ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಾದ ಕೂಡು | ಸಾಯಾಸಗಳನೇ ಬಿಡು ಪ ಪಾದ ಕೂಡು ಸಾಯಾಸಗಳನೇ ಬಿಡು | ಸಾಧಿಸುವದು ನೋಡು ಸದ್ಗತಿಯ ಸುಖಾಡು 1 ತನುವಿಟ್ಟು ಧನವಿಟ್ಟು ಚರಣಕ ಮನಕೊಟ್ಟು | ಅನುವಾಗಿ ತಿಳಿಗಟ್ಟು ಮದಗರ್ವಗಳ ಬಿಟ್ಟು 2 ನಿನ್ನಾ ನೀ ತಿಳಿಯಣ್ಣಾ ಮ್ಯಾಲ ದೋರುದ್ಯಾಕ ಬಣ್ಣಾ | ಇನ್ನಾರೆ ದೆರಿಕಣ್ಣಾ ಆಗದಿರು ಮಸಿಮಣ್ಣಾ 3 ತನಗ ತಾನೇವೇ ಬಂಧು ತನಗೆ ತಾನೇ ಹಗೆಯೆಂದು | ವನಜಾಕ್ಷ ಹೇಳಿದುದು ಅನುಮಾನಿಲ್ಲಿದಕಿಂದು 4 ಇನ್ನೊಂದು ಸಾಧನಿಲ್ಲಾ ಇದರಿಂದಧಿಕವಿಲ್ಲಾ | ಮನ್ನಿಸಿ ಕೇಳಿರೆಲ್ಲಾ ಮಹಿಪತಿಜನ ಸೊಲ್ಲಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ರಾಮಾನಂದ ವಿಠಲ | ಪ್ರೇಮದಲಿ ಪೊರೆಯೋ ಪ ಭಾಮಿನಿಯ ಮೊರೆ ಕೇಳಿ | ಪ್ರಾರ್ಥಿಸುವೆ ಹರಿಯೇ ಅ.ಪ. ಅನುವಂಶಿಕವಾಗಿ | ಗಾನಕಲೆಯುಳ್ಳವಳುಮೇಣು ಸಂಸ್ಕಾರಗಳು | ಹೊಂದಿಕೊಳ್ಳುತಲೀಈ ನಾರಿ ಯಂಕಿತವ | ಕಾಂಕ್ಷಿಸುತ್ತಿಹಳಯ್ಯಶ್ರೀನಿವಾಸನೆ ಇವಳ | ಬಿನ್ನಪವ ಸಲಿಸೋ 1 ಪತಿಸುತರು ಹಿತರಲ್ಲಿ | ವ್ಯಾಪ್ತ ನೀನೆಂಬ ಸ-ನ್ಮತಿಯನೇ ಕರುಣಿಸುತ | ಕಾಪಾಡೊ ಹರಿಯೆಗತಶೋಕ ಗತಿಪ್ರದನೆ | ಹತಮಾಡಿ ಗರ್ವಗಳಸ್ಮøತಿಗೆ ವಿಷಯನು ಆಗಿ | ಸತತ ಪೊರೆ ಇವಳಾ 2 ಮೋದ ಕೊಡು ದೇವಾ 3 ಭವವೆನಿಪ ಅಂಬುಧಿಗೆ | ಪ್ಲವವೆನಿಪ ತವನಾಮಸ್ತವನ ಸಂತತಗೈವ | ಹವಣೆಯಲಿ ವಜ್ರಾಕವಚವನೆ ತೊಡಿಸುತ್ತ | ಭವತಾರ ಕೆಂದಿನಿಸೋಧ್ರುವವರದ ಕರಿವರದ | ಕಾರುಣ್ಯಮೂರ್ತೇ 4 ಛಲದ ಮುನಿ ಅನುಸರಿಸಿ | ಶಿಲೆಯ ಸತಿಯಳ ಮಾಡಿಜಲಜಾಕ್ಷಿ ಜನಕಜೆಯ | ಕೈಯನೇ ಪಿಡಿದೂಇಳೆಯ ಭಾದಕ ಕಳೆದ | ಚೆಲುವಂಗದವ ಸೂರ್ಯಕುಲ ತಿಲಕನೇ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ವಾಯುವಂದಿತ ವಿಠಲ | ಪೊರೆಯ ಬೇಕಿವನಾ ಪ ಪಾದ | ಭಜಕನಾದವನಾಅ.ಪ. ಗುರುಹಿರಿಯರಾ ಸೇವೆ | ನಿರುತ ಗೈಯುವ ಮನವಕರುಣಿಸುವುದಿವ ನೀಗೆ | ಮರುತಾಂತರಾತ್ಮಗರುಡ ಗಮನನೆ ದೇವ | ಗರ್ವಗಳ ಪರಿಹರಿಸಿಸರ್ವಾಂತರಾತ್ಮಕನೆ | ಕಾಪಾಡೊ ಇವನಾ 1 ಹರಿಯೆ ಪರನೆಂಬಂಥ | ವರಸುಜ್ಞಾನವ ಕೊಟ್ಟುತರತಮಂಗಳು ಅಂತೆ | ಎರಡು ಮೂರುರ್ಭೇದಾಪರಮ ಸತ್ಯವು ಎಂಬ | ವರಜ್ಞಾನ ಪಾಲಿಸುತಪರಿಪರಿಯ ಭವಭಂದ | ಪರಿಹರಿಸೊ ಹರಿಯೇ 2 ಕಾಕು ಸಂಗಮಕೆಡಿಸೊಪ್ರಾಕ್ಕುಕರ್ಮವ ಕಳೆಯೊ | ಶ್ರೀ ಕರಾರ್ಚಿತನೆ 3 ದುರಿತವನ ಕುಠಾರ | ಶರಣಜನ ವತ್ಸಲನೆದುರಿತಾಳಿ ದೂರೈಸಿ | ಪೊರೆಯೊ ಹರಿಯೇಕರುಣ ನಿಧಿ ನೀನೆಂದು | ಮರೆಹೊಕ್ಕೆ ತವಪಾದಚರಣ ದಾಸನ ಪೊರೆಯೊ | ಹರಿಯೆ ಪರಮಾಪ್ತ 4 ಶ್ರೀವರನೆ ಸರ್ವೇಶ | ಭಾವದಲಿ ಮೈದೋರಿಭಾವುಕನ ಪೊರೆ ಎಂದು | ದೇವ ಪ್ರಾರ್ಥಿಸುವೇಈ ವಿಧದ ಬಿನ್ನಪವ | ನೀವೊಲಿದು ಸಲಿಸುವುದುದೇವ ದೇವೇಶ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು