ಒಟ್ಟು 5 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರಯಧೇನು ಬಂತು ಮನಿಗೆ ದಯ ಕರುಣದಿಂದೊಲಿದು ಸರ್ವಾರ್ಥಗರೆವುತಲಿ ಧ್ರುವ ತನ್ನಿಂದ ತಾನೊಲಿದು ಚೆನ್ನಾಗಿ ತೋರ್ವಿಳಿದು ಭಿನ್ನವಿಲ್ಲದೆ ನೋಡಿ ಹಂಬಲಿಸುತ ಉನ್ನತೋನ್ನತ ಮೋಹ ಮೊಳಿಯೊಳಮೃತ ತುಂಬಿ ಪುಣ್ಯಧಾರಿಂದೊರಗಿ ಭೋರಿಡುತಗಲೆರವುತಲಿ 1 ಸುರಸ ಸಾರಾಯದನುಭವ ಬೆರಸಲಾಗಿ ತಾಂ ವರ ಮಹಾಕೃಪೆ ಘನದೊಳವಿನಿಂದ ಧರೆಯೊಳಾನಂದ ಸುಖ ಸಾರಿಡುತ ಪೂರ್ಣ ಇರ್ಹುಳಗಲೆನದೆ ಸರ್ವಪತಿ ಯಿಂದ್ಹರುಷಗರೆವಾ 2 ಬೆಳಗಿ ತನ್ನರ ಬೆಳೆಸಲಾಗಿ ಸದ್ವಸ್ತು ತಾಂ ತಿಳಿದು ಶ್ರಯಧೇನಾಗಿ ಬಂತು ಬಳಿಗೆ ಕಳವಳಿಸಿ ಕರುಣ ಕಟಾಕ್ಷದಿಂದಲಿ ನೋಡಿ ಎಳೆಗರುವ ಮಹಿಪತಿಗಮೃತನುಣಿಸಿಕೊಳಲಾಗಿ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಶ್ರೀ ರಾಮನಾಮ ಸ್ಮರಿಸೀಕ್ಷಕಾರಿ ಘೋರಾವತಾಪಗಳದಾಗಳದಾ ಪುರಾರಿ ಆರಾದರೇನು ಜಪಿಸೀ ಜಪಸೀದ ಯೋಗಿ ಸಾರುವೆ ನೊಡಿ ಸುಖವಾ ಸುಖವನು ನೀಗಿ1 ಸೋಕಲು ರಾಮಪದವಾ ಪದವನು ನೀಗಿ ತಾಕನ್ಯಳಾದಳರಿಯಾ ಅರಿಯಾದ ಹೋಗಿ ನೀ ಕೇಳಿ ಕೇಳಿ ಮರವೇ ಮರವೇನೋ ನೀನು ಲೋಕೇಶಗ್ಹೋಗುಶರಣಾ ಶರಣಾಗುವನು 2 ಏನಿತ್ತಳಂದು ಶಬರಿ ಬರಿಯಹಣ್ಣಾ ತಾನುಂಡುಕೊಟ್ಟು ಭವವಾಭವವಾರಿಸಣ್ಣಾ ಅನಾಥಬಂದು ಮರಿಯಾಮರಿಯಾದಹೋಗಿ ಸ್ವಾನಂದಸಾಖ್ಯಗರೆವಾಗರೆವಾಗೊವಲ್ಲಿ 3 ಇಂದಿರೆ ಸುದ್ದಿ ಸುಧಿಯಾ ಸುಧಿಯಾದಲಿಂದಾ ತಂದಾರೆಪದ್ಮಭವನಾ ಭವಸಾದರಿಂದಾ ಆದನೇವೆ ಕೊಟ್ಟುಕರದೀ ಕರದೀಶನಾಥಾ ಮುಂದಿನಭಾವ್ಯ ಹನುಮಾ ಹನುಮಾವಿಧಾತಾ4 ರಾಮೆಂದುಕೂಗಿ ಗಿಳಿಯಾ ಗಿಳಿಯಾಗಣಿಕೆ ನೇಮದಲಿ ಮುಗುತಿಯಾ ಗತಿಯಾಬೇಕೆ ಪ್ರೇಮದಿ ಮಾನವರುತಾ ವರತಾತನೆಂದಾ ಕಾಮಾರ್ಥನೀವ ಚಲುವಾ ಚಲುವಾ ಮುಕುಂದಾ5 ಸುಗ್ರೀವ ಬಂದು ಅಡಿಯಾ ಅಡಿಯಾಗಲೆಂದು ಶೀಘ್ರದಿಶೀಳಿತರುವಾ ತರುವಾಯಲಿಂದು ಅಗ್ರಜನೊತ್ತಿ ಅವನೀ ಅವನೀಯ ರಾಮಾ ನುಗ್ರಹ ಮಾಡದರಿಯಾದರಿಯಾಗು ವಾತ್ಮಾ6 ಶುಭವಾಕ್ಯ ದೂರಿದನು ಜಾಣನು ಜಾಣನಾಗಿ ವಿಭೀಷಣಬಂದ ಕಣವೀಕ್ಷಣದಲಿ ಸಾಗಿ ವಿಭುಕೊಟ್ಟಲಂ ಕಾಶ್ರಯವಾಶ್ರಯವಾಗಿ ರಾಮಾ ಅಭಿವರ್ಣಿಸುದುರಸನಾ ರಸನದಿ ನೇಮಾ7 ಶೇವೆಯನು ಮಾಡಿ ತಣಲೀತಣಲೀಯ ನೋಡಿ ತಾವರಿ ಕೈಯ್ಯಳೆಳದಾಲೆಳದಾದಯ ಮಾಡಿ ಭಾವಾರ್ಥಿಯಾದ ನರನಾ ನರನಾಥವೇಷಾ ಕಾವನುಲೋಕಜನ ಕಾಜನಕಾತ್ಮಜೇಶಾ 8 ರಾಮಾಷ್ಟಕಾದ ಕವಿತಾ ಕವಿತಾನೆ ಆಗೀ ಶ್ರೀ ಮಹಿಪತಿ ವರದಾ ವರದಾತ ಯೋಗಿ ಕುಂದ ಗುರುತಾಗುರುತಾತ ಮಾಡಿ ನೇಮದಿ ಕಾವಕರುಣೀಕರುಣೀಯ ನೋಡಿ9
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಶ್ರೀ ಶೇಷ ಚಂದ್ರಿಕಾರಾಯರ ಸಂಕ್ಷಿಪ್ತ ಚರಿತ್ರೆ (ವಾರ್ಧಿಕ ಷಟ್ಪದಿ) ರಘುನಾಥರಂ ಸೇವಿಸೀ |ರಘುನಾಥ ತೀರ್ಥರಂ ಮಿಗಿಲಾಗಿ ಸೇವಿಸುವಅಘಗಳನು ನೀಗಿ ಶ್ರೀ ರಘುವರನ ಪ್ರೀತಿಯನುಮಿಗೆ ಪೊಂದಿ ಭವದಾಟಿ ನಗಧರನ ಲೋಕದೊಳು ಬಗೆ ಬಗೆಯ ಸುಖದಿ ಬಾಳ್ವ ಪ ಏಕಮೇವನ ಚರಣ | ತೋಕರೆಂದೆನಿಸಿ ಸಾತ್ವೀಕರೆನಿಪ ತಾಯ್ತಂದೆಗಾಕುವರನೆನಿಸುತಏಕಋಷಿ ಶೌನಕ ಸುಗೋತ್ರದೊಳುವೆಂಕಟವರಮೃಗಾಭಿದನು ಎನಿಸೀ ||ನೂಕಿ ಪಂಚಾಬ್ದಗಳನಾ ಕುವರಗಾಗುಪನಯನಕೈಗೊಂಡು ಗುರು ಚರಣನೇಕ ವಿಧ ಸೇವಿಸುತವಾಕಾದಿ ಶಾಸ್ತ್ರಗಳ ಸಾಕಷ್ಟು ಅಭ್ಯಸಿಸಿ ಸ್ವೀಕರಿಸಿ ದ್ವಿತೀಯಾಶ್ರಮಾ 1 