ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರುಣಿಸಯ್ಯ ಕಸ್ತೂರಿರಂಗ ಕರುಣಿಸಯ್ಯ ಪ ದುಷ್ಟಸಂಸಾರ ಬಹುಕಷ್ಟವಯ್ಯ ಇದ ರಟ್ಟೊಳಿಗಳ ತಾಳಲಾರೆನಯ್ಯ ಆರೆನಿದರ ಕೋಟಿಲೆಗಳಾರೆನಯ್ಯ ಪಾದ ಸೇರಿಸೈಯ್ಯ 1 ಕಾಮಕ್ರೋಧ ಲೋಭಮೋಹ ಬಿಡಿಸಯ್ಯ ಮದಮಾತ್ಸರ್ಯವೆಂಬ ಕಾಟ ನೀನೊತ್ತಿಸಯ್ಯ ಪಾದ ಹೊಂದಿಸಯ್ಯ ಸರ್ವಬಂಧು [ನೀ] ಎನ್ನ ಜಿಹ್ವೆಯಲಿ ನೆಲೆಸಯ್ಯ 2 ಆಶ ಪಾಶಕ್ಲೇಶವೆಲ್ಲ ನಾಶ ಮಾಡಿಸಯ್ಯ ಶ್ರೀಶ ನಿನ್ನ ದಾಸರಲ್ಲಿ ಸೇರಿಸಯ್ಯ ವಾಸುಕಿಶಯನ ಭವದಿ ನೊಂದೆನಯ್ಯ ಸ ರ್ವೇಶಬಂಧು ಎನ್ನನುದ್ಧರಿಸಯ್ಯ 3 ಪುತ್ರಮಿತ್ರಬಂಧುವರ್ಗದಿ ಬಿದ್ದಿಹೆನಯ್ಯ ಅ ನಿತ್ಯಮೋಹದಲ್ಲಿ ಮುಳುಗಿ ಪೋದೆನಯ್ಯ ವ್ಯರ್ಥನಾಗಿ ಕಾಲವನ್ನು ಕಳೆದೆನಯ್ಯ ಎನ್ನ ಮರಣ ಕಾಲದಿ ನಿಮ್ಮ ಸ್ಮರಣೆ ಕರುಣಿಸಯ್ಯ 4 ಜನನ ಮರಣವೆಂಬೊ ಜಾಡ್ಯ ಕ್ರೂರವಯ್ಯ ಇದರ ವಿಧವನರಿತು ವೈದ್ಯ ಮಾಳ್ವರ ಕಾಣೆನಯ್ಯ ಬ್ರಹ್ಮಾದಿ ದೇವತೆಗಳೂ ಅರಿಯರಯ್ಯ ಧನ್ವಂತ್ರಿರೂಪ ಶ್ರೀನಿವಾಸ ರಕ್ಷಿಸಯ್ಯ 5 ದೇಹವೆಲ್ಲ ಗಳಿತವಾಗಿ ಪೋಯಿತಯ್ಯ ಇಂದ್ರೀಯ ಸ್ವಾಧೀನದಲ್ಲಿ ನಿಲ್ಲದಯ್ಯ ವಿಷಯದಲ್ಲಿ ಮನಸು ಬಹಳ ಹರಿವುದಯ್ಯ ಲಕ್ಷ್ಮೀಪತಿಯೆ ನಿಮ್ಮ ಭಕ್ತಿಯಿತ್ತು ಸಲಹಯ್ಯ 6 ದೀನನಾಗಿ ನಿನ್ನ ಚರಣ ಸೇರಿದೆನಯ್ಯ ಜ್ಞಾನವೈರಾಗ್ಯವಿತ್ತು ಪಾಲಿಸೆನ್ನಯ್ಯ ಮರಳಿ ಜನ್ಮ ಬಾರದಂತೆ ಮಾಡಬೇಕಯ್ಯಾ ಗರುಡಗ ಮನ ವೆಂಕಟರಮಣ ಭವಸಂಕಟ ಬಿಡಿಸಯ್ಯ 7
--------------
ಯದುಗಿರಿಯಮ್ಮ
(39ನೇ ವರ್ಷದ ವರ್ಧಂತಿ) ಭೂವರ ಭಾಗ್ಯದೇವಿಯ ಕೂಡಿ ಶುಭಕಾರಿ ಪ. ಏಕೋನ ಚತ್ವಾರಿಂಶತಿವತ್ಸರವು ಸಂತು ರಾಕುತನದೊಳೆನಗೆ ಬೇಕು ಬೇಕೆಂಬಾಶಾಪಾಶವ ಸುಡಲಾರೆ ಭೀಕರಗೊಳಿಪ ಬಗೆ ಮಾಕಳತ್ರನೆ ಸುಮ್ಮನ್ಯಾಕುಪೇಕ್ಷಿಪೆ ಕರು ಣಾಕರ ಕಡೆಗಣ್ಣಿಂದಲಿ ನೋಡು ಕಮಲಾಕ್ಷ 1 ಹಲವು ಹಂಬಲಿಸುತ ಬಳಲಿದೆ ದಿನದಿನ ಗಳಿತವಾಗಿಹ ದೇಹದಿ ಬಲವು ಕುಂದಿತು ಒಂದು ನೆಲೆಯ ಕಾಣದು ಕಳ- ವಳಿಕೆಯಿಂದಲಿ ಮನವು ಮೊಲೆಯ ಕಂದನೊಳ್ ಫಲ ಸಲುವುದೆ ಮಾತೆಗೆ ನಳಿನನಾಭನೆ ಎನ್ನ ತಪ್ಪೆಣಿಸದಿನ್ನು 2 ನಿನ್ನ ನಾಮವ ನಂಬಿ ನೆನೆವರಿಗಖಿಳಾರ್ಥ ಸನ್ನಹ ಸುಲಭನೆಂದು ಮುನ್ನಿನ ಮುನಿಗಳು ನುಡಿದ ಮಾತನು ಶ್ರುತಿ ಸನ್ನುತ ಮರೆಯಲೆಂದು ಎನ್ನ ಮನೋರಥ ಕೊಡುತ ಕರುಣಾಸಿಂಧು ಪನ್ನಗಾಚಲನಾಥ ಪಾವನಕರ ಬಂಧು 3
--------------
ತುಪಾಕಿ ವೆಂಕಟರಮಣಾಚಾರ್ಯ