ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

*ಆರಿಗಾದರು ಪೂರ್ವದ ಕಟ್ಟಳಿಯು ತಪ್ಪುದು ವಿಧಿಬರಹವು ಪ. ಪೊಡವಿಭಾರವ ಪೊತ್ತು ಮೃಡಗೆ ಭೂಷಣನಾಗಿ ಹೆಡೆಯಲ್ಲಿ ಮಾಣಿಕವಯಿಟ್ಟುಕೊಂಡು ಬಿಡದೆ ಶ್ರೀಹರಿಗೆ ಹಾಸಿಗೆ ಆದ ಫಣಿಪಂಗೆ ಅಡವಿಯೊಳಗಣ ಹುತ್ತ ಮನಿಯಾಯಿತೈಯ್ಯಾ 1 ಸುರಪತಿಯಗೆದ್ದು ಸುಧೆಯನೆ ತಂದು ಮತ್ತೆ ಮಾತೆಯ ಸೆರೆಯ ಪರಿಹರಿಸಿ ಬಹುಶಕ್ತನೆನಿಸಿಕೊಂಡ ಹದಿನಾಲ್ಕು ಲೋಕನಾಳುವವನ ಹೊತ್ತು ಇರುವವಗಾಯಿತು ಮನೆಯು ಮರದ ಮೇಲೆ 2 ರಾಮಚಂದ್ರನ ಸೇವೆಮಾಡಿ ಮೆಚ್ಚಿಸಿಕೊಂಡು ರಾವಣನ ಗರ್ವಮುರಿದು ಬಂದೂ ರೋಮರೋಮಕೆ ಕೋಟಿಲಿಂಗಧರಿಸಿದ ಹನುಮಂತಗೆ ಗ್ರಾಮಗಳ ಕಾಯ್ವದಾಯಿತೈಯ್ಯಾ 3 ಮೂರ್ಲೋಕಕಾಧೀಶ ಮುಕ್ಕಣ್ಣ ಶಿವನೆಂದು ಸಾರುತಿದೆ ವೇದ ಸಟೆಯಲ್ಲವಿದು ಪಾರ್ವತಿಗೆ ಪತಿಯಾದ ಕೈಲಾಸವಾಸನಿಗೆ ಊರಹೊರಗಣ ಕಾಡ ಕಾಯ್ವದಾಯಿತೈಯ್ಯಾ 4 ಮೀರಲಳವಲ್ಲಾ ಮುನ್ನಿನಾ ಕರ್ಮವನು ಕಾರಣಕರ್ತನಿಗಲ್ಲದೆ ಮಾರಪಿತ ಹೆಳವನಾಕಟ್ಟೆರಂಗೈಯ್ಯನ ಸೇರದ ಕಾಲವ್ಯರ್ಥವ್ಯಾದಿತೈಯ್ಯಾ 5
--------------
ಹೆಳವನಕಟ್ಟೆ ಗಿರಿಯಮ್ಮ
ಮಾಧವ ನಮ್ಮ ಶ್ರೀಧವ ಬಾಧೆಪಡಿಸದೆ ತನ್ನ ಪಾದದಾಸರ ಕಾಯ್ವ ಪ ನಿರುತ ನೀರೊಳು ನಿಂದ ಈತ ಚಾರು ನಿಗಮಗಳ ತಂದ ಬಲು ಭಾರ ಪೊತ್ತನು ಬೆನ್ನಲಿಂದ ಆಹ ಕೋರೆದಾಡೆಯಲಿಂದ ಘೋರದೈತ್ಯನ ಸಂ ಹಾರವ ಮಾಡಿ ಭೂಭಾರವನಿಳುಹಿದ 1 ಅರಮನೆಕಂಬದಲಿಂದ ಕಡು ಘೋರ ರೂಪವ ತಾಳಿ ಬಂದ ಮಹ ದುರುಳನುದರ ಬಗಿದುಕೊಂದ ಆಹ ಧರೆಯನೀರಡಿ ಮಾಡಿವ ದನುಜನ ತುಳಿದು ಚರಣದಾಸರ ಮನದೊರವಿತ್ತು ಸಲಹಿದ 2 ವೀರತನದಿ ಕೊಡಲಿಪಿಡಿದ ಧರೆಯ ಸಾರಕ್ಷತ್ರಿಯಮೂಲವಳಿದ ದೇವ ಧಾರುಣಿಯೊಳು ನರನಾದ ಅಹ ತೋರಿ ವಿಪಿನವಾಸ ಮೀರಿದಸುರನ ಕೊಂದು ಮೂರುಲೋಕದ ಕಷ್ಟ ದೂರಮಾಡಿದ ಶೂರ 3 ಗೊಲ್ಲಕುಲದಿ ಜನಿಸಿದ ಪುಂಡ ಬಿಲ್ಲಿನಾಟವ ರಚಿಸಿದ ವೀರ ಖುಲ್ಲ ಕಂಸನ ಮದ ಮುರಿದ ಆಹ ನಲ್ಲೇರ್ಹದಿನಾರು ಸಹಸ್ರಬಲ್ಲಿದತನದಾಳಿ ಎಲ್ಲ ಭಕ್ತರ ಇಷ್ಟಸಲ್ಲಿಸಿ ಪೊರೆದನು 4 ಸಾರಿಬತ್ತಲೆ ಕದಲಿದ ಪರಮ ನಾರಿಯರ ವ್ರತ ಭಂಗಿಸಿ ಮೆರೆದ ಮೂರುಪುರದ ಗರ್ವಮುರಿದ ಆಹ ಪಾರುಮಾಡಿದ ಸುರರ ಘೋರಕಂಟಕದಿಂದ ಏರಿದ ಹಯ ನಮ್ಮ ಧೀರ ಶ್ರೀ ಗುರು ರಾಮ 5
--------------
ರಾಮದಾಸರು
ರಾಮ ನಿನ್ನಯ ಚರಿತೆ ರಘು ರಾಮ ನಿನ್ನಯ ಚರಿತೆ ಪ. ಪ್ರೇಮದಿ ಭಜಿಸಲು ಕ್ಷೇಮವಹುದು ರಘುರಾಮ ಅ.ಪ. ದಶರಥ ಪುತ್ರ ಕೌಶಿಕನ್ಯಾಗ ಕರ್ತ ಪಶುಪತಿ ಧನುಭಂಗ ಜಾನಕೀಪತಿ ರಘು 1 ಪರಶುರಾಮನ ಗರ್ವಮುರಿದ ವರ ಮಾತೆ ವಾಕ್ಯವ ಸಲಿಸೆ ಕಾನನಕೈದ ರಘುರಾಮ 2 ದಶಶಿರ ಸೀತೆಯ ಕದ್ದೊಯ್ಯಲು ಅರಸುತ ಪತಿ ಹನುಮಗುಂಗುರವಿತ್ತ ಧೀರ 3 ಶರಧಿಯ ಲಂಘಿಸಿ ವರಹನುಮನು ತನ್ನ ಕರದಲಿಯದ ವರ ಜಾನಕಿಗಿತ್ತ 4 ಚೂಡಾಮಣಿ ಮಾರುತಿಗೊಡೆ ಸೇತುವೆ ಅತಿಶಯದಲಿ ಬಂಧಿಶಿ ದಶಶಿರನಳಿದಾ ರಘುರಾಮ 5 ನಿನ್ನಡಿ ನೆನೆವರೆ ಧನ್ಯರು ನಿತ್ಯ ಸನ್ನುತ ಚರಿತ ಶ್ರೀ ಶ್ರೀನಿವಾಸ ರಘುರಾಮ 6
--------------
ಸರಸ್ವತಿ ಬಾಯಿ