ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎನ್ನ ನುಡಿ ಪುಸಿಯಲ್ಲ ಈ ಜಗದೊಳು ಪ ಅರವಿಂದವಿಲ್ಲದಿಹ ಕೊಳವು ತಾ ಕಂಗಳವುಹರಿಣಾಂಕನಿಲ್ಲದಿಹ ಇರುಳು ಮರುಳುಸ್ವರಭೇದವಿಲ್ಲದಿಹ ಸಂಗೀತವಿಂಗೀತಸರಸವಿಲ್ಲದಿಹ ಸತಿಯ ಭೋಗ ತನುರೋಗ 1 ಪಂಥ ಪಾಡುಗಳನರಿಯದ ಬಂಟನವ ತುಂಟಅಂತರವರಿಯದಾ ವೇಶಿ ಹೇಸಿದಂತಿಯಿಲ್ಲದ ಅರಸು ಮುರಿದ ಕಾಲಿನ ಗೊರಸುಅಂತಸ್ಥವಿಲ್ಲದ ಪ್ರಧಾನಿ ಮದ್ಯಪಾನಿ2 ಮಾಗಿಯಲಿ ಸತಿಯನಗಲಿದ ಕಾಂತನವ ಭ್ರಾಂತಪೂಗಣೆಯ ಗೆಲಿಯದಿಹ ನರ ಗೋಖುರಭೋಗಿಸದೆ ಇಹಪರಕೆ ಗಳಿಸಿದರ್ಥ ಅಪಾರ್ಥಕಾಗಿನೆಲೆಯಾದಿಕೇಶವನ ಭಕ್ತ ಮುಕ್ತ 3
--------------
ಕನಕದಾಸ
ಎಷ್ಟು ಪ್ರೀತಿಯೊ ಮನಕೆ ಎಷ್ಟು ಪ್ರೀತಿಯೊ ಪ ಇಷ್ಟವೆಂದು ತಿಳಿದು ಈ ಕಷ್ಟ ಸಂಸಾರ ಹೊರುವುದು ಅ ಹಸಿವು ತೃಷೆಯು ಶೋಕ ಮೋಹ ಅಸುವಗೊಂಬ ಜನನ ಮರಣವಿಷ ಸಮಾನವಾದ ಬಹಳ ವ್ಯಸನ ಮೆರವಣಿಮುಸುಕಿ ಕವಿವ ವ್ಯಾಘ್ರದಂತೆ ಅಡಗಿ ಮುಪ್ಪುಗೊಂಬ ರೋಗವಿಷಯದೊಳಗೆ ಕ್ಲೇಶಪಟ್ಟು ವಿಷಯದಿಚ್ಛೆ ಬಿಡದ ಮನಕೆ 1 ನೀರಗುಳ್ಳೆ ಎನಿಪ ಕಣ್ಣ ನೀರಜಾಕ್ಷಿ ಎಂದು ಮತ್ತೆಸೋರುವ ಜಘನ ಕರಿಯ ಕುಂಭ ಸುರಿವ ಶ್ಲೇಷ್ಮದಮೋರೆ ಚಂದ್ರಬಿಂಬ, ಮಾಂಸವಿಕಾರವಾದ ಕುಚವ ಕನಕಕಲಶಸಾರವೆಂದು ನರಕರೂಪಿನ ನಾರಿಯರಿಗೆ ಭ್ರಮಿಸಿ ಬಾಳ್ವುದು2 ಕುಸುಮ ಗಂಧಮಾಲೆ ಕಸ್ತೂರಿಯನು ಪೂಸಿಕೊಂಡುವಸ್ತ್ರ ಒಡವೆ ಇಟ್ಟು ಬಹಳ ಶಿಸ್ತು ನರಕಿಯೆನಿಸಿ ಮೆರೆವುದು3 