ಒಟ್ಟು 3 ಕಡೆಗಳಲ್ಲಿ , 1 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಲೆ ಮನಾ ವ್ಯರ್ಥಗಳೆವರೇ ಜನುಮವನು | ನೆಲಿಯ ನಿನ್ನರುವದಾ ಹೊಲಬು ಮರೆದು ಪ ಇಳಿಯೊಳಗ ನರದೇಹದಲಿ ಜನಿಸಿ ಕೊಡುವದು | ಸುಲಭವಲ್ಲವೊ ಹೋದ ಬಳಿಕ ನಿನಗದು ಮುಂದ ಅ.ಪ ಮೇದಿನಿಯೊಳಗ ಮಿಗಿಲಾದ ಜನ್ಮದಿ ಬಂದು| ಐದಿದಾವರ್ಣ ಕರ್ಮಾಧರಿಸಿ ಮಾಡುತಲಿ | ಗೈದು ನಿತ್ಯಾನಿತ್ಯ ವೈದಿಕ ವಿಚಾರವನು | ಆದಿ ಪುರುಷನ ಕಾಂಬ ಹಾದಿ ಕೂಡಿ | ಖೇದವನು ಕುಡುವ ವಿವಾದ ಗುಣವನೆ ನೀಗಿ | ಮೋದದಲಿ ಶರಣ್ಹೊಕ್ಕು ಸಾಧು ಜನರನು ಸರಿಸಿ | ವೇದಾಂತ ಬ್ರಹ್ಮ ಸೂತ್ರಾದಿ ವಾಕ್ಯಾರ್ಥವನು 1 ಬೋಧೆಯಲಿ ಪಡೆದು ಜ್ಞಾನೋದಯ ಕಾಣದೆ ಭವ ಶರಧಿಯನು ಗೆಲಲಾಗಿ | ಶರಣ ಜನರಿಗೆ ತೆಪ್ಪ ಪರಿಯಂದಾತಾಗಿಹ | ಹರಿನಾಮವ ನೆನೆದು ಹರಿಧ್ಯಾನಗೈವುತಲಿ | ಹರುಷದಲಿ ಪದಿನಾರು ತೆರ ಪೂಜಿಸಿ | ಪರಮ ಸದ್ಭಾವದಲಿ ಗುರುಡಿಂಗರ ಮೇಳದಲಿ | ಭರದಿ ತಾಳದಂಡಿಗೆಯ ಕರದೊಳಗ ತಾ ಪಿಡಿದು | ಶರೀರ ಭಾವನೆ ಮರೆದು ಭರಿತ ಪ್ರೇಮಿತನಾಗಿ | ಇರಳು ಹಗಲು ಪಾಡುತಲಿ ಹರಿಭಕ್ತನಾಗದೇ 2 ವನಧಿಯೊಳು ಥೆರೆಸಂಗ ಧನುಮತದಿದೋರ್ವ | ಗುಳ್ಳಿಯ ಪರಿಸೇವೆಯೀತನು ವೆಂದು-ದರಿಯು | ಆನದೊಳಗ ಉತ್ಕ್ರಷ್ಟ ತನದಿ ಮೆರೆಸ್ಯಾಡುತಿಹ | ಕನಕದಧಿದೇವಿ ಕಿವಿಯನು ಬೀಸುವಾಗ | ಅಣುಗ ಕರಿಯಂತೆ ಅರಕ್ಷಣದವಳು ಯಂದು ಅತಿ | ಹೆಣಗುತಿಹ ಸಾಯಾಸವನೆ ತ್ಯಜಿಸಿ ತಾ ದೊರಕಿ | ಧನಿತದರಿಂತುಷ್ಟವನು ಕರಿಸಿ ದೃಢದಿಂದ | ಘನ ನಂಬು ಗುರು ಮಹಿಪತಿ ಚರಣ ಬಿಡದಂತೆ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನೋಡೊ ನೋಡೋ ನಿನ್ನೊಳು ನಿಜಾ ಪ ಮೂಢತನವ ಬಿಟ್ಟು ಕೂಡಿ ಭಾವ ಭಕ್ತಿಯಾ | ಪಾಡಿ ಕೊಂಡಾಡಿ ಸೂರ್ಯಾಡೆಲೋ ಹರಿನಾಮಾ ಅ.ಪ ನಾನು ನನ್ನದು ಯಂದು ಹೀನ ವೃತ್ತಿಗೆ ಬಿದ್ದು | ನಾನಾ ಬವಣೆಯಲ್ಲಿ ತೊಳಲುತ ತೊಳಲುತ | ಗಳೆವರೇ ದಿನವನು 1 ಸನ್ನುತ ಗುರುಪಾದ ಮನ್ನಿಸಿ ಪಡೆಯಲೋ ಬೋಧಾ | ಬನ್ನ ಬಡುವದೇನು ಕಣ್ಣದೆರೆನ್ನಾರೆ ತನ್ನತಾ ಮರೆವರೆ 2 ಗುರುಮಹಿಪತಿ ಸ್ವಾಮಿ ಸುರಮುನಿಜನ ಪ್ರೇಮಿ | ಮೊರೆ ಹೊಕ್ಕವರ ಕೈಯ್ಯಾ ಜರಿಯೂತಾ ಮರಿಯಾ | ನೀ ನರಿಯದೆ ಕೆಡಬ್ಯಾಡಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಹರಿಯಾ ಪಾದಕ ಶರಣೆನ್ನಿ | ಸ್ಮರಣೆಗೆ ಹರಿಯನು ಕರೆತನ್ನಿ ಪ ಅವನ ನಾಮವನೆನಿಯಲು ಭಕುತಿಲಿ | ಭವಭಯ ಮೂಲದಿ ನೀಗುವದು | ಆವಾಗ ಕಂಗಳ ಸಿರಿಸುಖ ದೋರುತ | ಜೀವನ ಗತಿನೆಲೆ ಹೊಂದುವದು 1 ಸಿಕ್ಕಿತ್ತು ನರದೇಹ ದೊರಿಯಲು ಪುಣ್ಯದಿ | ಸರ್ಕನೆ ಸಂತರ ಮೊರೆಹೊಕ್ಕು | ದಕ್ಕಿಸಿಕೊಳ್ಳದೇ ಬೋಧಾಮೃತವನು | ಪುಕ್ಕಟೆ ದಿನವನು ಗಳೆವರೇ 2 ತನುವಿದು ನೋಡಲು ನೆಚ್ಚಿಕೆ ಇಲ್ಲದ | ಮನಿಗಂಧರ್ವದ ಪುರದಂತೆ | ತನುವಿಗೆ ಹತ್ತಿದ ಸಂಸಾರ ಸುಖ | ಕನಸಿನ ಭಾಗ್ಯವ ತೆರೆದಂತೆ 3 ಇದರೋಳು ನಾ ನನ್ನದು ಎಂದೆನುತಲಿ | ಮದಮತ್ಸರವಾ ಬಗೆಯಲಿ | ಕುದಿಕುದಿದೇಳು ತಜ್ಞಾವಿಹೀನದಿ | ಉದರವ ಹೊರವುತ ತಿರುಗವರೇ 4 ಈಗಾಗಯನ್ನದೇ ಹರಿನಾಮವ | ನಾ | ಲಿಗೆ ಕೊನಿಯಲಿ ತಂದಿರಿಸೀ | ಭವ | ಸಾಗರ ಸುಳಿಯಿಂದಲಿ ತರಸೀ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು