ಒಟ್ಟು 8 ಕಡೆಗಳಲ್ಲಿ , 6 ದಾಸರು , 8 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಒಲ್ಲೆ ಸಂಪದವನೆಲ್ಲವನು ತೆಗೆದುಕೊ ಚೆಲ್ವ ವೇಲಾಪುರೀಶಾ ಸ್ವಾಮಿ ಪ ಬಲ್ಲವರು ನಿನಗೆ ಸರಿಯಿಲ್ಲೆಂದು ಪೊಗಳುತಿಹ ಸೊಲ್ಲ ನಾ ಕೇಳಲಾರೆ ಸ್ವಾಮಿ ಅ.ಪ ಪೆತ್ತಯ್ಯ ತಿರುಮಲಾರ್ಯರು ವರ್ಣಕರ ಚಕ್ರ ವರ್ತಿಯೆಂಬಾ ಬಿರುದನು ಒತ್ತಿ ಪೊಗಳಿಸಿಕೊಂಡುದೇನಂದದಲಿ ತಿರು ಗುತ್ತಿರ್ದಡೇನು ಭಾಗ್ಯಾ ಮತ್ತದೆನಗಾರ್ಜಿತವೆ ಸತ್ತವರ ಸಂಪದವ- ನತ್ತಲೇ ಕಳುಹಿಕೊಡದೆ ಇತ್ತಪರೆ ನಿನ್ನ ದಾಸನುದಾಸರಿಗೆ ಸೇ ವ್ಯೋತ್ತಮನೆ ಕೆಡಿಸಬೇಡಾ ಸ್ವಾಮಿ 1 ಹರಿಯೆ ನೀ ಒಲಿದೂಳಿಗವನು ಮಾಡಲು ಬಳಿಕ ಕಿರುನುಡಿಯ ಮೀರದಿರಲು ಕರುಣದಿಂದಾಗಾಗ್ಯೆ ಕರೆದುಡುಗೊರೆಯ ಕೊಡಲು ಬಿರುದುಗಳು ಮೆರೆಯುತಿರಲೂ ಸ್ಥಿರವಿಲ್ಲದಷ್ಟ ಮಹದೈಶ್ವರ್ಯವಿರುತಿರಲು ಪಿರಿಯರೆಲ್ಲರು ಪೊಗಳಲೂ ಮೆರೆಯನೇ ಮಿಗೆ ಅಹಂಕರಿಸನೇ ಬೆರೆಯನೇ ನರಕಕಿಳಿಯನೇ ಮರಳಿ ಜನಿಸನೇ ಸ್ವಾಮಿ 2 ಸುಖವಿಲ್ಲ ಸುಖವಿಲ್ಲ ಸುಖವಿಲ್ಲ ಭಾಗ್ಯದಾ ಸಕರೆಯನು ನಾನೊಲ್ಲೆನೂ ಭಕತವತ್ಸಲನೆ ಭಾಗವತಲೋಲುಪನೆ ದುಃ ಖಕೆ ಕಾರಣವಿಲ್ಲವೆ ಅಕಳಂಕ ಚರಿತನೆ ಆದಿನಾರಾಯಣನೆ ಮಕರಧ್ವಜನ ತಾತನೆ ಸುಖವೀಯೊ ವೈಕುಂಠ ವೇಲಾಪುರಾಧೀಶ ಭಕುತಿಯನು ಕೊಟ್ಟು ಸಲಹೊ ಸ್ವಾಮಿ 3
--------------
ಬೇಲೂರು ವೈಕುಂಠದಾಸರು
ಜಗವಿದು ಪುಸಿಯೈ ಬಗೆವೊಡೆ ಮನುಜಾ ತೋರುತಿಹ ಕನಸಿನಂತೆ ಇರುವೆ ಪ ನನಸಿನ ಅರಿವದು ದೊರಕುವ ತನಕ ಕನಸಿದು ಎನ್ನುವ ಕಲ್ಪನೆ ಇಹುದೆ ? ನನಸಿನ ನನಸಾಗಿಹ ಪರವಸ್ತುವೆ ತಾನೆ ನಿಜವು ಎಂಬರಿವಾಗುತಲಿರೆ 1 ನಿರುತದಿ ಸಮನಾಗಿರಲರಿಯದ ಈ ತೋರಿಕೆ ಅನಿಸಿಕೆಗಳು ನಿಜವಲ್ಲವು ಪರಿಕಿಸೆ ಸತತದಿ ಸಮನಾಗಿರುತಿಹ ಪರಮ ಪದವೆ ತಾನೆಂದರಿಯುತಲಿರೆ 2 ಅಳಿಯುವ ಜಗವಿದು ಬೆದರುವಿ ಏತಕೆ ತಿಳಿಯುತಲೀಪರಿ ನಿಜವಸ್ತುವನು ಗಳಿಸಿಕೊಂಡು ನೀ ನಿನ್ನಯ ಮುಕುತಿಯ ಕಲುಷರಹಿತಶಂಕರನಡಿಯರಿಯಲು 3
--------------
ಶಂಕರಭಟ್ಟ ಅಗ್ನಿಹೋತ್ರಿ
ಜ್ಞಾನವನ್ನೇ ತಿಳಿದುಕೋ ಮನುಜ ಜ್ಞಾನವನ್ನೇ ತಿಳಿದುಕೋ ಪ ಸತ್ತು ಹುಟ್ಟಿಯೇ ಸತ್ತು ಮುಂದಣ ಜನ್ಮಕು ಮತ್ತುಮತ್ತು ಗಳಿಸಿಕೊಂಡು ವಿಪತ್ತು ಮತ್ತೆ ಬಂದಿದೆ ಮೃತ್ಯು 1 ಹಾದಿಯಿದೆ ಸಾಪು ಕಾಣದೆ ಬಿಡುವೆ ಆಪುಬಯಕೆ ಯೋನಿಯ ಕೂಪು ಹಾಕಿ ಹಾಕಿ ಭಾಪು 2 ಹಸಿವು ಬಿಡೋ ಹಸಿವು ಯಾಕೆ ಆದಿ ಪಶುವುಬಗುಳ ಬೇಡ ಹುಸಿಯು ನಾಚುತಿದೆ ಬಸಿರು3 ಹೆಚ್ಚ ಬೇಡ ಹೆಚ್ಚು ಅಹಂಕಾರ ಮುಚ್ಚುಓದಿಗೆ ಬೆಂಕಿಯ ಹಚ್ಚು ಮಾಡಿಕೊಂಡೆಯ ಕಿಚ್ಚು4 ಜ್ಞಾನವ ತಿಳಿಯಿನ್ನು ಯಮಗೆ ಕೊಡಬೇಡ ಬೆನ್ನುಆರುತಾನಿಹನೆನ್ನು ಚಿದಾನಂದನೆ ಎನ್ನ5
--------------
ಚಿದಾನಂದ ಅವಧೂತರು
ಭೂರಿ ಕರುಣಾಕರನೋ ಸಾರುವ ತೆರೆದೊಳು ತೋರಿಹ ಭಕ್ತರ ಪ. ಅಗಣಿತ ಮಹಿಮನ ಪೊಗಳುವೆ ನಾನೆಂತು ಬಗೆ ಬಗೆ ರೂಪದಿ ಸಿಗದೆಸಿಗುವ ಹಾಂಗೆ ಪೊಗಳಿಸಿಕೊಂಡು ತಾ ಝಗಝಗಿಸುತ ಬಹ ನಗೆಮೊಗ ಚೆನ್ನಿಗ ನಿಗಮಗೋಚರ ಕೃಷ್ಣಾ 1 ಭಕ್ತ ಪ್ರಹ್ಲಾದಗೆ ಅತ್ಯಧಿಕ ಹಿಂಸೆ ಯಿತ್ತ ಪಿತನ ಕೊಂದು ಇತ್ತ ಮುಕುತಿ ಅವ ನತ್ಯಪರಾಧವನೆತ್ಯಾಡಿದನೇ ಚಿತ್ತಜನೈಯ್ಯನು ಭಕ್ತವತ್ಸಲ ದೇವ 2 ಅಣುರೇಣು ತೃಣಕಾಷ್ಠ ಪರಿಪೂರ್ಣ ನೀನೆಂದು ಕ್ಷಣ ಬಿಡದಲೆ ಗಜರಾಜನು ಸ್ತುತಿಸೆ ಅನುವಿಲಿ ಚಕ್ರದಿ ನಕ್ರನ ಹರಿಸಲು ದಣಿದ ಹರಿಗೆ ಗಜರಾಜನೇನಿತ್ತನೋ 3 ಭಕ್ತರ ಮನದಘ ನಿತ್ಯದಿ ಕಳೆದನೋ ಅಶಕ್ತ ಅಜಮಿಳನೆಮ ಭೃತ್ಯರೆಳೆಯಲು ಇತ್ತು ನಾರಗನುಡಿ ಮತ್ತೆ ಯಮಭಟರ ಇತ್ತ ಮುಕುತಿ ದೇವ ಅತ್ಯಧಿಕ 4 ಮೂಗುತಿ ನೆವದೊಳು ಸಾಗಿಸಿ ಭಾಗ್ಯವ ಜಾಗರ ಮೂರುತೆ ಯೋಗಿಗಳರಸನು ಬಾಗಿಸಿ ತನ್ನವರಾಗಿಸಿ ದಾಸರ ಸರ್ವರ ಅನುರಾಗದಿ ಸಲಹುವ 5
--------------
ಸರಸ್ವತಿ ಬಾಯಿ
ಹುಚ್ಚುಮನವೆ ನಿನ್ನ ಹುಚ್ಚಾಟವನೆ ಕಂಡು ರೊಚ್ಚುಬರುತಿದೆ ಎನಗೆ ಎಚ್ಚರಿರೆಲೆಲೇ ಪ ಉಚ್ಚೆಕುಣಿಯಲಿ ಬಂದು ಭವದ ಮಾಯಾ ಜಗವ ನೆಚ್ಚಿ ಸಕಲ ಮರೆದು ಮುಂದಿನ ಎಚ್ಚರವೆ ಮರೆತೆಲ್ಲೋ ಪಾಪಿ ಅ.ಪ ಒಳಗೊಂದು ಹೊರಗೊಂದು ತಿಳಿಯುತಲಳಿಯುವಿ ಅಳಿದುಹೋಗುವ ಇಳೆಯ ಸಲೆ ಸುಖಕೊಲಿದು ಮಲದ ಭಾಂಡದಿ ಸಿಲುಕಿ ಅನುದಿನ ಮಲಿನಗುಣದಿಂ ತೊಳಲಿಬಳಲುತ ಗಳಿಸಿಕೊಂಡು ಬಂದ ಸಮಯ ಕಳೆದುಕೊಳ್ಳುವಿಯಲ್ಲೋ ಪಾಪಿ 1 ಹಿಂದೊಂದು ಮುಂದೊಂದು ವಂದಿಸಿ ನುಡಿಯುತ ಮಂದ ನೀನಾಗಿ ಹಂದಿಯು ಮಲ ಮೆದ್ದತೆರದಿ ಕುಂದಿಪೋಗುವ ಬಂಧುಬಳಗಕೆ ನಂದುನಂದೆಂಬ ವಿಷಯಲಂಪಟ ರಂಧ್ರೆಯಲ್ಲಿ ಬಿದ್ದು ಕೆಡುವಿ ಪಾಪಿ 2 ನುಡಿಯೊಂದು ನಡೆಯೊಂದು ಕಡುದೃಢ ನುಡಿಯಾಡಿ ಒಡಲಕಿಚ್ಚಿಗೆ ಬಲು ಮಿಡುಕುತಲಿ ಕೆಡುವ ತನುವಿನ ಮೋಹ ಬಿಡದೆ ಪೊಡವಿಗಧಿಕ ನಮ್ಮೊಡೆಯ ಶ್ರೀರಾಮ ನಡಿಯ ನಂಬದೆ ಮಡಿದುಪೋಗುವಿ ಕಡೆಗೆ ಹೆಡತಲೆಮೃತ್ಯುಗೆದೆಯಾಗಿ 3
--------------
ರಾಮದಾಸರು
ಅಂತಕನ ದೂತರಿಗೆ ಕೃಪೆಯಿಲ್ಲವದರಿಂದ |ಚಿಂತೆಯನು ಬಿಟ್ಟು ಶ್ರೀ ಹರಿಯೆ ನೆನೆ ಮನವೆ ಪ.ದಿವರಾತ್ರಿಯೆನ್ನದೇ ತಿರುಗಿ ಲಂಪಟನಾಗಿ |ಸವಿಗಂಡ ಊಟಗಳ ಉಣಲರಿಯದೆ |ಅವನ ಕೊಂದು ಇವನ ಕೊಂದು ಅರ್ಥವನು ಗಳಿಸಿಕೊಂಡು |ಜವನ ದೂತರು ಬಂದು ಎಳೆವ ಹೊತ್ತರಿಯೆ 1ಮೊನ್ನೆ ಮದುವೆಯಾದೆ ಕರೆವುವು ಒಂದೆರಡಮ್ಮೆ |ನಿನ್ನೆ ಕೊಂಡೆನು ಕ್ಷೇತ್ರ ಫಲಬಾಹೊದು ||ಹೊನ್ನು ಹಣವುಂಟೆನಗೆ ಸಾಯಲಾರೆನು ಎನಲಾ |ತನ್ನ ದೂತರು ಬಂದು ಎಳೆವ ಹೊತ್ತರಿಯೆ 2ಹೊಸ ಮನೆಯ ಕಟ್ಟಿದೆನು ಗೃಹಶಾಂತಿ ಮನೆಯೊಳಗೆ |ಬಸಿರೆ ಹೆಂಡತಿ ಮಗನ ಮದುವೆಯು ನಾಳೆ ||ಹಸನವಾಗಿದೆ ಬದುಕು ಸಾಯಲಾರೆನು ಎನಲು |ವಿಷಮ ದೂತರು ಬಂದು ಎಳೆವ ಹೊತ್ತರಿಯೆ 3ಪುತ್ರ ಹುಟ್ಟಿದ ದಿವಸ ಹಾಲು ಊಟದ ಹಬ್ಬಮತ್ತೊಬ್ಬ ಮಗನ ಉಪನಯನ ನಾಳೆ ||ಅರ್ಥಿಯಾಗದೆ ಬದುಕು ಸಾಯಲಾರೆನು ಎನಲು |ಮೃತ್ಯು ಹೆಡತಲೆಯಲಿ ನಗುತಿಹುದರಿಯೆ 4ಅಟ್ಟಡಿಗೆ ಉಣಲಿಲ್ಲ ಇಟ್ಟ ನೀರ್ಮೀಯಲಿಲ್ಲ |ಕೊಟ್ಟ ಸಾಲವ ಕೇಳ್ವ ಹೊತ್ತ ಕಾಣೆ ||ಕಟ್ಟಕಡೆಯ ದಿವಸ ತಂಬಿದ ಬಳಿಕಿರಲಿಲ್ಲ |ಇಷ್ಟರೊಳು ಪುರಂದರವಿಠಲನ ನೆನೆಮನೆವೆ 5
--------------
ಪುರಂದರದಾಸರು
ಏಕೆ ಮುರ್ಖನಾದೆ - ಮನುಜಾಏಕೆ ಮುರ್ಖನಾದೆ ? ಪ.ಏಕೆ ಮೂರ್ಖನಾದೆ ನೀನುಕಾಕು ಬುದ್ಧಿಗಳನು ಬಿಟ್ಟುಲೋಕನಾಥನ ನೆನೆಯೊ ಮನುಜಾ ಅಪಮಕ್ಕಳು ಹೆಂಡರು ತನ್ನವರೆಂದುರೊಕ್ಕವನು ಗಳಿಸಿಕೊಂಡುಸೊಕ್ಕಿಂದ ತಿರುಗುವರೇನೊ ಹೇ ಮನುಜಾ 1ಕಕ್ಕಸದ ಯಮದೂತರು ಬಂದುಲೆಕ್ಕವಾಯಿತು ನಡೆಯೆಂದರೆಸಿಕ್ಕವರೆಲ್ಲ ಬಿಡಿಸುವರೇನೊ ಹೇ ಮನುಜಾ 2ಅರಿಷಡ್ವರ್ಗದ ಆಟವ ಬಿಟ್ಟುಪುರಂದರವಿಠಲನ ಹೊಂದಲುಬೇಕುಹರಿಯನು ಸೇರುವ ಮಾರ್ಗವ ನೋಡೋ ಹೇ ಮನುಜಾ 3
--------------
ಪುರಂದರದಾಸರು
ಕೂಸು ಕಂಡೆವಮ್ಮ-ಅಮ್ಮ ನಿಮ್ಮ-ಕೂಸು ಕಂಡೆವಮ್ಮ ಪಕಾಸಿಗೆ ವೀಸದ ಬಡ್ಡಿ ಗಳಿಸಿಕೊಂಡು |ಶೇಷಗಿರಿಯ ಮೇಲೆ ವಾಸವಾಗಿಪ್ಪನೆ 1ವಂಚಿಸಿ ಬಲೆಯೊಳ್ ಪ್ರಪಂಚವೆಲ್ಲ ಸೆಳೆದು |ಕಂಚಿ ಪಟ್ಟಣದಿ ಮಿಂಚಾಗಿಪ್ಪನೆ 2ಗುಡ್ಡ ಬೆರಳಲ್ಲೆತ್ತಿ ದೊಡ್ಡಿ ಗೋಗಳ ಕಾಯ್ದ |ಒಡ್ಡಿಜಗನ್ನಾಥ ಗಿಡ್ಡಾಗಿಪ್ಪನೆ3ದುಡುಕು ಮಾಡಿ ಹಾಲು ಮಡಕೆಗಳನ್ನೊಡೆದು |ಹಡಗನೇರಿ ಬಂದು ಉಡುಪಿಯಲಿಪ್ಪನೆ 4ಮಂಗಳರೇಖೆ ಪದಂಗಳುಳ್ಳ ನಿಮ್ಮ |ರಂಗ ಪುರಂದರವಿಠಲ ಶ್ರೀ ಕೃಷ್ಣ 5
--------------
ಪುರಂದರದಾಸರು