ಕಾಯ ಸೌಖ್ಯದಿಆಯಾಸಪಟ್ಟು ಗಳಿಸಿದರ್ಥ ಹೇಯವೆನದೆ ಭೋಗಿಸುತ್ತಬಾಯ ಸವಿಯನುಂಡು ಕಡೆಗೆ ನಾಯ ಸಾವು ಸಾಯೋ ಬಾಳಿಗೆ 4 ಮನ್ನಿಸಿ ಗುರುಹಿರಿಯರುಕ್ತಿಯನ್ನು ಕೇಳದೆ ಕಿವುಡುಗೆಟ್ಟುಜೊನ್ನೆಯ ತುಪ್ಪ ಅನ್ನ ಒಲ್ಲದೆ ಎಲುವು ಮಾಂಸವನ್ನು ತಿಂಬಕುನ್ನಿಯಾದೆನಯ್ಯ ಕೃಷ್ಣ ನಿನ್ನ ಮಾಯದೊಳು ಸಿಲ್ಕಿದಎನ್ನನುದ್ಧರಿಸೊ ಸುಪ್ರಸನ್ನ ಆದಿಕೇಶವ5
--------------
ಕನಕದಾಸ
ಬಹುದೂರ ಮುಕ್ತಿಪಥದಿ ನಡೆದು ನೀವುಹೋಗಲದನಳವಡಿಸಿಕೊಳ್ಳಿರೊ ಪ. ಸಂಸಾರವೆಂಬಡವಿಯ ಸುತ್ತ ಸುಳಿವಸಂಕಟವ ಕಳೆವರೆಕಂಸಾರಿ ತ್ರಿವಿಕ್ರಮನಿಗೆ ಸೇವೆಯಅಂಶುಪ್ರದಕ್ಷಿಣವ ಮಾಡಿರೊ 1 ಏಕಂ ವಿನಾಯಕೇ ಕುರ್ಯಾದ್ವೇ ಸೂರ್ಯೇನತ್ರೀಣೆ ಶಂಕರೆಚತ್ವಾರಿ ಕೇಶವೇ ಕುರ್ಯಾತ್ ಸಪ್ತಶ್ವತ್ಥಪ್ರದಕ್ಷಿಣವ ಮಾಡಿರೊ 2 ಬ್ರಹ್ಮತ್ಯವೆಂಬ ಪಾಪವ ಕಳೆವರೆಬ್ರಹ್ಮಪಿತನ ಪಟ್ಟದರಸಿಗೆಒಮ್ಮನದಲೊಮ್ಮೆ ಪ್ರದಕ್ಷಿಣವಮಾಡಿನಿರ್ಮಲ ಸುಖವ ಪಡೆಯಿರೊ3 ತೀರ್ಥಯಾತ್ರೆಗಳು ಬೇಡ ನೀವು ಗಳಿಸಿದರ್ಥವ್ಯರ್ಥವ ಕೆಡಿಸಬೇಡಚಿತ್ತದಲ್ಲಿ ಹರಿಯ ಚರಣವನು ಕೂಡಿಸತ್ಸುಖವನುಂಬುದು ಕಾಣಿರೊ4 ಅಸ್ವಸ್ಥರಾದ ಜನರು ಬಿಡದೆ ನಮ್ಮ-ಶ್ವತ್ಥ ನಾರಾಯಣನಿಗೆದಾಸ್ಯಮಂ ಪಡೆದು ಭಕ್ತಿಯಿಂತುತತ್ಸುಖವನುಂಬುದು ಕಾಣಿರೊ 5 ಇಂತು ಪ್ರದಕ್ಷಿಣವ ಮಾಡಿ ಲಕ್ಷ್ಮೀಕಾಂತನ ಕೃಪೆಯ ಪಡೆವರೆಚಿಂತೆಗಳ ಕಳೆದಮೇಲೆ ಮುಕ್ತಿಯಲಿಸಂತೋಷದಲಿ ಸುಖಿಪರು6 ಹಯವದನನೆಂಬ ಗುರುಕೊಟ್ಟಮಂತ್ರದಿಭಯವೆಂಬ ಭುಜಂಗನ ಜಯಿಸಿ ಮೂರು ಬಾರಿ ಸುತ್ತಿ ಹÀರಿಯ ಪದದಣಿಯ ಕಟ್ಟಿ ನಡೆಯಿರೊ 7
