ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗುರುತಕೆ ಮುಟ್ಟದೆ ಗುರುತದ ಮಾತನು ಆಡಬೇಡ |ಗುರುವಿನ ಸನ್ಮುಖ ಗರ್ವ ಅಹಂಕಾರ ಮಾಡಬೇಡ ಪ ನರಜನ್ಮಕೆ ಬಂದು (ಅಸಿದ್ಧದವರ ಕಾಡಬೇಡ) ಗುರುವಿನ ಭಕ್ತಿಯ ಮಾಡದವನ ಮೋರೆ ನೋಡಬೇಡ 1 ಮನದೊಳಗಿನ ಮಾತು ಸದ್ಗುರುವಿನ ಮುಂದೆ ಮುಚ್ಚಬೇಡ |ಧನವಗಳಿಸಿಕೊಂಬ ನಾ ಬಲು ದೊರೆಯೆಂದು ನೆಚ್ಚಬೇಡ 2 ಎನ್ನ ನೆಂಟರ ಚಿಂತಿಯ ಮನೆಯೊಳು ಸೇರಬೇಡ |ಜ್ಞಾನಬೋಧನ ಪ್ರಭು ಗೋವಿಂದನ ಮಾತು ಮೀರಬೇಡ 3
--------------
ಜ್ಞಾನಬೋದಕರು
ಬಂದೆವಯ್ಯ ಗೋವಿಂದಶೆಟ್ಟಿ - ನಿಮ್ಮಹರಿವಾಣ ತೀರ್ಥಪ್ರಸಾದ ಉಂಟೆನಲಾಗಿ ಪ ಅಪ್ಪವು ಅತಿರಸ ತುಪ್ಪವು ಚಿನಿಪಾಲುಒಪ್ಪುವ ಸಕ್ಕರೆ ಯಾಲಕ್ಕಿಯುಅಪರೂಪವಾದ ಕಜ್ಜಾಯಗಳನೆಲ್ಲಛಪ್ಪನ್ನ ದೇಶಕ್ಕೆ ಮಾರುವ ಶೆಟ್ಟಿ1 ತುಂಬಿ ಮಿಕ್ಕ ಅನ್ನವ ಮಾರಿಸಿಒಡವೆಯ ಗಳಿಸುವ ಕಡುಲೋಭಿ ಶೆಟ್ಟಿ 2 ಶೇಷಗಿರಿಯಲ್ಲಿ ವಾಸ ಮಾಡಿಕೊಂಡುದೇಶದೇಶಕ್ಕೆ ಹೆಸರಾದ ಶೆಟ್ಟಿಕಾಸುಕಾಸಿಗೆ ಬಡ್ಡಿ ಗಳಿಸಿಕೊಂಬ ಆದಿಕೇಶವ ನಾರಾಯಣ ತಿಮ್ಮಶೆಟ್ಟಿ 3
--------------
ಕನಕದಾಸ
ದಣಿಯ ನೋಡಿದೆನೋ ವೆಂಕಟನ ಮನದಣಿಯೆ ನೋಡಿದೆ ಶಿಖಾಮಣಿಯ ನಿರ್ಮಲನ ಪಕೇಸಕ್ಕಿಅನ್ನ ಉಂಬುವನ ದುಡ್ಡುಕಾಸು ಬಿಡದೆ ಹೊನ್ನುಗಳಿಸಿಕೊಂಬುವನ ||ದೋಸೆ ಅನ್ನವ ಮಾರಿಸುವನತನ್ನ ದಾಸರ ಮೇಳದಿ ಕುಣಿದಾಡುತಿಹನ 1ಗಂಟಿನೊಲ್ಲಿಯ ಹೊದ್ದಿಹನ-ಹೊರಹೊಂಟು ಹೋಗಿ ಬೇಟೆಯಾಡುತಲಿಹನ ||ಗಂಟೆ ನಾದಕೆ ಒಲಿಯುವನ ಭೂವೈ-ಕುಂಠವಿದೆಂದು ಹಸ್ತವ ತೋರಿದವನ 2ಬೆಟ್ಟದೊಳಗೆ ಇದುತಿಹನ ಮನಮುಟ್ಟೆ ಭಜಿಪ ಭಕುತರಿಗೊಲಿದವನ ||ಕೊಟ್ಟ ವರವ ತಪ್ಪದವನ ಈಸೃಷ್ಟಿಗಧಿಕಪುರಂದರವಿಠಲನ3
--------------
ಪುರಂದರದಾಸರು
ಧೂಪಾರತಿಯ ನೋಡುವ ಬನ್ನಿ ನಮ್ಮಗೋಪಾಲಕೃಷ್ಣನ ಪೂಜೆಯ ಸಮಯದಿ ಪ.ಅಗುರುಚಂದನ ಧೂಪ ಗುಗ್ಗುಳ ಸಾಮ್ರಾಣಿಮಘಮಘಿಸುವ ಧೂಪದಾರತಿಯು ||ಮಿಗಿಲಾದ ಏಕಾಂತ ಭಕ್ತಿಯಲಿ ನಮ್ಮಜಗನ್ನಾಥ ಕೃಷ್ಣನ ದೇವರ ಪೂಜೆಯ 1ಮದ್ದಳೆ ಜಾಂಗಟಿ ತಾಳ ತಮ್ಮಟೆಭೇರಿತದ್ಧಿಮಿ ಧಿಮಿಕೆಂಬ ನಾದಗಳು ||ಹೊದ್ದಿದಧವಳ ಶಂಖದ ಘೋಷಣಂಗಳಪದ್ಮನಾಭನ ದಿವ್ಯ ದೇವರ ಪೂಜೆಯ 2ಢಣ ಢಣ ಢಣರೆಂಬ ತಾಳ ದಂಡಿಗೆವೇಣುಢಣಕು ಧಿಮಿಕು ಎಂಬ ಮದ್ದಳೆಯು ||ಝಣಿಝಣಿಸುವ ವೀಣೆ ಕಿನ್ನರಿ ಸ್ವರಗಳಘನರಾಗದಿಂದಲಿ ಹಾಡುತ ಪಾಡುತ 3ಮುತ್ತು ಛತ್ರ ಚಾಮರ ಪತಾಕ ಧ್ವಜರತ್ನ ಕೆಚ್ಚಿದ ಪದಕ ಹಾರಗಳು ||ಮತ್ತೆ ಕೋಟಿಸೂರ್ಯ ಪ್ರಭೆಯ ಧಿಕ್ಕರಿಸುವಸತ್ಯಭಾಮೆ ರುಕ್ಮಿಣಿಯರರಸನ 4ಹರ ಬ್ರಹ್ಮಸುರಪತಿ ದೇವತೆ ಮೊದಲಾದಪರಮ ಪಾವನಮೂರ್ತಿ ಪುರುಷೋತ್ತಮನ ||ಪರದೈವತವೆಂದು ಬಿರುದು ಪೊಗಳಿಸಿಕೊಂಬಪುರಂದರವಿಠಲನ ಪೂಜೆಯ ಕಾಲದ 5
--------------
ಪುರಂದರದಾಸರು