ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಂದಿಗೊ ಕಾಣೆ ಸುಖವು | ಜೀವಕೆ ಪ ಬಂಧಕದೊಳು ಸಿಕ್ಕಿ ಬಾಧೆ ಪಡುತಿಹುದು ಅ.ಪ ಜನರೂಢಿ ನೋಡಿದರೆ ಕೊನೆಗಾಣುವುದೇ ಇಲ್ಲ 1 ಗರ್ಭಯಾತನೆ ಎಂಬೋದÀರ್ಭುದವಾಗಿಹದು ನಿರ್ಭರ ದುಃಖಗಳಾವಿರ್ಭೂತವಾಗುವುದೊ 2 ಬಾಳುವ ಕೌಮಾರದಿ ಬಹುಚಿಂತೆಯನುದಿನ 3 ಬದ್ಧ ಸಂಸಾರಕೆ ಮದ್ದು ಮಾಡುವರಾರು 4 ಯಾವಾವಸ್ಥೆಗಳಲ್ಲಿ ಜೀವಗೆ ಸುಖವಿಲ್ಲ ಕಾವನು ಗುರುರಾಮವಿಠಲನೊಬ್ಬನೆ ಬಲ್ಲ 5
--------------
ಗುರುರಾಮವಿಠಲ
ಕಿನ್ನೇಶದೂತರು ಎಳಿಯಾರೆ ಪ ಹಿಂದಿನ ದುಃಖವ ನೆನಸಿಕೊ | ನೀನು | ಬಂದದೆ ಒಂದೊಂದು ಗುಣಿಸಿಕೊ | ಮುಂದೀಗ ಎಚ್ಚತ್ತು ನೋಡಿಕೊ | ಇದು ಸಂದೇಹವೆನದೆ ನಿಜವಾಗಿ ತಿಳಿದಕೊ 1 ಗರ್ಭಯಾತನೆ ಬಲು ಹೇಸಿಕೆ | ವಳಗೆ | ನಿರ್ಬಂಧವಾಗಿ ಬೆಳೆದು ಮೇಲಕೆ | ದೊಬ್ಬುವರು ನಿನ್ನ ಕೆಳಿಯಿಕೆ | ಬಿದ್ದು ಅಬ್ಬಬ್ಬ ಐಯ್ಯಯ್ಯವೆಂದು ಅಳಲೇಕೆ2 ಬಾಯಿಗೆ ಬಜೆ ಬೆಣ್ಣೆ ಕೊಡುವರು | ತಾಯಿ | ಬಳಗವೆಲ್ಲ ಸಂತೋಷಬಡುವರು | ಆಯಿತು ಮಗುವೆಂದು ನುಡಿವರು | ಇವನ ಆಯುಷ್ಯ ಕಡಿಮೆಯೆಂದದು | ಅರಿಯದೆ ಕೆಡುವರು 3 ಚಿಕ್ಕಂದು ಎತ್ತಿ ಮುದ್ದಾಡಿ ಬೆಳಸಿ | ಅಕ್ಕರದಿಂದಲಿ ನೋಡಿ ಕೊಂಡಾಡಿ | ಫಕ್ಕನೆ ಕುಲಗೋತ್ರರ ಕೂಡಿ | ಒಬ್ಬ | ರಕ್ಕಸಿಯ ತಂದು ನಿನಗೆ ಜತಿ ಮಾಡಿ 4 ನೆಲೆ ಇಲ್ಲದ ಮಮತೆಯೊಳು | ಮುಳುಗಿ | ತಲೆಕೆಳಗಾಗಿ ನಡೆದು ಹಗಳಿರುಳು | ಕುಲನಾಶಕನೆಂಬೊದು ಬಾಳು | ಬಿಡು | ತಿಳಿಯ ಪೇಳುವೆನು ಎತಾರ್ಥವ ಕೇಳು5 ದುರ್ವಾಸನೆ ನಾರುವ ಬೀಡು | ಇದು | ಸ್ಥಿರವಲ್ಲ ಎಂದಿಗು ಹಂಬಲ ಬಿಡು | ಹರಿದಾಸರ ಸಂಗ ಮಾಡು | ಇನ್ನು | ಹರಿನಾಮಗಳ ಕೊಂಡಾಡು 6 ಆವಾವ ಜನ್ಮದಲಿ ನೀನು | ಒಮ್ಮೆ | ದೇವ ಎಂದೆನಲಿಕ್ಕೆ ನಾಲಿಗಿತ್ತೇನು | ಈ ಉತ್ತಮವಾದ ಈ ತನು | ಬಂತು | ಕೋವಿದನಾಗಿ ಶ್ರೀ ಹರಿಯನ್ನು ಕಾಣು7 ಆ ಮರ ಈ ಮರ ಎನಲಾಗಿ | ಅವನ | ತಾಮಸದ ಜ್ಞಾನ ಪರಿಹಾರವಾಗಿ | ಸ್ವಾಮಿಯ ದಯದಿಂದ ಮಹಯೋಗಿ | ಎನಿಸಿ | ಭೂಮಿಯೊಳಗೆ ಬಾಳಿದನು ಚನ್ನಾಗಿ 8 ಸಿರಿ | ರಂಗ ಯೆನಲಾಗಿ ಕಾಯ್ದ ಶ್ರೀಪತಿ | ವಿಜಯವಿಠ್ಠಲ ನಂಬು 9
--------------
ವಿಜಯದಾಸ
ಸಾಕು ಸಾಕು ಸ್ವಾಮಿ ಸಂಸಾರವು ಪ ಸಾಕಿದರೊಳು ಲೇಶ ಸೌಖ್ಯವು ಕಾಣೆನು ಬೇಕು ನಿನ್ನ ಪಾದಭಜನೆ ನಿರಂತರ ಅ.ಪ ಚತುರಶೀತಿ ಲಕ್ಷಯೋನಿಗಳಲಿ ಪು- ಟ್ಟುತ ಬೆಳೆಯುತ ಮೃತಿ ಪೊಂದುವ ಕಷ್ಟವು 1 ಮಾಂಸರಕ್ತ ಪೂರಿತ ಕೂಪದಿ ನವ- ಮಾಸ ಮಾತೃಗರ್ಭಯಾತನೆಯಿನ್ನು 2 ಬಾಲರ ಕೂಡುತ ಬಾಲ್ಯದಲ್ಲಿ ಚೆಂಡು ಗೋಲಿ ಗಜ್ಜುಗಗಳಾಡಿದ ಆಟವು 3 ಗರ್ವದಿಂದ ಮೈಮರೆತು ತಿರುಗುವುದು 4 ಸೇರಿ ಇರುವ ಕೌಮಾರಾವಸ್ಥೆಯು 5 ಕಿವಿಗಳು ಕೇಳದು ಕಣ್ಕಾಣದು ಬಾಂ- ಧವರಧೀನದಲಿ ಬಾಳುವ ಕಷ್ಟವು 6 ಮರಣವಾದ ಮೇಲೆ ನರಕವು ಸ್ವರ್ಗವು ಧರಣಿಯಲಿ ಪುಟ್ಟುವುದೋ ತಿಳಿಯದು 7 ಎಂತಾದರು ನಿನ್ನವರೊಳಿಡು ಸದಾ ಪಂಥವೆ ದೀನರ ಮೇಲೆ ದಯಾನಿಧೆ 8 ಭಾಗ್ಯವಲ್ಲಿ ಹನುಮಂತನೊಡೆಯ ಶರ- ಣಾಗವÀತ್ಸಲ ಗುರುರಾಮವಿಠಲ9
--------------
ಗುರುರಾಮವಿಠಲ