ಅನುಜ ಅಂಭ್ರಣಿಯ ರಮಣಪದಅಂಭುಜಗಳಂ ಭಜಿಸಿ ಸಂಭ್ರಮದಿ ಸತಿವೆರಸಿ ಉಂಬುಡುವ ಸರ್ವವೆಲ್ಲ |ಬಿಂಬನಲಿ ಅನ್ವಯಿಸಿ ಇಂಬುಗೊಂಡವರಾಗಿಸಂಭ್ರಮದ ಸಂತಾನದಂಬಲನೆ ತಾ ತೊರೆದುಹಂಬಲಿಸಿ ಹರಿಪಾದ ಗುಂಭದಿಂದಲಿ ಭಜಿಸಿ ಇಂಬಿಟ್ಟ ಸನ್ಯಾಸದೀ 2 ಹತ್ತು ಮೂರ್ಮತ್ತೈದು ವತ್ಸರದಿ ವಿಠಲ ಪದವರ್ತಿ ಲಕುಮಿನರೆಯಣ ತೀರ್ಥರಿಂ ಸನ್ಯಾಸದುತ್ತ ಮಾಶ್ರಮ ಪೊಂದಿ ಭೃತ್ಯರಿಗೆ ಶ್ರೀಮಧ್ವ ಶಾಸ್ತ್ರಗಳ ಬಿತ್ತರಿಸುತಾ |ಮತ್ತೆ ಬದರಿಯ ಸೇತು ಉತ್ತಮ ಕ್ಷೇತ್ರ ತ್ರೈರಾವರ್ತಿ ಸಂಚರಿಸಿ ಬಲು ಮತ್ತ ಮಾಯ್ಗಳನಳಿದುಕೃತ್ತಿ ವಾಸನ ತಾತ ಉತ್ತಮೋತ್ತಮನೆಂದು ವತ್ತಿ ಪೇಳ್ದರು ಸುಜನಕೇ 3 ಶೇಷನಾವೇಷದಿಂ ವ್ಯಾಸಾಭಿದಾನ ಸ ನ್ಯಾಸಿ ಎನಿಸುತಲಿ ದೀನೇಶನಂಶಜರಿಂದವಾಸಿಸುತ ಹಂಪೆಯಲಿ ಲೇಸು ಸುತ್ಸೂತ್ರಗಳ ಭಾಷ್ಯಾವ್ಯಾಖ್ಯಾ ಚಂದ್ರಿಕಾವ್ಯಾಸ ತ್ರಯಗಳು ಎಂದು ಭಾಸುರದ ಕೀರ್ತಿಯಲಿಕಾಶಿ ಗಧದರ ಮಿಶ್ರ ಏಸು ಮಾಯ್ಗಳ ಜಯಕೆಲೇಸು ಕಾರಣವೆನಿಪ ಆಸಿ ಗ್ರಂಥಗಳ್ರಚನೆ ಬೇಸರದೆ ನೆಡೆಯುತಿರಲೂ 4 ವರಶಿಷ್ಯರಿಂವರೆಸಿ ಇರುತಿರಲು ದಿನ ಒಂದುಅರೆವಾಸಿಯಾದಂಥವರ ಚಂದ್ರಿಕಾಗ್ರಂಥಎರಡು ಅಧ್ಯಾಯಗಳು ಪೂರಣವು ಯಾರಿಂದ ಒರೆವುದೆಂದೆನೆ ಪ್ರಾರ್ಥಿಸೀ ||ವರನರರ ಸಲಹುದಕೆ ಹರಿಯಾಜ್ಞೆಯಿಂ ಮತ್ತೆಎರಡು ಮೂರ್ಜನ್ಮಗಳ ಧರಿಸುವೆವು ನಾವು ಎರಡೈ-ದರಿಲ್ಲಿಂದ ನರಜನ್ಮದೊಳು ಗ್ರಂಥ ಪೂರಣವು ಆಹುದೆಂದರು 5 ಉಕ್ತಿಗನು ರಘುನಾಥ ತೀರ್ಥರೆಂದುರೆ ಮರೆದುಗ್ರಂಥ ಶೇಷವ ರಚಿಸಿ ತತ್ತರಭಿಧರು ಎನಿಸಿತತ್ವ ಕಣಿಕಾಖ್ಯವನು ತಂತ್ರಸಾರದ ವ್ಯಾಖ್ಯಮತ್ತಿತರ ಗ್ರಂಥಗಳನು ||ಬಿತ್ತರಿಸಿ ಹರಿಯನ್ನು ತೃಪ್ತಿಸುತ ಪೂರ್ವದಲಿಛಾತ್ರರಂ ಪಡೆದಂತೆ ಮತ್ತೆ ಈ ಜನ್ಮದಲಿಉತ್ತಮರು ಶಿಷ್ಯ ಸಂಪತ್ತಿನಿಂ ಮೆರೆದಿಹರು ತತ್ವಕೋವಿದರು 6 ತೈಜಸ ಪೇಳಿದ 7 ಮಹಿಷಿ ಕ್ಷೇತ್ರದೊಳುಸಿರಿ ಕೃಷ್ಣನಂ ನಿಲಿಸಿ ಹರಿರಥೋತ್ಸವ ಪೂಜೆವರುಷ ವರುಷದಿ ಗೈಯ್ಯೆವರ ಭೂಮಿ ಕಾಣೆ ಭೂಸುರರಿಗಿತ್ತಿಹರು ಅಯ್ಯಾ 8 ಆಷಾಢ ಸಿತ ತೃತಿಯ ಭಾಸಿಸುವ ಮಧ್ಯಾಹ್ನಕಾಶೀಗೇ ಮಿಗಿಲೆನಿಪ ತ್ರಿಮಕೂಟಗಾಗಮಿಸಿಭೂಸುರರಿಗೇ ತಮ್ಮ ಆಶ್ವಾಸ ತಿಳಿಸುತ್ತ ಲೇಸು ಸಂಗಮವೀಯತಾ ||ಶೇಷ ಚಂದ್ರಿಕಾಚಾರ್ಯ ಶ್ರೀಶನರ್ಚಿಸಿ ಕಾಯರಮೇಶ ಚರಣದಲೀಯ ಲೋಸುಗದಿ ಮನಮಾಡಿಆಸುಸತ್ತಿಥಿ ಚೌತಿ ಲೇಸೆನಿಸಿ ಉದಿಸುತಿರಲೀ ಶರೀರವನು ಅರ್ಪಿಸಿದರು 9 ಇವರ ವೃಂದಾವನವು ಅಶ್ವತ್ಥ ನರೆಯಣನಪವಿತರದ ಪದ ಧ್ರುವಕೆ ಬೀಳುವ ಸ್ಥಳದೊಳಗೆ ಸ್ಥಾಯವದು ಮಠಬಿರಿದುಗಳು ಅಶ್ವತ್ಥತರುಛಾಯವೇ ಛತ್ರಿಯೆನಿಸುತಿಹುದೂ ||ಕವೇರ ಕನ್ಯೆಯು ಕಪಿಲ ದಿವ ದೀವಟಿಗೆ ಸಮವುಇವರಿರುವ ಕ್ಷೇತ್ರವೇ ಪ್ರವರ ಗಯಪ್ರಯಾಗವಿಶ್ವೇಶ ಸನ್ನಿಧಿಯು ಇವರ ಗುಣ ಸ್ಥವನವೇಶಶ್ವದಾನಂದ ಸಂದೋಹವು 10 ವತ್ಸರವು ನೂರೆರಡು ಸತ್ಸಿದ್ದಿಗೇ ಪೊತ್ತಸತ್ಸರೀರವ ತ್ಯಜಿಸಿ ಮತ್ಸರಾದ್ವಿರಹಿತರುವತ್ಸಾರಿ ಸಿರಿಕೃಷ್ಣ ವತ್ಸರೆಂದೆನಿಸುತ್ತ ಸತ್ವ್ಸಭಾವದಿ ಮೆರೆಯುತಾ ||ಹೃತ್ಸರೋಜದಿ ಪವನ ಹೃತ್ಸರೂಜದಿ ಶಿರೀವತ್ಸಲಾಂಛನ ಗುರುಗೋವಿಂದ ವಿಠಲಪದಸತ್ಸರೋಜದ ಧ್ಯಾನ ಉತ್ಸುಕದಿ ಗೈದು ತನವತ್ಸರ್ಗ ಬೀಷ್ಟಗಳಗರೆವಾ 11
--------------
ಗುರುಗೋವಿಂದವಿಠಲರು
