ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇನ್ನೇನಿನ್ನೇನು ಎನಗಿನ್ನು ಇನ್ನೇನಿನ್ನೇನು ಧ್ರುವ ಎನ್ನೊಳು ಗುರು ತನ್ನ ಮರ್ಮವು ತೋರಿದ ಇನ್ನೇನಿನ್ನೇನು 1 ಮುನ್ನಿನ ಕರ್ಮವು ನಿರ್ಮೂಲವಾಯಿತು ಇನ್ನೇನಿನ್ನೇನು 2 ಎನ್ನೊಳು ಘನಬ್ರಹ್ಮವಸ್ತು ತಾನಾಯಿತು ಇನ್ನೇನಿನ್ನೇನು 3 ನಾನು ನಾನೆಂಬುದು ನೆಲಿಯು ತಾನಾಯಿತು ಇನ್ನೇನಿನ್ನೇನು 4 ಏನೆಂದು ತಿಳಿಯದ ಅನುಮಾನ ಗಳೆಯಿತು ಇನ್ನೇನಿನ್ನೇನು 5 ಪರಮ ತತ್ವದ ಗತಿ ನೆಲೆ ನಿಭ ತೋರಿತು ಇನ್ನೇನಿನ್ನೇನು 6 ಎನ್ನೊಳಾತ್ಮ ಖೂನ ಕುರುಹವು ತಿಳಿಯಿತು ಇನ್ನೇನಿನ್ನೇನು 7 ಕನಸು ಮನಸು ಎಲ್ಲ ನಿನ್ನ ಸೇವೆ ಆಯಿತು ಇನ್ನೇನಿನ್ನೇನು 8 ಹಗಲಿರುಳೆಂಬುದು ಹಗರಣವಾಯಿತು ಇನ್ನೇನಿನ್ನೇನು 9 ಅರಹು ಮರಹಿನ ಇರುವು ತಿಳಿಯುತು ಇನ್ನೇನಿನ್ನೇನು 10 ಭಾವದ ಬಂiÀiಲಾಟ ನಿಜವಾಗಿ ದೋರಿತು ಇನ್ನೇನಿನ್ನೇನು 11 ಜೀವಶಿವನ ಗತಿ ಸೋಹ್ಯವು ತಿಳಿಯಿತು ಇನ್ನೇನಿನ್ನೇನು 12 ಆಯವು ದಾಯವು ಸಾಹ್ಯವು ದೋರಿತು ಇನ್ನೇನಿನ್ನೇನು 13 ಜೀವನ್ನ ಜಾತಿಯ ಕೀಲವು ತಿಳಿಯಿತು ಇನ್ನೇನಿನ್ನೇನು 14 ಜನ್ಮ ಮರಣದಾ ಜಂತ್ರವು ಮುರಿಯಿತು ಇನ್ನೇನಿನ್ನೇನು 15 ಸಂದೇಹ್ಯ ಸಂಕಲ್ಪ ಸೂಕ್ಷ್ಮವು ಹರಿಯಿತು ಇನ್ನೇನಿನ್ನೇನು 16 ಮರಣದ ಗತಿಗಳ ಮಂತ್ರವು ತಿಳಿಯಿತು ಇನ್ನೇನಿನ್ನೇನು 17 ಸುಷಮ್ನ ನಾಳದ ಸೂಕ್ಷ್ಮವು ದೋರಿತು ಇನ್ನೇನಿನ್ನೇನು 18 ಇಮ್ಮನವಿದ್ದದು ಒಮ್ಮನವಾಯಿತು ಇನ್ನೇನಿನ್ನೇನು 19 ಆಧಾರಚಕ್ರದ ಹಾದಿಯು ತಿಳಿಯಿತು ಇನ್ನೇನಿನ್ನೇನು 20 ಸದ್ಗುರು ಕೃಪೆಯಾದಾ ಸಾಧನವಾಯಿತು ಇನ್ನೇನಿನ್ನೇನು 21 ಇನ್ನೇನಿನ್ನೇನು 22 ಅಂತರಾತ್ಮನ ಸೂತ್ರಾಂತ್ರವು ತಿಳಿಯಿತು ಇನ್ನೇನಿನ್ನೇನು 23 ಇನ್ನೇನಿನ್ನೇನು 24 ಎನ್ನೊಳು ಭಾಸ್ಕರ ಗುರು ತಾನೆಯಾದನು ಇನ್ನೇನಿನ್ನೇನು 25
