ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೆನೆಸು ಮನವೆ ನಲಿವಿನಿಂದಲಿ ನೆನೆಸು ಮನವೆ ನಲಿವಿನಿಂದಲಿ ಮನಸಿಜನ್ನ ಪೆತ್ತ ಹರಿಯ ವನಜ ಚರಣವನ್ನು ಹೃ ದ್ವನಜದೊಳಗೆ ನಿಲಿಸಿ ನಗುತ ಪ ಪ್ರಳಯದಲ್ಲಿ ವರ ರಮಾ ಕ ಳವ ತಾಳಿ ಲೀಲೆಯಲ್ಲಿ ಪೊಳವ ಕಂಗಳಿಂದ ಕಿಡಿ ಗಳನು ತೋರಿ ಕುಣಿವುತ ಜಲಜ ಪೀಠ ಸುರಪ ಪುಲಿದೊ ಗಲ ವಸನ ಉಳಿದ ಸುರರ ಅಳಿದು ಏಕಮೇವನಾಗಿ ನಲಿವ ನಾರಸಿಂಹನೆಂದು 1 ಜರಾಮರಣರಹಿತ ಸುಜ ನರನ ಕಾಯ್ದು ಕರುಣದಲ್ಲಿ ಜರಿದು ಅದ್ರಿಯಲ್ಲಿ ದನುಜರನ್ನು ಶೀಳಿ ವೇಗ ನಿ ಪರಮನೆಂದೆನಿಸಿ ಚರಿಸುತಿಪ್ಪ ಅರುಣಪ್ರಭೆಗೆ ಕೋಟಿ ಮಿಗಿಲು ಪರಮಪುರುಷ ಸಿರಿಧರನ್ನ 2 ಕೆಡದೆ ಪರಮ ಭಕುತಿ ಮಾರ್ಗ ವಿಡಿದು ಗರ್ವವೆಂಬ ಕವಚ ದುರುಳ ಚೇತನಕ್ಕೆ ಕೊಡದೆ ಮನಸು ವಿನಯದಿಂದ ಕಡಲಶಯನನಾದ ಒಡಿಯ ವಿಜಯವಿಠ್ಠಲನ್ನ ಬಿಡದೆ ನುಡಿಯೆ ಬಂದ ಅವ ಘಡವ ದಾಟಿಸು ವೊಲಿದು ಕಾಯುವಾ3
--------------
ವಿಜಯದಾಸ
ಹ್ಯಾಂಗೆ ನೀ ದಾಸನಾದೆ ಪ್ರಾಣಿ ಪ ಭವ ಭಂಗವ ಪಡುವವನು ಅ ಆಸೆಯ ಬಿಡಲಿಲ್ಲ ಕಾಸು ಗಳಿಸುವೆಯಲ್ಲದೋಷಕ್ಕೆ ಗುರಿಯಾಗಿ ಹೇಸಿಕೆಯೊಳು ಬಿದ್ದು 1 ತನುವು ತನ್ನದು ಎಂದು ತನಯ ಮಾನಿನಿಯರೆತನಗೆ ಗತಿಯೆಂದು ನಂಬಿರುವ ಮೂಢನೆ 2 ಕಾಲನ ದೂತರು ಕರುಣಸಂಪನ್ನರೆಕಾಲ ವ್ಯರ್ಥದಿ ಕಳೆವ ಕೀಳು ಬುದ್ಧಿಯ ಪ್ರಾಣಿ3 ತಲೆ ಹುಳಿತ ನಾಯಂತೆ ಹಲವು ಬೀದಿಯ ತಿರುಗಿಗೆಲುವಿನಿಂದಲಿ ಮೂಲ ಮಲವನಳಿಯದೆ4 ಉದರಪೋಷಣೆಗಾಗಿ ಅಧಮರ ಯಾಚಿಸುತಮದಗರ್ವವೆಂಬುವುದ ಬದಿಯಲ್ಲಿ ಇಟುಗೊಂಡು 5 ಹಿರಿಯರ ನಿಂದಿಸಿ ಹರಿದಾಸನೆನಿಸಿದೆಗುರುಮಂತ್ರವರಿಯದ ಮರುಳು ಪಾಮರ ಪ್ರಾಣಿ6 ಕಾಲುಗೆಜ್ಜೆಯ ಕಟ್ಟಿ ಮೇಲೆ ಕರತಾಳ ತಟ್ಟಿಶ್ರೀಲೋಲನ ಗುಣ ಪೊಗಳಿ ನಟಿಸದಲೆ 7 ಕುಣಿಕುಣಿದು ಮನದಣಿದು ಮಣಿದು ಸಜ್ಜನ ಪದಕೆಅಣಿಮಾದಿ ಅಷ್ಟಸಿದ್ಧಿಯನು ಕೈಗೊಳ್ಳದಲೆ 8 ಭಾಗವತ ಕೇಳದೆ 9 ಕಟ್ಟಿ ಕೈ ಪರರಲಿ ಹೊಟ್ಟೆಗೋಸುಗವೆ ಕಂ-ಗೆಟ್ಟು ಯಾಚಿಸುವ ಭ್ರಷ್ಟಪ್ರಾಣಿಯೆ ನೀನು 10 ನೇಮದಿ ಉಪವಾಸ ಆ ಮಹಾ ಏಕಾದಶಿಕಾಮಜನಕನನು ಪ್ರೇಮದಿ ಸ್ಮರಿಸಿದೆ11 ಏಸುದಿನ ಬದುಕಿದರು ಸೂಸುವ ಪಾಪವಈಸಿ ದಾಟದೆ ಕಾಸುವೀಸಕೆ ಬಾಳಿದವ 12 ಮೂರ್ತಿ ಪಾದಂಗಳ ಮನದಲಿ ಹಿಂಗದೆ ಭಜಿಸದೆ 13 ಬತ್ತಿ ಹೋಯಿತು ನದಿ ಬಿತ್ತದೆ ಬೆಳೆಯದೆಅತ್ತರೆ ಬಹುದೇನೊ ಉತ್ತಮ ಫಲ ಸೂಸಿ14 ಆಡುವ ಮಕ್ಕಳ ಕೈಗೆ ನೀಡದೆ ಕಡಲೆಯಬೇಡಿದರೆ ಕೊಟ್ಟು ಕೂಡಿ ಆಡದವನು ನೀ 15 ಶೃಂಗಾರ ಬಯಸುತ ಬಂಗಾರದೊಡವೆಯಹಿಂಗದೆ ಶ್ರೀ ತುಲಸಿಯ ರಂಗಗರ್ಪಿಸದೆ 16 ಸುತ್ತ ಕತ್ತಲೆ ಚಿಂತೆ ಮತ್ತೆ ಭಯದ ಭ್ರಾಂತಿಚಿತ್ತಜನಯ್ಯನು ದೊರೆವ ಬಗೆ ಕಾಣದೆ 17 ಡಂಬವ ಮಾಡಿಕೊಂಡು ತುಂಬ ಪಾಪ ಒಳಗೆಹಂಬಲಿಸಿದರಿನ್ನು ಬೆಂಬಲಕಾರುಂಟು 18 ದುಂಡು ನಾಮವ ಬಳಿದು ಭಂಡತನದಲಿ ಜಗದಿದಂಡಿಗೆ ಬೆತ್ತ ಪಿಡಿದು ಹೆಂಡಿರ ಕಾಯ್ವನೆ 19 ಹಕ್ಕಿವಾಹನನ ಗುಣ ಲೆಕ್ಕಿಸಿ ಪೊಗಳದೆಬೆಕ್ಕಸ ಬೆರಗಾಗಿ ಅಕ್ಕಿಗೆ ತಿರುಗುವವ 20 ಪಾದ ರಾಗದಿ ಭಜಿಸದೆಕಾಗಿನೆಲೆಯಾದಿಕೇಶವರಾಯನೆನದೆ21
--------------
ಕನಕದಾಸ