ಶ್ರೀ ಸತ್ಯಸಂಧರು ಸತ್ಯ ಬೋಧರ ಕಂಡ | ಯತಿವರ್ಯ ಸತ್ಯಸಂಧ ಕೃತ್ಯ ನಿಮ್ಮದು ಆನಂದಾ ಪ ಸ್ತುತ್ಯುಯತ್ಯಾಶ್ರಮವ ವಹಿಸುತಪ್ರತ್ಸಹತ ಸಚ್ಚಾಸ್ತ್ರ ಬೋಧಕಪ್ರತ್ಯರ್ಥಿ ಮಾಯ್ಗಳ ಖಂಡಿಸುತಭೃತ್ಯ ಜನಕಭೀಷ್ಟ ಗರೆವಾ ಅ.ಪ. ಗಂಗೆಮೀಯಲು ಸಾಧು ಸಂಗದಿ ತೆರಳುತ್ತಅಂಗಜಾರಿಯ ಪುರದೀ |ಮಂಗಳಾಂಗನು ಹರಿಪದಾಬ್ಜದಿಬೃಂಗರೆನಿಸುತ ಪೂಜೆಯ ಗೈಯ್ಯಲುರಂಗ ಹರಿಪಾದಾರವಿಂದವಕಂಗಳಿಂದಲಿ ಕಂಡಯತಿಯ 1 ಗಯ ಗಧಾದರ ನಂಘ್ರಿಪ್ರಿಯವಿಂದ ಭಜಿಸಲುನಯಸುತ್ತ ಪರಿವಾರವಾ |ಮಾಯಿಗಳ ದುರ್ವಾದ ಖಂಡಿಸಿಹೇಯಮತವಿದ್ವಂಸ ಗೈಯ್ಯುತರಾಯದಶರಥ ಸುತನು ರಾಮಗೆಜಯಪತ್ರಾರ್ಪಿಸಿದ ಮಹಿಮ 2 ವಿಷ್ಣುಪಾದವ ಮನ ಮುಟ್ಟಿ ಭಜಿಸಲು ಪೋಗೆದುಷ್ಟಗಯಾಳವಾರರು |ದಿಟ್ಟತನದಲಿ ಕದವಮುಚ್ಚಲು |ಶ್ರೇಷ್ಠ ಯತಿಗಳ ಭಕ್ತಿಗೊಲಿಯುತಥಟ್ಟನೇ ಕದತೆರೆಯಲಂದಿನಅಟ್ಟಹಾಸದಿ ಪೂಜೆಗೈದ 3 ಬಾಳಲಜ್ಜೆಲಿಗಯ | ವಾಳರು ಶರಣೆನ್ನೆಲಾಲಿಸುವರ ಭಿನ್ನ ಪ |ಮೂಲರಾಮರ ಸೇವೆಯನುಗಯೆವಾಳರೆಲ್ಲರು ಮಾಡಲೆನುತಲೀಲೆಯಿಂ ಮುದ್ರಾಂಕಗೈದಘಜಾಲವನು ತಾ ಕಳೆದ ಯತಿಯ 4 ಮಹಿಷಿ ಕ್ಷೇತ್ರದಿಅಂಗವೃಂದಾವನವ ಪೊಗಿಸುತರಂಗಗುರು ಗೋವಿಂದ ವಿಠಲನಮಂಗಳ ಧ್ಯಾನದಲಿರುತಿಹ 5
--------------
ಗುರುಗೋವಿಂದವಿಠಲರು
ಹರಿಕಥಾಮೃತಸಾರದ ಫಲಶ್ರುತಿ ಶ್ರೀ ಮದಶ್ವಗ್ರೀವನೊಲುಮೆಗೆ ಧಾಮರೆನಿಪ ಶ್ರೀ ವಾದಿರಾಜರುಪ್ರೇಮದಲ್ಲಿ ಜಗನ್ನಾಥದಾಸರ ಸ್ವಪ್ನದಲಿ ಬಂದುಶ್ರೀ ಮನೋರಮನರಿಪ ತತ್ವ ಸು ಸೌಮನದ ಮಾಲಿಕೆಯನಿತ್ತು-ದ್ದಾಮ ಗ್ರಂಥವ ರಚಿಸಿರೆನುತಲಿ ನುಡಿದ ಕಾರಣದೀ ಪ ಭಾಗವತ ಗಾರುಡ ಭವಿಷ್ಯೋತ್ತರ ಪುರಾಣಚಾರು ವಿಷ್ಣು ರಹಸ್ಯ ಪಂಚರಾತ್ರಾಗಮ ವಾಯುಸಾರ ಗುರವೃತ್ಪ್ರವೃತ್ತವು ಈರ ಸಂಹಿತಾದಿತ್ಯವಾಗ್ನೇಯಪಾರ ರಸಗಳ ತೋರ್ಪ ಶ್ರೀ ಗುರು ಮಧ್ವ ಶಾಸ್ತ್ರದಲೀ 1 ಸಾರ ಕ್ರೋಢೀಕರಿಸಿ ದೀನೋ-ದ್ಧಾರಗೋಸುಗ ಹರಿಕಥಾಮೃತ ಸಾರವನು ರಚಿಸೀಸ್ಥೈರ್ಯ ಮಾನಸದಿಂದ ಭಾವೀ ಭಾರತೀಪತಿ ವಾದಿರಾಜರಭೂರಿ ತೋಷಕೊಪ್ಪಿಸುತಲಾಪಾರ ಮುದ ಪಡೆದೂ 2 ಸಾಸಿರಾರ್ಥಗಳೊಂದು ಪದಕವಕಾಶವಿರುವೋ ಶ್ರೀದ ವಿಷ್ಣುಸಾಸಿರದ ನಾಮವನು ಯೋಚಿಸಿ ಇಹರು ಗ್ರಂಥದಲೀಈಸು ರಹಸ್ಯವನರಿತು ಪಠಪಗೆ ಏಸು ದೂರವೊ ಮುಕ್ತಿಬರಿದಾ-ಯಾಸ ಬಟ್ಟುದರಿಂದ ಫಲವೇನಿಲ್ಲವೀ ಜಗದೀ 3 ಹ ಯೆನಲು ಹರಿಯೊಲಿಯುವನು ತಾ ರಿ ಯೆನಲು ರಿಕ್ತತ್ವ ಹರಿಸುವಕ ಯೆನಲು ಕತ್ತಲೆಯೆಂಬಾಜ್ಞಾನವನು ಪರಿಹರಿಪಾಥಾ ಯೆನಲು ಸ್ಥಾಪಿಸುವ ಜ್ಞಾನ ಮೃಯೆನಲು ಮೃತಿಜನಿಯ ಬಿಡಿಸುವತ ಯೆನಲು ಹರಿ ತನ್ನ ಮೂರ್ತಿಯ ತೋರುವನು ನಿತ್ಯಾ 4 ಸಾ ಯೆನಲು ಸಾಧಿಸುವ ಮುಕ್ತೀ ರ ಯೆನಲು ರತಿಯಿತ್ತು ರಮಿಪನುಕಾಯ ವಾಙ್ಮನದೆಂಟು ಅಕ್ಕರ ನುಡಿದರದರೊಳಗೇಶ್ರೀಯರಸು ವಿಶ್ವಾದಿ ಅಷ್ಟೈಶ್ವರ್ಯ ರೂಪದಿ ನಿಂತು ತಾ ಪರ-ಕೀಯನೆನಿಸದೆ ಇವನ ಮನದೊಳು ರಾಜಿಪನು ಬಿಡದೇ 5 ಅನಿರುದ್ಧ ಧರ್ಮವು ದೊರಕಿಸುವ ಪರಮ್ಹರುಷದಲ್ಲಿ ಸ-ತ್ವರ ಕಥಾಯೆನೆ ಕೃತಿರಮಣನರ್ಥಗಳ ಹನಿಗರೆವಾವರ ಅಮೃತಯೆನಲಾಗ ಶ್ರೀ ಸಂಕರುಷಣನು ಕಾಮವನು ಯೋಜಿಪಸರಸ ಸಾರೆನೆ ವಾಸುದೇವನು ಮೋಕ್ಷ ಕೊಡುತಿಪ್ಪಾ 6 ನಿತ್ಯ 7 ಚಾರುತರದೀ ಹರಿಕಥಾಮೃತ ಸಾರಕೃತ ಋಷಿ ಭಾರದ್ವಾಜರುಸಾರ ಹೃದಯದಿ ನಿಂತು ಸಕಲ ಸು ಶಾಸ್ತ್ರದಾಲೋಕಾಸಾರಿ ಸಾರಿಗೆ ಮಾಡಿ ಮಾಡಿಸಿ ಸೂರೆಗೊಟ್ಟಾನಂದ ಚಿನ್ಮಯಪಾರವಾರಾಶಯನ ಶ್ರೀ ಕಮಲಾಪತಿ ವಿಠಲಾ 8
--------------
ಕಮಲಪತಿವಿಠ್ಠಲರು