--------------
ವಾದಿರಾಜ
ವಿತ್ತ ವನಿತಾದಿ ವಿಷಯವೆಂಬಕನಸಿನ ಸಿರಿಯ ನೆಚ್ಚಿ ತೊನೆದುಕೊಂಬರಲ್ಲದೆ 1ಪೊಲೆಯ ಬೊಂಬೆಯೊಳು ತುಂಬಿದ ಕೀವುಮಲಮೂತ್ರಸಂದೋಹ ತೊಗಲು ರೋಮಎಲು ಮಜ್ಜೆ ಮಾಂಸದವ್ಯೂಹ ಎಷ್ಟು ತೊಳೆದರೂಹೊಲಸು ನಾರುವ ಚೋಹ ಮತ್ತಿದಕೊಂದುಕುಲಗೋತ್ರ ನಾಮರೂಪು ಚಲುವ ಚೆನ್ನಿಗನಿವ ಸಲೆ ಜಾಣನೆಂದು ಮೂಢರುಗಳಹಿಕೊಂಬರಲ್ಲದೆ 2ಮಡದಿಯಾದರಿಲ್ಲ ಮಕ್ಕಳು ಮಕ್ಕಳಾದರೆಒಡಮೆಲ್ಲವದು ಬರಲು ಸತಿಸುತರುಮಡಿದು ಹೋಗುವ ದುಃಖಂಗಳು ಗಳಿಸಿದರ್ಥಕೆಡುವಾ ಸಂಕ್ಲೇಶಂಗಳು ತನಗೆ ಮುಂಚಿಅಡಸಿ ಬರುವದೊ ಮೃತಿ ಜಡರು ಈ ಬದುಕನೆಚ್ಚಿಸಡಗರ ಬಡುತ ಹಿಗ್ಗಿ ಕೊಡಹಿಕೊಂಬರಲ್ಲದೆ 3ಬಾಲಕನಾಗ್ಯೊಂದು ಕ್ಷಣವು ಪ್ರಾಯದಿ ಕಾಮಲೋಲುಪನಾಗ್ಯೊಂದು ಕ್ಷಣವು ಧನಾಢ್ಯನೆಂಬಮೂಳ ಹೆಮ್ಮೆ ಒಂದು ಕ್ಷಣವು ದಾರಿದ್ರ್ಯ ಮುಪ್ಪುಜೋಲುವ ತನುವೊಂದು ಕ್ಷಣವು ನಾನಾವೇಷದಾಳಿದ ನಟನಂತಾಡಿ ಕಾಲನ ಬಾುಗೈದುವಬಾಳುವೆಗೆ ಖೂಳಜನರು ವೋಲಾಡಿಕೊಂಬರಲ್ಲದೆ 4ನೆರೆ ಭೋಗಕೆ ರೋಗಭಯ ಸುತ ಸಂಬಂಧಿನೆರವಿಗೆ ವಿಯೋಗ ಭಯ ದ್ರವ್ಯಕ್ಕೆ ಭೂಪರ ಭಯವು ಚೋರ ಭಯ ಕಾಯಕೆ ಭಯಂಕರನಾದ ಕೃತಾಂತ ಭಯ ತಾಪತ್ರಯವೀಪರಿಯನೇಕ ಚಿಂತೆಯಲ್ಲಿ ಕೊರಗುತುರಿವ ಮನೆಯೊಳಗಿರುವೆ ಸುಖದಲೆಂಬರು ಮೂಕೊರೆಯಮೊಂಡರಲ್ಲದೆ * 5
--------------
ಗೋಪಾಲಾರ್ಯರು