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಭ್ರಮಮೂಲಮಿದಂ ಜಗತು ನೇಮದ ನಿಜಮಾತು ಧ್ರುವ ಭ್ರಮೆಯಿಂದಲಿ ಭ್ರಮಣ್ಹತ್ಯದ ನೋಡಿ ಭ್ರಮೆ ನೆಲೆಗೊಳಿಸದು ಮನ ಸ್ಥಿರಮಾಡಿ ಭ್ರಮಿಸೇದನೇಕ ಜನ್ಮ ತಿರುಗಾಡಿ ಭ್ರಮಿಯಲಿ ಬಾರದು ನಿಜ ಕೈಗೊಡಿ 1 ಭ್ರಮೆಯಕ ಭ್ರಮೆ ಹತ್ತೇದ ಬಲು ಬಹಳ ಭ್ರಮಯು ಮಾಡೇದ ಸಂಸಾರದ ಮೇಳ ಭ್ರಮೆ ಇಲ್ಲದ್ಯಾತಕೆ ಏನ್ಹೇಳ ನೇಮದಿ ಹೊಳೆವುದು ವಸ್ತು ಅಚಲ 2 ನಾ ನೀನೆಂಬುದು ಭ್ರಮೆಯದ ಮೂಲ ಅನುದಿನ ಬೆನ್ನಟ್ಟಿದೆ ಬಹುಕಾಲ ಖೂನಕೆ ಬಾರದೆ ಆತ್ಮಾನುಕೂಲ ತಾನೆ ಮುಸುಕ್ಯದೆ ಭ್ರಮಿ ಸಕಲ 3 ನಿಶ್ಚಲವಾಗದೆ ಜ್ಞಾನದ ಉಗಮವು ಹೆಚ್ಚು ಕುಂದಿಗೆ ಹೊಡೆದಾಡುದು ಭ್ರಮೆಯು ಹುಚ್ಚುಮಾಡೇದ ವಿಷಯ ಭ್ರಮೆಯು ಎಚ್ಚರಿಸುವ ಸದ್ಗುರು ದಯಕ್ರಮವು 4 ನಾ ಮವನಿಷ್ಟರೊಳಾಡಿದ ಮಾತು ನಿಮಿಷಾರ್ಧದಲಿ ಭ್ರಮೆಯಗಳೆಯಿತು ಸ್ವಾಮಿಸದ್ಗುರು ಕೃಪೆಯಲಿ ತಿಳದೀತು ನೇಮಿಸಿ ತಿಳಿಕೊ ಮಹಿಪತಿನಿವಾಂತು 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಹರಿಯ ಚರಣ ನಿರುತ ಸ್ಮರಿಸಲೊ ಮೂಢ ಮನುಜ ನಿತ್ಯ ಪಾಡಿ ಭಜಿಸು ನರಕಭಯ ವಿಮುಕ್ತನಾಗೆಲೋ ಪ ಹಿಂಡುಬಳಗ ಕೂಡಿಹಾಕಿದಿ ಆಸಕ್ತನಾಗಿ ಬಂಡಿಹೊನ್ನು ಘಳಿಸಿ ಹೊಳಿದಿ ಬಗೆಬಗೆಯಲಿಂಡು ಬಂಡÀ ಬೆಳಸಿ ತುಂಡಗ್ವಾಣದಿ ತುಂಡಿನೇಗ ಜವನಭಟರು [?] ಬೆನ್ನ ಬಿಡವು 1 ಪಗಲು ಹರಟಿಯೊಳಗೆ ಪೋದಿತು ಆಯುಷ್ಯದೊಳಗೆ ಮಿಗಿಲು ರಾತ್ರಿ ವಿಷಯಗಳೆಯಿತು ಸುಗಂಧದ್ರವ್ಯ ಸೊಗಸಿನಿಂದ ಮೈಯ್ಯ ಮುಸುಕಿತು ಜಗದಿ ಘೂಳೆಯಂತೆ ಮೆರೆದಿ ಸೊಗಸಿನಂಗ ತೊಲಗಿತಲ್ಲಿ 2 ದುಷ್ಟತನಕೆ ದಾರಿ ಕೊಡದಿರು ಲೋಕದಲಿ ನೀನು ಭ್ರಷ್ಟನಾಗದೆ ತುಷ್ಟಿಯಿಂದಿರು ಕಷ್ಟಸುಖಗಳ್ಹರಿಗೆಯರ್ಪಿಸಿ ಸೃಷ್ಟಿಪರ ನರಸಿಂಹವಿಠಲನಷ್ಟ ವಿಧದಿ ಪೂಜೆಗೈದು ಇಷ್ಟ ಮುಕ್ತಿ ಸುಖ ಪಡೆಯೋ 3
--------------
ನರಸಿಂಹವಿಠಲರು