
--------------
ನಿಡಗುರುಕಿ ಜೀವೂಬಾಯಿ
ಬ್ಯಾಡೋ ಒಬ್ಬರ ಮನೆಗೆ ನೀ ಪೋಗ ಬ್ಯಾಡೋ ಒಬ್ಬರ ಮನೆಗೆ ಪ ಗಾಡಿಕಾರನೆ ಕೃಷ್ಣ ಚಾಡಿ ಮಾತನು ಕೇಳಿ ಗಾಡನೆ ಕಿವಿಮುಚ್ಚಿ ಓಡಿಸಿದೆ ಗೋಪಿಯರ ಅ.ಪ ಕಟ್ಟಿದ್ದ ತುರುಕರುಗಳ ಬಿಚ್ಚಿ ಪೋಗುವದಿದು ನಿಶ್ಚಯವೆಂದು ಪೇಳ್ವರೊ ಸ್ವಚ್ಛ ಕರುಗಳ ಕಣ್ಣುಮುಚ್ಚಿ ಪಾಲೆಲ್ಲ ಕುಡಿದ ಅಚ್ಯುತನಿಗೆ ಬುದ್ಧಿ ಮತ್ತೆ ನೀ ಪೇಳೆಂಬರು 1 ಮಕ್ಕಳೆಲ್ಲರು ಕಯ್ಯೊಳು ಬಟ್ಲಲಿ ಅವ- ಲಕ್ಕಿಯ ತಿನ್ನುತಿರಲು ಘಕ್ಕನೆ ಬಡಿಯೆ ದಿಕ್ಕು ದಿಕ್ಕಿಗೆ ಚಲ್ಲೆ ಬಿಕ್ಕಿ ಬಿಕ್ಕಿ ಅಳುತಾರೆ ಗೋಪಕ್ಕ ನೀನೋಡೆಂಬರು 2 ವಾಸುದೇವಗೆ ಹರಕೆಯ ಮಾಡಿ ನವ- ನೀತ ಮೀಸಲು ಮಾಡಿರೆ ಮೀಸಲಳಿದು ಕೋತಿ ಮಾರ್ಜಾಲಗಳಿಗುಣಿಸಿ ನೀತಿ ಪೇಳುವ ಶ್ರೀನಾಥ ನೋಡೆಂಬರು 3 ಗೊಲ್ಲ ಬಾಲಕಿಯರೆಲ್ಲ ಪಾಲ್ಮೊಸರು ಮಾರೆ ಮೆಲ್ಲನೆ ಪೋಗುತಿರಲು ಗುಲ್ಲು ಮಾಡದೆ ಕವಣೆ ಕಲ್ಲಿಂದ ಕುಂಭ ಒಡೆಯೆ ಚಲ್ಲಿ ಪಾಲ್ಮೊಸರು ಸೂರೆ ನಲ್ಲೆ ನೀ ನೋಡೆಂಬರು4 ಮತ್ತೆ ಕೇಳಮ್ಮ ಯಶೋದೆ ನಾವೆಲ್ಲ ಆಣಿ ಮುತ್ತು ಪೋಣಿಸುತಿರಲು ಸುತ್ತ ಮುತ್ತಲು ನೋಡಿ ಮುತ್ತು ಸೂರೆ ಮಾಡಿದ ಕರ್ತೃ ಶ್ರೀ ಕಮಲನಾಭ ವಿಠ್ಠಲನ ನೋಡೆಂಬರು5
--------------
ನಿಡಗುರುಕಿ ಜೀವೂಬಾಯಿ
ಯಾಕೆ ನಿರ್ದಯ ಮಾಡಿದೆ ರಂಗಯ್ಯ ನೀನ್ಯಾಕೆ ನಿರ್ದಯ ಮಾಡಿದೆ ಪ ವ್ಯಾಕುಲ ಪಡಲಾರೆ ನಿಮ್ಮ ಲೋಕವ ಸೇರಿಸು ಅ.ಪ ದುಷ್ಟರ ಮಧ್ಯದಲ್ಲಿ ನಾನಿರಲಾರೆ ಸೃಷ್ಟಿಗೀಶ್ವರನೆ ಕೇಳು ಮುಟ್ಟಿ ಭಜಸಿ ನಿಮ್ಮ ಪಾದಪದ್ಮದ ಭಕ್ತಿಯಿಟ್ಟೇನೆಂದರೆ ದುಷ್ಟ ಇಂದ್ರಿಯ ಬಿಡದೆನ್ನ 1 ಪಂಚೇಂದ್ರಿಯಗಳೆನ್ನ ಬಹುಬೇಗ ವಂಚನೆ ಮಾಡುತಿದೆ ಪಂಚಬಾಣನ ಪಿತ ಪರಮಪುರುಷ ರಂಗ ಅ ಕಿಂಚನಾದೆ ನಿನ್ನಂಘ್ರಿಯ ಸೇರಿಸು 2 ಸಂಸಾರವೆಂಬ ಸರ್ಪ ಕಚ್ಚಿ ವಿಷ ಕ್ಷಣದಲ್ಲಿ ತಲೆಗೇರಿತು ಪರಮ ಹಂಸರ ಸಂಗದೊಳಗೆಯಿರಿಸಿ ಎನಗೆ ಭರದಿಂದೇರಿದ ವಿಷ ತಿರುಗೆಸೋ ಶ್ರೀಹರಿ 3 ಸರ್ಪ ತುಂಬಿದ ಕೂಪದಿ ಬಿದ್ದಿಹೆನು ಎನ್ನಪ್ಪ ರಕ್ಷಿಸೊ ಬೇಗದಿ ಸರ್ಪಶಯನ ಶ್ರೀಅಪ್ರಮೇಯ ರಂಗ ಇನ್ನು ಕ್ಷಿಪ್ರದಿಂ ಮುಕ್ತಿಯ ಒಲಿದು ಪಾಲಿಸು ರಂಗ 4 ಅಮ್ಬುಜನಾಭನೆ ನಿಮ್ಮ ಪಾದದಧ್ಯಾನ ಒಂದು ನಿಮಿಷವಾದರು ಮಾಡಲೀಸದು 5 ಹಿಂದಿನ ಕರ್ಮಂಗಳು ಇಂದಿರೇಶ ನಿಂದಕರ ವಶವಾಯಿತು ಇಂದು ಧರ್ಮದಲಿರ್ದೆ ಬಂಧುಗಳ ವಶವಾಯ್ತು ಇನ್ನು ಬಂಧನವೇನಯ್ಯ ಮುಕ್ತ್ಯಾನಂದ ತೋರುವುದಕ್ಕೆ 6 ಎಂದಿಗಾದರೂ ಮುಕ್ತಿಯ ಕೊಡುವೆಯೆಂದಾನಂದ ಇಂದು ಈ ಸಂಸಾರ ಬಂಧನದೊಳಗೆ ನಾ ಒಂದು ನಿಮಿಷ ಜೀವಿಸಲಾರೆನು ರಂಗ 7 ಅಂದು ದ್ರೌಪದಿ ಧ್ರುವÀ ಗಜೇಂದ್ರನ ರಕ್ಷಿಸಲಿಲ್ಲವೆ ಬಂದು ಅಂಬರೀಷ ಅಜಾಮಿಳರ ಪ್ರಹ್ಲಾದನ ಕಂಬದಿಂದಲೆ ಬಂದು ಕಾಯ್ದ ಗೋವಿಂದ 8 ಭಕ್ತವತ್ಸಲನೆಂತೆಂಬೊ ಬಿರುದು ಈಗ ವ್ಯರ್ಥವಾಯಿತೆ ಶ್ರೀರಂಗ ಉತ್ತಮ ಗುರುಗಳು ಶ್ರೇಯೋನಿಧಿಗಳ ವಾಕ್ಯ ಸತ್ಯವ ಮಾಡಿ ಮುಕ್ತ್ಯಾನಂದ ಪಾಲಿಸು 9 ರಂಗನಾಥ ನೀ ಕೈ ಬಿಟ್ಟರೆ ಎನ್ನ ಲೋಕಮಾತೆ ಬಿಡುವಳೆ ಬೇಗ ಮುಕ್ತಿಪಥವ ಪಾಲಿಸುವಳು 10 ಮಾಡಬಾರದ ಮಾಡಿದೆ ಈ ಸಂಸಾರದೆ ನೋಡಬಾರದ ನೋಡಿದೆ ಆಡಬಾರದ ವಾರ್ತೆಗಳನಾಡಿದೆ ಇನ್ನು ಗಾಡನೆ ಮುಕ್ತಿಯ ನೀಡೊ ವೆಂಕಟರಮಣ 11
--------------
ಯದುಗಿರಿಯಮ್ಮ
ಶ್ರೀ ವಾದಿರಾಜರು ವಾದಿರಾಜಗುರು ದಯಮಾಡೊ ಎನ್ನಾ, ಪಾದಾನತನನ್ನಾವಾದಿಸಂಘವನು ಭೇದಿಸಿದ್ಯೊ ಘನ್ನಾ ಹಯವದನನ್ನಾಮೋದದಿಂದ ಹೃದಿ ನೋಡಿದೆಯೊ ರನ್ನಾಸಾಧುಸಂಗವನು ಪರಿಪಾಲಿಸಿನ್ನಾ ಋಜುಗಣ ಮೋಹನ್ನ 1 ಕೃಷ್ಣದರ್ಶನಕೆ ತುಷ್ಟಿಸಿ ನೀ ಬಂದು ಮಾರ್ಗದಲಿ ನಿಂದುದುಷ್ಟ ದೈತ್ಯನುವಾದಕ ಬರಲಿಂದುಇಟ್ಟಿಯಾ ಆನಂದ ಭಟ್ಟರಲ್ಲಿ ಭಾರರಸ ಕರುಣಾಪೂರ 2 ಶ್ರೇಷ್ಠ ನಿನ್ನಯ ದೃಷ್ಟಿಯ ರಸದಿಂದಾ ವಾದಿಯ ಕರದಿಂದಾಕೊಟ್ಟ ಪತ್ರವನು ತಿರುಗಿಸಲಾನಂದಾ ಭಟ್ಟರಿಗೆ ನೀಕೊಟ್ಟಿಯೊ ಪರಿರಂಭಾ ಮಾಡದಲೆ ವಿಲಂಬಾ 3 ನೀಡಿದ ಪತ್ರದ ನೋಡುತ ಬಹು ಚರಿತಾ ಆನಂದವಬಿಡುತಾ ಬೇಡಿರಿ ವರಗಳ ನೀಡುವೆ ನಾನೆನುತಾನೀಡಿದ್ಯೊ ಮನ ಸಮಗಾಡನೆ ಸುತಗೀತಾ ನಿಮಗಾಗಲೆನುತಾ 4 ತಂದೆ ನಿನ್ನ ದಯದಿಂದಲಿ ವಂಶಾ ಬೆಳೆದಿತೊ ಸುಯಶಾಇಂದು ನೋಡೊ ಹತಬಂಧನ ಭವಪಾಶಾಕಂದ ನಾನು ನಿನಗಿ ಇಂದಿರೇಶ ದಾಸಾ ಋಜುಗಣದೊಳಗೀಶಾ 5
--------------
ಇಂದಿರೇಶರು