ಕರೆಕರೆಯಿದು ಸಂಸಾರವತಿ ಘೋರ ಪ
ಹರಿಯನು ನೆರೆನಂಬಿ ಪರಮಸುಖವ ಪೊಂದು ಅ.ಪ
ದುರಿತವು ಪರಿಹರವಾಗುವದು ಅರಗಿಗೆ ಬೆಂಕಿಯಿಟ್ಟ
ತೆರನಾಹುದು ಮುಂದೆ 1
ಎಷ್ಟು ಗಳಿಸಿದರೂ ಸಾಲದು ಎಂದು
ಕಷ್ಟವ ಪಡುವೆಯೊ ಅನುದಿನದಿ
ಕೃಷ್ಣಗೆ ಪ್ರೀತಿ ಮಾಡು ಶಿಷ್ಟರಂಘ್ರಿಯ ಬೇಡು 2
ಒಂದೇ ಭಕುತಿಯಿಂದ ಕೊಂಡಾಡೊ
ಅಂಧ ಪರಂಪರ ನೋಡಿದರೆ ಅಪಾರ 3